ಡೆಂಗ್ಯೂ ಬಹಳ ಅಪಾಯಕಾರಿ ಕಾಯಿಲೆ. ಅದು ಉಲ್ಬಣಗೊಂಡರೆ ಮಾರಣಾಂತಿಕವೂ ಹೌದು. ಫಿಲಿಪೈನ್ಸ್‌ನಲ್ಲೂ ಡೆಂಗ್ಯೂ ಕಾಯಿಲೆ ಸಮಸ್ಯೆಯಾಗಿ ಮುಂದುವರಿದಿದೆ. ಡೆಂಗ್ಯೂ ಪ್ರಕರಣ ಹೆಚ್ಚಳವಾಗಿರುವ ಕಾರಣ ವಿಶೇಷ ಉಪಾಯವನ್ನು ಅವರು ಮಾಡಿದ್ದು, ಸೊಳ್ಳೆಗಳನ್ನು ಜೀವಂತ ಅಥವಾ ಕೊಂದು ತನ್ನಿ, 5 ಸೊಳ್ಳೆಗಳಿಗೆ ಒಂದೂವರೆ ರೂಪಾಯಿ ತಗೊಳ್ಳಿ ಅಭಿಯಾನ ಶುರುಮಾಡಿದ್ದಾರೆ.