logo
ಕನ್ನಡ ಸುದ್ದಿ  /  ಮನರಂಜನೆ  /  Suhani Bhatnagar Death: ದಂಗಲ್‌ ಚಿತ್ರದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನ: 19ನೇ ವಯಸ್ಸಿಗೆ ಆಕೆಗೆ ಸಾಯುವಂಥದ್ದೇನಾಗಿತ್ತು?

Suhani Bhatnagar Death: ದಂಗಲ್‌ ಚಿತ್ರದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನ: 19ನೇ ವಯಸ್ಸಿಗೆ ಆಕೆಗೆ ಸಾಯುವಂಥದ್ದೇನಾಗಿತ್ತು?

Feb 17, 2024 02:24 PM IST

Suhani Bhatnagar Death: ದಂಗಲ್‌ ಚಿತ್ರದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನ: 19ನೇ ವಯಸ್ಸಿಗೆ ಆಕೆಗೆ ಸಾಯುವಂಥದ್ದೇನಾಗಿತ್ತು?

    • 2016ರಲ್ಲಿ ತೆರೆಕಂಡು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿತ್ತು ಆಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾ. ಇದೀಗ ಇದೇ ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್‌ ನಿಧನರಾಗಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಆಕೆಗೆ ಈಗಿನ್ನೂ ಕೇವಲ 19 ವರ್ಷ ವಯಸ್ಸು!
Suhani Bhatnagar Death: ದಂಗಲ್‌ ಚಿತ್ರದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನ: 19ನೇ ವಯಸ್ಸಿಗೆ ಆಕೆಗೆ ಸಾಯುವಂಥದ್ದೇನಾಗಿತ್ತು?
Suhani Bhatnagar Death: ದಂಗಲ್‌ ಚಿತ್ರದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನ: 19ನೇ ವಯಸ್ಸಿಗೆ ಆಕೆಗೆ ಸಾಯುವಂಥದ್ದೇನಾಗಿತ್ತು?

Suhani Bhatnagar Death: 2016ರಲ್ಲಿ ತೆರೆಕಂಡು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿತ್ತು ಆಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾ. ಇದೀಗ ಇದೇ ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್‌ ನಿಧನರಾಗಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಆಕೆಗೆ ಈಗಿನ್ನೂ ಕೇವಲ 19 ವರ್ಷ ವಯಸ್ಸು!

ಟ್ರೆಂಡಿಂಗ್​ ಸುದ್ದಿ

ನಟಿ ಪವಿತ್ರಾ ಜಯರಾಮ್‌ ಅಪಘಾತದಲ್ಲಿ ಸಾವನ್ನಪ್ಪಿದಾಗ ಅದೇ ಕಾರ್‌ನಲ್ಲಿದ್ದ ನಟ ಚಂದ್ರಕಾಂತ್‌ ಆತ್ಮಹತ್ಯೆ!

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಅಮೀರ್ ಖಾನ್ ನಟನೆಯ 'ದಂಗಲ್' ಚಿತ್ರದಲ್ಲಿ ಆಮೀರ್‌ ಕಿರಿ ಮಗಳು ಬಬಿತಾ ಪಾತ್ರದಲ್ಲಿ ನಟಿಸಿದ್ದ ನಟಿ ಸುಹಾನಿ ಭಟ್ನಾಗರ್ ವಿಧಿವಶರಾಗಿದ್ದಾರೆ. ಈಗಿನ್ನು ಬಣ್ಣದ ಲೋಕದಲ್ಲಿ ಪುಟ್ಟ ಹೆಜ್ಜೆಯನ್ನಿಡುತ್ತಿದ್ದ ಸುಹಾನಿ, ಬಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದಳು. ಅದರಂತೆ, ನಟನೆಯ ಜತೆಗೆ ಫ್ಯಾಷನ್‌ ಕಡೆಗೂ ಒಲವು ಬೆಳೆಸಿಕೊಂಡಿದ್ದಳು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಹೀಗೆ ನೂರಾರು ಕನಸು ಕಟ್ಟಿದ್ದ ಮಗಳು ಈಗ ಇಲ್ಲ ಎಂಬ ನೋವಿನಲ್ಲಿ ಇಡೀ ಕುಟುಂಬ ಕಣ್ಣೀರಿಡುತ್ತಿದೆ.

ಸಾವಿಗೆ ಕಾರಣ ಏನು?

ಜೂನಿಯರ್ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಇತ್ತೀಚೆಗಷ್ಟೇ ಅಪಘಾತವಾಗಿತ್ತು. ಆ ಅಪಘಾತದಿಂದ ಅವರ ಕಾಲಿನ ಮೂಳೆ ಮುರಿದಿತ್ತು. ಜತೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಇದೀಗ ಇವರ ಸಾವಿನ ಸುದ್ದಿ ಮುನ್ನೆಲೆಗೆ ಬಂದಿದೆ. ಸಾವಿಗೆ ನಿಖರ ವಿಚಾರ ಏನು ಎಂಬ ಬಗ್ಗೆ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಔಷಧಿ ಮಾತ್ರೆಗಳ ಸೈಡ್‌ ಎಫೆಕ್ಟ್‌ನಿಂದ ಸುಹಾನಿ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಕೆಲ ತಿಂಗಳಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಸುಹಾನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಇವರ ಸಾವಿನ ಸುದ್ದಿ ಸಿನಿಮಾ ಕ್ಷೇತ್ರದ ಆಪ್ತರಿಗೆ ಶಾಕ್‌ ನೀಡಿದೆ. ಇಂದು (ಫೆ. 17) ಸುಹಾನಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ಫರಿದಾಬಾದ್‌ನ ಸೆಕ್ಟರ್ -15ರಲ್ಲಿನ ಅಜ್ರೌಂಡಾ ಸ್ಮಶಾನದಲ್ಲಿ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.

ಸುಹಾನಿ ಭಟ್ನಾಗರ್ ಯಾರು?

ಸುಹಾನಿ ಭಟ್ನಾಗರ್ ಬಾಲಿವುಡ್‌ನ ಪ್ರಸಿದ್ಧ ಬಾಲ ಕಲಾವಿದೆ. ಅವರು ಅಮೀರ್ ಖಾನ್ ಅವರ ಬ್ಲಾಕ್ಬಸ್ಟರ್ ಚಿತ್ರ 'ದಂಗಲ್' (2016) ನಲ್ಲಿ ಬಬಿತಾ ಫೋಗಟ್ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಚಿತ್ರದಲ್ಲಿ ಸುಹಾನಿ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ನಟನೆ ಮಾತ್ರವಲ್ಲದೆ, ಅನೇಕ ಟಿವಿ ಜಾಹೀರಾತುಗಳಲ್ಲಿಯೂ ಸುಹಾನಿ ನಟಿಸಿದ್ದರು.

'ದಂಗಲ್' ನಂತರ ಸುಹಾನಿಗೆ ಅನೇಕ ಚಿತ್ರಗಳ ಆಫರ್‌ಗಳು ಬಂದವು. ಆದರೆ ದಂಗಲ್‌ ಬಳಿಕ ಬೇರಾವ ಸಿನಿಮಾಗಳಲ್ಲಿ ಸುಹಾನಿ ನಟಿಸಲಿಲ್ಲ. ಓದಿನ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಓದು ಮುಗಿದ ಬಳಿಕ ಸಿನಿಮಾಕಡೆ ಬರುವೆ ಎಂದೂ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. 2021ರ ನವೆಂಬರ್ 25ರಿಂದ ಈವರೆಗೂ ಅವರು ಇನ್‌ಸ್ಟಾಗ್ರಂನಲ್ಲಿ ಸಕ್ರಿಯರಾಗಿಲ್ಲ. ಅದಕ್ಕೂ ಮೊದಲು ಸಾಕಷ್ಟು ಪೋಸ್ಟ್‌ಗಳ ಮೂಲಕ ಸುದ್ದಿಯಲ್ಲಿದ್ದರು.

2021ರಲ್ಲಿ ಸುಹಾನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಕೊನೇ ಪೋಸ್ಟ್‌

(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com)

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ