logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಾವನಂತೆ ಅಳಿಯ; 5 ವಿಕೆಟ್‌ ಕಬಳಿಸಿ ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿದ ಶಾಹೀನ್ ಅಫ್ರಿದಿ

ಮಾವನಂತೆ ಅಳಿಯ; 5 ವಿಕೆಟ್‌ ಕಬಳಿಸಿ ಶಾಹಿದ್ ಅಫ್ರಿದಿ ದಾಖಲೆ ಸರಿಗಟ್ಟಿದ ಶಾಹೀನ್ ಅಫ್ರಿದಿ

Jayaraj HT Kannada

Oct 20, 2023 08:00 PM IST

ಆಸ್ಟ್ರೇಲಿಯಾ 400 ರನ್ ಗಡಿ ದಾಟದಂತೆ ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ ನೆರವಾದರು

    • ಶಾಹೀನ್ ಅಫ್ರಿದಿ 5 ವಿಕೆಟ್‌ ಪಡೆಯುವುದರೊಂದಿಗೆ ಆಸ್ಟ್ರೇಲಿಯಾ ಆರ್ಭಟಕ್ಕೆ ಕೊನೆಯಲ್ಲಿ ಬ್ರೇಕ್‌ ಹಾಕಿದರು. ಅಲ್ಲದೆ ತಮ್ಮನ ಮಾವ ಶಾಹಿದ್‌ ಅಫ್ರಿದಿ ಮಾಡಿದ ದಾಖಲೆಯನ್ನು ಪುನರಾವರ್ತಿಸಿದರು.
ಆಸ್ಟ್ರೇಲಿಯಾ 400 ರನ್ ಗಡಿ ದಾಟದಂತೆ ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ ನೆರವಾದರು
ಆಸ್ಟ್ರೇಲಿಯಾ 400 ರನ್ ಗಡಿ ದಾಟದಂತೆ ಪಾಕಿಸ್ತಾನಕ್ಕೆ ಶಾಹೀನ್ ಅಫ್ರಿದಿ ನೆರವಾದರು (PTI)

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia vs Pakistan) ನಡುವಿನ ವಿಶ್ವಕಪ್‌ 2023ರ (ICC ODI World Cup 2023) ಪಂದ್ಯದಲ್ಲಿ ರನ್‌ ಮಳೆಯೇ ಹರಿಯಿತು. ಆರಂಭದಲ್ಲಿ ಭಾರಿ ಪ್ರಮಾಣದ ರನ್‌ ಬಿಟ್ಟುಕೊಟ್ಟ ಪಾಕ್‌ ಬೌಲರ್‌ಗಳು, ಡೆತ್‌ ಓವರ್‌ಗಳಲ್ಲಿ ಲಯ ಕಂಡುಕೊಂಡರು. ಕೊನೆಯಲ್ಲಿ ಅಬ್ಬರದಾಟ ಪ್ರದರ್ಶಿಸಿದರು. ಅದರಲ್ಲೂ ವೇಗಿ ಶಾಹೀನ್‌ ಅಫ್ರಿದಿ ಐದು ವಿಕೆಟ್‌ ಕಬಳಿಸುವುದರೊಂದಿಗೆ ದಾಖಲೆ ಬರೆದರು.

ಟ್ರೆಂಡಿಂಗ್​ ಸುದ್ದಿ

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಬಿಟ್ಟು 19 ತಂಡಗಳ ಪಟ್ಟಿ ಪ್ರಕಟ; ಇಲ್ಲಿದೆ ಆಟಗಾರರ ಸಂಪೂರ್ಣ ವಿವರ

Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಆಸ್ಟ್ರೇಲಿಯಾ ತಂಡದ ವಿರುದ್ಧ ಕೊನೆಯ 10 ಓವರ್‌ಗಳಲ್ಲಿ ಪಾಕಿಸ್ತಾನ ಮೇಲುಗೈ ಸಾಧಿಸಿತು. ಐದು ವಿಕೆಟ್‌ ಪಡೆಯುವುದರೊಂದಿಗೆ ಶಾಹೀನ್ ಅಫ್ರಿದಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಆಸೀಸ್‌ ಪರ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಜೊತೆಗೂಡಿ 259 ರನ್‌ಗಳ ಬೃಹತ್ ಜೊತೆಯಾಟವಾಡಿದರು. ಅಲ್ಲದೆ ತಲಾ ಶತಕಗಳೊಂದಿಗೆ ಅಬ್ಬರಿಸಿದರು. ಒಂದು ಹಂತದಲ್ಲಿ ಆಸ್ಟ್ರೇಲಿಯಾವು 400ಕ್ಕೂ ಅಧಿಕ ರನ್‌ ಗಳಿಸುವ ಸೂಚನೆ ನೀಡಿತ್ತು. ಆದರೆ, ಅಫ್ರಿದಿ ಆ ಜೊತೆಯಾಟವನ್ನು ಮುರಿದರು. ಅಲ್ಲದೆ ಕೊನೆಯ ಮೂರು ಓವರ್‌ಗಳಲ್ಲಿ ಮತ್ತೆ ಮೂರು ವಿಕೆಟ್‌ಗಳನ್ನು ಪಡೆದು ಐದು ವಿಕೆಟ್‌ಗಳ ಗೊಂಚಲನ್ನು ಪೂರ್ಣಗೊಳಿಸಿದರು.

ಮಾವನ ದಾಖಲೆ ಸರಿಗಟ್ಟಿದ ಅಳಿಯ

ವಿಶ್ವಕಪ್‌ನಲ್ಲಿ ಶಾಹೀನ್‌ ಅಫ್ರಿದಿ ಇದು ಎರಡನೇ ಬಾರಿಗೆ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಹಿಂದೆ 2019ರ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಅವರು 6 ವಿಕೆಟ್‌ ಕಬಳಿಸಿದ್ದರು. 6/35 ಅಂಕಿಅಂಶಗಳೊಂದಿಗೆ ದಾಖಲೆ ಬರೆದಿದ್ದರು. ಇದೀಗ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ತಮ್ಮ ಮಾವ ಶಾಹಿದ್ ಅಫ್ರಿದಿ ಬಳಿಕ ವಿಶ್ವಕಪ್‌ನಲ್ಲಿ ಎರಡು ಬಾರಿ ಐದು ವಿಕೆಟ್ ಕಬಳಿಸಿದ ಎರಡನೇ ಪಾಕಿಸ್ತಾನದ ಆಟಗಾರ ಎಂಬ ದಾಖಲೆ ಬರೆದರು.

ವಿಶ್ವಕಪ್‌ನಲ್ಲಿ ಉತ್ತಮ ಅಂಕಿ-ಅಂಶ

ಪಾಕ್‌ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ 54 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದರು. 2023ರ ವಿಶ್ವಕಪ್‌ನಲ್ಲಿ ಇದು ಇದುವರೆಗಿನ ಉತ್ತಮ ಅಂಕಿಅಂಶವಾಗಿದೆ. ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್ ಈಗ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಅವರು ನೆದರ್ಲ್ಯಾಂಡ್ಸ್ ವಿರುದ್ಧ 89 ರನ್‌ ಬಿಟ್ಟಕೊಟ್ಟು 5 ವಿಕೆಟ್‌ ಪಡೆದಿದ್ದರು. ಅಫ್ಘಾನಿಸ್ತಾನ ವಿರುದ್ಧ ಭಾರತದ ಜಸ್ಪ್ರೀತ್ ಬುಮ್ರಾ 39 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಪಡೆದಿದ್ದರು. ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ವಾರ್ನರ್-ಮಾರ್ಷ್ ಅಬ್ಬರದ ಶತಕ; ಕ್ಯಾಚ್ ಬಿಟ್ಟು ಕೆಟ್ಟ ಪಾಕ್​ಗೆ 368 ರನ್​​ಗಳ ಬೃಹತ್ ಗುರಿ

ಪಾಕ್‌ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಪಾಕಿಸ್ತಾನ ಬೌಲರ್​​ಗಳ ಚಳಿ ಬಿಡಿಸಿತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಮತ್ತು ಮಾರ್ಷ್ ದಾಖಲೆಗಳ ಶತಕ ಸಿಡಿಸಿದರು. ಇವರ ವಿಶ್ವದಾಖಲೆಯ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 50 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್​ಗಳ ಬೃಹತ್ ಮೊತ್ತ ಪೇರಿಸಿತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ