Latest religion Photos

ರಾಹು ಈಗಾಗಲೇ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೀನ ರಾಶಿಗೆ ಮಂಗಳನ ಪ್ರವೇಶವು ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. ಇದೇ ವೇಳೆ ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲಿತಾಂಶ ಸಿಗಲಿದೆ. ಯಾವೆಲ್ಲಾ ರಾಶಿಚಕ್ರ ಚಿಹ್ನೆಗಳು ತೊಂದರೆಗೊಳಗಾಗುತ್ತವೆ ಎಂದು ನೋಡೋಣ.

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

Monday, May 6, 2024

ಪ್ರತಿಯೊಬ್ಬ ಮನುಷ್ಯನು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಬಯಸುತ್ತಾನೆ. ತನ್ನ ಮನೆ ಸಂತೋಷ ಹಾಗೂ ಸಂಪತ್ತಿನಿಂದ ತುಂಬಿರಬೇಕು ಎಂದು ನಿರೀಕ್ಷಿಸುತ್ತಾನೆ. ಇದು ಸಾಧ್ಯವಾಗಬೇಕೆಂದರೆ, ಆ ಮನೆ ಲಕ್ಷ್ಮೀದೇವಿಗೆ ಇಷ್ಟವಾಗಬೇಕು. ಲಕ್ಷ್ಮೀದೇವಿಯು ಇಷ್ಟಪಡದ ಕೆಲವೊಂದು ಅಂಶಗಳಿವೆ. ನೀವು ಈ ಕೆಲಸಗಳನ್ನು ಮಾಡಿದರೆ, ಮನೆಗೆ ಬಂದ ಲಕ್ಷ್ಮೀ ಬಾಗಿಲ ಬಳಿಯಿಂದಲೇ ಹಿಂತಿರುಗುತ್ತಾಳೆ.

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

Monday, May 6, 2024

ಶನಿ ಸಂಕ್ರಮಣವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶನಿಯ ರಾಶಿ ಬದಲಾವಣೆಯಿಂದ 3 ರಾಶಿಯವರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ.

ಶನಿ ಸಂಚಾರ 2024: ಕುಂಭ ರಾಶಿಯಲ್ಲಿ ನೆಲೆಸಿರುವ ಶನೈಶ್ಚರ, ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಕಷ್ಟದ ಕಾಲ

Sunday, May 5, 2024

ಬೆಂಗಳೂರು ಬಾಲಕಿ ಕುಮಾರಿ ಕೀರ್ತನಾ (17) ಗೋವಿಂದ ಕೋಟಿ ಬರೆದು ತಿರುಮಲ ತಿರುಪತಿ ಸನ್ನಿಧಾನಕ್ಕೆ ಒಪ್ಪಿಸಿದ್ದು, ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ಸಮೀಪ ದರ್ಶನ ಪಡೆದು ಭಾವಪರವಶರಾದರು. ಇಷ್ಟ ದೇವರ ದರ್ಶನ ಭಾಗ್ಯ ಪಡೆದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಟಿಟಿಡಿ ಟ್ವೀಟ್ ಮಾಡಿದೆ.

ಗೋವಿಂದ ಕೋಟಿ ಬರೆದ 17 ವರ್ಷದ ಬೆಂಗಳೂರು ಬಾಲಕಿಗೆ ಶ್ರೀವಾರಿ ದೇವರ ಅನುಗ್ರಹ, ಗಮನ ಸೆಳೆಯಿತು ಟಿಟಿಡಿ ಟ್ವೀಟ್‌

Wednesday, May 1, 2024

ವೈಶಾಖ ಮಾಸ ಶುಕ್ಲಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ. ಅಕ್ಷಯ ಎಂದರೆ ಕೊನೆಗೊಳ್ಳದ್ದು ಎಂದರ್ಥ. ಇದು ಹಿಂದೂ ಧರ್ಮದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಶುಕ್ರವಾರ, ಮೇ 10 ರಂದು ಆಚರಿಸಲಾಗುತ್ತದೆ.

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Monday, April 29, 2024

ತುಮಕೂರು ಭಾಗದ ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ತುಮಕೂರು ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ, ಸುಡು ಬಿಸಿಲಲ್ಲಿ ಭಕ್ತರ ಸಂಭ್ರಮ- ಚಿತ್ರನೋಟ

Wednesday, April 24, 2024

ಶ್ರೀ ಮಲಯಪ್ಪಸ್ವಾಮಿಗೆ ವಸಂತ ಋತುವಿನಲ್ಲಿ ನಡೆಯುವ ಈ ಉತ್ಸವಕ್ಕೆ 'ವಸಂತೋತ್ಸವ' ಎಂದು ಕರೆಯಲಾಗುತ್ತದೆ. ಸೂರ್ಯನ ಶಾಖದಿಂದ ಭಗವಂತನನ್ನು ನಿವಾರಿಸುವ ಹಬ್ಬವಾದ್ದರಿಂದ ಇದನ್ನು ಉಪಸಮಾನೋತ್ಸವವೆಂದೂ ಕರೆಯುತ್ತಾರೆ.

Annual Vasanthotsavalu 2024: ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ ವಸಂತೋತ್ಸವ; ಕಾರ್ಯಕ್ರಮ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Monday, April 22, 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|

ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

Puttur Jatre 2024: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೀಗ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಜಾತ್ರೆಯ ಸಂಭ್ರಮ. ಏಪ್ರಿಲ್‌ 10ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರಕಿತ್ತು. ದೇವಾಲಯದ ಗದ್ದೆಯ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಇನ್ನೊಂದೆಡೆ ಜಾತ್ರೆ ಸಂತೆಗಳು, ಆಟ ಆಕರ್ಷಣೆಗಳ ತಾಣ. ಏಪ್ರಿಲ್‌ 17ರಂದು ಪುತ್ತೂರು ಬೆಡಿ ಎಂದೇ ಜನಪ್ರಿಯತೆ ಪಡೆದ ಸುಡುಮದ್ದು ಪ್ರದರ್ಶನ ಇರಲಿದ್ದು, ಅಂದು ಹಲವು ಲಕ್ಷ ಜನರು ಸೇರುವ ನಿರೀಕ್ಷೆಯಿದೆ.

Puttur Jatre 2024: ಪುತ್ತೂರು ಜಾತ್ರೆ ಆರಂಭ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಸುಂದರ ಫೋಟೋಗಳು

Thursday, April 11, 2024

ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಭಾವೈಕ್ಯದ ರಂಜಾನ್ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ಹಾಗೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

Ramadan 2024: ಕರ್ನಾಟಕದಲ್ಲಿ ರಂಜಾನ್‌ಗೆ ಭರ್ಜರಿ ಸಿದ್ದತೆ; ಹೊಸ ಬಟ್ಟೆ ಸೇರಿ ಖರೀದಿ ಭರಾಟೆ ಜೋರು, ಫೋಟೋಸ್

Monday, April 8, 2024

ಪ್ರತಿ ವರ್ಷದಂತೆ ಈ ಬಾರಿಯೂ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿಂದು (ಏಪ್ರಿಲ್ 4ರಂದು) ಶ್ರೀ ಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.

Chamarajanagar News: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅದ್ದೂರಿಯಾಗಿ ನಡೆದ ಗೋಪಾಲಸ್ವಾಮಿಯ ಬ್ರಹ್ಮ ರಥೋತ್ಸವ; ಫೋಟೊಸ್

Thursday, April 4, 2024

ಏಪ್ರಿಲ್‌ 9ರ ಯಗಾದಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಏಪ್ರಿಲ್‌ನಲ್ಲಿ ಶ್ರೀ ರಾಮನವಮಿ ಇದೆ. ಏಪ್ರಿಲ್‌ 19 ರಂದು ರಾಮನವಮಿ ಇದ್ದು ಈಗಲೇ ಎಲ್ಲಾ ತಯಾರಿ ನಡೆಯುತ್ತಿದೆ.

ಶ್ರೀ ರಾಮ ನವಮಿಯಂದು ನಿಮ್ಮ ಮುದ್ದು ಕಂದಮ್ಮನಿಗೆ ಬಾಲರಾಮನ ಥೀಮ್‌ ಫೋಟೋ ಶೂಟ್‌ ಮಾಡಿಸುವ ಪ್ಲ್ಯಾನ್‌ ಇದ್ರೆ ಇಲ್ಲಿದೆ ಐಡಿಯಾ

Tuesday, April 16, 2024

ಗುರುವಾರವು ಗುರುದೇವನಿಗೆ ಮೀಸಲಾದ ದಿನ. ಈ ದಿನದಂದು ವಿಷ್ಣುದೇವನನ್ನು ಪೂಜಿಸುವ ವಾಡಿಕೆಯೂ ಇದೆ. ಈ ದೇವರುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತುಂಬಿರುತ್ತದೆ ಎಂದು ನಂಬಲಾಗಿದೆ. ಈ ದಿನ ಉಪವಾಸವಿದ್ದು ಬಾಳೆಗಿಡವನ್ನು ಪೂಜಿಸಿ, ವಿಷ್ಣುಸಹಸ್ತ್ರನಾಮವನ್ನು ಪಠಿಸುವುದರಿಂದ ಮನೆಗೆ ಸಂಪತ್ತು ಬರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

Thursday Remedies: ಗುರುವಾರದಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಹಣಕಾಸಿನ ಸಮಸ್ಯೆ ಕಾಡಬಹುದು

Thursday, March 28, 2024

ರಾಯರ ಮಠದ ಪೀಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ, ವಿಶೇಷ ಪೂಜೆ, ಹಸ್ತೋದಕ ನೆರವೇರಿಸಿದರು.

Mantralaya: ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಿದ ಗುರು ವೈಭವೋತ್ಸವ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ

Wednesday, March 13, 2024

ಹಿಂದೂ ಧರ್ಮದಲ್ಲಿ ಹಲವು ವಿಶೇಷ ಆಚರಣೆಗಳಿವೆ. ಪ್ರತಿಯೊಂದು ದೇವರನ್ನೂ ಪ್ರತ್ಯೇಕ ಹಬ್ಬ, ಆಚರಣೆಯ ಮೂಲಕ ಪೂಜಿಸಲಾಗುತ್ತದೆ. ಮಹಾಶಿವರಾತ್ರಿ ಶಿವನಿಗೆ ಅರ್ಪಿತವಾದ ಹಬ್ಬ. ಈ ದಿನ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಅಂದು ಶಿವಭಕ್ತರು ಜಾಗರಣೆ, ಉಪವಾಸ ವೃತ ಕೈಗೊಳ್ಳುತ್ತಾರೆ. ತ್ರಿಮೂರ್ತಿಗಳಲ್ಲಿ ಶಿವನನ್ನು ಲಯಕಾರಕ ಎಂದು ಕರೆದರೂ ಬ್ರಹ್ಮಾಂಡವನ್ನು ರಕ್ಷಿಸುವವನೂ ಅವನೇ ಎಂಬ ನಂಬಿಕೆಯಿದೆ. ಮಹಾ ಶಿವರಾತ್ರಿಯಂದು ಶಿವನ್ನು ಪೂಜಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ. ಈ ದಿನ ಹಲವಾರು ಶಿವ ಭಕ್ತರು ಉಪವಾಸ ಆಚರಿಸುವುದರ ಜೊತೆಗೆ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶಿವನ ಪ್ರಸಿದ್ಧ ದೇವಸ್ಥಾನಗಳಲ್ಲಿ ಅಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ಪ್ರತಿ ರಾಜ್ಯಗಳಲ್ಲೂ ಶಿವನ ದೇವಸ್ಥಾನಗಳನ್ನು ನೋಡಬಹುದಾಗಿದೆ. ಅವುಗಳಲ್ಲಿ ಕೆಲವು ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅಲ್ಲೆಲ್ಲಾ ಶಿವನು ತನ್ನ ವಿವಿಧ ರೂಪಗಳಲ್ಲಿ ನೆಲೆನಿಂತು ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ. ಶಿವರಾತ್ರಿಯ ಶುಭ ಸಂದರ್ಭದಲ್ಲಿ ನೀವೂ ಈ ದೇವಾಲಯಗಳ ಬಗ್ಗೆ ತಿಳಿಯಿರಿ.

Mahashivratri 2024: ದಕ್ಷಿಣ ಭಾರತದ ಪ್ರಸಿದ್ಧ ಶಿವಾಲಯಗಳಿವು; ಮಹಾಶಿವರಾತ್ರಿಗೂ ಮುನ್ನ ಈ ದೇಗುಲಗಳ ವೈಶಿಷ್ಟ್ಯ ತಿಳಿಯಿರಿ

Wednesday, March 6, 2024

ಆಂಧ್ರಪ್ರದೇಶದಲ್ಲಿರುವ ಪಂಚರಾಮ ಶಿವದೇಗುಲಗಳು ಶಿವನಿಗೆ ಅರ್ಪಿತವಾಗಿರುವ ಅತ್ಯಂತ ಹಳೆಯ ದೇಗುಲಗಳಾಗಿವೆ. ಆಂಧ್ರದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಇದೂ ಒಂದು. ಒಂದೇ ಲಿಂಗದಿಂದ 5 ಶಿವಲಿಂಗಗಳು ಹುಟ್ಟಿಕೊಂಡವು ಎಂದು ದಂತಕಥೆಗಳು ಹೇಳುತ್ತವೆ. ರಾಕ್ಷಸ ತಾರಕಾಸುರ ಶಿವನ ಮೇಲೆ ದಾಳಿ ಮಾಡಿದಾಗ ಲಿಂಗವು 5 ತುಂಡುಗಳಾಗಿ ಒಡೆಯಿತು ಎನ್ನಲಾಗುತ್ತದೆ. ಈ 5 ತುಂಡುಗಳು ಬಿದ್ದ ಜಾಗವನ್ನು ಪಂಚರಾಮ ಶಿವಕ್ಷೇತ್ರಗಳು ಎಂದು ಕರೆಯಲಾಯಿತು. ಈ ಪಂಚಲಿಂಗ ದೇಗುಲಗಳು ಯಾವುವು, ಅವು ಎಲ್ಲಿವೆ ತಿಳಿಯಿರಿ.

Maha Shivaratri 2024: ಆಂಧ್ರಪ್ರದೇಶದ ಪಂಚರಾಮ ಶಿವ ದೇಗುಲಗಳ ಪರಿಚಯ ಇಲ್ಲಿದೆ, ಮನಸಿಗೆ ಶಾಂತಿ ನೀಡುವ ಶಿವಾಲಯಗಳಿವು

Wednesday, March 6, 2024

ಭಗವಾನ್ ಶಿವನು ಇಷ್ಟಾರ್ಥಗಳನ್ನು ತ್ವರಿತವಾಗಿ ಪೂರೈಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಮಾರ್ಕಂಡೇಯ ಪುರಾಣ ಮತ್ತು ಶಿವಪುರಾಣದ ಪ್ರಕಾರ ಶಿವನಿಗೆ ಮರಣವನ್ನೂ ದೂರ ಮಾಡುವ ಶಕ್ತಿಯಿದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರು ಶಿವನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ರೋಗರುಜಿನಗಳು, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

Mrityunjaya Mantra: ಮೃತ್ಯುಂಜಯ ಮಂತ್ರದ ಅರ್ಥವೇನು? ಅದನ್ನು ಎಷ್ಟು ಬಾರಿ ಪಠಿಸಬೇಕು? ಇಲ್ಲಿದೆ ಉತ್ತರ

Tuesday, March 5, 2024

ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶಿವರಾತ್ರಿ ಹಬ್ಬದಂದು ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿ ಹಿಂದೂಗಳಲ್ಲಿ ಬಹಳ ವಿಶೇಷ. ಈ ಶಿವರಾತ್ರಿಯ ದಿನ ಶಿವನನ್ನು ಹೇಗೆ ಪೂಜಿಸಬೇಕು, ಮನೆಯಲ್ಲೇ ಶಿವನನ್ನು ಪೂಜಿಸಲು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನ ತಿಳಿಯಿರಿ.

Maha Shivaratri 2024: ಮನೆಯಲ್ಲಿ ಶಿವ ಪೂಜೆ ಮಾಡುವುದು ಹೇಗೆ, ಶಿವರಾತ್ರಿಯ ದಿನ ಅನುಸರಿಸಬೇಕಾದ ಕ್ರಮಗಳ ವಿವರ ಇಲ್ಲಿದೆ

Thursday, February 29, 2024

ಕರ್ನಾಟಕದ ಎರಡನೇ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಳಗಾವಿಯು ಧಾರ್ಮಿಕ ಪರಂಪರೆಯ ತಾಣವೂ ಹೌದು. ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಸುವರ್ಣ ಸೌಧ ನೋಡಲು ಬೆಳಗಾವಿಗೆ ಹೋಗುವ ಯೋಚನೆ ಇದ್ದರೆ, ಇಲ್ಲಿನ ಈ ದೇವಾಲಯಗಳನ್ನೂ ನೋಡಿ ಬನ್ನಿ. ಶಿವರಾತ್ರಿ ಸಮೀಪದಲ್ಲಿದ್ದೂ ಇಲ್ಲಿನ ಪ್ರಸಿದ್ಧ ಶಿವ ದೇಗುಲಗಳ ಬಗ್ಗೆಯೂ ಇಲ್ಲಿದೆ ಪರಿಚಯ.

Temples in Belgaum: ಶಿವರಾತ್ರಿ ಸಮಯದಲ್ಲಿ ಬೆಳಗಾವಿ ಕಡೆ ಹೊಂಟಿದ್ರೆ ಈ ದೇವಸ್ಥಾನಗಳನ್ನೂ ತಪ್ಪದೇ ನೋಡಿ ಬನ್ನಿ

Tuesday, February 27, 2024

ಶಿವರಾತ್ರಿ ಸಮಯದಲ್ಲಿ ಶಿವನ ದೇಗುಲಗಳಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದೂಗಳದ್ದು. ಭಾರತದಲ್ಲಿ ಹಲವು ಪ್ರಸಿದ್ಧ ಶಿವಾಲಯಗಳಿವೆ. ಈ ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದ ಪ್ರಸಿದ್ಧ ಶಿವನ ದೇಗುಲ ಬಗ್ಗೆ ಇಲ್ಲಿದೆ ಮಾಹಿತಿ.

Maha Shivaratri 2024: ಮಹಾಶಿವರಾತ್ರಿ ಸಂದರ್ಭ ಉತ್ತರ ಭಾರತದಲ್ಲಿನ ಪ್ರಸಿದ್ಧ ಶಿವಾಲಯಗಳ ಬಗ್ಗೆ ತಿಳಿಯಿರಿ

Monday, February 26, 2024