ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit
- ಬುಧ ಮಂಗಳ ಹಾಗೂ ರಾಹು ಗ್ರಹಗಳು ಪ್ರಸ್ತುತ ಮೀನ ರಾಶಿಯಲ್ಲಿ ಕುಳಿತಿವೆ. ಮಂಗಳ ಸಂಕ್ರಮಣದ ತಕ್ಷಣ ಬುಧ, ಮಂಗಳ ಹಾಗೂ ರಾಹುಗಳ ಸಂಯೋಗವಿದೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಅದೃಷ್ಟವನ್ನು ತರಲಿದೆ.
- ಬುಧ ಮಂಗಳ ಹಾಗೂ ರಾಹು ಗ್ರಹಗಳು ಪ್ರಸ್ತುತ ಮೀನ ರಾಶಿಯಲ್ಲಿ ಕುಳಿತಿವೆ. ಮಂಗಳ ಸಂಕ್ರಮಣದ ತಕ್ಷಣ ಬುಧ, ಮಂಗಳ ಹಾಗೂ ರಾಹುಗಳ ಸಂಯೋಗವಿದೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಅದೃಷ್ಟವನ್ನು ತರಲಿದೆ.
(1 / 6)
ಬುಧ ಗ್ರಹಗಳ ರಾಜನಾದರೆ, ಮಂಗಳನು ಗ್ರಹಗಳ ಅಧಿಪತಿ. ರಾಹು ಅಸ್ಪಷ್ಟ ಗ್ರಹವಾಗಿದೆ. ಈ ಮೂರು ಗ್ರಹಗಳು ಒಂದು ಕಡೆ ಸೇರುತ್ತಿವೆ. ಪ್ರಸ್ತುತ ಈ ಮೂರು ಗ್ರಹಗಳು ಮೀನ ರಾಶಿಯಲ್ಲಿ ಕುಳಿತಿವೆ. ಮಂಗಳ ಗ್ರಹ ಸಾಗಿದ ತಕ್ಷಣ, ಬುಧ, ರಾಹು ಹಾಗೂ ಮಂಗಳ ಗ್ರಹಗಳ ಸಂಯೋಗ ಆಗುತ್ತದೆ. ಇದು ಮುಂದಿನ 12 ದಿನಗಳವರೆಗ ಇರುತ್ತದೆ.
(2 / 6)
ಈ 3 ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ ರೂಪುಗೊಂಡಿದೆ. ಇದು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿವೆ. ಮುಂದಿನ 12 ದಿನಗಳ ಯಾವೆಲ್ಲಾ ರಾಶಿಯವರಿಗೆ ತ್ರಿಗ್ರಾಹಿಯಿಂದ ಹೆಚ್ಚು ಲಾಭಗಳಿವೆ ಅನ್ನೋದನ್ನ ತಿಳಿಯೋಣ.
(3 / 6)
ಕರ್ಕಾಟಕ ರಾಶಿ: ಮಂಗಳ, ರಾಹು ಹಾಗೂ ಬುಧನ ಸಂಯೋಗದಿಂದ ಕರ್ಕಾಟಕ ರಾಶಿಯವರಿಗೆ ಲಾಭದಾಯಕವಾಗಿದೆ. ನಿಮ್ಮ ವೃತ್ತಿಜೀವನದಲ್ಲಿ ಬಾಸ್‌ನಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಅನೇಕ ಹೊಸ ಕೆಲಸಗಳನ್ನು ಆರಂಭಿಸುತ್ತೀರಿ. ಆದಾಯ ಮತ್ತು ಆರ್ಥಿಕತೆ ಹೆಚ್ಚಿಸುವ ಅವಕಾಶಗಳು ಇವೆ. ಕೆಲ ಆರ್ಥಿಕ ನಿರ್ಧಾರಗಳು ಲಾಭವನ್ನು ತರಲಿವೆ.
(4 / 6)
ಮಿಥುನ ರಾಶಿ: ರಾಹು, ಬುಧ ಮತ್ತು ಮಂಗಳ ಸಂಚಾರದಿಂದ ಮಿಥುನ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳಿವೆ. ಉದ್ಯೋಗದ ನಿರೀಕ್ಷೆಯಲ್ಲಿರುವವರ ಕನಸು ನನಸಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸದೃಢವಾಗಿರಲು ಹೂಡಿಕೆಯ ಜೊತೆಗೆ ಉಳಿತಾಯದ ಕಡೆಗೂ ಗಮನ ಹರಿಸುತ್ತೀರಿ.
(5 / 6)
ವೃಷಭ ರಾಶಿ: ಮೂರು ಗ್ರಹಗಳ ಸಂಯೋಗದಿಂದ ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಅನೇಕ ಅವಕಾಶಗಳಿವೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಕೆಲವು ಏರಿಳಿತಗಳನ್ನು ಕಾಣುವಿರಿ. ಚೆನ್ನಾಗಿ ಯೋಚಿಸಿದ ನಂತರವೇ ಹೂಡಿಕೆ ಮಾಡಿ. ಆರೋಗ್ಯದ ಬಗ್ಗೆ ಗಮನ ಹರಿಸುವುದನ್ನು ಮರೆಯಬೇಡಿ. ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(HT File Photo)ಇತರ ಗ್ಯಾಲರಿಗಳು