logo
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ಟಿ20 ನಾಯಕನಾಗಿ ಆರ್​ಸಿಬಿ ಮಾಜಿ ಆಟಗಾರ ನೇಮಕ; ಏಷ್ಯಾಕಪ್, ವಿಶ್ವಕಪ್​ನಿಂದ ಹೊರಬಿದ್ದಿದ ಸ್ಪಿನ್ನರ್​ಗೆ ಬಡ್ತಿ

ಶ್ರೀಲಂಕಾ ಟಿ20 ನಾಯಕನಾಗಿ ಆರ್​ಸಿಬಿ ಮಾಜಿ ಆಟಗಾರ ನೇಮಕ; ಏಷ್ಯಾಕಪ್, ವಿಶ್ವಕಪ್​ನಿಂದ ಹೊರಬಿದ್ದಿದ ಸ್ಪಿನ್ನರ್​ಗೆ ಬಡ್ತಿ

Prasanna Kumar P N HT Kannada

Dec 30, 2023 03:16 PM IST

ಶ್ರೀಲಂಕಾ ಟಿ20 ನಾಯಕನಾಗಿ ವನಿಂದು ಹಸರಂಗ ನೇಮಕ.

    • Sri Lanka Cricket Team: ಶ್ರೀಲಂಕಾ ಕ್ರಿಕೆಟ್ ತಂಡದ ನೂತನ ಟಿ20  ನಾಯಕನಾಗಿ ವನಿಂದು ಹಸರಂಗ ನೇಮಕಗೊಂಡಿದ್ದಾರೆ. ಹಾಗೆಯೆ ಏಕದಿನ ತಂಡದ ನಾಯಕನಾಗಿ ಕುಸಾಲ್ ಮೆಂಡೀಸ್ ಆಯ್ಕೆ ಆಗಿದ್ದಾರೆ.
ಶ್ರೀಲಂಕಾ ಟಿ20 ನಾಯಕನಾಗಿ ವನಿಂದು ಹಸರಂಗ ನೇಮಕ.
ಶ್ರೀಲಂಕಾ ಟಿ20 ನಾಯಕನಾಗಿ ವನಿಂದು ಹಸರಂಗ ನೇಮಕ.

ಮುಂದಿನ ತಿಂಗಳು ಜಿಂಬಾಬ್ವೆ ವಿರುದ್ಧದ ಚುಟುಕು ಸರಣಿಗೂ ಮುನ್ನ ಡಿಸೆಂಬರ್ 30ರಂದು ಶ್ರೀಲಂಕಾ ಟಿ20 ತಂಡದ ನೂತನ ನಾಯಕನಾಗಿ ಆಲ್‌ರೌಂಡರ್ ವನಿಂದು ಹಸರಂಗ (Wanindu Hasaranga) ಅವರನ್ನು ನೇಮಿಸಲಾಗಿದೆ. ಹಾಗೆಯೇ ಬ್ಯಾಟರ್ ಕುಸಾಲ್ ಮೆಂಡಿಸ್ (Kusal Mendis) ಅವರು ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಚರಿತ್ ಅಸಲಂಕಾ (Charith Asalanka) ಅವರು ಎರಡು ಸರಣಿಗಳಿಗೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ (Sri Lanka Cricket) ಹೇಳಿಕೆಯಲ್ಲಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

IPL 2024: ಅತಿ ಹೆಚ್ಚು ಸಿಕ್ಸ್ ಸೇರಿ ಆರ್‌ಸಿಬಿ-ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ ದಾಖಲೆಗಳಿವು

ಸತತ 6 ಸೋಲಿನಿಂದ ಸತತ 6 ಗೆಲುವಿನ ತನಕ; ಅಸಾಧ್ಯವನ್ನೂ ಸಾಧಿಸಿದ ಆರ್‌ಸಿಬಿ ಪ್ಲೇಆಫ್ ಹಾದಿಯೇ ರೋಚಕ

ಈ ಹಿಂದೆ ತಂಡದ ನಾಯಕರಾಗಿದ್ದ ದಸುನ್ ಶನಕ ಅವರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್​, ಆರ್​ಸಿಬಿ ಮಾಜಿ ಆಟಗಾರ ಹಸರಂಗಗೆ ಪಟ್ಟ ಕಟ್ಟಲು ನಿರ್ಧರಿಸಿದೆ. ಈ ಬಗ್ಗೆ ವರದಿಯಾಗಿದೆ. ಖಾಯಂ ನಾಯಕ ದಸುನ್ ಶನಕ ಏಕದಿನ ವಿಶ್ವಕಪ್​ನಲ್ಲಿ ಗಾಯಗೊಂಡು ಟೂರ್ನಿಯ ಮಧ್ಯದಲ್ಲೇ ಹೊರಬಿದ್ದರು. ಬಳಿಕ ತಂಡವನ್ನು ಕುಸಾಲ್ ಮೆಂಡೀಸ್ ಮುನ್ನಡೆಸಿದ್ದರು.

ಗಾಯಗೊಂಡಿದ್ದ ಹಸರಂಗ ಕಂಬ್ಯಾಕ್

2023ರ ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಗಾಯಗೊಂಡ ನಂತರ ಹಸರಂಗ ಅವರು, ಈ ವರ್ಷದ ನಡೆದ ಪ್ರತಿಷ್ಠಿತ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಿಂದ ಹೊರ ಬಿದ್ದಿದ್ದರು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಪುನರಾಗಮನ ಮಾಡುತ್ತಿದ್ದಾರೆ. ಪ್ರಾಥಮಿಕ ನಾಯಕ ದಸುನ್ ಶನಕ ಅವರಿಂದ ಈ ನಾಯಕತ್ವವನ್ನು ಆರ್​ಸಿಬಿ ಮಾಜಿ ಆಟಗಾರ ಹಸರಂಗ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ವಿಶ್ವಕಪ್​​ನಲ್ಲಿ ನೀರಸ ಪ್ರದರ್ಶನ

ತೊಡೆಯ ಗಾಯದಿಂದಾಗಿ ಶನಕ ಏಕದಿನ ವಿಶ್ವಕಪ್ ಟೂರ್ನಿಯ ಮಧ್ಯದಲ್ಲೇ ಹೊರ ಬಿದ್ದರು. ನಂತರ ಮೆಂಡಿಸ್ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೆಲವು ಪಂದ್ಯಗಳಿಗೆ ನಾಯಕತ್ವ ವಹಿಸಿಕೊಂಡರು. ಟೂರ್ನಿಯಲ್ಲಿ ಅತ್ಯಂತ ನಿರಾಶದಾಯಕ ಪ್ರದರ್ಶನ ತೋರಿತು. ಆಡಿದ 9 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿತು. ಎಸ್‌ಎಲ್‌ಸಿ ಉಪುಲ್ ತರಂಗ ನೇತೃತ್ವದ ಹೊಸ ಆಯ್ಕೆ ಸಮಿತಿಯನ್ನು ಹೆಸರಿಸಿದೆ. ಇದರಲ್ಲಿ ಅಜಂತಾ ಮೆಂಡಿಸ್ ಸಹ ಇದ್ದಾರೆ.

ಜನವರಿ 6ರಿಂದ ತವರಿನಲ್ಲಿ ಸರಣಿ ಆರಂಭ

ಮಾಜಿ ನಾಯಕ ಮತ್ತು ಬ್ಯಾಟಿಂಗ್ ಶ್ರೇಷ್ಠ ಸನತ್ ಜಯಸೂರ್ಯ ಅವರನ್ನು ಒಂದು ವರ್ಷದ ಒಪ್ಪಂದದ ಅಡಿಯಲ್ಲಿ ಕ್ರಿಕೆಟ್ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಜನವರಿ 14 ರಿಂದ ಆರಂಭವಾಗುವ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ವನಿಂದು ಹಸರಂಗ ಶ್ರೀಲಂಕಾ ನಾಯಕನಾಗಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಜೂನ್​​ನಲ್ಲಿ ನಡೆಯಲಿರುವ ಟಿ20 ಸರಣಿಗೂ ಹಸರಂಗ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಟಿ20 ಸರಣಿಗೂ ಮುನ್ನ ಜನವರಿ 3ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಹೈದರಾಬಾದ್ ಪಾಲಾದ ಹಸರಂಗ

ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ, ಸ್ಪಿನ್​ ಆಲ್​ರೌಂಡರ್​ ವನಿಂದು ಹಸರಂಗ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 1.5 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಹಸರಂಗನನ್ನು ಅಷ್ಟೇ ಮೊತ್ತಕ್ಕೆ ಸನ್​ರೈಸರ್ಸ್ ಹೈದರಾಬಾದ್ ತನ್ನ ತೆಕ್ಕೆಗೆ ಹಾಕಿಕೊಂಡಿತು. ಈ ಹಿಂದೆ ಅವರು ಆರ್​ಸಿಬಿ ಫ್ರಾಂಚೈಸಿ ಪರ ಕಣಕ್ಕಿಳಿದಿದ್ದರು. ಆಗ ಬರೋಬ್ಬರಿ 10.75 ಕೋಟಿ ರೂಪಾಯಿ ಪಡೆದಿದ್ದರು.

ಏಕದಿನ ಸರಣಿ

ಜನವರಿ 6 ರಂದು ಮೊದಲನೇ ಏಕದಿನ, ಕೊಲಂಬೊ

ಜನವರಿ 8 ರಂದು ಎರಡನೇ ಏಕದಿನ, ಕೊಲಂಬೊ

ಜನವರಿ 11 ರಂದು ಮೂರನೇ ಏಕದಿನ, ಕೊಲಂಬೊ

ಟಿ20 ಸರಣಿ

ಜನವರಿ 14 ರಂದು ಮೊದಲ ಟಿ20, ಕೊಲಂಬೊ

ಜನವರಿ 16 ರಂದು ಎರಡನೇ ಟಿ20, ಕೊಲಂಬೊ

ಜನವರಿ 18 ರಂದು ಮೂರನೇ ಟಿ20, ಕೊಲಂಬೊ

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ