ಕನ್ನಡ ಸುದ್ದಿ  /  ವಿಷಯ  /  gujarat assembly election 2022

Latest gujarat assembly election 2022 Photos

ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ ಬಿಜೆಪಿ ನೂತನ ಶಾಸಕರು, ಭೂಪೇಂದ್ರ ಪಟೇಲ್‌ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರು. ಅಂದರೆ ಭೂಪೇಂದ್ರ ಪಟೇಲ್‌ ಅವರು ಮತ್ತೊಂದು ಅವಧಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Bhupendra Patel: ಗುಜರಾತ್‌ ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್‌ ಆಯ್ಕೆ: ಸಭೆಯಲ್ಲಿ ಬಿಎಸ್‌ವೈ ಭಾಗಿ

Saturday, December 10, 2022

ಗುಜರಾತ್‌ ರಾಜಧಾನಿ ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೆ ಆಗಮಿಸಿದ ಪಕ್ಷದ ನೂತನ ಶಾಸಕರಿಗೆ, ಪಕ್ಷದ ಮಹಿಳಾ ಕಾರ್ಯಕರ್ತರು ಸಾಂಪ್ರದಾಯಿಕ ಸ್ವಾಗತ ಕೋರಿದರು. ಈ ವೇಳೆ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಕೂಡ ಉಪಸ್ಥಿತರಿದ್ದರು.

Gujarat BJP: ನೂತನ ಗುಜರಾತ್‌ ಬಿಜೆಪಿ ಶಾಸಕರಿಗೆ ಪಕ್ಷದ ಕಚೇರಿಯಲ್ಲಿ ಹೀಗಿತ್ತು ಸ್ವಾಗತ: ಹಾರ್ದಿಕ್‌ ಪಟೇಲ್‌ಗೆ ಸಿಗುತ್ತಾ ಸಚಿವ ಸ್ಥಾನ?

Saturday, December 10, 2022

ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಅವರು, ಇಂದು(ಡಿ.09-ಶುಕ್ರವಾರ) ರಾಜಧಾನಿ ಗಾಂಧಿನಗರದಲ್ಲಿರುವ ರಾಜಭವನಕ್ಕೆ ತೆರಳಿ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Bhupendra Patel: ಹೊಸದಾಗಿ ಸಿಎಂ ಆಗಲು ಪ್ರಸ್ತುತ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಭೂಪೇಂದ್ರ ಪಟೇಲ್‌

Friday, December 9, 2022

ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷಯು 156 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ಪಕ್ಷವು ತನ್ನ 27 ವರ್ಷಗಳ ರಾಜ್ಯಭಾರವನ್ನು ಚುನಾವಣಾ ವಿಜಯದೊಂದಿಗೆ ಉಳಿಸಿಕೊಂಡಿದೆ.

Gujarat Elections 2022: ತವರಿನಲ್ಲಿ ಮೋದಿ ಪಕ್ಷದ ಜಯಭೇರಿ; ಈ ದಿನ ಏನೇನಾಯ್ತು? ಸಂಭ್ರಮಾಚರಣೆಯ ಫೋಟೋ ನೋಡಿ

Thursday, December 8, 2022

ಗಾಂಧಿನಗರದಲ್ಲಿರುವ ಪಕ್ಷದ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಪಕ್ಷ ರಾಜ್ಯದಲ್ಲಿ ಸತತ ಏಳನೇ ಬಾರಿಗೆ ಅಧಿಕಾರಕ್ಕೇರಲಿರುವುದು ಖಚಿತವಾಗುತ್ತಿದ್ದಂತೇ, ಕೇಸರಿ ಕಾರ್ಯಕರ್ತರು ನೃತ್ಯ ಮಾಡಿ, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

Gujarat Assembly Elections 2022 Results: ಬಿಜೆಪಿ ಪಾಳೆಯದಲ್ಲಿ ಸಂಭ್ರಮ: ಐತಿಹಾಸಿಕ ಗೆಲುವಿನ ಸ್ವಾಗತಕ್ಕೆ ಕ್ಷಣಗಣನೆ

Thursday, December 8, 2022

ಗಾಂಧಿನಗರದ ರೇಸನ್ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಮತಗಟ್ಟೆಗೆ ವ್ಹೀಲ್‌ ಚೇರ್‌ನಲ್ಲಿ ಆಗಮಿಸಿದ ಪ್ರಧಾನಿ ಮೋದಿ ಅವರ ತಾಯಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಗಮನ ಸೆಳೆದರು.

Heeraben Modi: ಗಾಂಧಿನಗರದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ ಅವರ ಶತಾಯುಷಿ ತಾಯಿ

Monday, December 5, 2022

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಹಮದಾಬಾದ್‌ನ ನಾರಣಪುರದಲ್ಲಿರುವ ಎಎಂಸಿ ಉಪ ವಲಯ ಕಚೇರಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

Amit Shah: ಅಹಮದಾಬಾದ್‌ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಅಮಿತ್‌ ಶಾ: ಪುತ್ರ ಜಯ್‌ ಶಾ ಸಾಥ್‌

Monday, December 5, 2022

ಅಹಮದಾಬಾದ್‌ನ ರಾನಿಪ್‌ನ ನಿಶಾನ್ ಪಬ್ಲಿಕ್ ಶಾಲೆಯಲ್ಲಿ ನಿರ್ಮಿಸಲಾಗಿರುವ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

PM Modi: ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ: ಪ್ರಜಾಪ್ರಭುತ್ವ ಗೆಲ್ಲಿಸಲು ಕರೆ

Monday, December 5, 2022

ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ನಿರಾಶಾದಾಯಕ ಮತದಾನ ಬೇಸರದ ಸಂಗತಿ ಎಂದು ಚುನಾವಣಾ ಆಯೋಗ ಹೇಳಿದೆ. "ನಗರ ನಿರಾಸಕ್ತಿ" ಯನ್ನು ಹಿಮ್ಮೆಟ್ಟಿಸಬೇಕಿರುವುದು ಇಂದಿನ ತುರ್ತು ಅವಶ್ಯ ಎಂದು ಚುನಾವಣಾ ಆಯೋಗ ಮಾರ್ಮಿಕವಾಗಿ ಹೇಳಿದೆ. (ಸಂಗ್ರಹ ಚಿತ್ರ)

Gujarat Assembly Election 2022: ಗುಜರಾತ್‌ ಮೊದಲ ಹಂತದಲ್ಲಿ ಕಡಿಮೆ ಮತದಾನ: ಚುನಾವಣಾ ಆಯೋಗ ಹೇಳುವುದೇನು?

Saturday, December 3, 2022

ಅಹಮದಾಬಾದ್‌ನಲ್ಲಿ 50 ಕಿ.ಮೀ 'ಮೆಗಾ ರೋಡ್ ಶೋ' ನಡೆಸಿದ ಪ್ರಧಾನಿ ಮೋದಿ, ರಸ್ತೆಯುದ್ದಕ್ಕೂ ಜಮಾವಣೆಗೊಂಡಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಂಡ ಅವರ ಅಭಿಮಾನಿಗಳು ಸಂಭ್ರಮಿಸಿದರು.

PM Modi Roadshow: ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿಯಿಂದ 50 ಕಿ.ಮೀ 'ಮೆಗಾ ರೋಡ್ ಶೋ'!

Thursday, December 1, 2022

ನಾನು ವೈಯಕ್ತಿಕವಾಗಿ ಮಲ್ಲಿಕಾರ್ಜಿನ ಖರ್ಗೆ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಆದರೆ ಗುಜರಾತ್‌ ರಾಮಭಕ್ತರ ನಾಡು ಎಂಬುದು ಪಾಪ ಖರ್ಗೆ ಅವರಿಗೆ ಗೊತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ನನ್ನನ್ನು ರಾವಣ ಎಂದು ಕರೆದಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.

PM Hits Back Kharge: ಖರ್ಗೆ "ರಾವಣ" ಹೇಳಿಕೆಯನ್ನು ಮತವಾಗಿ ಪರಿವರ್ತಿಸಿದ ಮೋದಿ?: ಹೀಗೊಂದು "ನಯವಾದ ಹೊಡೆತ"!

Thursday, December 1, 2022

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯ್ದಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್ ಅನುಚಿತ ಪದಗಳನ್ನು ಬಳಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

Rajnath Singh: ಆರೋಗ್ಯಕರ ರಾಜಕಾರಣದ ಲಕ್ಷಣ ಅಲ್ಲ: ಖರ್ಗೆ 'ರಾವಣ' ಹೇಳಿಕೆ ಖಂಡಿಸಿದ ರಾಜನಾಥ್‌ ಸಿಂಗ್!‌

Wednesday, November 30, 2022

ರಾಜ್ಯದಲ್ಲಿ ಬದಲಾವಣೆ ತರುವ ಬದಲು ಬಿಜೆಪಿಯಬರು ಪದೇ ಪದೇ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರು. ಗುಜರಾತ್‌ಗೆ ಆರು ವರ್ಷದಲ್ಲಿ ಮೂರು ಸಿಎಂಗಳನ್ನು ಕೊಟ್ಟಿರುವ ಬಿಜೆಪಿ, ರಾಜ್ಯದ ಅಭಿವೃದ್ಧಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

Mallikarjun Kharge: ಸಿಎಂ ಬದಲಾವಣೆ ಬಿಟ್ಟರೆ ಗುಜರಾತ್‌ಗೆ ಬಿಜೆಪಿ ಕೊಡುಗೆ ಶೂನ್ಯ: ಮಲ್ಲಿಕಾರ್ಜುನ ಖರ್ಗೆ!

Monday, November 28, 2022

ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುಜರಾತ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿಯ ಹತಾಶ ಮನೋಭಾವನೆಯನ್ನು ತೋರಿಸುತ್ತದೆ. ಬಿಜೆಪಿ ಗುಜರಾತ್‌ನಿಂದ ತೊಲಗಲಿದೆ ಎಂಬ ಸತ್ಯವನ್ನು ಅರಿತಿರುವ ಮೋದಿ-ಶಾ ಜೋಡಿ, ತಮ್ಮ ದುರ್ಬಲ ಸ್ಥಿತಿಯನ್ನು ಮುಚ್ಚಿಡಲು ಇಲ್ಲಿಯೇ ಬಿಡಾರ ಹೂಡಿದ್ದಾರೆ ಎಂದು ಅಶೋಕ್‌ ಗೆಹ್ಲೋಟ್‌ ವ್ಯಂಗ್ಯಾಡಿದ್ದಾರೆ.

Ashok Gehlot: ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಸೀಟು 125 ಪಕ್ಕಾ: ಹೇಗಿದೆ ನೋಡಿ ರಾಜಸ್ಥಾನ ಸಿಎಂ ಲೆಕ್ಕಾ?

Monday, November 21, 2022

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ, ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮಾಹಿತಿ ನೀಡಿದ್ದಾರೆ.

BJP Suspends Rebels: ಗುಜರಾತ್‌ನಲ್ಲಿ ಏಳು ಜನ ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಬಿಜೆಪಿ!

Sunday, November 20, 2022

ಪ್ರಧಾನಿ ಮೋದಿ ಅವರ ಸೋಮನಾಥ ದೇವಸ್ಥಾನ ಭೇಟಿ ವೇಳೆ ನೆರೆದಿದ್ದ ಮಹಿಳಾ ಅಭಿಮಾನಿಯೋರ್ವಳು, ಮೋದಿ ಅವರ ನಾಯಕತ್ವವನ್ನು ನಾವೆಲ್ಲಾ ಮೆಚ್ಚಿಕೊಂಡಿದ್ದೇವೆ ಎಂದು ಹೇಳಿದರು.

PM Modi Followers in Gujarat: ಇದು ಮೋದಿಜೀ ಅವರ ಗುಜರಾತ್:‌ ಏನಂತಾರೆ ಪ್ರಧಾನಿ ಅಭಿಮಾನಿಗಳು?

Sunday, November 20, 2022

"ಗುಜರಾತ್ ಜನರು ಈ ಬಾರಿ ದೊಡ್ಡ ಬದಲಾವಣೆಗೆ ಸಿದ್ಧರಾಗಿದ್ದಾರೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದು,   ಆಪ್‌ ಈ ಬಾರಿ ಗುಜರಾತ್‌ನಲ್ಲಿ ಪೂರ್ಣ ಬಹುತಮದ ಸರ್ಕಾರ ರಚಿಸುವುದು ಖಚಿತ ಎಂದು ಹೇಳಿದ್ದಾರೆ. (ಸಂಗ್ರಹ ಚಿತ್ರ)

Gujarat Assembly Election 2022: ಗುಜರಾತ್‌ನಲ್ಲಿ ತಾನು ಗೆಲ್ಲಲಿರುವ ಸೀಟುಗಳ ಸಂಖ್ಯೆ ತಿಳಿಸಿದ ಆಪ್‌

Thursday, November 3, 2022

ಡಿಸೆಂಬರ್ 1 ರಂದು ಗುಜರಾತ್‌ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇ ರೀತಿ ಡಿಸೆಂಬರ್ 5ರಂದು ಎರಡನೆ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ಮತ್ತು ಫಲಿತಾಂಶವನ್ನು ಪ್ರಕಟಿಸಲಾಗುವುದು.  ಇದೇ ದಿನ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನೂ ಪ್ರಕಟಿಸಲಾಗುವುದು. ಡಿಸೆಂಬರ್ 10 ರಂದು ವಿಧಾನಸಭೆ ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Gujarat Assembly Election Date: ಗುಜರಾತ್‌ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ: ಈಗ ಶುರು ಅಸಲಿ ಆಟ

Thursday, November 3, 2022