logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಮಿತ್ ಓಪನರ್ ಆಗಿ ಆಡಿದರೆ ಲಾರಾ ಅವರ 400 ರನ್ ದಾಖಲೆ ಬ್ರೇಕ್‌ ಮಾಡ್ತಾರೆ;‌ ಕ್ಲಾರ್ಕ್

ಸ್ಮಿತ್ ಓಪನರ್ ಆಗಿ ಆಡಿದರೆ ಲಾರಾ ಅವರ 400 ರನ್ ದಾಖಲೆ ಬ್ರೇಕ್‌ ಮಾಡ್ತಾರೆ;‌ ಕ್ಲಾರ್ಕ್

Jayaraj HT Kannada

Jan 09, 2024 03:24 PM IST

ಸ್ಟೀವ್ ಸ್ಮಿತ್‌ ಆರಂಭಿಕ ಆಟಗಾರನಾಗಿ ಬ್ರಿಯಾನ್‌ ದಾಖಲೆ ಮುರಿಯಬಲ್ಲರು ಎಂದು ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

    • ಸ್ಟೀವ್ ಸ್ಮಿತ್ ಆರಂಭಿಕನಾಗಿ ಕಣಕ್ಕಿಳಿದರೆ ವಿಶ್ವದ ಅತ್ಯುತ್ತಮ ಆರಂಭಿಕ ಆಟಗಾರನಾಗುತ್ತಾರೆ. ಅಲ್ಲದೆ ಬ್ರಿಯಾನ್ ಲಾರಾ ಅವರ 400 ರನ್ ದಾಖಲೆ‌ ಮುರಿಯುತ್ತಾರೆ ಎಂದು ಮೈಕೆಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟೀವ್ ಸ್ಮಿತ್‌ ಆರಂಭಿಕ ಆಟಗಾರನಾಗಿ ಬ್ರಿಯಾನ್‌ ದಾಖಲೆ ಮುರಿಯಬಲ್ಲರು ಎಂದು ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.
ಸ್ಟೀವ್ ಸ್ಮಿತ್‌ ಆರಂಭಿಕ ಆಟಗಾರನಾಗಿ ಬ್ರಿಯಾನ್‌ ದಾಖಲೆ ಮುರಿಯಬಲ್ಲರು ಎಂದು ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ. (Getty Images)

ಅನುಭವಿ ಆಟಗಾರನೊಬ್ಬನಿಗೆ ಆಸ್ಟ್ರೇಲಿಯಾ ಕ್ರಿಕೆಟ್‌ ವಿದಾಯ ಹೇಳಿದೆ. ಅನುಭವಿ ಹಾಗೂ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಿವೃತ್ತಿ ಬಳಿಕ, ಕಾಂಗರೂ ಬಳಗವು ಮತ್ತೋರ್ವ ಪ್ರಬಲ ಆರಂಭಿಕ ಬ್ಯಾಟರ್‌ಗೆ ಹುಡುಕಾಟ ನಡೆಸುತ್ತಿದೆ. ಸತತ 13 ವರ್ಷಗಳ ಕಾಲ ಆಸೀಸ್‌ ಕ್ರಿಕೆಟ್‌ ತಂಡದಲ್ಲಿ ಆರಂಭಿಕನಾಗಿ ಅಬ್ಬರಿಸಿದ್ದ ವಾರ್ನರ್‌ ಸ್ಥಾನಕ್ಕೆ, ರಾತ್ರೋರಾತ್ರಿ ಬದಲಿ ಕ್ರಿಕೆಟಿಗನ ಹುಡುಕಾಟ ಅಸಾಧ್ಯ. ಇದೀಗ ದೇಶದ ಮಾಜಿ ಕ್ರಿಕೆಟಿಗರೊಬ್ಬರು ಆಯ್ಕೆಯೊಂದರ ಕುರಿತು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?

ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್‌, ವಿಕೆಟ್‌, ಸಿಕ್ಸ್-ಫೋರ್ ಗಳಿಸಿದವರು ಯಾರು? ಹೀಗಿದೆ ತಂಡಗಳ ಬಲಾಬಲ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ತಂಡದ ಆರಂಭಿಕನ ಸ್ಥಾನಕ್ಕೆ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಸೂಕ್ತ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಅತ್ಯುತ್ತಮ ಓಪನರ್ ಆಗಲು ಸ್ಮಿತ್‌ಗೆ ಕ್ಲಾರ್ಕ್‌ ಬೆಂಬಲ ನೀಡಿದ್ದಾರೆ. ಅಲ್ಲದೆ ಕೆಲವೇ ತಿಂಗಳೊಳಗೆ ಅವರು ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರ 400 ರನ್‌ಗಳ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿ ಮಾರ್ನಸ್ ಲಬುಶೇನ್ ಅವರಂಥ ಕ್ರೀಸ್‌ಕಚ್ಚಿ ಆಡುವ ಬ್ಯಾಟರ್‌ಗಳಿದ್ದಾರೆ. ಆದರೆ ಮುಂದಿನ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ಪರ ಸ್ಮಿತ್ ಮತ್ತು ಉಸ್ಮಾನ್ ಖವಾಜ ಇನ್ನಿಂಗ್ಸ್‌ ತೆರೆಯಬೇಕು ಎಂಬುದು ಕ್ಲಾರ್ಕ್‌ ಅವರ ಬಯಕೆ.

ಇದನ್ನೂ ಓದಿ | ನಮ್ಮವರು ಕೆಟ್ಟವರು, ನಿಮ್ಮವರು ಒಳ್ಳೆಯವರೇ; ಸೇನಾ ಮಾಧ್ಯಮಗಳ ವಿರುದ್ಧ ಸುನಿಲ್ ಗವಾಸ್ಕರ್ ಕಿಡಿ

“ಸ್ಟೀವ್ ಸ್ಮಿತ್ ಬಗ್ಗೆ ನಾನು ಈಗ ಹೇಳುತ್ತೇನೆ. ಅವರು ಬ್ಯಾಟಿಂಗ್ ತೆರೆಯಲು ಬಯಸಿದರೆ ಮತ್ತು ಅವರಿಗೆ ಆ ಅವಕಾಶ ನೀಡಿದರೆ, ಅವರು 12 ತಿಂಗಳೊಳಗೆ ವಿಶ್ವದ ನಂಬರ್‌ 1 ಟೆಸ್ಟ್ ಓಪನರ್ ಆಗುತ್ತಾರೆ. ಅವರು ಒಬ್ಬ ಉತ್ತಮ ಆಟಗಾರ. ತಾಂತ್ರಿಕವಾಗಿ ಸಾಕಷ್ಟು ಉತ್ತಮವಾಗಿದ್ದಾರೆ. ಕೆಲವೊಮ್ಮೆ ಅವರು ಎಲ್‌ಬಿಡಬ್ಲ್ಯೂ ಆಗಬಹುದು. ಆದರೆ ಅವರು ಉತ್ತಮ ಆಟಗಾರ. ಮತ್ತೆ ಈ ಹೊಸ ಸವಾಲಿಗೆ ಅವರು ಎದುರು ನೋಡುತ್ತಿರಬಹುದು” ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಹೇಳಿದ್ದಾರೆ.

“ಸ್ಮಿತ್‌ಗೆ ಹೆಚ್ಚು ಕಾಯಲು ಇಷ್ಟವಿಲ್ಲ. ವಾರ್ನರ್ ಅಥವಾ ಖವಾಜಾ ಶತಕ ಬಾರಿಸುವುದು ಅಥವಾ ಮಾರ್ನಸ್ ಲಬುಶೇನ್‌ ದ್ವಿಶತಕ ಸಿಡಿಸುವುದು ಅವರಿಗೆ ಬೇಕಿಲ್ಲ. ಅವರು ಸ್ವತಃ ದ್ವಿಶತಕ ಸಿಡಿಸಲು ಬಯಸುತ್ತಾರೆ. ಆದ್ದರಿಂದ ಅವರು ಇನ್ನಿಂಗ್ಸ್ ತೆರೆದರೆ ಚೆನ್ನಾಗಿರುತ್ತದೆ. 12 ತಿಂಗಳೊಳಗೆ ಅವರೊಬ್ಬ ಬೆಸ್ಟ್‌ ಓಪನರ್‌ ಆಗ್ತಾರೆ. ಇನ್ನೊಂದು ವಿಷಯ ಏನೆಂದರೆ, ಅವರು ಬ್ರಿಯಾನ್ ಲಾರಾ ಅವರ 400 ರನ್‌ ದಾಖಲೆಯನ್ನು ಮುರಿದರೂ ಆಶ್ಚರ್ಯಪಡಬೇಡಿ. ಏಕೆಂದರೆ ಅವರು ತುಂಬಾ ಒಳ್ಳೆಯ ಬ್ಯಾಟರ್‌” ಎನ್ನುವ ಮೂಲಕ ಕ್ಲಾರ್ಕ್ ಗಮನ ಸೆಳೆದಿದ್ದಾರೆ.‌

2004 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಿಯಾನ್ ಲಾರಾ ಅಜೇಯ 400 ರನ್‌ ಗಳಿಸಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಸಾರ್ವಕಾಲಿಕ ಗರಿಷ್ಠ ರನ್‌ ದಾಖಲೆಯಾಗಿ ಉಳಿದಿದೆ. ಇದೀಗ ಸ್ಮಿತ್‌ ಈ ದಾಖಲೆ ಬ್ರೇಕ್‌ ಮಾಡುತ್ತಾರೆ ಎಂಬ ನಂಬಿಕೆ ಕ್ಲಾರ್ಕ್ ಅವರಿಗಿದೆ.

ಸ್ಮಿತ್ ಟೆಸ್ಟ್ ದಾಖಲೆ

ಸ್ಮಿತ್ ಈವರೆಗೆ 9500 ಟೆಸ್ಟ್ ರನ್‌ ಗಳಿಸಿದ್ದಾರೆ. ಅದರಲ್ಲಿ ನಂ.4ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 61.51 ಸರಾಸರಿಯಲ್ಲಿ ಸುಮಾರು 6000 ರನ್‌ ಗಳಿಸಿದ್ದಾರೆ. 3ನೇ ಕ್ರಮಾಂಕದಲ್ಲಿ 11 ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲಿಯೂ 67.08ರ ಸರಾಸರಿಯಲ್ಲಿ 1744 ರನ್ ಗಳಿಸಿದ್ದಾರೆ. ಇಷ್ಟೇ ಅಲ್ಲದೆ 5, 6, 7 ಮತ್ತು 8ರಲ್ಲೂ ಬ್ಯಾಟ್‌ ಬೀಸಿ ಕನಿಷ್ಠ 45ಕ್ಕಿಂತ ಹೆಚ್ಚು ಸರಾಸರಿ ಕಾಯ್ದುಕೊಂಡಿದ್ದಾರೆ.‌

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ