logo
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನ ಕ್ರಿಕೆಟ್ ವಿಶ್ವಕಪ್ ಸೋಲು ಈಗಲೂ ಕಾಡುತ್ತಿದೆ; ಮತ್ತೊಮ್ಮೆ ನೋವು ಹಂಚಿಕೊಂಡ ರೋಹಿತ್ ಶರ್ಮಾ

ಏಕದಿನ ಕ್ರಿಕೆಟ್ ವಿಶ್ವಕಪ್ ಸೋಲು ಈಗಲೂ ಕಾಡುತ್ತಿದೆ; ಮತ್ತೊಮ್ಮೆ ನೋವು ಹಂಚಿಕೊಂಡ ರೋಹಿತ್ ಶರ್ಮಾ

Prasanna Kumar P N HT Kannada

Jan 20, 2024 10:30 AM IST

ರೋಹಿತ್ ಶರ್ಮಾ.

    • Rohit Sharma: ನನಗೆ ಏಕದಿನ ಕ್ರಿಕೆಟ್​ ವಿಶ್ವಕಪ್ ಎಲ್ಲಕ್ಕಿಂತ ದೊಡ್ಡ ಬಹುಮಾನವಾಗಿದೆ. ಟಿ20 ವಿಶ್ವಕಪ್ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ತುಂಬಾ ಮುಖ್ಯವೆಂದು ಪರಿಗಣಿಸುವುದಿಲ್ಲ ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ.
ರೋಹಿತ್ ಶರ್ಮಾ.

2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ (ODI Cricket World Cup 2023) ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತು ಸರಿಯಾಗಿ 2 ತಿಂಗಳು ಕಳೆದಿವೆ. ಆದರೆ ನವೆಂಬರ್ 19ರ ರಾತ್ರಿ ಅನುಭವಿಸಿದ ಹೃದಯ ವಿದ್ರಾವಕ ಸೋಲಿನಿಂದ ರೋಹಿತ್ ಶರ್ಮಾ (Rohit Sharma) ಇನ್ನೂ ಹೊರಬಂದಿಲ್ಲ. ಸದ್ಯ ಕ್ರಿಕೆಟ್​ಗೆ ಮರಳಿ ಕೇಪ್​​ಟೌನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸಿದ್ಧ ಟೆಸ್ಟ್ ಗೆಲುವಿಗೆ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದ್ದಾರೆ. ಆದರೂ ವಿಶ್ವಕಪ್ ಸೋಲಿನ ನೋವು ಕಾಡುತ್ತಲೇ ಇದೆ.

ಟ್ರೆಂಡಿಂಗ್​ ಸುದ್ದಿ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

2023ರ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ವಿಶ್ವಕಪ್ ಸೋಲಿನ ನಂತರ ಅನುಭವಿಸಿದ 'ಕಠಿಣ ಸಮಯ'ವನ್ನು ಉದ್ದೇಶಿಸಿ ಮಾತನಾಡಿದ್ದರು. ತಾನು ಎದುರಿಸಿದ ನೋವಿನ ಕುರಿತು ವಿವರಿಸಿದ್ದರು. ಇದೀಗ ಮತ್ತೊಮ್ಮೆ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಈಗಲೂ ವಿಶ್ವಕಪ್​ ಗೆಲ್ಲದ ಕನಸು ತೀವ್ರ ಕಾಡುತ್ತಿದೆ ಎಂದಿದ್ದಾರೆ. ಈ ಬಗ್ಗೆ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಕ್ರಿಕೆಟ್ ಪಂದ್ಯದ ನಂತರ ಕಾಮೆಂಟೇಟರ್ಸ್ ಜೊತೆಗೆ ಹೇಳಿದ್ದಾರೆ.

ನೋವು ಕಾಡುತ್ತಲೇ ಇದೆ ಎಂದ ರೋಹಿತ್

ಅಹ್ಮದಾಬಾದ್​ನಲ್ಲಿ ವಿಶ್ವಕಪ್ ಸೋಲಿನ ನಂತರ ನೋವಿನಿಂದ ಹೊರಬರಲು ಏನೆಲ್ಲಾ ಮಾಡಿದ್ದೀರಿ? ಮತ್ತೆ ಸಹಜ ಸ್ಥಿತಿಗೆ ಬರಲು ಏನೆಲ್ಲಾ ಮಾಡಿದ್ದೀರಿ ಎಂದು ಕಾಮೆಂಟೇಟರ್ಸ್, ರೋಹಿತ್​ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರೋಹಿತ್, 50 ಓವರ್​​ಗಳ ವಿಶ್ವಕಪ್​ ಗೆಲ್ಲುವ ಮಹತ್ವ ಎಷ್ಟಿತ್ತು ಎಂಬುದನ್ನು ತಿಳಿಸಿದ್ದಾರೆ. ನೋಡಿ, ನಾನು ಈಗ ಅದರ ಬಗ್ಗೆ ಯೋಚಿಸಲು ಬಯಸುವುದಿಲ್ಲ. ಖಂಡಿತವಾಗಿಯೂ (ಅವರ ಮುಖದ ಮೇಲೆ ನಿರಾಶೆಯ ಭಾವ) ನೋವಿದೆ ಎಂದು ಹೇಳಿದ್ದಾರೆ.

‘ಟಿ20 ವಿಶ್ವಕಪ್​ ಅನ್ನು ಮುಖ್ಯವೆಂದು ಪರಿಗಣಿಸಲ್ಲ’

ಮಾತು ಮುಂದುವರೆಸಿದ ರೋಹಿತ್​, ನನಗೆ 50 ಓವರ್​​ಗಳ ವಿಶ್ವಕಪ್ ಎಲ್ಲಕ್ಕಿಂತ ದೊಡ್ಡ ಬಹುಮಾನವಾಗಿದೆ. ಟಿ20 ವಿಶ್ವಕಪ್ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ತುಂಬಾ ಮುಖ್ಯವೆಂದು ನಾನು ಪರಿಗಣಿಸುವುದಿಲ್ಲ. ಏಕೆಂದರೆ ನಾವು ಕ್ರಿಕೆಟಿಗರಾಗಿ ಬೆಳೆದಿದ್ದೇ 50 ಓವರ್​​ಗಳ ವಿಶ್ವಕಪ್ ನೋಡುತ್ತಾ. ಅದು ಭಾರತದಲ್ಲೇ ಟೂರ್ನಿ ನಡೆದಾಗ ಗೆಲ್ಲುವುದು ಮತ್ತಷ್ಟು ದೊಡ್ಡ ವಿಷಯವಾಗಿ ಪರಿಣಮಿಸುತ್ತದೆ. ನಾವು ಪ್ರಯತ್ನಿಸಿದೆವು. ಆದರೆ ದುರದೃಷ್ಟವಶಾತ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

‘ಟಿ20 ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ’

ಟಿ20 ವಿಶ್ವಕಪ್ ಮುಂದೆ ಇರಬಹುದು. ನಮಗಿನ್ನೂ ಅವಕಾಶ ಇದೆ. ಆದರೆ ಏಕದಿನ ವರ್ಲ್ಡ್​ಕಪ್ ಗೆದ್ದಿಲ್ಲವಲ್ಲ ಎಂಬ ಆ ನೋವು ಈಗಲೂ ಕಾಡುತ್ತಿರುತ್ತದೆ. ಅಂದು ಇಡೀ ತಂಡ ಅಸಮಾಧಾನಗೊಂಡಿತ್ತು. ಅಭಿಮಾನಿಗಳು ಸಹ ಅಸಮಾಧಾನಗೊಂಡಿದ್ದರು. ಆದರೆ, ಈಗ ನಮಗೆ ಸಿಕ್ಕಿರುವ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ಟಿ20 ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ರೋಹಿತ್ ಪಂದ್ಯದ ನಂತರ ಅಧಿಕೃತ ಪ್ರಸಾರಕರಿಗೆ ತಿಳಿಸಿದರು.

‘ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ’

ಅಫ್ಘಾನಿಸ್ತಾನ ವಿರುದ್ಧ 69 ಎಸೆತಗಳಲ್ಲಿ 121 ರನ್ ಗಳಿಸಿದ ಭಾರತದ ನಾಯಕ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಅವರ 5 ನೇ ಟಿ20ಐ ಶತಕ. ಈ ಆಕ್ರಮಣಕಾರಿ ಆಟದಲ್ಲಿ ಗಮನ ಸೆಳೆದ ಅಂಶಗಳೆಂದರೆ ರಿವರ್ಸ್ ಸ್ವೀಪ್ ಮತ್ತು ಸ್ವಿಚ್ ಹಿಟ್​​ಗಳು. ಇನ್ನು ಈ ಬಗ್ಗೆ ಮಾತನಾಡಿದ ಹಿಟ್​ಮ್ಯಾನ್​, ಕಳೆದ ಎರಡು ವರ್ಷಗಳಿಂದ ಈ ಶಾಟ್​ ಆಡಲು ಪ್ರಯತ್ನಿಸುತ್ತಿದ್ದೇನೆ. ಅದರ ಮೇಲೆಯೇ ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ. ಅದು ಫಲ ಕೊಟ್ಟಿದೆ ಎಂದು ಹೇಳುವ ಮೂಲಕ ಖುಷಿಪಟ್ಟರು.

ನಾನು ಆ ಶಾಟ್​​ಗಳನ್ನು ಹೊಡೆಯಲು ಸಾಕಷ್ಟು ಅಭ್ಯಾಸ ಮಾಡುತ್ತಿದ್ದೇನೆ. ಚೆಂಡು ತಿರುವು ಪಡೆಯುವ ಸಂದರ್ಭದಲ್ಲಿ ಬೌಲರ್​​ಗಳ ಮೇಲೆ ಒತ್ತಡ ಹೇರಲು ನೇರವಾಗಿ ಹೊಡೆಯಲು ಸಾಧ್ಯವಾಗದಿದ್ದರೆ, ಇಂತಹ ಮಾರ್ಗಗಳ ಮೂಲಕ ರನ್​ ಗಳಿಸಬೇಕು. ನೀವು ವಿಭಿನ್ನವಾದದ್ದನ್ನು ಪ್ರಯತ್ನಿಸಬೇಕು. ರಿವರ್ಸ್ ಸ್ವೀಪ್ ಮತ್ತು ಸ್ವೀಪ್ ಶಾಟ್​​ಗಳನ್ನು ನಾನು ಕಳೆದ ಎರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ. ನಾನು ಟೆಸ್ಟ್​ ಕ್ರಿಕೆಟ್​ನಲ್ಲಿ ಒಂದೆರಡು ಬಾರಿ ಕಾರ್ಯಗತಗೊಳಿಸಿದ್ದೇನೆ ಎಂದರು.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ