logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Nostradamus Prediction 2024: ಚೀನಾದಿಂದ ನೌಕಾ ಸಂಘರ್ಷ, ಪ್ರಕೃತಿ ವಿಕೋಪ ಹೆಚ್ಚಲಿರುವ ಸುಳಿವು ನೀಡಿದೆ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ

Nostradamus Prediction 2024: ಚೀನಾದಿಂದ ನೌಕಾ ಸಂಘರ್ಷ, ಪ್ರಕೃತಿ ವಿಕೋಪ ಹೆಚ್ಚಲಿರುವ ಸುಳಿವು ನೀಡಿದೆ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ

HT Kannada Desk HT Kannada

Dec 15, 2023 06:21 AM IST

google News

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ 2024

  • ನಾಸ್ಟ್ರಾಡಾಮಸ್ ಭವಿಷ್ಯವಾಣಿ ನಂಬುವವರು ಅನೇಕರು. ಸದ್ಯ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು. ಈ ಸಂದರ್ಭದಲ್ಲಿ ನಾಸ್ಟ್ರಾಡಾಮಸ್‌ ನುಡಿಗಟ್ಟುಗಳು ಗಮನಸೆಳೆದಿವೆ. 2024ರ ಕುರಿತು ನಾಸ್ಟ್ರಾಡಾಮಸ್ ಭವಿಷ್ಯವಾಣಿ ಹೇಳಿರುವುದು ಇಷ್ಟು.

ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ 2024
ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ 2024

ಜಗತ್ತಿನ ಮಟ್ಟಿಗೆ 2024ರ ಕ್ಯಾಲೆಂಡರ್ ವರ್ಷ ಹೂವಿನ ಹಾಸಿಗೆಯಂತೆ ಇರಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಜತೆಗೆ ಚೀನಾ ಬಿಕ್ಕಟ್ಟನ್ನೂ ಎದುರಿಸಬೇಕಾಗುತ್ತದೆ. ಅನೇಕ ಪ್ರಕೃತಿ ವಿಕೋಪಗಳು ಸಂಭವಿಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯವಾಣಿ (Nostradamus Predictions 2024) ಹೇಳಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಹೊಸ ವರ್ಷ (2024)ವನ್ನು ಬರಮಾಡಿಕೊಳ್ಳಲು ಕಾತರಗೊಂಡಿರುವ ಜಗತ್ತಿನಲ್ಲಿ, ಹೊಸ ವರ್ಷದ ಭವಿಷ್ಯ (Predictions for 2024) ತಿಳಿದುಕೊಳ್ಳುವ ಕುತೂಹಲ. ಹೀಗಾಗಿ ಹೊಸ ವರ್ಷದಲ್ಲಿ ಏನೇನು ನಡೆಯಬಹುದು ಎಂದು ಊಹಿಸಿಕೊಳ್ಳಲು ಅವಕಾಶವಾಗುವ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಹೀಗೆ ಬಂದಾಗ ನಾಸ್ಟ್ರಾಡಾಮಸ್ ಭವಿಷ್ಯವಾಣಿ ಪದೇಪದೇ ಗಮನಸೆಳೆಯುತ್ತದೆ.

ಯಾರು ಈ ನಾಸ್ಟ್ರಾಡಾಮಸ್. ಈತ 16ನೇ ಶತಮಾನದ ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರಾಡೇಮ್ ಸುಮಾರು 500 ವರ್ಷಗಳ ಹಿಂದೆ ಪ್ರಕಟಿಸಿದ ಲೆಸ್ ಪ್ರೊಫೆಟೀಸ್ ಪುಸ್ತಕದಲ್ಲಿರುವುದು ಭವಿಷ್ಯ ವಾಣಿ ಎಂದೇ ಪ್ರಚಲಿತ. ಈ ಪುಸ್ತಕದಲ್ಲಿ 942 ಭವಿಷ್ಯವಾಣಿಗಳಿದ್ದು, ಅವು ಸಂಕೇತಾರ್ಥದಲ್ಲಿವೆ. ಹೀಗಾಗಿ ಈ ಪುಸ್ತಕದ ವಿಚಾರಗಳು ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ ಎಂದೇ ಜನಪ್ರಿಯ. ಮೈಕೆಲ್ ಡಿ ನಾಸ್ಟ್ರಾಡೇಮ್ ಎಂಬುದು ಅವರ ಪೂರ್ಣ ಹೆಸರಾದರೂ ನಾಸ್ಟ್ರಾಡಾಮಸ್ ಎಂದೇ ಜನಪ್ರಿಯರು.

ಲಂಡನ್‌ನ ಮಹಾ ಬೆಂಕಿಯಿಂದ ಹಿಡಿದು ಹಿರೋಷಿಮಾ ಮತ್ತು ನಾಗಾಸಾಕಿಯ ಪರಮಾಣು ವಿನಾಶದವರೆಗೆ ನಾಸ್ಟ್ರಾಡಾಮಸ್ ವ್ಯಾಪಕವಾದ ಘಟನೆಗಳ ಮುನ್ನೋಟ ಒದಗಿಸಿದ್ದಾನೆ. ಶೇಕಡ 70ರಷ್ಟು ಘಟನೆಗಳು ನಡೆದಿರುವ ಕಾರಣ ಹಲವಾರು ತಲೆಮಾರುಗಳ ಓದುಗರು ನಾಸ್ಟ್ರಾಡಾಮಸ್ ಭವಿಷ್ಯವಾಣಿಯನ್ನು ನಂಬಿದ್ದಾರೆ.

ಈಗ 2024ರ ಭವಿಷ್ಯವಾಣಿ (Predictions for 2024)ಯ ಕಡೆಗೆ ಗಮನಹರಿಸೋಣ. “ಒಣಭೂಮಿ ಇನ್ನಷ್ಟು ಶುಷ್ಕವಾಗುತ್ತದೆ. ದೊಡ್ಡ ಪ್ರವಾಹಗಳು ಉಂಟಾಗುತ್ತವೆ. ಕೀಟನಾಶಕದ ಅಲೆಗಳು ದೊಡ್ಡ ಕ್ಷಾಮವನ್ನು ಸೃಷ್ಟಿಸುತ್ತವೆ. ಇವೆಲ್ಲ ರೋಗ ಮತ್ತು ಹಸಿವನ್ನು ಹೆಚ್ಚಿಸಲಿವೆ” ಎಂಬ ನುಡಿಗಟ್ಟಿನ ಸಾಲುಗಳು ಪ್ರಕೃತಿ ವಿಕೋಪದ ಬಗ್ಗೆ ನಾಸ್ಟ್ರಾಡಾಮಸ್‌ ಭವಿಷ್ಯವಾಣಿಯಲ್ಲಿವೆ.

ವಿಶ್ವದ ಪ್ರಬಲ ಶಕ್ತಿಯಾಗಿ ಬೆಳೆದಿರುವ ಚೀನಾದ ಜತೆಗೆ ನೌಕಾ ಸಂಘರ್ಷದ ಸುಳಿವನ್ನು ನಾಸ್ಟ್ರಾಡಾಮಸ್ ಭವಿಷ್ಯವಾಣಿ ನೀಡಿದೆ. ಈಗಾಗಲೇ ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚೀನಾ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದ್ದು, ಭವಿಷ್ಯವಾಣಿ ನಿಜವಾಗುವ ಲಕ್ಷಣಗಳು ಗೋಚರಿಸಿವೆ. ಆದಾಗ್ಯೂ, 2024ರಲ್ಲಿ ಚೀನಾ ಬಿಕ್ಕಟ್ಟಿನ ಕುರಿತಾಗಿ ನಾಸ್ಟ್ರಾಡಾಮಸ್‌ ತನ್ನ ಪುಸ್ತಕದ ಒಂದು ನುಡಿಗಟ್ಟಿನಲ್ಲಿ ಉಲ್ಲೇಖಿಸಿರುವುದು ಹೀಗೆ - ಕೆಂಪು ಎದುರಾಳಿ ಭಯದಿಂದ ಮಸುಕಾದಂತಾಗಲಿದೆ. ಮಹಾಸಾಗರದಲ್ಲಿ ಆತಂಕ ಸೃಷ್ಟಿಯಾಗಲಿದೆ. ಇಲ್ಲಿ ಮಹಾಸಾಗರಕ್ಕೆ ಹಿಂದೂ ಮಹಾಸಾಗರ ಎಂದು ಅರ್ಥ ನೀಡಬಹುದಾದರೆ, ಕೆಂಪು ಎದುರಾಳಿಗೆ ಕಮ್ಯೂನಿಸ್ಟ್ ಆಳ್ವಿಕೆಯ ಚೀನಾ ಎಂದು ಅರ್ಥಮಾಡಿಕೊಳ್ಳಬಹುದು ಎಂದು ಸ್ಕೈ ಹಿಸ್ಟರಿ ವರದಿ ಮಾಡಿದೆ.

ಇನ್ನು ರಾಜಮನೆತಗಳ ವಿಚಾರಕ್ಕೆ ಬಂದರೆ, ರಾಣಿ ಎಲಿಜಬೆತ್ II ಅವರ ಮರಣವನ್ನು 2022ರಲ್ಲಿ ನಡೆಯಲಿದೆ ಎಂಬುದನ್ನು ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಸರಿಯಾಗಿ ಊಹಿಸಿತ್ತು ಎಂದು ಸ್ಕೈ ಹಿಸ್ಟರಿ ವರದಿ ಉಲ್ಲೇಖಿಸಿದೆ. ಈ ಸಲದ ಅಂದರೆ 2024ರ ಭವಿಷ್ಯವಾಣಿಯ ನುಡಿಗಟ್ಟಿನ ಪ್ರಕಾರ, ರಾಜಮನೆತನದಲ್ಲಿ ಬಲವಂತವಾಗಿ ಹೊರಹಾಕಲ್ಪಟ್ಟವರು ಪುನಃ ರಾಜಮನೆತನದ ಕರ್ತವ್ಯದ ಹೊಣೆಗಾರಿಕೆ ಹೊರುತ್ತಾರೆ ಎಂಬ ಸುಳಿವು ಇದೆ. ಇದರಂತೆ ಪ್ರಿನ್ಸ್ ಹ್ಯಾರಿ ಪುನಃ ರಾಜಮನೆತನ ಸೇರಬಹುದು. ಅಧಿಕಾರ ಹಿಡಿಯಬಹುದು ಎನ್ನುತ್ತಿದೆ ವರದಿ.

ಇದೇ ರೀತಿ, ರೋಮ್‌ನ ಪೋಪ್‌ ವಿಚಾರಕ್ಕೆ ಬಂದರೆ ಹೊಸ ಯುವ ಪೋಪ್‌ ಬರಲಿದ್ದಾರೆ ಎಂಬುದು ನಾಸ್ಟ್ರಾಡಾಮಸ್‌ ಭವಿಷ್ಯವಾಣಿ. ಇದನ್ನು ಉಲ್ಲೇಖಿಸಿರುವ ವರದಿ, "ಅತಿ ವಯಸ್ಸಾದ ಮಠಾಧೀಶರ ಮರಣದ ಮೂಲಕ / ಉತ್ತಮ ವಯಸ್ಸಿನ ರೋಮನ್ ಚುನಾಯಿತರಾಗುತ್ತಾರೆ" ಎಂಬ ಸಾಲು ನಾಸ್ಟ್ರಾಡಾಮಸ್ ನುಡಿಗಟ್ಟಿನಲ್ಲಿದೆ ಎಂದು ಹೇಳಿದೆ. ಇದನ್ನು ಗಮನಿಸಿದರೆ ಹಾಲಿ ಪೋಪ್ ಫ್ರಾನ್ಸಿಸ್ ಅವರಿಗೆ 85ರ ಆಸುಪಾಸಿನ ವಯಸ್ಸು. ವಯೋ ಸಹಜ ಕಾಯಿಲೆಗಳಿಂದ ಬಳಲಿದ್ದಾರೆ ಎಂಬುದನ್ನು ವರದಿ ಉಲ್ಲೇಖಿಸಿದೆ.

ಈಗ ಈ ವರ್ಷ(2023)ದ ಕುರಿತು ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿ ಎಷ್ಟು ನಿಜವಾಗಿದ್ದವು ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

2023ಕ್ಕೆ ಸಂಬಂಧಿಸಿ, ವಿಶ್ವಾದ್ಯಂತ ಆರ್ಥಿಕ ವಿಪತ್ತು ಎದುರಾಗಬಹುದು ಎಂಬುದು ನಾಸ್ಟ್ರಾಡಾಮಸ್‌ ಭವಿಷ್ಯವಾಣಿಯಾಗಿತ್ತು. "ಗೋಧಿಯ ಪೊದೆ ಎತ್ತರಕ್ಕೇರಲಿದೆ / ಆ ಮನುಷ್ಯನು ತನ್ನ ಸಹವರ್ತಿ ಮನುಷ್ಯನನ್ನು ತಿನ್ನುತ್ತಾನೆ" ಎಂದು ಅವರು ತಮ್ಮ ನುಡಿಗಟ್ಟಲ್ಲಿ ಬರೆದಿದ್ದಾರೆ. ಕೋವಿಡ್-19 ರ ನಂತರದ ಆರ್ಥಿಕ ಮಂದಗತಿ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನಿಂದ ಜಗತ್ತು ತತ್ತರಿಸಿದ್ದರೂ, ಭವಿಷ್ಯವಾಣಿಯು ಸ್ವಲ್ಪ ಉತ್ಪ್ರೇಕ್ಷೆಯಾಗಿ ಕಂಡಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ