logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೆಪ್ಟೆಂಬರ್​​ 28ರಂದು ವಿಶ್ವಕಪ್​ಗೆ ಭಾರತ ಪರಿಷ್ಕೃತ ತಂಡ ಪ್ರಕಟ; ಅಶ್ವಿನ್​ಗೆ ಅವಕಾಶ ಖಚಿತ, ಅಕ್ಷರ್ ಔಟ್

ಸೆಪ್ಟೆಂಬರ್​​ 28ರಂದು ವಿಶ್ವಕಪ್​ಗೆ ಭಾರತ ಪರಿಷ್ಕೃತ ತಂಡ ಪ್ರಕಟ; ಅಶ್ವಿನ್​ಗೆ ಅವಕಾಶ ಖಚಿತ, ಅಕ್ಷರ್ ಔಟ್

Prasanna Kumar P N HT Kannada

Sep 27, 2023 07:37 PM IST

ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್.

    • ಮಣಿಕಟ್ಟು ಮತ್ತು ಸ್ನಾಯುಸೆಳೆತಕ್ಕೆ ಒಳಗಾಗಿರುವ ಅಕ್ಷರ್ ಪಟೇಲ್​​​ ಇನ್ನೂ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಹಾಗಾಗಿ ಅವರ ಅನುಪಸ್ಥಿತಿಯು ರವಿಚಂದ್ರನ್ ಅಶ್ವಿನ್​​ರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿದೆ.
ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್.
ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್.

ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗ ಟೀಮ್ ಇಂಡಿಯಾಗೆ ಹೊಸ ತಲೆ ನೋವು ಶುರುವಾಗಿದೆ. ಸೆಪ್ಟೆಂಬರ್ 28ರಂದು ಭಾರತ ತನ್ನ ಪರಿಷ್ಕೃತ ತಂಡ ಪ್ರಕಟಿಸಲಿದ್ದು, ಯಾರಿಗೆ ಅವಕಾಶ ನೀಡಬೇಕು ಎಂಬ ಗೊಂದಲಕ್ಕೆ ಒಳಗಾಗಿದೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸ್ಪಿನ್​ ಆಲ್​​ರೌಂಡರ್​ ಅಕ್ಷರ್​ ಪಟೇಲ್​ರನ್ನು​ ಕೈ ಬಿಡುವ ಸಾಧ್ಯತೆ ಇದ್ದು, ಅನುಭವಿ ಆಫ್​ಸ್ಪಿನ್ನರ್​​ ರವಿಚಂದ್ರನ್ ಅಶ್ವಿನ್​ಗೆ ಅದೃಷ್ಟದ ಬಾಗಿಲು ತೆರೆಯುವ ಅವಕಾಶ ಹೆಚ್ಚಿದೆ ಎಂದು ಹೇಳಲಾಗಿದೆ. ಆದರೆ, ಅಶ್ವಿನ್​ ಸ್ಥಾನ ಕಸಿಯುವ ಯತ್ನದಲ್ಲಿದ್ದಾರೆ ವಾಷಿಂಗ್ಟನ್ ಸುಂದರ್​. 

ಟ್ರೆಂಡಿಂಗ್​ ಸುದ್ದಿ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

ಎಲ್ಲಾ ಕ್ರಿಕೆಟ್ ಮಂಡಳಿಗಳು ಸಹ ತಮ್ಮ ತಂಡದಲ್ಲಿ ಬದಲಾವಣೆ ಸೂಚಿಸಲು ಸೆಪ್ಟೆಂಬರ್​ 28ರವರೆಗೂ ಅವಕಾಶ ನೀಡಲಾಗಿದೆ. ಅದರಂತೆ ಸೆಪ್ಟೆಂಬರ್ 28ರಂದು ಭಾರತ ತಮ್ಮ ಪರಿಷ್ಕೃತ ತಂಡವನ್ನು ಪ್ರಕಟಿಸಲಿದೆ. ಈ ತಂಡದಲ್ಲಿ ಏಕದಿನ ಕ್ರಿಕೆಟ್​ಗೆ ಮರಳಿದ ನಂತರ ಅದ್ಭುತ ಪ್ರದರ್ಶನ ನೀಡುತ್ತಿರುವ ಅಶ್ವಿನ್, ಪ್ರಧಾನ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಆಸೀಸ್ ವಿರುದ್ಧ 3ನೇ ಏಕದಿನ ಪಂದ್ಯಕ್ಕೆ ಅಶ್ವಿನ್​ಗೆ ರೆಸ್ಟ್​ ನೀಡಿದ್ದು ಅನುಮಾನ ಮೂಡಿಸಿದೆ. ಅಶ್ವಿನ್​ ಈಗಾಗಲೇ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು.

ಮಣಿಕಟ್ಟು ಮತ್ತು ಸ್ನಾಯುಸೆಳೆತಕ್ಕೆ ಒಳಗಾಗಿರುವ ಅಕ್ಷರ್ ಪಟೇಲ್​​​ ಇನ್ನೂ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಹಾಗಾಗಿ ಅವರ ಅನುಪಸ್ಥಿತಿಯು ರವಿಚಂದ್ರನ್ ಅಶ್ವಿನ್ ಅವ​​ರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿದೆ. ಮೆಗಾ ಟೂರ್ನಿಗೆ ಎರಡೇ ವಾರಗಳು ಉಳಿದಿರುವಾಗ, ಟೀಮ್ ಇಂಡಿಯಾ ತಮ್ಮ 3ನೇ ವಿಶ್ವಕಪ್​​ ಗೆಲುವಿಗೆ ಟಾರ್ಗೆಟ್ ಮಾಡಿರುವ ಮೆನ್ ಇನ್ ಬ್ಲೂ, ಅನುಭವಿ ಆಟಗಾರನ ಅನುಭವ ಬಳಸಿಕೊಳ್ಳಲು ನಿರ್ಧರಿಸಿದೆ. ಇದಕ್ಕೂ ಮೊದಲು ಸುಂದರ್​ರನ್ನು ತಂಡಕ್ಕೆ ಕರೆ ತರಲು ನಿರ್ಧರಿಸಲಾಗಿತ್ತು. ಆದರೆ ಅವರು ತಂಡದ ಮ್ಯಾನೇಜ್​ಮೆಂಟ್ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾದರು.

ಅಶ್ವಿನ್​ಗೆ ಸುಂದರ್​​ ಪೈಪೋಟಿ

ಅಕ್ಷರ್ ಪಟೇಲ್​ ಅಲಭ್ಯರಾದರೆ ಅಶ್ವಿನ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಷಿಂಗ್ಟನ್ ಸುಂದರ್​ಗೂ ಅವಕಾಶ ನೀಡಬೇಕೆಂಬ ಚರ್ಚೆಯೂ ನಡೆದಿತ್ತು. 3ನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರೆ ಸುಂದರ್​​ ಆಯ್ಕಗೆ ಒತ್ತು ಕೊಡಲು ಮ್ಯಾನೇಜ್​ಮೆಂಟ್​ ಚಿಂತನೆ ನಡೆಸಿತ್ತು. ಆದರೆ ಅವರು ಸುಂದರ್ ಸಿಕ್ಕ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡರು. ಬ್ಯಾಟಿಂಗ್​-ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಅಶ್ವಿನ್​ಗೆ ಸಿಕ್ಕ ಅವಕಾಶ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಎರಡು ಪಂದ್ಯಗಳಲ್ಲಿ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು. ಆದರೆ, ಸುಂದರ್​ಗೆ ಆಡುವ ಅವಕಾಶ ಸಿಗಲಿಲ್ಲ.

ಏಕದಿನ ವಿಶ್ವಕಪ್​ಗೆ ಇಬ್ಬರಲ್ಲಿ ಒಬ್ಬರನ್ನು ತಂಡಕ್ಕೆ ಆಯ್ಕೆ ಮಾಡಬೇಕೆಂಬ ಉದ್ದೇಶದಿಂದ ಸುಂದರ್​ಗೆ 3ನೇ ಪಂದ್ಯದಲ್ಲಿ ಅವಕಾಶ ಕೊಡಲಾಗಿತ್ತು. ಆದರೆ, ಸಿಕ್ಕ ಅವಕಾಶದಲ್ಲಿ ಸುಂದರ್​​ ವಿಫಲರಾದರು. ಬೌಲಿಂಗ್​​​ನಲ್ಲಿ 10 ಓವರ್​ ಮಾಡಿ, ವಿಕೆಟ್​ ಪಡೆಯಲು ವಿಫಲರಾದರು. ಮತ್ತೊಂದೆಡೆ ಬ್ಯಾಟಿಂಗ್​​ನಲ್ಲಿ ಆರಂಭಿಕನಾಗಿ ಬಡ್ತಿ ಪಡೆದರೂ, 18 ರನ್​ಗಳಿಸಿ ನಿರಾಸೆ ಮೂಡಿಸಿದರು. ಆ ಮೂಲಕ ಟೀಮ್ ಮ್ಯಾನೇಜ್​ಮೆಂಟ್​ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾದರು. ಇದು ಅಶ್ವಿನ್​ ಆಯ್ಕೆಗೆ ಹೆಚ್ಚಿನ ವರದಾನವಾಗಿದೆ ಎಂದು ವರದಿಯಾಗಿದೆ.

ಅಶ್ವಿನ್​ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿದೆ?

ಈಗಾಗಲೇ ವಿಶ್ವಕಪ್​ ತಂಡದಲ್ಲಿ ಅವಕಾಶ ಸಿಕ್ಕಿರುವ 3ನೇ ಏಕದಿನ ಪಂದ್ಯದಲ್ಲಿ ಅಶ್ವಿನ್​ಗೆ ವಿಶ್ರಾಂತಿ ನೀಡಲಾಗಿದೆ. ಮೆಗಾ ಟೂರ್ನಿಗೂ ಮುನ್ನ ಆಟಗಾರರನ್ನು ತಾಜಾತನದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ ಅಶ್ವಿನ್​ ಬೆಂಚ್​ಗೆ ಸೀಮಿತರಾದರು ಎನ್ನಲಾಗಿದೆ. ಆದರೆ ಅಂತಿಮ ಸ್ಥಾನವನ್ನು ಯಾರು ಪಡೆಯುತ್ತಾರೆ ಎಂಬುದನ್ನು ರಾಹುಲ್ ದ್ರಾವಿಡ್ ಇನ್ನೂ ನಿರ್ಧರಿಸಿಲ್ಲ. ಆದರೆ, ಅಶ್ವಿನ್​ಗೆ ಬೆಂಚ್ ಕಾಯಿಸಿದ್ದೇಕೆ? ವಿಶ್ವಕಪ್​​ ತಂಡದಲ್ಲಿ ಅವಕಾಶ ಸಿಗುತ್ತದೆಯೇ ಎಂದು ಅನುಮಾನವೂ ಎದ್ದಿದೆ.

ಏಕದಿನ ವಿಶ್ವಕಪ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್/ಆರ್​​ ಅಶ್ವಿನ್/ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ