logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ನಡ ಪಂಚಾಂಗ: ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಕನ್ನಡ ಪಂಚಾಂಗ: ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

HT Kannada Desk HT Kannada

Apr 24, 2024 06:00 PM IST

ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

  • Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 25 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
ಏಪ್ರಿಲ್ 25 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ

ಪಂಚಾಂಗ ಗಮನಿಸುವಾಗ ಹಿಂದು ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 25 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಏಪ್ರಿಲ್ 25 ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 13 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ

ದಿನ – ಗುರುವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 06: 02

ಸೂರ್ಯಾಸ್ತ - ಸಂಜೆ 06:34

ಚಂದ್ರೋದಯ - ರಾತ್ರಿ 07 : 48

ಚಂದ್ರಾಸ್ತ – ಬೆಳಗ್ಗೆ 06: 43

ಹಗಲಿನ ಅವಧಿ - 12 ಗಂಟೆ 27 ನಿಮಿಷ

ರಾತ್ರಿ ಅವಧಿ - 11 ಗಂಟೆ 32 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಪಾಡ್ಯ

ಕೃಷ್ಣಪಕ್ಷದ ಪಾಡ್ಯ ಇಡೀ ಇಂದು ಬೆಳಗ್ಗೆ 06: 47 ರ ತನಕ, ಅದಾಗಿ ಕೃಷ್ಣ ಪಕ್ಷದ ಬಿದಿಗೆ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ವಿಶಾಖ ನಾಳೆ (ಏಪ್ರಿಲ್ 26) ನಸುಕಿನ 02: 25 ರ ತನಕ, ಅದಾಗಿ ಅನುರಾಧಾ

ನಕ್ಷತ್ರ ಚರಣ

ಸ್ವಾತಿ -4 ಇಂದು ನಸುಕಿನ 12: 42 ರ ವರೆಗೆ

ವಿಶಾಖ -1 ಇಂದು ಬೆಳಗ್ಗೆ 07: 10 ರ ತನಕ

ವಿಶಾಖ - 2 ಇಂದು ಮಧ್ಯಾಹ್ನ ನಂತರ 01: 36ರ ವರೆಗೆ

ವಿಶಾಖ - 3 ಇಂದು ರಾತ್ರಿ 08: 01 ರ ತನಕ

ಯೋಗ

ಸಿದ್ಧಿ ಇಂದು ನಸುಕಿನ 05: 04 ರ ವರೆಗೆ, ನಂತರ ವ್ಯತೀಪಾತ

ಕರಣ

ಪ್ರಥಮ ಕರಣ ಕೌಲವ ಇಂದು ಮುಂಜಾನೆ 05: 04 ರ ವರೆಗೆ

ದ್ವಿತೀಯ ಕರಣ ತೈತುಲ ಇಂದು ರಾತ್ರಿ 07: 21 ರ ತನಕ

ಸೂರ್ಯ ರಾಶಿ – ಮೇಷ ರಾಶಿ 13/04/2024, 21:03:32 ರಿಂದ 14/05/2024, 17:51:51ರ ವರೆಗೆ

ಚಂದ್ರ ರಾಶಿ - ತುಲಾ ರಾಶಿ 23/04/2024, 09:19:51 ರಿಂದ 25/04/2024, 20:01:51 ರ ವರೆಗೆ

ರಾಹು ಕಾಲ - 01:52 PM ರಿಂದ 03:26 PM ವರೆಗೆ

ಗುಳಿಗ ಕಾಲ – 09:10 AM ರಿಂದ 10:44 AM ವರೆಗೆ

ಯಮಗಂಡ- 06:02 AM ರಿಂದ 07:36 AM ರ ವರೆಗೆ

ಅಭಿಜಿತ್‌ ಮುಹೂರ್ತ - ಪೂರ್ವಾಹ್ನ 11:53 ರಿಂದ ಮಧ್ಯಾಹ್ನ 12:43 ರ ವರೆಗೆ

ದುರ್ಮುಹೂರ್ತ - 10:12 AM ರಿಂದ 11:02 AM ರ ತನಕ

ದುರ್ಮುಹೂರ್ತ - 03:13 PM ರಿಂದ 04:03 PM ರ ವರೆಗೆ

ಅಮೃತ ಕಾಲ -04:58 PM ರಿಂದ 06:41 PM ರ ವರೆಗೆ

ವರ್ಜ್ಯಂ- 06:41 AM ರಿಂದ 08:24 AM ರ ವರೆಗೆ

ತಾರಾಬಲ: ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಪುಷ್ಯ, ಆಶ್ಲೇಷ, ಪೂರ್ವ ಫಾಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಟ, ಪೂರ್ವಾಷಾಡ, ಶ್ರಾವಣ, ಶತಭಿಷ, ಪೂರ್ವಭಾದ್ರಪದ, ಉತ್ತರಭಾದ್ರಪದ, ರೇವತಿ

ಚಂದ್ರಬಲ - ಮೇಷ, ವೃಷಭ, ಸಿಂಹ, ತುಲಾ, ಧನು, ಮಕರ

ಶುಭವಾಗಲಿ, ಶುಭದಿನ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ