logo
ಕನ್ನಡ ಸುದ್ದಿ  /  ಕ್ರಿಕೆಟ್  /  Steve Smith: ಎರಡೇ ನಿಮಿಷವೆಂದು ಗಂಟೆಗಟ್ಟಲೆ ಕಾಯಿಸಿದ್ರು; ಮೊದಲ ಬಾರಿಗೆ ಬಿಯರ್ ಕುಡಿಯದೇ ಬಂದೆ; ಇಂಗ್ಲೆಂಡ್ ವಿರುದ್ಧ ಸ್ಟೀವ್ ಸ್ಮಿತ್ ಬೇಸರ

Steve Smith: ಎರಡೇ ನಿಮಿಷವೆಂದು ಗಂಟೆಗಟ್ಟಲೆ ಕಾಯಿಸಿದ್ರು; ಮೊದಲ ಬಾರಿಗೆ ಬಿಯರ್ ಕುಡಿಯದೇ ಬಂದೆ; ಇಂಗ್ಲೆಂಡ್ ವಿರುದ್ಧ ಸ್ಟೀವ್ ಸ್ಮಿತ್ ಬೇಸರ

Prasanna Kumar P N HT Kannada

Aug 13, 2023 05:23 PM IST

ಇಂಗ್ಲೆಂಡ್ ವಿರುದ್ಧ ಸ್ಟೀವ್ ಸ್ಮಿತ್ ಬೇಸರ.

    • Steve Smith: ಆ್ಯಷಸ್​ ಸರಣಿ ಮುಕ್ತಾಯದ ನಂತರ ನಡೆದ ಘಟನೆಗೆ ಸಂಬಂಧಿಸಿ​ ಸ್ಟೀವ್​ ಸ್ಮಿತ್ (Steve Smith)​ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇಂಗ್ಲೆಂಡ್​ ಆಟಗಾರರ ನಡೆಯಿಂದ ನಾನು ಮೊದಲ ಬಾರಿಗೆ ಬಿಯರ್​ ಕುಡಿಯದೆ ಹೊರ ಬಂದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸ್ಟೀವ್ ಸ್ಮಿತ್ ಬೇಸರ.
ಇಂಗ್ಲೆಂಡ್ ವಿರುದ್ಧ ಸ್ಟೀವ್ ಸ್ಮಿತ್ ಬೇಸರ.

2023ರ ರೋಚಕ ಕ್ರಿಕೆಟ್​ ಸರಣಿಗಳಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ (England vs Australia) ನಡುವಿನ ಪ್ರತಿಷ್ಠಿತ ಆ್ಯಷಸ್ ಸರಣಿಯೂ (The Ashes 2023) ಒಂದು. ಇತ್ತೀಚೆಗಷ್ಟೇ ಈ ಸರಣಿಯು 2-2ರಲ್ಲಿ ಮುಕ್ತಾಯಗೊಂಡಿತು. ಮೊದಲ ಎರಡು ಟೆಸ್ಟ್​​ಗಳಲ್ಲಿ ಆಸ್ಟ್ರೇಲಿಯಾ ಗೆದ್ದು ಮುನ್ನಡೆ ಪಡೆದಿತ್ತು. ಆದರೆ ಉಳಿದ 3 ಪಂದ್ಯಗಳಲ್ಲಿ ಆಸಿಸ್ ನೀಡಿದ ಅದ್ಭುತ ಪ್ರದರ್ಶನದ ಹೊರತಾಗಿಯೂ ಇಂಗ್ಲೆಂಡ್ ಎರಡಲ್ಲಿ ಜಯಿಸಿತ್ತು. 4ನೇ ಪಂದ್ಯವು ಡ್ರಾ ಸಾಧಿಸಿತು.

ಟ್ರೆಂಡಿಂಗ್​ ಸುದ್ದಿ

ಇದು ಧೋನಿಯ ಕೊನೆಯ ಐಪಿಎಲ್ ಎಂದು ಭಾವಿಸಬೇಡಿ; ಆರ್‌ಸಿಬಿ ಗೆಲುವಿಗೆ ಸಿಎಸ್‌ಕೆ ಅಡ್ಡಿಯಾಗೋದು ಪಕ್ಕಾ ಎಂದ ರಾಬಿನ್ ಉತ್ತಪ್ಪ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಮಳೆಯಿಂದ ರದ್ದಾದರೆ ಬೆಂಗಳೂರು ಎಲಿಮನೇಟ್‌; 5 ಓವರ್‌ ಪಂದ್ಯ ನಡೆದರೆ ಪ್ಲೇಆಫ್‌ ಲೆಕ್ಕಾಚಾರವೇನು?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

2023ರ ಆ್ಯಷಸ್ ಸರಣಿಯು 2-2ರಲ್ಲಿ ಡ್ರಾನಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ 2021ರಲ್ಲಿ ಆ್ಯಷಸ್​ ಅನ್ನು 4-0 ಅಂತರದಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ ತನ್ನಲ್ಲೇ ಸರಣಿಯನ್ನು ಉಳಿಸಿಕೊಂಡಿತು. ಆದರೆ ಸರಣಿ ಮುಕ್ತಾಯದ ನಂತರ ನಡೆದ ಘಟನೆಗೆ ಸಂಬಂಧಿಸಿ ಆಸಿಸ್​ ಬ್ಯಾಟರ್​ ಸ್ಟೀವ್​ ಸ್ಮಿತ್ (Steve Smith)​ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇಂಗ್ಲೆಂಡ್​ ಆಟಗಾರರ ನಡೆಯಿಂದ ನಾನು ಮೊದಲ ಬಾರಿಗೆ ಬಿಯರ್​ ಕುಡಿಯದೆ ಹೊರ ಬಂದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಟೀವ್ ಸ್ಮಿತ್ ಆಕ್ರೋಶ

ಆ್ಯಷಸ್​ ಸರಣಿ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಒಟ್ಟಿಗೆ ಬಿಯರ್ ಕುಡಿದು ಸಂಭ್ರಮಿಸುವುದು ಸಂಪ್ರದಾಯ. ಆದರೆ, ಓವಲ್ (ಅಂತಿಮ) ಟೆಸ್ಟ್ ಬಳಿಕ ಇಂಗ್ಲೆಂಡ್ ಆಟಗಾರರು ಎರಡು ನಿಮಿಷ ಎಂದು ಹೇಳಿ ಗಂಟೆಗಟ್ಟಲ್ಲೇ ಡ್ರೆಸ್ಸಿಂಗ್​ನಿಂದ ಹೊರ ಬರದ ಕಾರಣ ಈ ಬಾರಿ ಬಿಯರ್ ಪಾರ್ಟಿ ನಡೆಯಲಿಲ್ಲ. ಇತ್ತೀಚೆಗಷ್ಟೇ ಆಸೀಸ್ ಮಾಜಿ ನಾಯಕ ಹಾಗೂ ಹಾಲಿ ಟೆಸ್ಟ್ ಉಪನಾಯಕ ಸ್ಟೀವ್ ಸ್ಮಿತ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎರಡೇ ನಿಮಿಷ ಎಂದರು’

ಪಂದ್ಯದ ನಂತರದ ಇಂಗ್ಲೆಂಡ್​​​ ತಂಡ ವರ್ತನೆಯನ್ನು ಟೀಕಿಸಿದ ಸ್ಮಿತ್, ಅಂದು ನಿಜವಾಗಿ ಏನಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ನಾವು ಅವರಿಗೆ ಕಾಯುತ್ತಿದ್ದೆವು. ಆದರೆ, ಬಹಳ ಹೊತ್ತಾದರೂ ಬರಲಿಲ್ಲ. ಹಾಗಾಗಿ ನಾವು ಇಂಗ್ಲೆಂಡ್​ ತಂಡದ ಡ್ರೆಸ್ಸಿಂಗ್​ ರೂಮ್​ಗೆ ಹೋಗಿ ಬಾಗಿಲು ತಟ್ಟಿದೆವು. ಆಗ ಬಾಗಿಲು ತೆಗೆದ ಬೆನ್​ಸ್ಟೋಕ್ಸ್​, ಎರಡೇ ಎರಡು ನಿಮಿಷದಲ್ಲಿ ಬರುತ್ತೇವೆ ಎಂದು ಹೇಳಿದ್ದರು. ಆಗ ಮತ್ತೆ ಅವರಿಗಾಗಿ ಕಾದೆವು ಎಂದು ಸ್ಮಿತ್ ಹೇಳಿದ್ದಾರೆ.

‘ಇದೇ ಮೊದಲ ಬಾರಿಗೆ ಬಿಯರ್ ಕುಡ್ದಿಲ್ಲ’

ಎರಡು ನಿಮಿಷ ಎಂದು ಹೇಳಿದವರೂ, ಎರಡು ಗಂಟೆಗಳಾದರೂ ಬರಲಿಲ್ಲ. ಹಾಗಾಗಿ ಇನ್ನು ಕಾಯುವುದರಲ್ಲಿ ಯಾವುದೇ ಅರ್ಥ ಇಲ್ಲ ಎನಿಸಿತು. ಹಾಗಾಗಿ ಬಿಯರ್ ಕುಡಿಯಬೇಕಾ ಎಂಬ ಪ್ರಶ್ನೆ ಕಾಡಿತು. ನಾವು ನಮ್ಮ ಮಾನ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಅಲ್ಲಿಂದ ಹೊರಟು ಹೋದೆವು. ನನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಆ್ಯಷಸ್​ ಸರಣಿ ನಂತರ ಬಿಯರ್​ ಪಾರ್ಟಿ ನಡೆದಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಸ್ಮಿತ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆನ್​ಸ್ಟೋಕ್ಸ್​ ಪ್ರತಿಕ್ರಿಯೆ

ಈ ಬಗ್ಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ಆಟಗಾರನಿಗೆ ಅತ್ಯಂತ ಮುಖ್ಯವಾದ ಕೆಲವೊಂದರಲ್ಲಿ ಸಿಲುಕಿಕೊಂಡಿದ್ದ. ಹಾಗಾಗಿ ಆ ಕೆಲಸ ಮುಗಿಸಿ ಬರಲು ತುಂಬಾ ತಡವಾಯಿತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಆದರೆ, ಅಂದು ರಾತ್ರಿ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ನಡೆಸುವುದಾಗಿ ಆಸ್ಟ್ರೇಲಿಯಾ ತಂಡಕ್ಕೆ ಹೇಳಿದ್ದೆ' ಎಂದಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಸ್ಟೀವ್​ ಸ್ಮಿತ್​ ಪಾಲ್ಗೊಂಡಿರಲಿಲ್ಲ.

ಸ್ಟೋಕ್ಸ್​ಗೆ ಸ್ಮಿತ್​ ಪ್ರತಿಕ್ರಿಯೆ

ಅಂದಿನ ರಾತ್ರಿ ನೈಟ್​ ಕ್ಲಬ್​​​ನಲ್ಲಿ ನಡೆದ ಪಾರ್ಟಿಗೆ ಆಸ್ಟ್ರೇಲಿಯಾದ ಕೆಲ ಆಟಗಾರರು, ಹೋಗಿದ್ದರು ಎಂಬುದನ್ನು ನಾನು ಕೇಳಿದ್ದೆ. ಆದರೆ ನಾನು ಅಷ್ಟೊತ್ತಿಗೆ ಮನೆಗೆ ಹೊರಟು ಬಂದಿದ್ದೆ. ಒಂದು ಅದ್ಭುತ ಸರಣಿಯ ನಂತರ ಬಿಯರ್ ಕುಡಿಯದೆ ಮನೆಗೆ ಬಂದಿದ್ದು ಇದೇ ಮೊದಲ ಸಲ. ಇದೊಂದು ಅವಮಾನಕಾರ ಸಂಗತಿ ಎಂದು ಸ್ಮಿತ್, ಬೆನ್​ಸ್ಟೋಕ್ಸ್​​ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ