logo
ಕನ್ನಡ ಸುದ್ದಿ  /  ಕ್ರಿಕೆಟ್  /  13 ವರ್ಷಗಳಿಂದ ಜೊತೆಗಾಡಿದ್ದ ಸ್ಮಿತ್​ರನ್ನೇ ಕೆಣಕಿ ಔಟ್ ಮಾಡಿದ ವಾರ್ನರ್​; ಸ್ಲೆಡ್ಜಿಂಗ್ ವಿಡಿಯೋ ವೈರಲ್

13 ವರ್ಷಗಳಿಂದ ಜೊತೆಗಾಡಿದ್ದ ಸ್ಮಿತ್​ರನ್ನೇ ಕೆಣಕಿ ಔಟ್ ಮಾಡಿದ ವಾರ್ನರ್​; ಸ್ಲೆಡ್ಜಿಂಗ್ ವಿಡಿಯೋ ವೈರಲ್

Prasanna Kumar P N HT Kannada

Jan 13, 2024 02:39 PM IST

13 ವರ್ಷಗಳಿಂದ ಜೊತೆಗಾಡಿದ್ದ ಸ್ಮಿತ್​ರನ್ನೇ ಕೆಣಕಿ ಔಟ್ ಮಾಡಿದ ವಾರ್ನರ್.

    • David Warner: 2010ರಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಒಟ್ಟಿಗೆ ಆಡಿದ್ದ ತನ್ನ ಆಟಗಾರರ ಸ್ಟೀವ್​ ಸ್ಮಿತ್ ಅವರನ್ನೇ ಸ್ಲೆಡ್ಜ್ ಮಾಡಿದ ಡೇವಿಡ್ ವಾರ್ನರ್, ಗೋಲ್ಡನ್​ ಡಕ್​ಗೆ ಬಲಿ ಪಡೆದಿದ್ದಾರೆ.
13 ವರ್ಷಗಳಿಂದ ಜೊತೆಗಾಡಿದ್ದ ಸ್ಮಿತ್​ರನ್ನೇ ಕೆಣಕಿ ಔಟ್ ಮಾಡಿದ ವಾರ್ನರ್.
13 ವರ್ಷಗಳಿಂದ ಜೊತೆಗಾಡಿದ್ದ ಸ್ಮಿತ್​ರನ್ನೇ ಕೆಣಕಿ ಔಟ್ ಮಾಡಿದ ವಾರ್ನರ್.

ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನಂತರ ಪ್ರಸ್ತುತ ನಡೆಯುತ್ತಿರುವ ಬಿಗ್​ ಬ್ಯಾಷ್​ ಲೀಗ್​ನಲ್ಲಿ (Big Bash League) ಸಿಡ್ನಿ ಥಂಡರ್​​ ಪರ ಆಡುತ್ತಿರುವ ಎಡಗೈ ಆರಂಭಿಕ ಆಟಗಾರ ಡೇವಿಡ್ ವಾರ್ನರ್​, ಜನವರಿ 12ರಂದು ನಡೆದ ಸಿಡ್ನಿ ಸಿಕ್ಸರ್ ವಿರುದ್ಧದ ಪಂದ್ಯದಲ್ಲಿ (Sydney Sixers vs Sydney Thunder) ರಾಷ್ಟ್ರೀಯ ತಂಡದಲ್ಲಿ ಸಹ ಆಟಗಾರನಾಗಿದ್ದ ಸ್ಟೀವ್​ ಸ್ಮಿತ್​ ಅವರನ್ನು (Steve Smith) ಸಿಕ್ಕಾಪಟ್ಟೆ ಸ್ಲೆಡ್ಜ್ ಮಾಡಿ ಡಕೌಟ್​ಗೆ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೂರ್ನಿಯ 34ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್​ ಮೊದಲಿಗೆ ಬ್ಯಾಟಿಂಗ್ ಆರಂಭಿಸಿತು. ಇನ್ನಿಂಗ್ಸ್​ ಆರಂಭದ ಮೊದಲ ಎಸೆತದಲ್ಲೇ ಸ್ಟೀವ್ ಸ್ಮಿತ್​ ಔಟಾದರು. ಡ್ಯಾನಿಯಲ್ ಸ್ಯಾಮ್ಸ್​ ಬೌಲಿಂಗ್​ನಲ್ಲಿ ನಾಥನ್ ಮ್ಯಾಕ್ ಆಂಡ್ರ್ಯೂ ಅವರಿಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ಆದರೆ ಈ ಎಸೆತವನ್ನು ಎದುರಿಸುವುದಕ್ಕೂ ಮುನ್ನ ವಾರ್ನರ್​, ತುಂಬಾ ಕೆಣಕಿದ್ದರು.

2010ರಿಂದ ಜೊತೆಗಿದ್ದ ಆಟಗಾರರನ್ನೇ ಸ್ಲೆಡ್ಜ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ತನ್ನ ಸಹ ಆಟಗಾರನಾಗಿದ್ದ ಸ್ಟೀವ್​ ಸ್ಮಿತ್​ಗೆ ಯಾವುದೇ ಕರುಣೆ ನೀಡದೆ ಸ್ಲೆಡ್ಜ್ ಮಾಡಿದ್ದಾರೆ. ಥಂಡರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ನಂತರ, ಸ್ಮಿತ್ ಸಿಕ್ಸರ್‌ ಪರ ಬ್ಯಾಟಿಂಗ್ ಆರಂಭಿಸಲು ಹೊರ ನಡೆದರು. ಅದೇ ವೇಳೆ ವಾರ್ನರ್ ಬ್ರಾಡ್‌ಕಾಸ್ಟರ್‌ ಜೊತೆ ಮಾತನಾಡುತ್ತಿದ್ದರು. ಮತ್ತು ಕ್ರೀಸ್‌ನಲ್ಲಿರುವಾಗ 34 ವರ್ಷದ ಬ್ಯಾಟರ್​​ ಜೊತೆ ತಮಾಷೆ ಮಾಡಿದರು. 2010ರಿಂದ ಇಲ್ಲಿಯವರೆಗೂ ಒಟ್ಟಿಗೆ ಆಡಿದ್ದ ಆಟಗಾರರನ್ನೇ ಸ್ಲೆಡ್ಜ್ ಮಾಡಿದ್ದಾರೆ.

ಹೀಗಿದೆ ಕೆಣಕಿದ ಪರಿ…

ಪಿಚ್‌ ಬಳಿ ಬಳಿ ತನ್ನ ಸ್ಟ್ರೈಕ್​ನಲ್ಲಿ ಬ್ಯಾಟ್‌ನಿಂದ ಸೆಂಟರ್‌ ವಿಕೆಟ್‌ ಮಾರ್ಕ್‌ ಮಾಡುವಾಗಲೂ ವಾರ್ನರ್‌ ಕಾಲೆಳೆಯುತ್ತಾರೆ. ಹೇ ಅದು ಮಧ್ಯಭಾಗ ಅಲ್ಲ, ಸ್ವಲ್ಪ ಬಲಕ್ಕೆ ಮಾರ್ಕ್‌ ಮಾಡು. ಗೆಳೆಯಾ, ನೀನು ಇನ್ನಿಂಗ್ಸ್‌ ಓಪನಿಂಗ್‌ ಮಾಡಬೇಕಾದರೆ ಮೊದಲು ಸೆಂಟರ್‌ ವಿಕೆಟ್‌ ಸರಿಯಾಗಿ ಮಾರ್ಕ್‌ ಮಾಡೋಕೆ ಕಲೀಬೇಕು. ಅದಕ್ಕೆ ಒಮ್ಮೆ ಮಾತ್ರ ಅವಕಾಶ ಎಂದು ವಾರ್ನರ್ ಸ್ಮಿತ್‌ಗೆ ರೇಗಿಸಿದ್ದಾರೆ. ಅದಾದ ತಕ್ಷಣ ಮೊದಲ ಎಸೆತದಲ್ಲೇ ಸ್ಮಿತ್‌ ಗೋಲ್ಡನ್‌ ಡಕ್‌ಗೆ ಬಲಿಯಾಗಿದ್ದಾರೆ.

ಆದರೆ ಸ್ಮಿತ್ ವೈಫಲ್ಯದ ಹೊರತಾಗಿಯೂ ಸಿಡ್ನಿ ಸಿಕ್ಸರ್ ತಂಡವು 19 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಆದರೆ ಸ್ಲೆಡ್ಸ್​ ಮಾಡುವಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್​ನಲ್ಲಿ ನೀರಸ ಪ್ರದರ್ಶನ ನೀಡಿದರು. ಟಿ20 ಕ್ರಿಕೆಟ್​ನಲ್ಲಿ ಅತ್ಯಂತ ಕೆಟ್ಟ ಎನಿಸಿದೆ. 39 ಎಸೆತಗಳನ್ನು ಎದುರಿಸಿ ಕೇವಲ 37 ರನ್ ಗಳಿಸಿ ಔಟಾದರು. 1 ಬೌಂಡರಿ, 2 ಸಿಕ್ಸರ್​ ಅವರ ಇನ್ನಿಂಗ್ಸ್​​ನಲ್ಲಿವೆ. ಅಲ್ಲದೆ, ಸತತ ಸೋಲುಗಳಿಂದ ಕಂಗೆಟ್ಟಿದ ಥಂಡರ್ಸ್ ತಂಡಕ್ಕೆ ವಾರ್ನರ್​ ಬಂದ ಬಳಿಕವೂ ಲಕ್ ಕುದುರಲಿಲ್ಲ.

ಉಭಯ ತಂಡಗಳ ಪ್ರದರ್ಶನ ಹೇಗಿದೆ?

ಬಿಗ್​ಬ್ಯಾಷ್​ ಲೀಗ್​ನಲ್ಲಿ ವಾರ್ನರ್ ಆಡುತ್ತಿರುವ ತಂಡ ಎಲಿಮಿನೇಟ್ ಆಗಿದೆ. ಆಡಿರುವ 8 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆಲುವು ದಾಖಲಿಸಿ, 6 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡಿದೆ. ಇನ್ನು ಸ್ಮಿತ್ ಆಡುತ್ತಿರುವ ಸಿಡ್ನಿ ಸಿಕ್ಸರ್ ತಂಡವು ನಾಕೌಟ್​ ಪ್ರವೇಶಿಸಿದೆ. ಆಡಿದ 9 ಪಂದ್ಯಗಳಲ್ಲಿ 5 ಗೆಲುವು, 2 ಸೋಲು, ಮತ್ತು 2 ಪಂದ್ಯಗಳು ಫಲಿತಾಂಶ ಕಾಣದೆ ಅಂತ್ಯಗೊಂಡಿದೆ. ಈ ಪಂದ್ಯವನ್ನಾಡಲು ವಾರ್ನರ್ ಹೆಲಿಕಾಪ್ಟರ್ ಮೂಲಕ ಬಂದಿದ್ದರು.

ವಾರ್ನರ್ ಬದಲಿಗೆ ಸ್ಮಿತ್ ಆರಂಭಿಕ

ವಾರ್ನರ್ ನಿವೃತ್ತಿಯ ನಂತರ ಆಸ್ಟ್ರೇಲಿಯಾದ ಟೆಸ್ಟ್ ಓಪನರ್ ಸ್ಥಾನಕ್ಕೆ ಸ್ಟೀವ್​ ಸ್ಮಿತ್ ಬಡ್ತಿ ಪಡೆದಿದ್ದಾರೆ. ಅದಕ್ಕೂ ಮೊದಲು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದರು. 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಅವಧಿಯಲ್ಲಿ ಸ್ಮಿತ್​ ಅವರನ್ನು ಈ ಪೀಳಿಗೆಯ ಶ್ರೇಷ್ಠ ಟೆಸ್ಟ್ ಬ್ಯಾಟರ್ ಎಂದು ಕರೆಯಲಾಗುತ್ತಿತ್ತು. ಈಗ ಉಸ್ಮಾನ್ ಖವಾಜಾ ಅವರೊಂದಿಗೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. 4ನೇ ಕ್ರಮಾಂಕದ ಸ್ಮಿತ್ ಸ್ಥಾನವನ್ನು ಕ್ಯಾಮರೂನ್ ಗ್ರೀನ್ ತುಂಬಲಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ