logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ಗೆ ವಿದಾಯ ಹೇಳಲು ಮುಂದಾದ ಆರ್‌ಸಿಬಿ ಫಿನಿಶರ್‌ ದಿನೇಶ್‌ ಕಾರ್ತಿಕ್‌; ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ

ಐಪಿಎಲ್‌ಗೆ ವಿದಾಯ ಹೇಳಲು ಮುಂದಾದ ಆರ್‌ಸಿಬಿ ಫಿನಿಶರ್‌ ದಿನೇಶ್‌ ಕಾರ್ತಿಕ್‌; ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ

Jayaraj HT Kannada

Mar 07, 2024 02:32 PM IST

ಐಪಿಎಲ್‌ಗೆ ವಿದಾಯ ಹೇಳಲು ಮುಂದಾದ ಆರ್‌ಸಿಬಿ ಆಟಗಾರ ದಿನೇಶ್‌ ಕಾರ್ತಿಕ್‌

    • Dinesh Karthik: ಮಾರ್ಚ್ 22ರಂದು ಐಪಿಎಲ್ 2024ರ ಪಂದ್ಯಾವಳಿ ಆರಂಭವಾಗಲಿದೆ. ಇದು ದಿನೇಶ್ ಕಾರ್ತಿಕ್ ಅವರ ಕೊನೆಯ ಐಪಿಎಲ್ ಟೂರ್ನಿ ಆಗಲಿದೆ. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ದಿನೇಶ್‌ ಕಾರ್ತಿಕ್‌ ವಿದಾಯ ಹೇಳಲಿದ್ದಾರೆ.
ಐಪಿಎಲ್‌ಗೆ ವಿದಾಯ ಹೇಳಲು ಮುಂದಾದ ಆರ್‌ಸಿಬಿ ಆಟಗಾರ ದಿನೇಶ್‌ ಕಾರ್ತಿಕ್‌
ಐಪಿಎಲ್‌ಗೆ ವಿದಾಯ ಹೇಳಲು ಮುಂದಾದ ಆರ್‌ಸಿಬಿ ಆಟಗಾರ ದಿನೇಶ್‌ ಕಾರ್ತಿಕ್‌ (PTI)

ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಮುನ್ನ, ಐಪಿಎಲ್‌ ವೃತ್ತಿಜೀವನಕ್ಕೆ ವಿದಾಯ ಹೇಳಲು ಭಾರತದ ಅನುಭವಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ದಿನೇಶ್ ಕಾರ್ತಿಕ್‌ (Dinesh Karthik) ಮುಂದಾಗಿದ್ದಾರೆ. ಮಿಲಿಯನ್‌ ಡಾಲರ್‌ ಟೂರ್ನಿಯ ಪ್ರಸಕ್ತ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿರುವ ಡಿಕೆ, ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 22ರಂದು ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿ ಆರಂಭವಾಗುತ್ತಿದೆ. ಚೆನ್ನೈನ ಎಂಎ ಚಿಂದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಇದು ಕಾರ್ತಿಕ್ ಅವರ ಕೊನೆಯ ಪಂದ್ಯಾವಳಿಯಾಗುವ ಸಾಧ್ಯತೆಯಿದೆ.

ಟ್ರೆಂಡಿಂಗ್​ ಸುದ್ದಿ

ಕನ್ನಡಿಗರ ಮನೆ ಮಗ ವಿರಾಟ್ ಕೊಹ್ಲಿ; ಕರುನಾಡ ಜನತೆಗೆ ಆರ್​​ಸಿಬಿ ಮಾಜಿ ನಾಯಕನೆಂದರೆ ಅಷ್ಟೇಕೆ ಇಷ್ಟ?

Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು

ಇಬ್ಬರು ಪ್ರಾಣ ಸ್ನೇಹಿತರು ಬದ್ಧವೈರಿಗಳಾದಾಗ..; ಕೊನೆಯ ಬಾರಿಗೆ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಫೈಟ್?

ಸಿಎಸ್​ಕೆ ವಿರುದ್ಧ ಸೇಡಿಗೆ ಕಾದು ಕುಳಿತ ಆರ್​​ಸಿಬಿ; ಗೆಲುವಿನ ಗೇಮ್​ಪ್ಲಾನ್ ಏನು, ಅಖಾಡದಲ್ಲಿ ಗೆಲ್ಲೋದ್ಯಾರು?

ಐಪಿಎಲ್‌ಗೆ ಮೊದಲು ವಿದಾಯ ಹೇಳಲಿರುವ 38ರ ಹರೆಯದ ಕಾರ್ತಿಕ್‌, ಆ ಬಳಿಕ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. “2024ರ ಆವೃತ್ತಿಯು ದಿನೇಶ್ ಕಾರ್ತಿಕ್ ಅವರ ಕೊನೆಯ ಐಪಿಎಲ್ ಪಂದ್ಯಾವಳಿ ಆಗಲಿದೆ. ಐಪಿಎಲ್ ನಂತರ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಕುರಿತು ನಿರ್ಧರಿಸುತ್ತಾರೆ,” ಎಂದು ಬಿಸಿಸಿಐ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

ದಿನೇಶ್‌ ಕಾರ್ತಿಕ್ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಮಾಡಿರುವ ಆಟಗಾರರಲ್ಲಿ ಒಬ್ಬರು. ಈವರೆಗೆ ಒಟ್ಟು ಆರು ಫ್ರಾಂಚೈಸಿಗಳ ಪರ ಅವರು ಆಡಿದ್ದಾರೆ. 2008ರಿಂದ 14ರವರೆಗೆ ಡೇರ್ ಡೆವಿಲ್ಸ್ ಪರ ಆಡಿದ್ದ ಅವರು, 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದರು. 2012-13ರಲ್ಲಿ ಮುಂಬೈ ಇಂಡಿಯನ್ಸ್, 2016-17ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. 2018ರಿಂದ 21ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ.

2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಡಿಕೆ, 2022ರಿಂದ ಮತ್ತೆ ತಂಡ ಸೇರಿಕೊಂಡು ಪ್ರಸ್ತುತ ಆರ್‌ಸಬಿ ತಂಡದಲೇ ಉಳಿದಿದ್ದಾರೆ. 2022ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 5.5 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಖರೀದಿಸಿದ ನಂತರ ಅವರು ಕಳೆದ ಎರಡು ಋತುಗಳಿಂದ ಆರ್‌ಸಿಬಿ ತಂಡದ ಪ್ರಮುಖ ಫಿನಿಶರ್‌ ಆಗಿದ್ದಾರೆ. ಅದಕ್ಕೂ ಹಿಂದೆ 2015ರಲ್ಲಿ ಆರ್‌ಸಿಬಿಯು ಅವರನ್ನು 10.5 ಕೋಟಿ ರೂಪಾಯಿಗೆ ಖರೀದಿಸಿ ನಂತರ ಕೈಬಿಟ್ಟಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

2022ರಲ್ಲಿ ಕಾರ್ತಿಕ್‌ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 330 ರನ್ ಗಳಿಸಿದ್ದರು. ಆ ವರ್ಷ 183.33ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದರು. ತಂಡವು ಪ್ಲೇ ಆಫ್‌ ಪ್ರವೇಶಿಸುವಲ್ಲಿ ನೆರವಾಗಿದ್ದರು.

ತಮ್ಮ ಇಡೀ ವೃತ್ತಿಜೀವನದಲ್ಲಿ ಕೇವಲ ಎರಡು ಐಪಿಎಲ್ ಪಂದ್ಯಗಳನ್ನು ಮಾತ್ರ ಮಿಸ್‌ ಮಾಡಿಕೊಂಡಿದ್ದಾರೆ ಎಂಬುದು ವಿಶೇಷ. ಅತಿ ಹೆಚ್ಚು ಐಪಿಎಲ್‌ ಪಂದ್ಯಗಳನ್ನು ಆಡಿದವರು ಪಟ್ಟಿಯಲ್ಲಿ ಡಿಕೆ ಮೂರನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಆಟಗಾರ ಒಟ್ಟು 242 ಪಂದ್ಯಗಳಲ್ಲಿ ಆಡಿದ್ದರೆ. ಎಂಎಸ್ ಧೋನಿ (250) ಮತ್ತು ರೋಹಿತ್ ಶರ್ಮಾ (243) ಮೊದಲ ಎರಡು ಸ್ಥಾನದಲ್ಲಿದ್ದಾರೆ.

2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಪ್ರತಿ ಆವೃತ್ತಿಯಲ್ಲಿ ಕಾಣಿಸಿಕೊಂಡ ಆಟಗಾರ ದಿನೇಶ್‌ ಕಾರ್ತಿಕ್. ಕೇವಲ ಏಳು ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದಾರೆ. ಸಿಎಸ್‌ಕೆ ನಾಯಕ ಧೋನಿ, ಆರ್‌ಸಿಬಿಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ಎಲ್ಲಾ ಆವೃತ್ತಿಗಳಲ್ಲಿ ಆಡಿದ್ದಾರೆ.‌

ಭಾರತ ತಂಡದ ಪರ ಕಾರ್ತಿಕ್ ಕೊನೆಯ ಬಾರಿಗೆ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಆ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿಲ್ಲ.

ಇದನ್ನೂ ಓದಿ | ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ಕ್ರಿಕೆಟ್ ಜರ್ನಿ ಹೇಗಿತ್ತು

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ