logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಬರ್ ಪಂದ್ಯ ಗೆಲ್ಲಿಸೋ ಭರವಸೆಯೇ ನೀಡಲ್ಲ; ರಾಹುಲ್, ಕೊಹ್ಲಿ ಹೇಗಾಡ್ತಾರೆ ನೋಡಿ ಎಂದ ಶಾಹಿದ್ ಅಫ್ರಿದಿ

ಬಾಬರ್ ಪಂದ್ಯ ಗೆಲ್ಲಿಸೋ ಭರವಸೆಯೇ ನೀಡಲ್ಲ; ರಾಹುಲ್, ಕೊಹ್ಲಿ ಹೇಗಾಡ್ತಾರೆ ನೋಡಿ ಎಂದ ಶಾಹಿದ್ ಅಫ್ರಿದಿ

Jayaraj HT Kannada

Nov 02, 2023 12:41 PM IST

ಬಾಬರ್ ಅಜಾಮ್ ಮತ್ತು ವಿರಾಟ್ ಕೊಹ್ಲಿ

    • Shahid Afridi on Babar Azamಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮ್ಯಾಚ್ ವಿನ್ನಿಂಗ್‌ ಪ್ರದರ್ಶನ ನೀಡುವಂತೆ ಪಾಕಿಸ್ತಾನದ ನಾಯಕ ಬಾಬರ್ ಅಜಾಮ್ ಭರವಸೆ ಮೂಡಿಸಿಲ್ಲ ಎಂದು ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಹೇಳಿದ್ದಾರೆ.
ಬಾಬರ್ ಅಜಾಮ್ ಮತ್ತು ವಿರಾಟ್ ಕೊಹ್ಲಿ
ಬಾಬರ್ ಅಜಾಮ್ ಮತ್ತು ವಿರಾಟ್ ಕೊಹ್ಲಿ

ಐಸಿಸಿ ಏಕದಿನ ವಿಶ್ವಕಪ್‌ 2023ರಲ್ಲಿ (ICC ODI World Cup 2023) ಪಾಕಿಸ್ತಾನ ತಂಡವು ನಿಧಾನವಾಗಿ ಗೆಲುವಿನ ಲಯಕ್ಕೆ ಮರಳಿದೆ. ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿರುವ ತಂಡವು, ಸೆಮೀಸ್‌ ಪ್ರವೇಶಿಸುವ ವಿಶ್ವಾಸದಲ್ಲಿದೆ. ಅದರಲ್ಲೂ ನ್ಯೂಜಿಲ್ಯಾಂಡ್ ತಂಡವನ್ನು ದಕ್ಷಿಣ ಆಫ್ರಿಕಾ ತಂಡವು ಸೋಲಿಸಿದ ಬಳಿಕ ತಂಡದ ವಿಶ್ವಾಸ ಇಮ್ಮಡಿಯಾಗಿದೆ. ಆದರೆ, ತಂಡಕ್ಕೆ ನಾಯಕ ಬಾಬರ್‌ ಅಜಾಮ್‌‌ (Babar Azam) ಫಾರ್ಮ್‌ ಇನ್ನೂ ಚಿಂತೆಯ ವಿಷಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಬಿಟ್ಟು 19 ತಂಡಗಳ ಪಟ್ಟಿ ಪ್ರಕಟ; ಇಲ್ಲಿದೆ ಆಟಗಾರರ ಸಂಪೂರ್ಣ ವಿವರ

ಪಂದ್ಯಾವಳಿಯಲ್ಲಿ ಈವರೆಗೆ 7 ಪಂದ್ಯಗಳಲ್ಲಿ ಆಡಿರುವ ಬಾಬರ್‌, ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನ ನಂಬರ್‌ ವನ್‌ ಬ್ಯಾಟರ್‌ ಎನಿಸಿರುವ ಪಾಕ್‌ ನಾಯಕನ ಕುರಿತಾಗಿ ಸಹಜವಾಗಿ ನಿರೀಕ್ಷೆಗಳು ಹೆಚ್ಚಿವೆ. ಆದರೆ, ಪ್ರಸಕ್ತ ವಿಶ್ವಕಪ್‌ನಲ್ಲಿ ಬಾಬರ್ 50 ರನ್‌ಗಳ ಗಡಿ ದಾಟಿದ ಎಲ್ಲಾ ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿದೆ ಎಂಬುದು ಅಚ್ಚರಿಯ ವಿಚಾರ. ಹೀಗಾಗಿ ತಮ್ಮ ದೇಶದ ನಾಯಕನ ಕುರಿತಾಗಿ ಪಾಕ್‌ ಮಾಜಿ ಕ್ರಿಕೆಟಿಗರೇ ಟೀಕೆ ಮಾಡುತ್ತಿದ್ದಾರೆ. ಇವರಲ್ಲಿ ಪಾಕ್‌ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಕೂಡಾ ಸೇರಿದ್ದಾರೆ.

ಪಾಕಿಸ್ತಾನ ಗೆಲ್ಲಲು ಬಾಬರ್ ಅರ್ಧಶತಕ ಸಾಲಲ್ಲ ಎಂದ ಆಫ್ರಿದಿ

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಬಾಬರ್‌ ಆಟವನ್ನು ವಿಶ್ಲೇಷಿಸಿದ್ದಾರೆ. ಪಾಕಿಸ್ತಾನವು ವಿಶ್ವಕಪ್‌ ಪಂದ್ಯಾವಳಿಯಲ್ಲಿ ಹಿಂದೆ ಬೀಳಲು ದೊಡ್ಡ ಕಾರಣವೆಂದರೆ ಬಾಬರ್ ಪ್ರದರ್ಶನ. ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಅವರ ಅಸಮರ್ಥತೆಯಿಂದಾಗಿ ಪಾಕಿಸ್ತಾನ ಸೋಲುತ್ತಿದೆ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸಿದ ಬಾಬರ್‌, ಅದನ್ನು ಶತಕವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕೊನೆಗೆ ತಂಡವು ಆ ಪಂದ್ಯದಲ್ಲೇ ಸೋತಿತು. ಹೀಗಾಗಿ ಪಂದ್ಯ ಫಿನಿಶ್‌ ಮಾಡಲು ಭಾರತದ ವಿರಾಟ್ ಕೊಹ್ಲಿ ಅಥವಾ ಕೆಎಲ್ ರಾಹುಲ್ ರೀತಿ ಬ್ಯಾಟಿಂಗ್‌ ಮಾಡುವಂತೆ ಬಾಬರ್ ಕೂಡಾ ಆಡಬೇಕು ಎಂದು ಆಫ್ರಿದಿ ಹೇಳಿದ್ದಾರೆ.

ಅಫ್ರಿದಿ ಹೇಳಿದ್ದೇನು?

ಬಾಬರ್ ರನ್ ಗಳಿಸುವುದು ಮತ್ತು ಪಂದ್ಯವನ್ನು ಫಿನಿಶ್‌ ಮಾಡುವುದು ಎರಡು ವಿಭಿನ್ನ ವಿಷಯಗಳು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಏನು ಮಾಡುತ್ತಾರೆ ಎಂಬುದನ್ನು ನೋಡಿ. ಅವರು ತಮ್ಮ ರನ್ ಗಳಿಸುತ್ತಾರೆ. ಅದರ ಜೊತೆಗೆ ತಂಡಕ್ಕಾಗಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆ. ನಾನು ಬಾಬರ್ ಅಭಿಮಾನಿ. ಬಾಬರ್ ಶ್ರೇಷ್ಠ ಆಟಗಾರ ಎಂದು ನಾವು ಹೇಳುತ್ತೇವೆ. ಆ ಮಟ್ಟಕ್ಕೆ ತಲುಪುವುದು ದೊಡ್ಡ ವಿಷಯ. ಆದರೆ ಆ ಮಟ್ಟವನ್ನು ತಲುಪಿದ ನಂತರ ಅದೇ ಪ್ರದರ್ಶನವನ್ನು ಕಾಪಾಡಿಕೊಳ್ಳುವುದು ಕಷ್ಟ. ಬಾಬರ್ ಅಜಾಮ್ ಬ್ಯಾಟಿಂಗ್‌ಗೆ ಮೈದಾನಕ್ಕಿಳಿದಾಗ, ಅವರು ಪಂದ್ಯ ಗೆಲ್ಲಿಸುತ್ತಾರೆ ಎಂಬ ಭಾವನೆ ನಮಗೆ ಬರಬೇಕು. ಆದರೆ ಆ ಭಾವನೆ ಬರುವುದಿಲ್ಲ. ಅವರು 50-60 ರನ್ ಮಾತ್ರ ಗಳಿಸುತ್ತಾರೆ ಎಂದು ನಮಗೆ ತಿಳಿದಿದೆ. ಆದರೆ ಅವರು ಪಂದ್ಯವನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಅಫ್ರಿದಿ SAMAA ಟಿವಿಯಲ್ಲಿ ಹೇಳಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ