logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರೂ ವಿಶ್ವಕಪ್ ಆಡಲು ಸಾಧ್ಯವಾಗದ ಟಾಪ್ 6 ಆಟಗಾರರು

ಭಾರತ ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರೂ ವಿಶ್ವಕಪ್ ಆಡಲು ಸಾಧ್ಯವಾಗದ ಟಾಪ್ 6 ಆಟಗಾರರು

Sep 29, 2023 05:28 PM IST

ಭಾರತ ವಿಶ್ವಕಪ್ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದೆ. ಗಾಯಾಳು ಅಕ್ಷರ್‌ ಪಟೇಲ್‌ ಬದಲಿಗೆ ಆರ್‌ ಅಶ್ವಿನ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಕ್ಷರ್‌ಗೆ ಅದೃಷ್ಟ ಕೈಕೊಟ್ಟಿದ್ದು, ಅಶ್ವಿನ್‌ ಅದೃಷ್ಟ ಖುಲಾಯಿಸಿದೆ. ಈ ನಡುವೆ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಲವರು ಭಾರತ ವಿಶ್ವಕಪ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಆ ಪಟ್ಟಿ ಹೀಗಿದೆ.

  • ಭಾರತ ವಿಶ್ವಕಪ್ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದೆ. ಗಾಯಾಳು ಅಕ್ಷರ್‌ ಪಟೇಲ್‌ ಬದಲಿಗೆ ಆರ್‌ ಅಶ್ವಿನ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಕ್ಷರ್‌ಗೆ ಅದೃಷ್ಟ ಕೈಕೊಟ್ಟಿದ್ದು, ಅಶ್ವಿನ್‌ ಅದೃಷ್ಟ ಖುಲಾಯಿಸಿದೆ. ಈ ನಡುವೆ ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಲವರು ಭಾರತ ವಿಶ್ವಕಪ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಆ ಪಟ್ಟಿ ಹೀಗಿದೆ.
ಸ್ಪರ್ಧಾತ್ಮಕ ಕ್ರಿಕೆಟ್‌ ಯುಗದಲ್ಲಿ ಭಾರತದ ಹಲವು ಆಟಗಾರರು ಟೀಮ್‌ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ.‌ ಇದು ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ತಂಡಕ್ಕೂಅನ್ವಯಿಸುತ್ತಿದೆ. ಕೆಲವೊಬ್ಬರಿಗೆ ಗಾಯವೇ ಸಮಸ್ಯೆಯಾದರೆ, ಇನ್ನೂ ಕೆಲವು ಆಟಗಾರರಿಗೆ ಅದೃಷ್ಟ ಕೈಕೊಟ್ಟಿದೆ.
(1 / 7)

ಭುವನೇಶ್ವರ್‌ ಕುಮಾರ್‌: ಹೊಸ ಚೆಂಡಿನೊಂದಿಗೆ ತಮ್ಮ ಸ್ವಿಂಗ್‌ ಚಾಕಚಕ್ಯತೆಯಿಂದ ಭಾರತ ತಂಡದಲ್ಲಿ ಸ್ಥಾನ ಕಾಯಂ ಆಗಿಸಿದ್ದ ಭುವಿ, ವಿಶ್ವಕಪ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಮೊಹಮ್ಮದ್‌ ಸಿರಾಜ್‌ ಏಕದಿನ ಸ್ವರೂಪದ ನಂಬರ್‌ ವನ್‌ ಬೌಲರ್‌ ಆಗಿ ಹೊರಹೊಮ್ಮಿದ್ದು, ಇದು ಭುವಿ ಸ್ಥಾನಕ್ಕೆ ಕಂಟಕವಾಗಿದೆ.
(2 / 7)

ಯುಜ್ವೇಂದ್ರ ಚಹಾಲ್‌: ಭಾರತದ ಪ್ರಭಾವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಚಹಾಲ್‌, ದುರಾದೃಷ್ಟವಶಾತ್‌ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಭಾರತದ ಬ್ಯಾಟಿಂಗ್‌ ಲೈನಪ್‌ ಅನ್ನು ಬಲಗೊಳಿಸುವ ಆಯ್ಕೆಗಾರರ ನಿರ್ಧಾರದಿಂದ ಚಹಾಲ್‌ಗೆ ಸ್ಥಾನ ಸಿಕ್ಕಿಲ್ಲ. 
(3 / 7)

ಸಂಜು ಸ್ಯಾಮ್ಸನ್: ಭಾರತ ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ ಸಿಗುವ ಭಾರಿ ನಿರೀಕ್ಷೆ ಇತ್ತು. ಆದರೆ ಕೆಎಲ್ ರಾಹುಲ್ ತಂಡಕ್ಕೆ ಮರಳಿದ ಕಾರಣ ಸ್ಥಾನ ಕಳೆದುಕೊಂಡರು. ಈ ಬಗ್ಗೆ ದೇಶಾದ್ಯಂತ ಭಾರಿ ಅಸಮಾಧಾನ ಕೇಳಿಬಂದಿತ್ತು. 
(4 / 7)

ಶಿಖರ್ ಧವನ್: ನಾಯಕ ರೋಹಿತ್‌ ಶರ್ಮಾ ಜೊತೆಗೂಡಿ ಭಾರತದ ಆರಂಭಿಕ ಆಟಗಾರನಾಗಿ ಸಾಕಷ್ಟು ದಾಖಲೆ ನಿರ್ಮಿಸಿದ್ದ ಶಿಖರ್‌, ವಿಶ್ವಕಪ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶುಭ್ಮನ್‌ ಗಿಲ್‌ ಕಾಯಂ ಆರಂಭಿಕನಾಗುತ್ತಿದ್ದು, ಹೀಗಾಗಿ ಸಿಖರ್‌ ಸ್ಥಾನ ಕಳೆದುಕೊಂಡಿದ್ದಾರೆ. 
(5 / 7)

ರಿಷಬ್ ಪಂತ್‌: ಕಾರು ಅಪಘಾತದಿಂದಾಗಿ ಗಾಯಾಳುವಾಗಿರುವ ರಿಷಬ್‌ ಪಂತ್‌ ವಿಶ್ವಕಪ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಒಂದು ವೇಳೆ ಅವರು ಗಾಯಾಳು ಆಗಿರದೇ ಇದ್ದಿದ್ದರೆ, ವಿಶ್ವಕಪ್‌ ತಂಡದಲ್ಲಿ ಖಚಿತವಾಗಿ ಸ್ಥಾನ ಪಡೆಯುತ್ತಿದ್ದರು.
(6 / 7)

ಅಕ್ಷರ್‌ ಪಟೇಲ್: ಏಷ್ಯಾಕಪ್‌ ವೇಳೆ ಗಾಯಗೊಂಡಿದ್ದ ಅಕ್ಷರ್‌ ಪಟೇಲ್‌, ವಿಶ್ವಕಪ್‌ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಆರಂಭಿಕ ತಂಡದಲ್ಲಿ ಸ್ಥಾನ ಪಡೆದಿದ್ದ ಅಕ್ಷರ್‌, ಪರಿಷ್ಕೃತ ತಂಡದಿಂದ ಹೊರಬಿದ್ದಿದ್ದಾರೆ. ಸ್ಥಾನ ಕಳೆದುಕೊಂಡಿದ್ದ ಆರ್‌ ಅಶ್ವಿನ್‌ ಮತ್ತೆ ತಂಡ ಸೇರಿಕೊಂಡಿದ್ದಾರೆ.
(7 / 7)

    ಹಂಚಿಕೊಳ್ಳಲು ಲೇಖನಗಳು