logo
ಕನ್ನಡ ಸುದ್ದಿ  /  ಕ್ರಿಕೆಟ್  /  Shahid Afridi: ಪಾಕಿಸ್ತಾನದಲ್ಲಿ ಭದ್ರತಾ ಆತಂಕ ಎಂದಿದ್ದ ಜಯ್​ ಶಾಗೆ ಶಾಹೀದ್ ಅಫ್ರಿದಿ ತಿರುಗೇಟು

Shahid Afridi: ಪಾಕಿಸ್ತಾನದಲ್ಲಿ ಭದ್ರತಾ ಆತಂಕ ಎಂದಿದ್ದ ಜಯ್​ ಶಾಗೆ ಶಾಹೀದ್ ಅಫ್ರಿದಿ ತಿರುಗೇಟು

Prasanna Kumar P N HT Kannada

Sep 08, 2023 01:17 PM IST

ಜಯ್​ ಶಾ ಮತ್ತು ಶಾಹೀದ್ ಅಫ್ರಿದಿ.

    • Shahid Afridi-Jay Shah: ಪಾಕಿಸ್ತಾನದಲ್ಲಿ ಭದ್ರತೆಯ ಆತಂಕದ ಕಾರಣ, ನಾವು ಈ ನಿರ್ಧಾರಕ್ಕೆ ಬರಲಾಯಿತು. ಅಲ್ಲದೆ, ಪ್ರಸಾರಕರು ಸಹ ಹಿಂದೇಟು ಹಾಕಿದರು. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕಳವಳಗಳಿಂದ ಉದ್ಭವಿಸಿದೆ ಎಂದು ಜಯ್​ ಶಾ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಜಯ್​ ಶಾ ಮತ್ತು ಶಾಹೀದ್ ಅಫ್ರಿದಿ.
ಜಯ್​ ಶಾ ಮತ್ತು ಶಾಹೀದ್ ಅಫ್ರಿದಿ.

ಪಾಕಿಸ್ತಾನ ದೇಶದಲ್ಲಿ ಭದ್ರತಾ ಆತಂಕದಿಂದ ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು (Asia Cup 2023) ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ (Jay Shah) ನೀಡಿದ್ದ ಹೇಳಿಕೆಗೆ ಪಾಕ್ ಮಾಜಿ ನಾಯಕ ಶಾಹೀದ್ ಅಫ್ರಿದಿ (Shahid Afridi) ತಿರುಗೇಟು ನೀಡಿದ್ದಾರೆ. ಅಂಕಿ-ಅಂಶಗಳ ಸಮೇತ ಜಯ್​ ಶಾಗೆ ತಿರುಗೇಟು ಕೊಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಬಿಟ್ಟು 19 ತಂಡಗಳ ಪಟ್ಟಿ ಪ್ರಕಟ; ಇಲ್ಲಿದೆ ಆಟಗಾರರ ಸಂಪೂರ್ಣ ವಿವರ

ಸದ್ಯ ಶ್ರೀಲಂಕಾದಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಹಾಗಾಗಿ ಏಷ್ಯಾಕಪ್ ಸೂಪರ್​ 4 ಪಂದ್ಯಗಳು ರದ್ದಾಗುವ ಸಂಭವ ಹೆಚ್ಚಾಗಿದೆ ಎನ್ನಲಾಗಿದೆ. ಈಗಾಗಲೇ ಭಾರತ-ಪಾಕಿಸ್ತಾನ ನಡುವಿನ ಪ್ರಮುಖ ಪಂದ್ಯವು ರದ್ದಾಗಿದೆ. ಇದೀಗ ಮುಂದಿನ ಪಂದ್ಯವು ಮಳೆಗೆ ಆಹುತಿ ಆಗುವ ಲಕ್ಷಣಗಳೇ ಹೆಚ್ಚಿದ್ದು ಪಿಸಿಬಿ ಅಸಮಾಧಾನ ವ್ಯಕ್ತಪಡಿಸಿತ್ತು.

ಇದಕ್ಕೆಲ್ಲಾ ಜಯ್ ಶಾ ಕಾರಣ

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಪಾಕಿಸ್ತಾನ-ಶ್ರೀಲಂಕಾದಲ್ಲೂ ಏಷ್ಯಾಕಪ್ ಆಯೋಜಿಸಬೇಕಾಯಿತು. ಇದಕ್ಕೆಲ್ಲಾ ಕಾರಣ ಬಿಸಿಸಿಐ ಅಧ್ಯಕ್ಷರೂ ಆಗಿರುವ ಜಯ್ ಶಾ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆರೋಪಿಸಿತ್ತು. ನಮಗೆ ನಷ್ಟವನ್ನೂ ಭರಿಸಬೇಕು ಎಂದು ತಿಳಿಸಿತ್ತು.

ಇದಕ್ಕೆ ಉತ್ತರಿಸಿದ್ದ ಜಯ್ ಶಾ, ಪಾಕಿಸ್ತಾನದಲ್ಲಿ ಭದ್ರತೆಯ ಆತಂಕದ ಕಾರಣ, ನಾವು ಈ ನಿರ್ಧಾರಕ್ಕೆ ಬರಲಾಯಿತು. ಅಲ್ಲದೆ, ಪ್ರಸಾರಕರು ಸಹ ಹಿಂದೇಟು ಹಾಕಿದರು. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕಳವಳಗಳಿಂದ ಉದ್ಭವಿಸಿದೆ ಎಂದು ಜಯ್​ ಶಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈಗ ಶಾಹೀದ್ ಅಫ್ರಿದಿ, ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿರುವ ಹೇಳಿಕೆಯನ್ನು ನಾನು ನೋಡಿದೆ. ಆದರೆ ಅವರಿಗೆ ಕೆಲವು ಅಂಶಗಳನ್ನು ನೆನಪಿಸಲು ಬಯಸುತ್ತೇನೆ ಎಂದಿರುವ ಅವರು, ಕಳೆದ 6 ವರ್ಷಗಳಲ್ಲಿ ಪಾಕಿಸ್ತಾನ ಯಾವೆಲ್ಲಾ ಸರಣಿಗಳನ್ನು ಆಯೋಜಿಸಿದ್ದೇವೆ. ಏನೆಲ್ಲಾ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ ಎಂದಿದ್ದಾರೆ.

  • 2017ರಲ್ಲಿ ಐಸಿಸಿ ವಿಶ್ವ ಇಲೆವೆನ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿ
  • 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸಿರೀಸ್
  • 2019ರಲ್ಲಿ ವೆಸ್ಟ್ ಇಂಡೀಸ್ (ಮಹಿಳಾ ತಂಡ), ಬಾಂಗ್ಲಾದೇಶ (ಮಹಿಳಾ ತಂಡ) ಮತ್ತು ಶ್ರೀಲಂಕಾ ವಿರುದ್ಧದ ಸರಣಿ.
  • 2020ರಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೂಪರ್ ಲೀಗ್, ಎಂಸಿಸಿ ಮತ್ತು ಜಿಂಬಾಬ್ವೆ ಎದುರು ಸರಣಿ.
  • 2021ರಲ್ಲಿ ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳು ಹಾಗೂ ಪಾಕಿಸ್ತಾನ್ ಸೂಪರ್ ಲೀಗ್.
  • 2022ರಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಅಂಡರ್​-19, ಐರ್ಲೆಂಡ್ (ಮಹಿಳಾ ತಂಡ) ಮತ್ತು ಇಂಗ್ಲೆಂಡ್​ (2 ಬಾರಿ) ವಿರುದ್ಧ ಸಿರೀಸ್​.
  • 2023ರಲ್ಲಿ ನ್ಯೂಜಿಲೆಂಡ್ (2 ಬಾರಿ), ಪಿಎಸ್​ಎಲ್, ವುಮೆನ್ಸ್ ಎಕ್ಸಿಬಿಷನ್ ಮ್ಯಾಚಸ್, ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಸರಣಿ.

ಇದೀಗ ಏಷ್ಯಾಕಪ್​ (ನೇಪಾಳ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ) ಆಯೋಜಿಸಿದ್ದೇವೆ. ಹಾಗಾಗಿ ಯಾವುದೇ ಸಂದೇಹ ಬೇಡ ಮಿಸ್ಟರ್ ಜಯ್ ಶಾ, 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಎಕ್ಸ್​ ಮೂಲಕ ಅಫ್ರಿದಿ ತಿರುಗೇಟು ನೀಡಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ