logo
ಕನ್ನಡ ಸುದ್ದಿ  /  ಕ್ರಿಕೆಟ್  /  2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಅಧಿಕೃತ ಸೇರ್ಪಡೆ; ಒಲಿಂಪಿಕ್ ಸಮಿತಿಯಿಂದ ಅಸ್ತು

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಅಧಿಕೃತ ಸೇರ್ಪಡೆ; ಒಲಿಂಪಿಕ್ ಸಮಿತಿಯಿಂದ ಅಸ್ತು

Jayaraj HT Kannada

Oct 13, 2023 06:30 PM IST

ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಅಧಿಕೃತವಾಗಿ ಸೇರ್ಪಡೆಗೊಂಡಿದೆ (ನರೇಂದ್ರ ಮೋದಿ ಕ್ರೀಡಾಂಗಣ

    • Cricket in Los Angeles Olympics : 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ (2028 Los Angeles Games) ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಜಂಟಲ್‌ಮೆನ್‌ ಗೇಮ್‌ ಕ್ರಿಕೆಟ್‌ ಅಧಿಕೃತವಾಗಿ ಸೇರ್ಪಡೆಯಾಗಿದೆ.
ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಅಧಿಕೃತವಾಗಿ ಸೇರ್ಪಡೆಗೊಂಡಿದೆ (ನರೇಂದ್ರ ಮೋದಿ ಕ್ರೀಡಾಂಗಣ
ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಅಧಿಕೃತವಾಗಿ ಸೇರ್ಪಡೆಗೊಂಡಿದೆ (ನರೇಂದ್ರ ಮೋದಿ ಕ್ರೀಡಾಂಗಣ (AFP)

ಕೊನೆಗೂ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಸವಿಯುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ (2028 Los Angeles Games) ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಜಂಟಲ್‌ಮೆನ್‌ ಗೇಮ್‌ ಕ್ರಿಕೆಟ್‌ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಕದನದೊಳ್ ಕಿಂಗ್ ಕೊಹ್ಲಿ ಕೆಣಕಿ ಉಳಿದವರಿಲ್ಲ; ರವೀಂದ್ರ ಜಡೇಜಾಗೆ ಅಲ್ಲೇ ಡ್ರಾ, ಅಲ್ಲೇ ಬಹುಮಾನ, ವಿಡಿಯೋ

ಆರ್​ಸಿಬಿ ಆಟಗಾರರಿಗೆ ಹ್ಯಾಂಡ್​ಶೇಕ್ ಮಾಡದೆ ಮೈದಾನ ತೊರೆದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ

ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್

ಈ ಕುರಿತ ಪ್ರಸ್ತಾವನೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (International Olympic Committee) ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಹೀಗಾಗಿ ಶುಕ್ರವಾರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯನ್ನು ಇದನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಮುಂಬೈನಲ್ಲಿ ನಡೆದ ಅಂತಾರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯ ಎರಡನೇ ದಿನವಾದ ಶುಕ್ರವಾರ, ಈ ಕುರಿತು ಘೋಷಣೆ ಮಾಡಲಾಗಿದೆ. ಐಒಸಿ (IOC) ಅಧ್ಯಕ್ಷ ಥಾಮಸ್ ಬಾಚ್ ಅವರು ಸಭೆಯ ನಂತದ ಅಧಿಕೃತವಾಗಿ ಘೋಷಿಸಿದ್ದಾರೆ. ಟಿ20 ಸ್ವರೂಪದಲ್ಲಿ ಕ್ರಿಕೆಟ್‌ ಪಂದ್ಯವನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸುವಂತೆ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಸಮಿತಿಯ ಸಂಘಟಕರ ಪ್ರಸ್ತಾಪವನ್ನು ಐಒಸಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಥಾಮಸ್ ಬಾಚ್ ಹೇಳಿದ್ದಾರೆ.

ಕ್ರಿಕೆಟ್‌ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಕ್ವ್ಯಾಷ್ ಮತ್ತು ಲ್ಯಾಕ್ರೋಸ್ ಜೊತೆಗೆ ಐದು ಹೊಸ ಕ್ರೀಡೆಗಳನ್ನು ಒಲಿಂಪಿಕ್ಸ್‌ಗೆ ಸೇರಿಸಲಾಗಿದೆ. ಕ್ರಿಕೆಟ್‌ ಪಂದ್ಯಗಳನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತದೆ.

1900ರ ಒಲಿಂಪಿಕ್ಸ್‌ನಲ್ಲಿ ನಡೆದಿತ್ತು ಕ್ರಿಕೆಟ್

ಕೊನೆಯ ಬಾರಿಗೆ 1900ರಲ್ಲಿ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಪಂದ್ಯ ನಡೆದಿತ್ತು. ಎರಡು ತಂಡಗಳು ಮಾತ್ರ ಆ ಸಮಯದಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಿದ್ದವು. ಅದಾದ ಬಳಿಕ ಜಾಗತಿಕ ಕ್ರೀಡಾಕೂಟದಲ್ಲಿ ಇದುವರೆಗೆ ಕ್ರಿಕೆಟ್‌ ಪಂದ್ಯಗಳು ನಡೆದಿಲ್ಲ. ಇದೀಗ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ