logo
ಕನ್ನಡ ಸುದ್ದಿ  /  ಮನರಂಜನೆ  /  Adipurush Trailer: ಮೇ 9ಕ್ಕೆ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌

Adipurush Trailer: ಮೇ 9ಕ್ಕೆ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌

HT Kannada Desk HT Kannada

May 06, 2023 03:31 PM IST

ಮೇ 9ಕ್ಕೆ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌

    • ಪ್ರಭಾಸ್‌ ನಟನೆಯ ಆದಿಪುರುಷ್‌ ಚಿತ್ರದ ಟ್ರೇಲರ್‌ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಟ್ರೇಲರ್‌ ರಿಲೀಸ್‌ ಆಗಲಿದೆ. 
ಮೇ 9ಕ್ಕೆ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌
ಮೇ 9ಕ್ಕೆ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌

Adipurush Trailer: ತನ್ನವೊಂದು ಟೀಸರ್‌ ಮೂಲಕವೇ ತೆಗಳಿಕೆಗೆ ಕಾರಣವಾಗಿತ್ತು ಆದಿಪುರುಷ್‌ (Adipurush) ಚಿತ್ರದ ಮೊದಲ ಟೀಸರ್. ಟೀಸರ್‌ನಲ್ಲಿ ರಾಮ, ಲಕ್ಷ್ಮಣ, ಹನುಮ ಮತ್ತು ರಾವಣನನ್ನು ತೋರಿಸಿದ ರೀತಿಗೆ, ವಿಎಫ್‌ಎಕ್ಸ್‌ ಬಳಕೆಗೆ ತೀವ್ರ ಟೀಕೆಗೆ ಗುರಿಯಾಗಿತ್ತು. ಹಿಂದೂ ಧಾರ್ಮಿಕ ಭಾವನೆ ನೀವು ಧಕ್ಕೆ ತರುತ್ತಿದ್ದೀರಿ ಎಂದು ಚಿತ್ರತಂಡಕ್ಕೂ ಎಚ್ಚರಿಕೆ ಸಂದೇಶಗಳು ರವಾನೆಯಾಗಿದ್ದವು. ಇದೀಗ ಹಿಂದೆ ಆದ ತಪ್ಪು ಮತ್ತೆ ಮರುಕಳಿಸಬಾರದೆಂಬ ಕಾರಣಕ್ಕೆ ಕೊಂಚ ಜಾಗರೂಕತೆಯಿಂದ‌ಲೇ ಟ್ರೇಲರ್‌ ಬಿಡುಗಡೆ ಮಾಡುತ್ತಿದೆ ಆದಿಪುರುಷ್‌ ಚಿತ್ರತಂಡ.

ಟ್ರೆಂಡಿಂಗ್​ ಸುದ್ದಿ

‘ಒಂದು ವೇಳೆ ಪ್ರಜ್ವಲ್‌ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ನೆ ಬಿಡ್ತಿದ್ರಾ?’ ಧರ್ಮ ಎಳೆದು ತಂದ ನಟಿ ಸ್ವರಾ ಭಾಸ್ಕರ್‌

Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ; ಶೂಟಿಂಗ್‌ ಯಾವಾಗ ಆರಂಭ? ಇಲ್ಲಿದೆ ಹೆಚ್ಚಿನ ವಿವರ

‘ಅವ್ನ ಜತೆಗೇನು ಮಾತು, ಅವ್ರನ್ನ ಅಣ್ಣ ಅಂತ ಕರೀ, ಈ ಅನುಮಾನವೇ ಆ ವ್ಯಕ್ತಿ ಜತೆಗಿನ ಬ್ರೇಕಪ್‌ಗೆ ಕಾರಣವಾಯ್ತು’; ತನಿಷಾ ಕುಪ್ಪಂಡ

ಪುನೀತ್‌ ರಾಜ್‌ಕುಮಾರ್‌ ಮೊದಲ ಕೋವಿಡ್‌ ಲಸಿಕೆ ಪಡೆದದ್ದು ಯಾವಾಗ? ಅಪ್ಪು ಸಾವಿಗೂ ಮೊದಲ ಲಸಿಕೆಗೂ ಇಷ್ಟು ತಿಂಗಳ ಅಂತರ

ಇತ್ತೀಚಿನ ಕೆಲ ದಿನಗಳಿಂದ ಬ್ಯಾಕ್‌ ಟು ಬ್ಯಾಕ್‌ ಪೋಸ್ಟರ್‌ಗಳ ಮೂಲಕವೇ ಕುತೂಹಲ ಮೂಡಿಸುತ್ತಿರುವ ಆದಿಪುರುಷ್‌ ಸಿನಿಮಾ ಇದೀಗ ಟ್ರೇಲರ್‌ ಜತೆ ಆಗಮಿಸಲು ಸಜ್ಜಾಗಿದೆ. ಚಿತ್ರದಿಂದ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದ್ದು, ಮೇ 9ರಂದು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಟ್ರೇಲರ್‌ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ ಜಗತ್ತಿನ 70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ್‌ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿಲಿದೆ. ಇದಕ್ಕಾಗಿ ಚಿತ್ರತಂಡವೂ ಸಕಲ ಸಿದ್ಧತೆ ಮಾಡಿಕೊಂಡಿದೆ.

ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಕ್ಕೂ ಮೊದಲು ಈ ಚಿತ್ರವು ನ್ಯೂಯಾರ್ಕ್‌ನ ಟ್ರಿಬೆಕಾ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅದರ ಜತೆಗೆ ಚಿತ್ರದ ಟ್ರೇಲರ್ ಅನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ್, ಇಂಡೋನೇಷ್ಯಾ, ಥೈಲ್ಯಾಂಡ್, ಮಲೇಷ್ಯಾ, ಹಾಂಗ್ ಕಾಂಗ್, ಫಿಲಿಪೈನ್ಸ್, ಮ್ಯಾನ್ಮಾರ್, ಶ್ರೀಲಂಕಾ, ಜಪಾನ್, ಆಫ್ರಿಕಾ, ಯುಕೆ ಸೇರಿದಂತೆ ಜಗತ್ತಿನ 70ಕ್ಕೂ ಅಧಿಕ ದೇಶಗಳಲ್ಲಿ ಟ್ರೇಲರ್‌ ಬಿಡುಗಡೆ ಮಾಡಲಾಗುತ್ತದೆ.

ಜೂ. 16ರಂದು ಚಿತ್ರ ಬಿಡುಗಡೆ

ರಾಮನಾಗಿ ಪ್ರಭಾಸ್‌, ರಾವಣನಾಗಿ ಸೈಫ್‌ ಅಲಿಖಾನ್‌ ನಟಿಸಿರುವ ಈ ಸಿನಿಮಾ ಮೇಲೆ ನಿರೀಕ್ಷೆಯ ಭಾರವೂ ಹೆಚ್ಚಾಗಿದೆ. ಬ್ಯಾಕ್‌ ಟು ಬ್ಯಾಕ್ ‌ಎರಡು ಪ್ಲಾಪ್‌ ಸಿನಿಮಾ ನೀಡಿರುವ ಪ್ರಭಾಸ್‌, ಇದೀಗ ಆದಿಪುರುಷ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ. ಅವರ ಅಭಿಮಾನಿ ಬಳಗದಲ್ಲಿಯೂ ಈ ಸಿನಿಮಾ ಕೌತುಕ ಸೃಷ್ಟಿಸಿದೆ. ಇನ್ನೇನು ಕೆಲ ದಿನಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ. ಅಧಿಕೃತ ಬಿಡುಗಡೆಗೂ ಮುನ್ನ ಅಂದರೆ, ಜೂನ್‌ 16ರರ ಬದಲು, ಜೂನ್‌ 13ರಂದು ಈ ಚಿತ್ರ ಅಮೆರಿಕಾದಲ್ಲಿ ಪ್ರದರ್ಶನ ಕಾಣಲಿದೆ.

ಜೂನ್ 7ರಿಂದ 18ರ ವರೆಗೂ ನ್ಯೂಯಾರ್ಕ್‌ನಲ್ಲಿ ಟ್ರಿಬೆಕಾ ಫಿಲಂ ಫೆಸ್ಟಿವಲ್‌ ನಡೆಯಲಿದೆ. ಆ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಜೂ. 13ರಂದು ಆದಿಪುರುಷ್‌ ಸಿನಿಮಾ ಪ್ರದರ್ಶನ ಕಾಣಲಿದೆ. ಈ ವಿಚಾರವನ್ನು ಸಿನಿಮಾ ತಂಡವೇ ಅಧಿಕೃತವಾಗಿ ಘೋಷಿಸಿದ್ದು, ಈ ಚಿತ್ರೋತ್ಸವಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂಭ್ರಮದಲ್ಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು