Latest new zealand Photos

ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿತು. ತಂಡದ ಸೋಲಿನ ಹೊರತಾಗಿಯೂ, ಪಾಕಿಸ್ತಾನ ನಾಯಕ ಬಾಬರ್ ಅಜಮ್ ರಾವಲ್ಪಿಂಡಿಯಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೆ ಆರೋನ್ ಫಿಂಚ್ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಆದರೆ, ಈ ದಾಖಲೆಯ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಹಳ ಹಿಂದುಳಿದಿದ್ದಾರೆ.

ಸೋಲಿನ ನಡುವೆಯೂ ಬಾಬರ್ ಅಜಮ್ ವಿಶ್ವದಾಖಲೆ; ಕೊಹ್ಲಿ, ರೋಹಿತ್‌ ಮೀರಿಸಿ ಪಾಕಿಸ್ತಾನ ನಾಯಕನ ರೆಕಾರ್ಡ್

Tuesday, April 23, 2024

ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

Monday, March 11, 2024

ನ್ಯೂಜಿಲೆಂಡ್ ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ ಅಗ್ರಸ್ಥಾನಕ್ಕೇರಿದೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 64.58 ಇದೆ.

ಗೆದ್ದಿದ್ದು ಆಸ್ಟ್ರೇಲಿಯಾ, ಸೋತಿದ್ದು ನ್ಯೂಜಿಲೆಂಡ್, ಅಗ್ರಸ್ಥಾನಕ್ಕೇರಿದ್ದು ಮಾತ್ರ ಭಾರತ; ಹೀಗಿದೆ ಡಬ್ಲ್ಯುಟಿಸಿ ಅಂಕಪಟ್ಟಿ

Sunday, March 3, 2024

3ನೇ ಮಗುವಿನ ಜನನವಾಗಿದೆ. ಸುಂದರವಾದ ಹೆಣ್ಣು ಮಗುವಿಗೆ ಸ್ವಾಗತ. ಸುರಕ್ಷಿತ ಜನನದಿಂದ ಖುಷಿಯಾಗಿದೆ. ಮುಂದಿನ ಅತ್ಯಾಕರ್ಷಕ ಪ್ರಯಾಣ ನೋಡಲು ಕಾತರರಾಗಿದ್ದೇವೆ ಎಂದು ವಿಲಿಯಮ್ಸನ್ ತಮ್ಮ ನವಜಾತ ಶಿಶು ಮತ್ತು ಪತ್ನಿಯೊಂದಿಗಿನ ಫೋಟೋ ವನ್ನು ಹಂಚಿಕೊಂಡಿದ್ದಾರೆ ಬರೆದಿದ್ದಾರೆ.

Photo: ಮೂರನೇ ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್; ರಾಜಕುಮಾರಿಯ ಮೊದಲ ಫೋಟೋ ಹಂಚಿಕೊಂಡ ಕಿವೀಸ್‌ ಆಟಗಾರ

Wednesday, February 28, 2024

ವಿಲಿಯಮ್ಸನ್ 172 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 32 ಶತಕ ಗಳಿಸಿದರೆ, ಸ್ಟೀವ್ ಸ್ಮಿತ್ 174 ಇನ್ನಿಂಗ್ಸ್‌ಗಳಲ್ಲಿ 32 ಟೆಸ್ಟ್ ಶತಕಗಳನ್ನು ದಾಖಲಿಸಿದ್ದರು. ರಿಕಿ ಪಾಂಟಿಂಗ್ 176 ಇನ್ನಿಂಗ್ಸ್, ಸಚಿನ್ ತೆಂಡೂಲ್ಕರ್ 179 ಇನ್ನಿಂಗ್ಸ್​​ಗಳಲ್ಲಿ 32 ಶತಕ ಸಿಡಿಸಿದ್ದಾರೆ.

ಅತಿ ವೇಗದ 32ನೇ ಟೆಸ್ಟ್ ಶತಕ, 7 ಪಂದ್ಯಗಳಲ್ಲಿ 7 ಸೆಂಚುರಿ ಚಚ್ಚಿದ ಕೇನ್ ವಿಲಿಯಮ್ಸನ್; ಹಲವು ದಾಖಲೆ ಬರೆದ ಮಾಜಿ ನಾಯಕ

Friday, February 16, 2024

ಫರ್ಗುಸನ್ ನ್ಯೂಜಿಲ್ಯಾಂಡ್‌ ಪರ ಈವರೆಗೆ 1 ಟೆಸ್ಟ್, 65 ಏಕದಿನ ಹಾಗೂ 36 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

Lockie Ferguson: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್‌ಸಿಬಿ ವೇಗಿ; ಲಾಕಿ ಫರ್ಗ್ಯುಸನ್ ಮದುವೆ ಫೋಟೋಗಳು ಇಲ್ಲಿವೆ

Friday, February 9, 2024

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕಿವೀಸ್‌ ಅಗ್ರಸ್ಥಾನಕ್ಕೆ ಏರಿದೆ. ಕಿವೀಸ್ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 24 ಅಂಕಗಳನ್ನು ಹೊಂದಿದೆ. 1 ಪಂದ್ಯದಲ್ಲಿ ಸೋತಿರುವ ತಂಡವು 66.66 ಪ್ರತಿಶತ ಅಂಕಗಳನ್ನು ಗಳಿಸಿ ಲೀಗ್ ಅಂಕಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳನ್ನು, ಆಯಾ ತಂಡಗಳ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿವೀಸ್; ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿದ ಭಾರತ

Wednesday, February 7, 2024

ಬೇ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇನ್ ವಿಲಿಯಮ್ಸನ್ ಶತಕ ಬಾರಿಸಿದ್ದಾರೆ. ಆ ಮೂಲಕ ನಿವೃತ್ತಿ ಪಡೆಯದ ಕ್ರಿಕೆಟಿಗರ ಪೈಕಿ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನಾಗಿ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಟೀವ್ ಸ್ಮಿತ್ ಮಾತ್ರ ಕಿವೀಸ್ ಆಟಗಾರನಿಗಿಂತ ಮುಂದಿದ್ದಾರೆ. ಪ್ರಸ್ತುತ ಕೇನ್ ವಿಲಿಯಮ್ಸನ್ ಈಗ ಎರಡನೇ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಆಟಗಾರನಾಗಿದ್ದಾರೆ.

ಅವಳಿ ಶತಕದೊಂದಿಗೆ ವಿರಾಟ್, ಜೋ ರೂಟ್ ಹಿಂದಿಕ್ಕಿದ ಕೇನ್ ವಿಲಿಯಮ್ಸನ್; ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್‌ ಮುನ್ನಡೆ

Tuesday, February 6, 2024

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಭರ್ಜರಿ ಆರಂಭ ಪಡೆಯಿತು. ಈ ಪಂದ್ಯದಲ್ಲೂ ಫಿನ್ ಅಲೆನ್, ಪಾಕಿಸ್ತಾನದ ಬೌಲರ್​​ಗಳ ಬೆವರಿಳಿಸಿದರು. ಡೆವೊನ್ ಕಾನ್ವೆ (20 ರನ್) ಜೊತೆ ಸೇರಿ ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 59 ರನ್‌ ಕಲೆ ಹಾಕಿದರು. ಆದರೆ ಫಿನ್ ಅಲೆನ್ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದರು.

ಪಾಕಿಸ್ತಾನಕ್ಕೆ ಮತ್ತೆ ಬೆಂಡೆತ್ತಿದ್ದ ಆರ್​ಸಿಬಿ ಮಾಜಿ ಆಟಗಾರ; ನ್ಯೂಜಿಲೆಂಡ್​ಗೆ ಸತತ 2ನೇ ಗೆಲುವು

Sunday, January 14, 2024

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 8 ವಿಕೆಟ್ ಕಳೆದುಕೊಂಡು 226 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡೇರಿಲ್ ಮಿಚೆಲ್ 27 ಎಸೆತಗಳಲ್ಲಿ 61 ರನ್ ಗಳಿಸಿದರು. ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ 57 ರನ್ ಗಳಿಸಿದರು. ಫಿನ್ ಅಲೆನ್ 15 ಎಸೆತಗಳಲ್ಲಿ 34 ರನ್ ಗಳಿಸಿದರು.

ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಟಿಮ್ ಸೌಥಿ; ಚುಟುಕು ಸ್ವರೂಪದಲ್ಲಿ 150 ವಿಕೆಟ್ ಕಬಳಿಸಿದ ವಿಶ್ವದ ಮೊದಲಿಗ

Friday, January 12, 2024

ಉಭಯ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯವು ಡಿಸೆಂಬರ್‌ 23ರಂದು ನೇಪಿಯರ್‌ನಲ್ಲಿ ನಡೆಯಲಿದೆ.

ಸೌಮ್ಯ ಸರ್ಕಾರ್ 169 ರನ್‌ ಹೊರತಾಗಿಯೂ ಸೋತ ಬಾಂಗ್ಲಾ; ಎರಡನೇ ಏಕದಿನ ಗೆದ್ದ ಕಿವೀಸ್, ಸರಣಿ ವಶ

Wednesday, December 20, 2023

ಬಾಂಗ್ಲಾದೇಶ vs ನ್ಯೂಜಿಲೆಂಡ್ 2ನೇ ಟೆಸ್ಟ್ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ ಕಂಡಿದೆ. ಮೀರ್‌ಪುರದಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಬಾಂಗ್ಲಾದೇಶ ಲೀಗ್ ಪಟ್ಟಿಯಲ್ಲಿ ಕುಸಿದಿದೆ. 2ನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದ ಕಾರಣ ಕಿವೀಸ್​, ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಜಿಗಿತ ಕಂಡಿದೆ.

WTC Points Table: ಬಾಂಗ್ಲಾದೇಶ ಎದುರು 2ನೇ ಟೆಸ್ಟ್​ ಗೆದ್ದ ನ್ಯೂಜಿಲೆಂಡ್; ಅಂಕಪಟ್ಟಿಯಲ್ಲಿ ಬದಲಾವಣೆ

Friday, December 22, 2023

ವಿಶ್ವಕಪ್ ಗ್ರೂಪ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕಾಂಗಿ ಹೋರಾಟ ಮಾಡಿದ್ದ ಮ್ಯಾಕ್ಸ್‌ವೆಲ್ ಅವರು ಆಸ್ಟ್ರೇಲಿಯಾ ತಂಡವನ್ನು ಗೆಲ್ಲಿಸಿದ ಪರಿಯನ್ನು ಯಾರೂ ಮರೆಯೋದಿಲ್ಲ. ಈ ಪಂದ್ಯದಲ್ಲಿ ಗಾಯಗೊಂಡಿದ್ದರು ಮ್ಯಾಕ್ಸ್‌ವೆಲ್ ಔಟಾಗದೆ 157.03 ಸ್ಟ್ರೈಕ್ ರೇಟ್‌ನಲ್ಲಿ ಔಟಾಗದೆ 201 ರನ್ ಬಾರಿಸಿದ್ದರು. ಇದು ಈ ವಿಶ್ವಕಪ್‌ನಲ್ಲಿ ದಾಖಲಾಗಿರರುವ ಮೊದಲ ದ್ವಿಶತಕ ಕೂಡ ಆಗಿದೆ. ವೈಯಕ್ತಿಕ ಗರಿಷ್ಠ ಮೊತ್ತವನ್ನು ಪೇರಿಸಿದ ಅಗ್ರ ಐವರು ಆಟಗಾರರ ಪಟ್ಟಿಯಲ್ಲಿ ಮ್ಯಾಕ್ಸ್‌ವೆಲ್‌ ನಂಬರ್ 1 ಸ್ಥಾನದಲ್ಲಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಐವರು ಬ್ಯಾಟರ್‌ಗಳು; ಭಾರತದ ಆಟಗಾರರಿಗೆ ಇಲ್ಲ ಸ್ಥಾನ; ಫೋಟೊಸ್

Friday, November 17, 2023

ಪಂದ್ಯದಲ್ಲಿ ಭಾರತದಿಂದ ಹಲವು ತಪ್ಪುಗಳಾದವು, ಹೆಚ್ಚುವರಿ ರನ್‌ಗಳು ಸೋರಿಕೆಯಾದವು. ಆದರೂ, ತಂಡದ ಸಂಘಟಿತ ಹೋರಾಟಕ್ಕೆ ಯಶಸ್ಸು ಸಿಕ್ಕಿತು.

ಶಮಿ ಬೌಲಿಂಗ್‌ ಮಾತ್ರವಲ್ಲ; ಭಾರತದ ಸೆಮಿಫೈನಲ್‌ ಗೆಲುವಿಗೆ ಈ 5 ಅಂಶಗಳು ಪ್ರಮುಖ ಕಾರಣ

Thursday, November 16, 2023

ಈ ಹಿಂದೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಈ ದಾಖಲೆ ಹೊಂದಿದ್ದರು. ಅವರು 19 ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದರು. ಶಮಿ ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದ‌ ವಿಶ್ವದ ಏಳನೇ ಬೌಲರ್ ಎನಿಸಿಕೊಂಡರು. ಗ್ಲೆನ್ ಮೆಕ್‌ಗ್ರಾತ್, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ, ವಾಸಿಂ ಅಕ್ರಮ್, ಟ್ರೆಂಟ್ ಬೌಲ್ಟ್ ಮತ್ತು ಸ್ಟಾರ್ಕ್ ಅವರನ್ನು ಮೊದಲು ಈ ಸಾಧನೆ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿ ಶಮಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ವಿಶ್ವಕಪ್‌ನಲ್ಲಿ ಶಮಿ ವಿಕೆಟ್‌ಗಳ ಸಂಖ್ಯೆ 54 ಆಗಿದೆ.

Photos: ಕಿವೀಸ್‌ ವಿರುದ್ಧ ಭಾರತಕ್ಕೆ ವಿಜಯದ ಶಮಿ; ವಿಶ್ವಕಪ್‌ ದಾಖಲೆಗಳು ಒಂದೆರಡಲ್ಲ

Thursday, November 16, 2023

2019ರ ಸೆಮಿಫೈನಲ್ ಸೋಲಿನ ಸೇಡು ತೀರಿಸಿಕೊಂಡ ಭಾರತ, ಈ ಹಿಂದೆ ಮೂರು ಬಾರಿ (1983, 2003, 2011) ಫೈನಲ್ ಪ್ರವೇಶಿಸಿತ್ತು. ಅದರಲ್ಲಿ 2 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದೆ. 1983, 2011ರಲ್ಲಿ ಪ್ರಶಸ್ತಿ ಗೆದ್ದಿದ್ದರೆ, 2003ರಲ್ಲಿ ರನ್ನರ್​ಅಪ್ ಆಗಿತ್ತು.

ಭಾರತ-ನ್ಯೂಜಿಲೆಂಡ್ ಸೆಮಿಫೈನಲ್​ಗೆ ಪಿಚ್​ ಬದಲಾವಣೆ ಆರೋಪ; ಖಡಕ್ ಉತ್ತರ ಕೊಟ್ಟ ಬಿಸಿಸಿಐ-ಐಸಿಸಿ

Thursday, November 16, 2023

2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಾಂಖೆಡೆಯಲ್ಲಿ ಮೈದಾನಕ್ಕಿಳಿಯುವುದರೊಂದಿಗೆ ವಿರಾಟ್ ಕೊಹ್ಲಿ ಅಭೂತಪೂರ್ವ ವೈಯಕ್ತಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಹಿಂದೆ ವಿಶ್ವದ ಕೇವಲ ನಾಲ್ವರು ಕ್ರಿಕೆಟಿಗರ ಹೆಸರಿನಲ್ಲಿದ್ದ ಇಂಥ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿ ಜೊತೆಗೆ ಎದುರಾಳಿ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಕೂಡಾ ಈ ಪಟ್ಟಿಯಲ್ಲಿ ಆರನೆಯವರಾಗಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು 4 ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಕಾಣಿಸಿಕೊಂಡ ಜಂಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 2011, 2015, 2019ರ ವಿಶ್ವಕಪ್‌ ಬಳಿಕ, ಇದೀಗ 2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊಹ್ಲಿ ಆಡಿದ್ದಾರೆ. ಇಂಥಾ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ಕೊಹ್ಲಿಯದ್ದು.

ಕಿವೀಸ್‌ ವಿರುದ್ಧ ಕಣಕ್ಕಿಳಿದು ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್; ಈ ವಿಶ್ವಕಪ್ ದಾಖಲೆ ಮಾಡಿದ ಮೊದಲ ಭಾರತೀಯ

Wednesday, November 15, 2023

2019ರ ವಿಶ್ವಕಪ್‌ನ ಆ ಸೆಮಿಫೈನಲ್‌ ಪಂದ್ಯದ ನೆನಪು ಭಾರತೀಯರ ಮನಸಿಂದ ಇನ್ನೂ ಮಾಸಿಲ್ಲ. ಈ ಬಾರಿ ಕೂಡಾ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧವೇ ಭಾರತ ಸೆಣಸಬೇಕಿದೆ. 2019ರ ಸೆಮಿಫೈನಲ್‌ನಲ್ಲಿದ್ದ ನಾಲ್ಕು ಅಂಪೈರ್‌ಗಳಲ್ಲಿ, ಇಬ್ಬರು ಅಂಪೈರ್‌ಗಳು ಈ ಬಾರಿಯ ಮೊದಲ ಸೆಮಿಫೈನಲ್‌ನಲ್ಲಿ ಅಂಪೈರಿಂಗ್‌ ಮಾಡುತ್ತಿದ್ದಾರೆ. (ಫೈಲ್ ಫೋಟೋ, ಕೃಪೆ AFP ಮತ್ತು PTI)

ಇಂಡೋ-ಕಿವೀಸ್ ಪಂದ್ಯಕ್ಕೆ 2019ರ ಸೆಮಿಫೈನಲ್‌ ಅಂಪೈರ್; ಇವರಿದ್ದಾಗ 3 ನಾಕೌಟ್ ಪಂದ್ಯಗಳಲ್ಲಿ ಭಾರತಕ್ಕೆ ಸೋಲು

Wednesday, November 15, 2023

ಈ ಬಾರಿಯ ವಿಶ್ವಕಪ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಫ್ಘಾನಿಸ್ತಾನ ತಂಡ ಪ್ರದರ್ಶನ ನೀಡಿದೆ. ಆದರಲ್ಲೂ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಪ್ರದರ್ಶನ ನೀಡಿದ್ದಾರೆ. 21 ವರ್ಷದ ಜದ್ರಾನ್ 9 ಲೀಗ್ ಪಂದ್ಯಗಳಿಂದ 1 ಶತಕ 1 ಅರ್ಧ ಶತಕ ಸೇರಿ 395 ರನ್ ಕಲೆಹಾಕಿದ್ದಾರೆ.

ರಚಿನ್‌ರಿಂದ ಕೊಯೆಟ್ಜಿವರೆಗೆ; ವಿಶ್ವಕಪ್‌ನಲ್ಲಿ ಅಬ್ಬರಿಸಿದ ಟಾಪ್ ಐವರು ಯುವ ಆಟಗಾರರು ಇವರೇ

Wednesday, November 15, 2023

ಸತತ ಗೆಲುವಿನ ನಾಗಾಲೋಟದಲ್ಲಿದ್ದ ಭಾರತ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಅಕ್ಟೋಬರ್ 29ರಂದು ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಎದುರಿಸಿತು. ಭಾರತ ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ನಡೆಸಿತು. ನಿಗದಿತ 50 ಓವರ್​​ಗಳಲ್ಲಿ 9 ವಿಕೆಟ್‌ಗೆ 229 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಇನಿಂಗ್ಸ್‌ ಅಂತ್ಯಗೊಳಿಸಿತು. ಭಾರತ 100 ರನ್‌ಗಳ ಜಯ ಸಾಧಿಸಿತು. ರೋಹಿತ್ ಪಂದ್ಯಶ್ರೇಷ್ಠ (101 ಎಸೆತಗಳಲ್ಲಿ 87 ರನ್). ಶಮಿ ನಾಲ್ಕು ವಿಕೆಟ್ ಪಡೆದು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ನ್ಯೂಜಿಲೆಂಡ್ ಎದುರಿನ ಸೆಮೀಸ್​​ಗೂ ಮುನ್ನ ಭಾರತದ ಅಜೇಯ ಓಟ ಹೇಗಿತ್ತು; ರೋಚಕ ಜರ್ನಿಯ ಕಿರುನೋಟ ಇಲ್ಲಿದೆ

Monday, November 13, 2023