logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Madi Tradition: ಮಡಿ ಎಂದರೇನು? ಈ ಸಂಪ್ರದಾಯ ಪಾಲನೆಯ ಕ್ರಮ, ಮಹತ್ವ ಹೀಗಿದೆ

Madi Tradition: ಮಡಿ ಎಂದರೇನು? ಈ ಸಂಪ್ರದಾಯ ಪಾಲನೆಯ ಕ್ರಮ, ಮಹತ್ವ ಹೀಗಿದೆ

HT Kannada Desk HT Kannada

Feb 01, 2024 08:00 AM IST

ಮಡಿ ಆಚರಣೆಯ ಮಹತ್ವ ಹೀಗಿದೆ.

    • Madi Tradition: ಹಿಂದೂ ಸಂಪ್ರದಾಯದಲ್ಲಿ ಮಡಿಗೆ ಬಹಳ ಮಹತ್ವವಿದೆ. ಧಾರ್ಮಿಕ ಕಾರ್ಯಗಳಲ್ಲಿ ಮಡಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶರ್ಮಾ ಅವರು ಮಡಿಯ ಮಹತ್ವವನ್ನು ಇಲ್ಲಿ ವಿವರಿಸಿದ್ದಾರೆ.
ಮಡಿ ಆಚರಣೆಯ ಮಹತ್ವ ಹೀಗಿದೆ.
ಮಡಿ ಆಚರಣೆಯ ಮಹತ್ವ ಹೀಗಿದೆ. (HT File Photo)

ಸನಾತನ ಧರ್ಮದಲ್ಲಿ ಮಡಿ ಎನ್ನುವುದು ಒಂದು ಸಂಪ್ರದಾಯ. ಶ್ರದ್ಧಾಭಕ್ತಿಯಿಂದ ಭಗವಂತನನ್ನು ಪೂಜಿಸುವವರು, ಯಜ್ಞ, ಯಾಗ, ಹೋಮ ಮುಂತಾದ ಕರ್ಮಗಳನ್ನು ಮಾಡುವವರು, ಗರ್ಭಗುಡಿಯಲ್ಲಿ ಕೆಲಸ ಮಾಡುವ ಅರ್ಚಕರು, ಪೂಜೆ, ವ್ರತಗಳನ್ನು ಮಾಡುವ ಮಹಿಳೆಯರು ಮತ್ತು ಎಲ್ಲಾ ದೀಕ್ಷಾಸ್ನಾನ ಮಾಡುವವರು ಕೂಡ ಮಡಿ ಮಾಡಬೇಕು ಎಂದು ಖ್ಯಾತ ಜ್ಯೋತಿಷಿಗಳಾದ ಚಿಲಕಮರ್ತಿ ಪ್ರಭಾಕರ ಶರ್ಮಾ ಅವರು ಹೇಳುತ್ತಾರೆ. ಸ್ನಾನದಿಂದ ಹಿಡಿದು ಊಟ ಮುಗಿಯುವವರೆಗೂ ಯಾರನ್ನೂ ಮುಟ್ಟ ಕೂಡದು. ಇದು ವಿಶೇಷವಾಗಿ ಬ್ರಾಹ್ಮಣರ ಮನೆಗಳಲ್ಲಿ ಆಚರಣೆಯಲ್ಲಿದೆ. ದೇವಸ್ಥಾನಗಳಲ್ಲೂ ಇದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜಪದಿಂದ ಕೆಲವು ಶಕ್ತಿಯನ್ನು ಪಡೆಯುತ್ತಾನೆ. ಇತರರನ್ನು ಮುಟ್ಟುವುದರಿಂದ ಆ ಶಕ್ತಿ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಪೂರ್ವಜರು ಸಾಧ್ಯವಾದಷ್ಟು ಕಾಲ ಯಾರನ್ನೂ ಮುಟ್ಟುತ್ತಿರಲಿಲ್ಲ. ಹಾಗೆಯೇ ಸ್ನಾನ, ಜಪ ಮಾಡದವರು, ಮಡಿ ವಸ್ತ್ರ ಧರಿಸದವರನ್ನು ಮುಟ್ಟಬಾರದು.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಇದನ್ನೂ ಓದಿ: Dhanshakti Yoga: ಮಂಗಳ ಶುಕ್ರನ ಸಂಯೋಗದಿಂದ ಧನಶಕ್ತಿ ಯೋಗ; ಇನ್ಮುಂದೆ ಈ ರಾಶಿಯವರ ಜೀವನದಲ್ಲಿ ಎಲ್ಲವೂ ಶುಭ

ಧಾರ್ಮಿಕ ಕಾರ್ಯಗಳಲ್ಲಿ ಮಡಿ ಮಾಡುವುದನ್ನು ಪವಿತ್ರ ನಿಯಮವೆಂದು ಪರಿಗಣಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ಆಚರಣೆಗಳನ್ನು ಮುಗಿಸಿದ ನಂತರ ಪಾದಗಳನ್ನು ತೊಳೆಯುವುದು ಎಲ್ಲರೂ ಮಾಡುವ ಕೆಲಸ. ಕೆಲವರು ಪೂರ್ಣ ಸ್ನಾನ ಮಾಡುತ್ತಾರೆ. ದೇವಾಲಯಗಳಲ್ಲಿ, ದೇವರನ್ನು ಪ್ರತಿಷ್ಠಾಪಿಸುವ ಸಮಯದಲ್ಲಿ ವಿಗ್ರಹದ ಅಡಿಯಲ್ಲಿ ಒಂದು ಮಂಡಲವಿರುತ್ತದೆ. ಆ ಮಂಡಲವು ನಿರಂತರವಾಗಿ ನಡೆಸಲ್ಪಡುವ ಮಂತ್ರಗಳ ಶಕ್ತಿಯನ್ನು ಹೀರಿಕೊಳ್ಳುವುದರ ಮೂಲಕ ಬಲಗೊಳ್ಳುತ್ತದೆ. ಅದು ಅದರ ಮೇಲಿನ ವಿಗ್ರಹಕ್ಕೆ ತನ್ನ ಮಂತ್ರ ಶಕ್ತಿಯನ್ನು ನೀಡುತ್ತದೆ. ಆ ಕಾರಣದಿಂದಲೇ ಮೂರ್ತಿಯು ಆಕರ್ಷಕವಾಗಿ ಕಾಣಿಸುತ್ತದೆ ಮತ್ತು ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಹೊಂದಿರುತ್ತದೆ ಎಂದು ಚಿಲಕಮರ್ತಿಯವರು ಹೇಳುತ್ತಾರೆ.

ವಿಗ್ರಹಕ್ಕೆ ಮಾಂತ್ರಶಕ್ತಿಯನ್ನು ಹೀರಿಕೊಳ್ಳುವ ಶಕ್ತಿಯು ನಿರಂತರ ಪೂಜೆ, ಪುನಸ್ಕಾರಗಳಿಂದ ದೊರೆಯುತ್ತದೆ. ಅದು ದೇವಸ್ಥಾನವು ಬೆಳಗುವಂತೆ ಮಾಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ವಿಗ್ರಹದ ಶಕ್ತಿ ಕಡಿಮೆಯಾಗದಿರಲು, ಅರ್ಚಕರು ಯಾವಾಗಲೂ ಶುದ್ಧವಾಗಿರಬೇಕು. ನಮ್ಮ ಮನೆಯಲ್ಲಿರುವ ಮೂರ್ತಿಗಳು ಅಶುದ್ಧ ಸ್ಥಿತಿಯಲ್ಲಿದ್ದಾಗ, ಸ್ನಾನ ಮಾಡಿಸಿ ರಕ್ಷಿಸಿದರೆ ಮೂರ್ತಿಗಳು ನಮ್ಮನ್ನು ರಕ್ಷಿಸುತ್ತವೆ ಎಂದು ಚಿಲಕಮರ್ತಿಗಳು ಹೇಳುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ