logo
ಕನ್ನಡ ಸುದ್ದಿ  /  ಕ್ರೀಡೆ  /  ಚಿತ್ರಕಲಾವಿದೆಯನ್ನು ತಬ್ಬಿಕೊಂಡ ರೊನಾಲ್ಡೊ ವಿರುದ್ಧ ವ್ಯಾಪಕ ಆಕ್ರೋಶ; ಶಿಕ್ಷೆ ನಿರಾಕರಿಸಿದ ಇರಾನ್‌ ಸರ್ಕಾರ

ಚಿತ್ರಕಲಾವಿದೆಯನ್ನು ತಬ್ಬಿಕೊಂಡ ರೊನಾಲ್ಡೊ ವಿರುದ್ಧ ವ್ಯಾಪಕ ಆಕ್ರೋಶ; ಶಿಕ್ಷೆ ನಿರಾಕರಿಸಿದ ಇರಾನ್‌ ಸರ್ಕಾರ

Jayaraj HT Kannada

Oct 17, 2023 05:33 PM IST

ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಕ್ರಿಸ್ಟಿಯಾನೋ ರೊನಾಲ್ಡೊ

    • Cristiano Ronaldo: ದಿಗ್ಗಜ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಮೇಲೆ ಇರಾನ್‌ನಲ್ಲಿ ಭಾರಿ ಆಕ್ರೋಶ ಕೇಳಿಬಂದಿದೆ. ಅಭಿಮಾನಿ ಯುವತಿಯನ್ನು ತಬ್ಬಿಕೊಂಡ ಕಾರಣಕ್ಕೆ ಭಾರಿ ಶಿಕ್ಷೆ ವಿಧಿಸಬೇಕೆಂಬ ಒತ್ತಾಯವನ್ನು ಇರಾನ್ ಸರ್ಕಾರ ತಳ್ಳಿಹಾಕಿದೆ.
ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಕ್ರಿಸ್ಟಿಯಾನೋ ರೊನಾಲ್ಡೊ
ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಕ್ರಿಸ್ಟಿಯಾನೋ ರೊನಾಲ್ಡೊ

ಪೋರ್ಚುಗಲ್‌ ದೇಶದ ಸ್ಟಾರ್ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo), ಅನಿರೀಕ್ಷಿತ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಮಾನವೀಯ ನೆಲೆಯಲ್ಲಿ ಮುಗ್ಧ ವರ್ತನೆ ತೋರಿದ್ದರ ಹೊರತಾಗಿಯೂ ಇರಾನ್‌ನಲ್ಲಿ ವ್ಯಾಪಕ ಖಂಡನೆ ಎದುರಿಸುತ್ತಿದ್ದಾರೆ. ಅಲ್ಲದೆ ಶಿಕ್ಷೆಗೆ ಒತ್ತಾಯ ಕೇಳಿ ಬಂದಿದೆ. ಈ ನಡುವೆ, ಇರಾನ್ ಮಾಧ್ಯಮಗಳು ಹಾಗೂ ಸಾರ್ವಜನಿಕ ಅಭಿಪ್ರಾಯದಂತೆ 99 ಹೊಡೆತಗಳ (ಛಡಿ ಏಟು) ಶಿಕ್ಷೆ ಎದುರಿಸಬೇಕಾದ ಸಾಧ್ಯತೆಯನ್ನು ಇರಾನ್ ನಿರಾಕರಿಸಿದೆ.

ಟ್ರೆಂಡಿಂಗ್​ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್; 8 ವರ್ಷಗಳ ನಂತರ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಭಾರತೀಯ ಮಹಿಳಾ ಅಥ್ಲೀಟ್ಸ್

ಫ್ರೆಂಚ್ ಓಪನ್ 2024: ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ರಾಫೆಲ್ ನಡಾಲ್; 14 ಬಾರಿಯ ಚಾಂಪಿಯನ್ ಮಣಿಸಿದ ಅಲೆಕ್ಸಾಂಡರ್

ಮಲೇಷ್ಯಾ ಮಾಸ್ಟರ್ಸ್ ಫೈನಲ್‌; ಚೀನಾದ ವಾಂಗ್ ಝಿಯಿ ವಿರುದ್ಧ ಸೋತ ಪಿವಿ ಸಿಂಧು

ಆರ್ಚರಿ ವಿಶ್ವಕಪ್;‌ ಭಾರತ ಮಹಿಳಾ ಕಾಂಪೌಂಡ್ ತಂಡಕ್ಕೆ ಚಿನ್ನ, ಬೆಳ್ಳಿಗೆ ತೃಪ್ತಿಪಟ್ಟ ಮಿಶ್ರ ತಂಡ

ಅಷ್ಟಕ್ಕೂ ರೊನಾಲ್ಡೋ ಅವರು ದೊಡ್ಡ ಪ್ರಮಾದವೇನೂ ಮಾಡಿಲ್ಲ. ಅಲ್ಲದೆ ಜನಸಾಮಾನ್ಯರ ದೃಷ್ಟಿಯಿಂದ ನೋಡುವುದಾದರೆ ಯಾವುದೇ ಸಣ್ಣ ತಪ್ಪನ್ನೂ ಅವರು ಮಾಡಿಲ್ಲ. ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಅಲ್-ನಾಸರ್‌ ಕ್ಲಬ್‌ ಪರ ಆಡುತ್ತಿರುವ ಪೋರ್ಚುಗೀಸ್ ಸೂಪರ್‌ಸ್ಟಾರ್, ಕಳೆದ ತಿಂಗಳು ಇರಾನ್‌ಗೆ ಭೇಟಿ ನೀಡಿದ್ದರು. ಆ ವೇಳೆ ನಡೆದ ನಡೆದ ಒಂದು ಮುದ್ದಾದ ಘಟನೆಯಿಂದಾಗಿ ಇದೀಗ ರೊನಾಲ್ಡೊ ವಿವಾದಕ್ಕೆ ಒಳಗಾಗಿದ್ದಾರೆ.

ಸೆಪ್ಟೆಂಬರ್ 19ರಂದು ಪರ್ಸೆಪೊಲಿಸ್ ವಿರುದ್ಧದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಆಡಲು ಅಲ್‌ ನಾಸರ್‌ ಕ್ಲಬ್‌ ಆಟಗಾರ ರೊನಾಲ್ಡೊ ಇರಾನ್‌ನಲ್ಲಿದ್ದರು. ಪಂದ್ಯಕ್ಕೂ ಮುನ್ನ, ಇರಾನ್‌ನ ಚಿತ್ರ ಕಲಾವಿದೆಯಾಗಿರುವ ಫಾತಿಮಾ ಹಮಿಮಿ ಎಂಬವರು ತಾವು ರಚಿಸಿದ ಅಲ್ಟ್ರಾ-ರಿಯಲಿಸ್ಟಿಕ್ ಡ್ರಾಯಿಂಗ್‌ಗಳನ್ನು ಉಡುಗೊರೆಯಾಗಿ ರೊನಾಲ್ಡೊಗೆ ನೀಡಿದ್ದರು. ಫಾತಿಮಾ‌ ಅವರು ನಮ್ಮನಿಮ್ಮಂತಲ್ಲ. ವಿಕಲಚೇತನಾರಾಗಿರುವ ಅವರು, ತಮ್ಮ ಕಾಲಿನಿಂದಲೇ ಸುಂದರ ಚಿತ್ರಗಳನ್ನು ಬರೆಯುವ ವಿಶೇಷ ಕಲಾವಿದೆ. ಹೀಗಾಗಿ ಅವರ ವಿಶೇಷ ಕಲಾಕೃತಿಯನ್ನು ರೊನಾಲ್ಡೊ ಖುಷಿಯಿಂದ ಸ್ವೀಕರಿಸಿದ್ದಾರೆ.

ವಿಶೇಷ ಉಡುಗೊರೆ ಪಡೆದು ಖುಷಿಪಟ್ಟ ರೊನಾಲ್ಡೊ, ಕೃತಜ್ಞತೆಯ ಭಾಗವಾಗಿ ಕಲಾವಿದೆಯನ್ನು ಅಪ್ಪಿಕೊಂಡು ಅವರ ಹಣೆಯ ಮೇಲೆ ಮುತ್ತಿಟ್ಟಿದ್ದಾರೆ. ಆ ಕ್ಷಣದಲ್ಲಿ ರೊನಾಲ್ಡೊ ಅವರ ನಡೆ ನಿಷ್ಕಲ್ಮಶವಾಗಿತ್ತು. ದಿಗ್ಗಜ ಆಟಗಾರನ ನಡೆ ಜಾಗತಿಕ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಆದರೆ, ಇದು ಇರಾನ್‌ನಲ್ಲಿ ಭಾರಿ ವಿವಾದವನ್ನು ಹುಟ್ಟುಹಾಕಿದೆ ಎಂದು ವರದಿಯಾಗಿದೆ. ಇರಾನ್‌ ದೇಶದಲ್ಲಿ ಮಳೆಯರ ಕುರಿತಾದ ಕಾನೂನುಗಳು ತುಂಬಾ ಕಠಿಣವಾಗಿವೆ. ಹೀಗಾಗಿ ಇಲ್ಲಿ ಇನ್ನೊಬ್ಬ ಮಹಿಳೆಯನ್ನು ಸ್ಪರ್ಶಿಸುವುದು ವ್ಯಭಿಚಾರ ಎಂದು ಪರಿಗಣಿಸಬಹುದು ಎಂದು ಹಲವು ವರದಿಗಳು ಸೂಚಿಸಿವೆ.

ಇರಾನ್‌ನ ಹಲವಾರು ಮಾಧ್ಯಮಗಳ ವರದಿ ಪ್ರಕಾರ, ರೊನಾಲ್ಡೊಗೆ ಅವರ ನಡೆಯು ಒಂದು ಕೃತ್ಯವಾಗಿದೆ. ಈ ಕೃತ್ಯಕ್ಕೆ ಶಿಕ್ಷೆಯಾಗಿ '99 ಛಡಿಯೇಟು' ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಇರಾನ್ ಸರ್ಕಾರ ಮಾತ್ರ ಈ ಸಂಬಾವ್ಯ ಶಿಕ್ಷೆಯನ್ನು ತಳ್ಳಿ ಹಾಕಿದೆ. ಪೋರ್ಚುಗೀಸ್ ಆಟಗಾರನ ಮೇಲೆ ಅಂಥ ಯಾವುದೇ ಆರೋಪವನ್ನು ಇರಾನ್‌ ಸರ್ಕಾರ ನಿರಾಕರಿಸಿದೆ. ಅಲ್ಲದೆ ಎಕ್ಸ್‌ನಲ್ಲಿ (ಟ್ವಿಟರ್) ಸ್ಪಷ್ಟನೆ ನೀಡಿದೆ.

"ಇರಾನ್‌ನಲ್ಲಿ ಯಾವುದೇ ಅಂತಾರಾಷ್ಟ್ರೀಯ ಅಥ್ಲೀಟ್ ವಿರುದ್ಧ ತೀರ್ಪು ನೀಡುವುದನ್ನು ನಾವು ಬಲವಾಗಿ ನಿರಾಕರಿಸುತ್ತೇವೆ. ಇಂಥ ಆಧಾರರಹಿತ ಸುದ್ದಿಗಳ ಪ್ರಕಟಣೆಯು ಮಾನವೀಯತೆಗೆ ವಿರುದ್ಧವಾಗಿದೆ, ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ವಿವಾದದ ಹೊರತಾಗಿಯೂ ರೊನಾಲ್ಡೊ ಈ ವಿಷಯದ ಬಗ್ಗೆ ಯಾವುದೇ ರೀತಿಯ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ