olympic-games News, olympic-games News in kannada, olympic-games ಕನ್ನಡದಲ್ಲಿ ಸುದ್ದಿ, olympic-games Kannada News – HT Kannada

Latest olympic games Photos

78 ನಿಮಿಷಗಳ ಕಾಲ ನಡೆದ ಸುದೀರ್ಘ ಹೋರಾಟದಲ್ಲಿ ಮೊದಲ ಗೇಮ್ ಅನ್ನು ನಿತೀಶ್ 31ನೇ ನಿಮಿಷದಲ್ಲಿ 21-14ರಿಂದ ಗೆದ್ದುಕೊಂಡರು. ಆದರೆ ಎರಡನೇ ಗೇಮ್ ಅನ್ನು 18-21 ಅಂತರದಿಂದ ಕಳೆದುಕೊಂಡರು. ಮೂರನೇ ಹಾಗೂ ನಿರ್ಣಾಯಕ ಗೇಮ್ ಅನ್ನು 23-21 ಅಂತರದಿಂದ ರೋಚಕವಾಗಿ ಗೆದ್ದುಕೊಂಡರು.

ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್; ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಬಂಗಾರ

Monday, September 2, 2024

ಪ್ಯಾರಿಸ್ ಒಲಿಂಪಿಕ್ಸ್​​-2024ನಲ್ಲಿ ಭಾರತ ಚಿನ್ನದ ಪದಕ ಗೆದ್ದಿಲ್ಲ. ನಿರೀಕ್ಷೆ ಮೂಡಿಸಿದ್ದವರೂ ನಿರಾಸೆ ಮೂಡಿಸಿದರು. ಅದಾಗ್ಯೂ ನೀರಜ್ ಚೋಪ್ರಾ ಭಾರತೀಯ ಕ್ರೀಡಾಭಿಮಾನಿಗಳನ್ನು ನಿರಾಶೆಗೊಳಿಸಿಲ್ಲ.

Neeraj Chopra: ಗಗನಕ್ಕೇರಿದ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ; ಕ್ರಿಕೆಟ್ ಬಿಟ್ಟರೆ ಉಳಿದ ಕ್ರೀಡೆಗಳಿಗೆ ಈತನೇ ಕಿಂಗ್

Saturday, August 24, 2024

ಬಿಎಂಎಕ್ಸ್ ಚಾಂಪಿಯನ್ ಜೋಸ್ ಟೊರೆಸ್ ಗಿಲ್, ಪ್ಲೇಸ್ ಡಿ ಲಾ ಕಾಂಕಾರ್ಡ್ ನ ಒಬೆಲಿಸ್ಕ್ ಬದಿಯಲ್ಲಿ ಸೈಕಲ್ ತುಳಿಯುತ್ತಿರುವಂತೆ ಕಾಣುವ ಈ ಚಿತ್ರವು, ಪ್ಯಾರಿಸ್‌ ಗೇಮ್ಸ್‌ನ ಆಕರ್ಷಕ ಚಿತ್ರ. ಅರ್ಜೆಂಟೀನಾದ ಆಟಗಾರ ಚಿನ್ನ ಗೆಲ್ಲುವ ಎರಡು ದಿನಗಳ ಮುಂಚೆ ತರಬೇತಿಯ ಸಮಯದಲ್ಲಿ ಫೋಟೊಗ್ರಾಫರ್ ಜೆಫ್ ಪಚೌಡ್ ಈ ಸಾಧನೆ ಮಾಡಿದ್ದಾರೆ. ಕೇವಲ ಒಂದು ಕ್ಲಿಕ್‌ನಲ್ಲಿ ಈ ಫೋಟೋ ಬಂದಿಲ್ಲ. ಬದಲಿಗೆ ಫೋಟೋ ಬರ್ಸ್ಟ್‌ (ಏಕಕಾಲಕ್ಕೆ ಹಲವು ಕ್ಲಿಕ್) ಮೂಲಕ ಈ ಚಿತ್ರ ಕೂಡಾ ಬಂದಿದೆ.

ಫೋಟೊ ಹಿಂದಿನ ಕಥೆ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಅತ್ಯುತ್ತಮ ಛಾಯಾಚಿತ್ರಗಳು

Tuesday, August 13, 2024

ಇದೇ ವೇಳೆ ಮದುವೆ ಕುರಿತ ಗಾಳಿ ಸುದ್ದಿಬಗ್ಗೆ ನೀರಜ್ ಚೋಪ್ರಾ ಅವರ ಚಿಕ್ಕಪ್ಪ ಕೂಡಾ ಮಾತನಾಡಿದ್ದಾರೆ. ನೀರಜ್ ಪದಕ ತಂದಾಗ ಇಡೀ ದೇಶಕ್ಕೆ ಅದರ ಬಗ್ಗೆ ತಿಳಿಯಿತು. ಅದೇ ರೀತಿ ಆತ ಮದುವೆಯಾದಾಗ ಕೂಡಾ ಎಲ್ಲರಿಗೂ ತಿಳಿಯುತ್ತದೆ ಎಂದು ಸರಳವಾಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನೀರಜ್ ಚೋಪ್ರಾ-ಮನು ಭಾಕರ್ ಮದುವೆ ಆಗ್ತಾರಾ? ಸ್ಪಷ್ಟನೆ ಕೊಟ್ರು ಶೂಟರ್‌ ತಂದೆ ರಾಮ್ ಕಿಶನ್

Tuesday, August 13, 2024

ಸಮಾರೋಪ ಸಮಾರಂಭದಲ್ಲಿ ಗಾಯಕ ಯೂಲ್ಟ್ ಪ್ರದರ್ಶನ ನೀಡಿದರು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ತೆರೆ; ಪ್ರೇಮನಗರಿಯಿಂದ ಲಾಸ್ ಏಂಜಲೀಸ್‌ಗೆ ಧ್ವಜ ಹಸ್ತಾಂತರ -Photos

Monday, August 12, 2024

ಆರಂಭಿಕ ದಿನಗಳಲ್ಲಿ ತಮ್ಮ ಆಹಾರದ ಬಗ್ಗೆ ವಿನೇಶ್‌ಗೆ ಹೆಚ್ಚು ತಿಳಿದಿರಲಿಲ್ಲ, ಹೀಗಾಗಿ ಉಪಾಹಾರವನ್ನು ತಿನ್ನುತ್ತಿರಲಿಲ್ಲ. ಮಧ್ಯಾಹ್ನ ತರಕಾರಿಗಳು ಮತ್ತು ಬ್ರೆಡ್ ತಿಂದರೆ, ರಾತ್ರಿ ಬೇಯಿಸಿದ ಮೊಟ್ಟೆ ತಿನ್ನುತ್ತಿದ್ದಾಗಿ ಖುದ್ದು ವಿನೇಶ್ ಹೇಳಿದರು.

ಗಟ್ಟಿ ದೇಹಕ್ಕೆ ನಾಟಿ ಆಹಾರವೇ ಶಕ್ತಿ; ಚಿನ್ನದ ಹುಡುಗಿ ವಿನೇಶ್ ಫೋಗಟ್ ಆಹಾರಕ್ರಮ, ಫಿಟ್‌ನೆಸ್ ಸೀಕ್ರೆಟ್

Sunday, August 11, 2024

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳೊಂದಿಗೆ ಭಾರತ ಅಭಿಯಾನ ಅಂತ್ಯಗೊಳಿಸಿದೆ. ಶೂಟಿಂಗ್‌ನಲ್ಲಿ ಮೂರು ಕಂಚಿನ ಪದಕಗಳು ಬಂದರೆ, ಹಾಕಿ ತಂಡ ಕೂಡಾ ಕಂಚಿನ ಪದಕ ಗೆದ್ದಿತು. ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರು. ಕುಸ್ತಿಯಲ್ಲಿ ಅಮನ್‌ ಸೆಹ್ರಾವತ್‌ ಐತಿಹಾಸಿಕ ಕಂಚು ಸಾಧನೆ ಮಾಡಿದರು, ಈ ನಡುವೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತೀಯ ಆಟಗಾರರು ಕನಿಷ್ಠ 7 ಪದಕಗಳನ್ನು ಕೂದಲೆಳೆ ಅಂತರದಿಂದ ಕಳೆದುಕೊಂಡಿತು. ಆರು ಸಂದರ್ಭಗಳಲ್ಲಿ ಭಾರತದ ಅಥ್ಲೀಟ್‌ಗಳು ನಾಲ್ಕನೇ ಸ್ಥಾನ ಪಡೆದರು. ಇನ್ನೊಂದರಲ್ಲಿ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯ್ತು.

ಗೆದ್ದಿದ್ದು 6, ಕಳೆದುಕೊಂಡಿದ್ದು 7 ಪದಕ; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ 4ನೇ ಸ್ಥಾನ ಪಡೆದ ಭಾರತೀಯರು

Sunday, August 11, 2024

ಆದರೆ, ಒಂದೇ ಒಂದು ರೂಪಾಯಿ ಬಿಡಿಗಾಸು ನೀಡದಿದ್ದರೂ ಕೋಟಿ ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಅರ್ಷದ್​ಗೆ ಪಾಕಿಸ್ತಾನ ಸೂಚಿಸಿದೆ ಎಂದು ವರದಿಯಾಗಿದೆ.

ಕೊಡದೇ ಕಿತ್ತುಕೊಳ್ತಿದೆ ಪಾಕಿಸ್ತಾನ ಸರ್ಕಾರ; ಚಿನ್ನ ಗೆದ್ದ ಅರ್ಷದ್ ನದೀಮ್​ಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟು ಎಂದ ಪಾಕ್

Sunday, August 11, 2024

ರಿತಿಕಾ ನಿರ್ಗಮನದೊಂದಿಗೆ, ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು. ಒಟ್ಟು ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದ್ದ 117 ಕ್ರೀಡಾಪಟುಗಳು ಪೈಕಿ ಪದಕ ಗೆದ್ದಿದ್ದು 6 ಮಂದಿಯಷ್ಟೆ. ಈ ಪೈಕಿ ಮನು ಭಾಕರ್​ 2 ಮೆಡಲ್​ ಗೆದ್ದಿರುವುದು ವಿಶೇಷ,

ರೆಪಚೇಜ್​ಗೂ ಅರ್ಹತೆ ಪಡೆಯದ ರಿತಿಕಾ ಹೂಡ ಪದಕದ ಕನಸು ಭಗ್ನ; ಇಲ್ಲಿಗೆ ಮುಗಿಯಿತು ಭಾರತದ ಅಭಿಯಾನ

Sunday, August 11, 2024

ಸೋಮವೀರ್ ರಾಠಿ ಕೂಡ ಸ್ವತಃ ಕುಸ್ತಿಪಟು. ಹರಿಯಾಣದ ಸೋನಿಪತ್​​​ನಲ್ಲಿ ಜನಿಸಿದರು. ಸೋನಿಪತ್ ನ ಖಾರ್ಖೋಡಾದಲ್ಲಿನ ನರ್ಸರಿಯಿಂದ ಕುಸ್ತಿಯನ್ನು ಪ್ರಾರಂಭಿಸಿದ್ದರು. ಅವರು ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದರು. ಆ ಬಳಿಕ ಸೋಮವೀರ್ ರೈಲ್ವೆಗೆ ಸೇರಿದರು.

ರೈಲ್ವೆಯಲ್ಲಿ ಲವ್​ ಆರಂಭ, ವಿಮಾನ ನಿಲ್ದಾಣದಲ್ಲಿ ಪ್ರಪೋಸ್; ಇದು ವಿನೇಶ್ ಫೋಗಾಟ್-ಸೋಮವೀರ್ ಲವ್​ಸ್ಟೋರಿ

Saturday, August 10, 2024

ಒಲಿಂಪಿಕ್ಸ್​​ ಫೈನಲ್​ನಿಂದ ತನ್ನನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಾಟ್ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿದ್ದ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯ (ಸಿಎಎಸ್) ಇಂದು (ಶನಿವಾರ) ರಾತ್ರಿ 9.30ಕ್ಕೆ ತೀರ್ಪು ಪ್ರಕಟಿಸಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌: ಇಂದು ರಾತ್ರಿ 9:30ಕ್ಕೆ ವಿನೇಶ್ ಫೋಗಾಟ್ ಬೆಳ್ಳಿ ಪದಕದ ತೀರ್ಪು ಪ್ರಕಟ

Saturday, August 10, 2024

2025ರಲ್ಲಿ ಭಾರತದ ಆತಿಥ್ಯದಲ್ಲೇ ಜೂನಿಯರ್​ ಹಾಕಿ ವಿಶ್ವಕಪ್​ ನಡೆಯಲಿದ್ದು, ಅದಕ್ಕೆ ಶ್ರೀಜೇಶ್ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ.

ಪಿಆರ್​​ ಶ್ರೀಜೇಶ್ 2ನೇ ಇನ್ನಿಂಗ್ಸ್ ಆರಂಭ; ವಿದಾಯ ಘೋಷಿಸಿದ ‘ಗೋಡೆ’ಗೆ ಹೊಸ ಜವಾಬ್ದಾರಿ ನೀಡಿದ ಹಾಕಿ ಇಂಡಿಯಾ

Saturday, August 10, 2024

ಅಮನ್‌ ಅವರ ಈ ಗೆಲುವಿನೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 6ಕ್ಕೇರಿದೆ. ಇದರಲ್ಲಿ 5 ಕಂಚಿನ ಪದಕಗಳಿದ್ದರೆ, ಒಂದು ಬೆಳ್ಳಿ ಪದಕ ಸೇರಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6ನೇ ಪದಕ; ಕುಸ್ತಿಯಲ್ಲಿ ಐತಿಹಾಸಿಕ ಕಂಚು ಗೆದ್ದ ಅಮನ್ ಸೆಹ್ರಾವತ್

Friday, August 9, 2024

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅರ್ಷದ್‌ ಪ್ರಯಾಣ ಸುಲಭವಾಗಿರಲಿಲ್ಲ. ಬಡ ಹಳ್ಳಿ ಕುಟುಂಬದಲ್ಲಿ  ಬೆಳೆದ ಅರ್ಷದ್, ಆರಂಭದಲ್ಲಿ ಕ್ರಿಕೆಟ್‌ನತ್ತ ಆಸಕ್ತಿ ಹೊಂದಿದ್ದರು. ಜಾವೆಲಿನ್ ಎಸೆತದಂತೆಯೇ ಅದೇ ಕೌಶಲ್ಯದ ಅಗತ್ಯವಿರುವ ಟೆಂಟ್ ಪೆಗ್ಗಿಂಗ್‌ ಎಂಬ ಆಟದಲ್ಲಿ ಹಳ್ಳಿಯ ಜನರು ಸ್ಪರ್ಧಿಸುವುದನ್ನು ಅರ್ಷದ್‌ ವೀಕ್ಷಿಸುತ್ತಿದ್ದರು.

ಹಾಲು-ತುಪ್ಪವೇ ಶಕ್ತಿ, ಆರ್ಥಿಕ ಸಂಕಷ್ಟದಲ್ಲೂ ಫಿಟ್‌ನೆಸ್‌ಗೆ ಆದ್ಯತೆ; ಪಾಕಿಸ್ತಾನ ಚಿನ್ನದ ಹುಡುಗ ಅರ್ಷದ್ ನದೀಮ್ ಡಯೆಟ್ ಸೀಕ್ರೆಟ್

Friday, August 9, 2024

ಮಗನ ಬೆಳ್ಳಿ ಗೆಲುವಿನ ಕುರಿತಾಗಿ ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಸುದ್ದಿ ಸಂಸ್ಥೆ ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಮಗ ನೀಡಿದ ಪ್ರದರ್ಶನದಿಂದ ಸಂತೋಷವಾಗಿದೆ. ಅವನು ಭಾರತಕ್ಕೆ ಹಿಂದಿರುಗಿದ ನಂತರ ಮಗನಿಗೆ ಇಷ್ಟದ ಆಹಾರ ಉಣಬಡಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಅರ್ಷದ್ ಕೂಡಾ ನಮ್ಮ ಮಗನಂತೆಯೇ; ಪಾಕಿಸ್ತಾನ ಆಟಗಾರನ ಚಿನ್ನ ಗೆಲುವಿಗೆ ಖುಷಿಪಟ್ಟ ನೀರಜ್ ಚೋಪ್ರಾ ತಾಯಿ

Friday, August 9, 2024

ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಎರಡನೇ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ 89.45 ಮೀಟರ್ ದೂರಕ್ಕೆ ಬರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಮೂಲಕ ಕಳೆದ ಬಾರಿಯ ಚಿನ್ನವನ್ನು ಕಳೆದುಕೊಂಡಿದ್ದಾರೆ.

ಒಲಿಂಪಿಕ್ಸ್: 89.45ಮೀ ಜಾವೆಲಿನ್‌ ಎಸೆದು ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ; ಪಾಕ್‌ ಆಟಗಾರನಿಗೆ ದಾಖಲೆಯ ಬಂಗಾರ

Friday, August 9, 2024

ಕಡಿಮೆ ಅವಧಿಯಲ್ಲಿ 10 ಅಂಕ ಸಂಪಾದಿಸಿದ ರೇ ಹಿಗುಚಿ, ಗೆಲುವಿನೊಂದಿಗೆ ಪದಕ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇದೇ ವೇಳೆ ಅಮನ್ ಸೆಹ್ರಾವತ್ ಕಂಚಿನ ಪದಕ ಪಂದ್ಯದಲ್ಲಿ ಆಡಲಿದ್ದಾರೆ.

ಕುಸ್ತಿ ಸೆಮಿಫೈನಲ್‌ನಲ್ಲಿ ಸೋಲು ಕಂಡ ಅಮನ್ ಸೆಹ್ರಾವತ್; ಕಂಚಿನ ಪದಕ ಗೆಲ್ಲಲು ಇನ್ನೂ ಇದೆ ಅವಕಾಶ

Thursday, August 8, 2024

ಪಂದ್ಯವನ್ನು ನೋಡಲು ಮೈದಾನದಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ಅವರಿಗೆ ಆಟಗಾರರು ವಂದನೆ ಸಲ್ಲಿಸಿದರು.

ಕಂಚು ಗೆದ್ದ ಭಾರತ ಹಾಕಿ ತಂಡದ ಭರ್ಜರಿ ಸಂಭ್ರಮಾಚರಣೆ; ಶ್ರೀಜೇಶ್‌ ಎತ್ತಿ ಹಿಡಿದು ಮೆರವಣಿಗೆ ನಡೆಸಿದ ಆಟಗಾರರು -Photos

Thursday, August 8, 2024

ಹಾಕಿ ಗೆಲುವಿನೊಂದಿಗೆ ಭಾರತವು ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಗಳ ಸಂಖ್ಯೆಯನ್ನು 4ಕ್ಕೇರಿಸಿದೆ. ಈ ಎಲ್ಲಾ ಪದಕಗಳು ಕಂಚಿನದ್ದಾಗಿವೆ.

ಸ್ಪೇನ್ ಮಣಿಸಿ ಸತತ 2ನೇ ಬಾರಿಗೆ ಒಲಿಂಪಿಕ್ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ; ಶ್ರೀಜೇಶ್‌ಗೆ ಗೆಲುವಿನ ವಿದಾಯ

Thursday, August 8, 2024

ಬುಧವಾರ ದಿನ ವಿನೇಶ್‌ ಫೋಗಟ್‌ ಅನರ್ಹಗೊಂಡ ಕಾರಣದಿಂದಾಗಿ ಭಾರತಕ್ಕೆ ಒಂದು ಪದಕ ಮಿಸ್‌ ಆಗಿತ್ತು. ಆ ನಂತರ, ಚಾನು ಅವರ ಸೋಲಿನಿಂದ ಎರಡು ನಿರೀಕ್ಷಿತ ಪದಕಗಳನ್ನು ಭಾರತ ಕಳೆದುಕೊಂಡಿದೆ.

ಕೇವಲ 1ಕೆಜಿ ವ್ಯತ್ಯಾಸದಿಂದ ಕಂಚು ಕಳೆದುಕೊಂಡ ಮೀರಾಬಾಯಿ ಚಾನು; ಟೋಕಿಯೊ ಬೆಳ್ಳಿ ಪದಕ ವಿಜೇತೆಗೆ ನಿರಾಶೆ

Thursday, August 8, 2024