logo
ಕನ್ನಡ ಸುದ್ದಿ  /  Astrology  /  Happy Ugadi 2023 Hindu New Year Statrs With Saturn's Ruling Nakshatra Position, Prestige And Profit Are Auspicious Yoga For These Zodiac Sign

Happy Ugadi 2023: ಶನಿ ಅಧಿಪತ್ಯದ ನಕ್ಷತ್ರದೊಂದಿಗೆ ಹೊಸ ವರ್ಷ ಶುರು; ಈ ರಾಶಿಯವರಿಗೆ ಸ್ಥಾನ, ಪ್ರತಿಷ್ಠೆ, ಲಾಭದ ಶುಭ ಯೋಗ

HT Kannada Desk HT Kannada

Mar 22, 2023 06:03 AM IST

ನೀವು ಬಯಸಿದ್ದೆಲ್ಲವನ್ನೂ ಭಗವಂತ ಕರುಣಿಸಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. (ಸಾಂಕೇತಿಕ ಚಿತ್ರ)

  • Happy Ugadi 2023: ಇಂದು ಯುಗಾದಿ. ಶೋಭಕೃತ್‌ ಸಂವತ್ಸರ ಶುರು. ಹಿಂದುಗಳ ಹೊಸ ವರ್ಷ ಶನಿ ಆಧಿಪತ್ಯದ ನಕ್ಷತ್ರದೊಂದಿಗೆ ಶುರುವಾಗುತ್ತಿದೆ. ಈ ಕಾರಣ, ಕೆಲವು ರಾಶಿಯವರಿಗೆ ಸ್ಥಾನ, ಪ್ರತಿಷ್ಠೆ, ಲಾಭದ ಶುಭ ಯೋಗದ ಫಲವಿದೆ.

ನೀವು ಬಯಸಿದ್ದೆಲ್ಲವನ್ನೂ ಭಗವಂತ ಕರುಣಿಸಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. (ಸಾಂಕೇತಿಕ ಚಿತ್ರ)
ನೀವು ಬಯಸಿದ್ದೆಲ್ಲವನ್ನೂ ಭಗವಂತ ಕರುಣಿಸಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. (ಸಾಂಕೇತಿಕ ಚಿತ್ರ)

ಹಿಂದು ಹೊಸ ವರ್ಷ, ಹೊಸ ಸಂವತ್ಸರ 2080 ಇಂದು ಅಂದರೆ 2023ರ ಕ್ಯಾಲೆಂಡರ್‌ ವರ್ಷದ ಮಾರ್ಚ್ 22ರ ಬುಧವಾರದಿಂದ ಪ್ರಾರಂಭವಾಗುತ್ತದೆ. ಚೈತ್ರ ನವರಾತ್ರಿಯೂ ಈ ದಿನದಿಂದಲೇ ಆರಂಭವಾಗುತ್ತಿದೆ. ಎರಡು ವಿಶೇಷ ಸಂದರ್ಭ ಇದು.

ತಾಜಾ ಫೋಟೊಗಳು

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಮೇಷ ರಾಶಿಯಲ್ಲಿ ಶುಕ್ರ ಸಂಚಾರ; ಈ 4 ರಾಶಿಯವರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ ಹೆಚ್ಚಳ

Apr 29, 2024 02:19 PM

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Apr 29, 2024 10:06 AM

ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit

Apr 28, 2024 02:56 PM

Zodiac Signs: ಮೋಸ, ಪ್ರಾಮಾಣಿಕತೆ, ಆವೇಶ; ಸಂಬಂಧಗಳ ವಿಚಾರದಲ್ಲಿ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ?

Apr 24, 2024 12:21 PM

ಉತ್ತರ ಮತ್ತು ಮಧ್ಯಭಾರತೀಯರು ಹೆಚ್ಚಾಗಿ ಪಾಲಿಸುವ ಚೈತ್ರ ನವರಾತ್ರಿ ಇಂದು ಶುರುವಾಗುತ್ತಿದೆ. ಒಂಬತ್ತು ದಿನಗಳ ದೇವಿಯ ಆರಾಧನೆಗೆ ಈ ದಿನ, ಪ್ರತಿಪದದ ದಿನದಂದು ಕಲಶವನ್ನು ಸ್ಥಾಪಿಸಲಾಗುತ್ತದೆ. ಚೈತ್ರ ನವರಾತ್ರಿಯು ಹಿಂದು ಹೊಸ ವರ್ಷದ ಸಂವತ್ಸರದಲ್ಲಿ ಬರುತ್ತದೆ. ಇದು ಹಿಂದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಮೊದಲ ದಿನ. ಯಾವುದೇ ಕೆಲಸವನ್ನು ಮಾಡಲು ಈ ದಿನವು ವಿಶೇಷವಾಗಿದೆ.

ಅದಕ್ಕಾಗಿಯೇ ತಾಯಿ ದುರ್ಗೆಯ ಆರಾಧನೆಯ ಜತೆಗೆ ಹಿಂದು ಹೊಸ ವರ್ಷದ ಸಂವತ್ಸರದ ಬಗ್ಗೆಯೂ ತಿಳಿದುಕೊಳ್ಳಬೇಕು. ಹೊಸ ವರ್ಷದ ವಿಚಾರ ಹೇಳುವುದಾದರೆ, ಈ ಬಾರಿಯ ಹಿಂದು ಹೊಸ ವರ್ಷ ಅಥವಾ ಸಂವತ್ಸರವು ಶನಿ ದೇವರ ಒಡೆತನದ ಉತ್ತರ ಭಾದ್ರಪದ ನಕ್ಷತ್ರದೊಂದಿಗೆ ಪ್ರಾರಂಭವಾಗುತ್ತಿದೆ. ಶನಿದೇವನ ಕೃಪೆಯಿಂದ ಈ ನಕ್ಷತ್ರದಲ್ಲಿ ಉತ್ತಮ ಹಣದ ಹರಿವು ಇರಲಿದೆ.

ಈ ವರ್ಷ ವಿಶೇಷವಾಗಿ ವ್ಯಾಪಾರ ವರ್ಗಕ್ಕೆ ಹೆಚ್ಚಿನ ಲಾಭವಿರುತ್ತದೆ. ಈ ಯೋಗದಿಂದಾಗಿ ಮೂರು ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಯಾವ ರಾಶಿಚಕ್ರದವರಿಗೆ ಲಾಭವಾಗುತ್ತದೆ? ಅದೇ ರೀತಿ, ಈ ಚೈತ್ರ ನವರಾತ್ರಿಯಲ್ಲಿ ಯಾವ ಸಮಯದಲ್ಲಿ ಕಲಶ ಸ್ಥಾಪನೆಯು ಮಂಗಳಕರ - ಇಲ್ಲಿದೆ ಆ ವಿವರ.

ನವರಾತ್ರಿಯಲ್ಲಿ ಕಲಶವನ್ನು ಸ್ಥಾಪಿಸಲು ಬೆಳಗಿನ ಸಮಯ ತುಂಬಾ ಒಳ್ಳೆಯದು. ಇಂದು ಬೆಳಗ್ಗೆ 6.32 ರಿಂದ 7.32 ರವರೆಗೆ ಕಲಶ ಸ್ಥಾಪನೆ ಮಾಡಬಹುದು. ಕಲಶವನ್ನು ಸ್ಥಾಪಿಸಲು ಈ ಸಮಯವು ತುಂಬಾ ಪ್ರಶಸ್ತವಾದುದು. ಇದು ಮಂಗಳಕರ ಸಮಯ.

ಈ ಸಮಯದಲ್ಲಿ ಮಾಡುವ ಕಲಶಸ್ಥಾಪನೆಯು ಪ್ರತಿಯೊಬ್ಬರ ಜೀವನದಲ್ಲಿ ಸುಖ-ಸಮೃದ್ಧಿ ಮತ್ತು ಲಾಭವನ್ನು ತರುತ್ತದೆ. ನವರಾತ್ರಿಯ ಪ್ರತಿ ದಿನವೂ ಒಂದಲ್ಲ ಒಂದು ಶುಭ ಯೋಗವು ರೂಪುಗೊಳ್ಳುತ್ತಿದೆ, ಆದ್ದರಿಂದ ಈ ಬಾರಿ ನವರಾತ್ರಿ ವರ್ಷವು ಅನೇಕ ಶುಭ ಯೋಗವನ್ನು ತರುತ್ತಿದೆ.

ಈ ಋತುವು ಮಿಥುನ, ತುಲಾ ಮತ್ತು ಧನು ರಾಶಿಯವರಿಗೂ ತುಂಬಾ ಒಳ್ಳೆಯದು. ಈ ಮೂರು ರಾಶಿಯವರಿಗೆ ಸ್ಥಾನದಿಂದ ಪ್ರತಿಷ್ಠೆಯವರೆಗೆ ಅನೇಕ ಲಾಭಗಳು ಸೃಷ್ಟಿಯಾಗಲಿದ್ದು, ಅವರ ಅದೃಷ್ಟವನ್ನು ಹೆಚ್ಚಿಸುತ್ತದೆ.

ಇರುತ್ತದೆ ಈ ಹೊಸ ವರ್ಷದಿಂದಾಗಿ ಅನೇಕ ರಾಶಿಚಕ್ರ ಚಿಹ್ನೆಗಳಲ್ಲಿ ದೊಡ್ಡ ಬದಲಾವಣೆ ಇರುತ್ತದೆ. ವಾಸ್ತವವಾಗಿ, ಮೂರು ದೊಡ್ಡ ಗ್ರಹಗಳ ಸಂಯೋಜನೆಯು ಹಣ ಮತ್ತು ಅದೃಷ್ಟವನ್ನು ಬೆಳಗಿಸುತ್ತದೆ.

ಗಮನಿಸಬಹುದಾದ ಇತರ ವಿಚಾರಗಳು

ಕುಂಡಲಿಯಲ್ಲಿ ಗ್ರಹ ದೋಷವೇ? ರಾಹು ದೋಷದಿಂದ ಬಳಲುತ್ತಿದ್ದೀರಾ?

Kundli Graha Dosh Remedies: ಜನ್ಮ ಕುಂಡಲಿಯಲ್ಲಿ ದೋಷವಿರುವ ಕಾರಣ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೈಹಾಕಿದ ಕೆಲಸಗಳು ಯಶಸ್ವಿಯಾಗುವುದಿಲ್ಲ. ಹೂಡಿಕೆಗಳಲ್ಲಿ ನಷ್ಟ ಹೀಗೆ ಹತ್ತು ಹಲವು ಸಂಕಷ್ಟಗಳನ್ನು ಅನುಭವಿಸುತ್ತಾರೆ. ಬದುಕು ಹತಾಶೆಯಲ್ಲಿ ಮುಳುಗುತ್ತದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಶನಿದೇವರ ಕೋಪಕ್ಕೆ ಸಿಲುಕಿದರೆ ಸಂಕಷ್ಟಮಯ ಬದುಕು; ಶನಿದೇವರ ಅನುಗ್ರಹ ಪಡೆಯುವುದು ಹೇಗೆ?

ಹಿಂದು ಧರ್ಮದಲ್ಲಿ ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಹಿಂದು ನಂಬಿಕೆಯ ಪ್ರಕಾರ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವರ ಕೃಪೆಯಿಂದ ವ್ಯಕ್ತಿಯ ಜೀವನವೂ ಬದಲಾಗಬಹುದು. ಆದರೆ ವ್ಯಕ್ತಿಯ ಮೇಲೆ ಶನಿ ಕೋಪಗೊಂಡರೆ, ಆ ವ್ಯಕ್ತಿ ನಾಶವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಶನಿಯ ಕೋಪಕ್ಕೆ ಸಿಲುಕಿದರೆ ಜೀವನ ಹಾಳಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ ಶನಿವಾರದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಈ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು