logo
ಕನ್ನಡ ಸುದ್ದಿ  /  ಕ್ರಿಕೆಟ್  /  ವೀಕ್ಷಣೆಯಲ್ಲಿ ವಿಶ್ವದಾಖಲೆ ಬರೆದ 2023ರ ಏಕದಿನ ವಿಶ್ವಕಪ್; ಟಿವಿ ಮತ್ತು ಡಿಜಿಟಲ್ ದಾಖಲೆಗಳು ಬ್ರೇಕ್

ವೀಕ್ಷಣೆಯಲ್ಲಿ ವಿಶ್ವದಾಖಲೆ ಬರೆದ 2023ರ ಏಕದಿನ ವಿಶ್ವಕಪ್; ಟಿವಿ ಮತ್ತು ಡಿಜಿಟಲ್ ದಾಖಲೆಗಳು ಬ್ರೇಕ್

Jayaraj HT Kannada

Dec 27, 2023 06:09 PM IST

google News

ವಿಶ್ವಕಪ್‌ ಟ್ರೋಫಿ ಗೆದ್ದ ಆಸ್ಟ್ರೇಲಿಯಾ

    • ODI World Cup 2023: 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯು ವೀಕ್ಷಣೆಯಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಬ್ರೇಕ್‌ ಮಾಡಿದೆ. ಟಿವಿ ಹಾಗೂ ಡಿಜಿಟಲ್ ದಾಖಲೆಗಳನ್ನು ಧ್ವಂಸ ಮಾಡಿದೆ ಎಂದು ಐಸಿಸಿ ತಿಳಿಸಿದೆ.
ವಿಶ್ವಕಪ್‌ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
ವಿಶ್ವಕಪ್‌ ಟ್ರೋಫಿ ಗೆದ್ದ ಆಸ್ಟ್ರೇಲಿಯಾ (Bibhash Lodh, ANI)

ಭಾರತದ ಆತಿಥ್ಯದಲ್ಲಿ ನಡೆದ 2023ರ ಅದ್ಧೂರಿ ಏಕದಿನ ವಿಶ್ವಕಪ್ ಪಂದ್ಯಾವಳಿಯು (ODI World Cup 2023) ವೀಕ್ಷಣೆಯಲ್ಲೂ ದಾಖಲೆ ಬರೆದಿದೆ. ಇದುವರೆಗಿನ ಎಲ್ಲಾ ನೇರಪ್ರಸಾರ ಮತ್ತು ಡಿಜಿಟಲ್ ದಾಖಲೆಗಳನ್ನು ಮೀರಿಸಿ ಐಸಿಸಿ ಆಯೋಜಿಸುವ ಅತಿದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಈ ಕುರಿತು ಖುದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬಹಿರಂಗಪಡಿಸಿದೆ.

ವಿಶ್ವಕಪ್ 2023ರ ಪಂದ್ಯಾವಳಿಯು ನೇರಪ್ರಸಾರದಲ್ಲಿ ಒಟ್ಟು ವೀಕ್ಷಿಸಿದ ನಿಮಿಷಗಳ ಸಂಖ್ಯೆಯಲ್ಲಿ 1 ಟ್ರಿಲಿಯನ್ ಗಡಿ ಮೀರಿಸಿದೆ. ಅಂದರೆ ಒಂದು ಲಕ್ಷ ಕೋಟಿಗೂ ಹೆಚ್ಚು. ಇದು ಭಾರತದಲ್ಲಿ ಈ ಹಿಂದೆ ನಡೆದ 2011ರ ಆವೃತ್ತಿಗೆ ಹೋಲಿಸಿದರೆ 38 ಪ್ರತಿಶತ ಹೆಚ್ಚು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಈ ಹಿಂದಿನ ವಿಶ್ವಕಪ್‌ಗೆ ಹೋಲಿಕೆ ಮಾಡಿದರೆ 17 ಶೇಕಡದಷ್ಟು ಏರಿಕೆ ಕಂಡಿದೆ.

2011ರ ವಿಶ್ವಕಪ್‌ ಫೈನಲ್‌ಗಿಂತ 46 ಶೇಕಡ ಹೆಚ್ಚು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯವು ಪ್ರಪಂಚದಾದ್ಯಂತ 87.6 ಶತಕೋಟಿ (8,760 ಕೋಟಿ) ನಿಮಿಷಗಳ ಕಾಲ ವೀಕ್ಷಣೆ ಕಂಡಿದೆ. ಆ ಮೂಲಕ ಅತಿ ಹೆಚ್ಚು ವೀಕ್ಷಿಸಿದ ಐಸಿಸಿ ಪಂದ್ಯವಾಗಿ ದಾಖಲೆ ನಿರ್ಮಿಸಿದೆ. ಭಾರತದಲ್ಲಿ ನಡೆದ 2011ರ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಹೋಲಿಸಿದರೆ ಇದು 46 ಶೇಕಡದಷ್ಟು ಹೆಚ್ಚು.

ಇದನ್ನೂ ಓದಿ | Cricketers Retired: 2023ರಲ್ಲಿ ಕ್ರಿಕೆಟ್ ಲೋಕಕ್ಕೆ ವಿದಾಯ ಘೋಷಿಸಿದ ಟಾಪ್‌ ಸ್ಟಾರ್‌ ಕ್ರಿಕೆಟರ್ಸ್‌; ಇಲ್ಲಿದೆ ಪಟ್ಟಿ

ಮಹಿಳಾ ವೀಕ್ಷಕರ ಪ್ರಮಾಣದಲ್ಲೀ ಹೆಚ್ಚಳ

ಆತಿಥೇಯ ಭಾರತದಲ್ಲಿ ಡಿಸ್ನಿ ಸ್ಟಾರ್ ನೆಟ್‌ವರ್ಕ್‌ ಒಂದರಲ್ಲಿಯೇ 422 ಶತಕೋಟಿ ನಿಮಿಷಗಳ ವೀಕ್ಷಣೆಯಾಗಿದೆ. ಅಂದರೆ 42,200 ಕೋಟಿ. ಅತ್ತ ಮಹಿಳಾ ವೀಕ್ಷಕರ ಸಂಖ್ಯೆಯಲ್ಲೂ ಗಮನಾರ್ಹ ಹೆಚ್ಚಳವಾಗಿದೆ. 2011ರಲ್ಲಿ ದಾಖಲಾಗಿದ್ದ 32 ಶೆಕಡಾಕ್ಕಿಂತ 2023ರ ಆವೃತ್ತಿಯಲ್ಲಿ 34ಕ್ಕೆ ಏರಿಕೆಯಾಗಿದೆ. ಆ ಮೂಲಕ ಪಂದ್ಯಾವಳಿಯ ವೀಕ್ಷಣೆಯಲ್ಲಿ ಮಹಿಳೆಯರ ಉತ್ಸಾಹ ಮತ್ತು ಆಸಕ್ತಿ ಹೆಚ್ಚಳವಾಗಿದ್ದನ್ನು ಕಾಣಬಹುದು.

ಇಂಗ್ಲೀಷರ ಕ್ರಿಕೆಟ್‌ ವ್ಯಾಮೋಹ

ಭಾರತದ ಹೊರತಾಗಿ ವಿದೇಶಗಳಲ್ಲೂ ಪ್ರಸಾರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಒಟ್ಟು 800 ಗಂಟೆಗಳ ಲೈವ್ ಕವರೇಜ್ ವೀಕ್ಷಣೆಯಾಗಿದೆ. ಹೀಗಾಗಿ 5.86 ಶತಕೋಟಿ ನಿಮಿಷಗಳ ನೇರ ಪ್ರಸಾರ ವೀಕ್ಷಣೆ ದಾಖಲಾಗಿದೆ. ಅತ್ತ ಚಾಂಪಿಯನ್‌ ಆಸ್ಟ್ರೇಲಿಯಾದಲ್ಲಿ 602 ಗಂಟೆಗಳ ಲೈವ್ ಕವರೇಜ್‌ನಿಂದ 3.79 ಶತಕೋಟಿ ನಿಮಿಷಗಳ ವೀಕ್ಷಣೆ ದಾಖಲಾಗಿದೆ.

ಪಾಕಿಸ್ತಾನದಲ್ಲೂ ದಾಖಲೆ

ಪಾಕಿಸ್ತಾನದಲ್ಲಿಯೂ ಒಟ್ಟು 237.12 ಬಿಲಿಯನ್ ನಿಮಿಷಗಳ ಕಾಲ ಪಂದ್ಯಾವಳಿಯ ಲೈವ್ ವೀಕ್ಷಣೆಯಾಗಿದೆ.

ಇದನ್ನೂ ಓದಿ | ಕೆಣಕಿದ ಜಾನ್ಸೆನ್​ಗೆ ನಗುತ್ತಾ ತಿರುಗೇಟು ಕೊಟ್ಟ ರಾಹುಲ್; ಕೊಹ್ಲಿ ಇದ್ದಿದ್ರೆ ಕಥೆಯೇ ಬೇರೆ ಆಗ್ತಿತ್ತು ಎಂದ ಫ್ಯಾನ್ಸ್

ವಿಶ್ವಕಪ್ ಪಂದ್ಯಾವಳಿಯನ್ನು ಭಾರತದಲ್ಲಿ ಡಿಸ್ನಿ ಹಾಟ್‌ಸ್ಟಾರ್ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಿತು. ಹೀಗಾಗಿ ಮೊಬೈಲ್‌ನಲ್ಲಿ ದಾಖಲೆ ಸಂಖ್ಯೆಯ ವೀಕ್ಷಕರು ಲೈವ್‌ ವೀಕ್ಷಿಸಿದ್ದಾರೆ. ಆ ಮೂಲಕ ಏಕಕಾಲದಲ್ಲಿ ಗರಿಷ್ಠ ವೀಕ್ಷಕರ ದಾಖಲೆಯು ಪಂದ್ಯಾವಳಿಯಲ್ಲಿ ನಾಲ್ಕು ಬಾರಿ ಬ್ರೇಕ್‌ ಆಯ್ತು.

ವಿಡಿಯೋ ನೋಡಿ | Karave : ಕನ್ನಡ ಬೋರ್ಡ್ ಮರೆತ ಅಂಗಡಿ – ಮಳಿಗೆಗಳಿಗೆ ಮುತ್ತಿಗೆ ಹಾಕಿ ದಾಳಿ ನಡೆಸಿದ ಕರವೇ ಕಾರ್ಯಕರ್ತರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ