ಕನ್ನಡ ಸುದ್ದಿ  /  ಮನರಂಜನೆ  /  ಅತಿಯಾದ ತೂಕ, ಮೈತುಂಬ ಕಾಯಿಲೆ; ಬಳುಕೋ ಬಳ್ಳಿಯಂತಿದ್ದ ‘ಕುರುಬನ ರಾಣಿ’ ನಗ್ಮಾಗೆ ಏನಾಯ್ತು, ಗುರುತೇ ಸಿಗ್ತಿಲ್ಲವಲ್ಲ!

ಅತಿಯಾದ ತೂಕ, ಮೈತುಂಬ ಕಾಯಿಲೆ; ಬಳುಕೋ ಬಳ್ಳಿಯಂತಿದ್ದ ‘ಕುರುಬನ ರಾಣಿ’ ನಗ್ಮಾಗೆ ಏನಾಯ್ತು, ಗುರುತೇ ಸಿಗ್ತಿಲ್ಲವಲ್ಲ!

90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದವರು ನಟಿ ನಗ್ಮಾ. ಸೌತ್‌ನಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದರು. ಆದರೆ, ಸದ್ಯ ಸಿನಿಮಾರಂಗದಿಂದ ದೂರ ಉಳಿದು, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗಲೇ ಇದೇ ನಟಿಯ ಹೊಸ ವಿಡಿಯೋ ಎಲ್ಲರನ್ನು ದಂಗು ಬಡಿಸಿದೆ.

ಅತಿಯಾದ ತೂಕ, ಮೈತುಂಬ ಕಾಯಿಲೆ; ಬಳುಕೋ ಬಳ್ಳಿಯಂತಿದ್ದ ‘ಕುರುಬನ ರಾಣಿ’ ನಗ್ಮಾಗೆ ಏನಾಯ್ತು, ಗುರುತೇ ಸಿಗ್ತಿಲ್ಲವಲ್ಲ!
ಅತಿಯಾದ ತೂಕ, ಮೈತುಂಬ ಕಾಯಿಲೆ; ಬಳುಕೋ ಬಳ್ಳಿಯಂತಿದ್ದ ‘ಕುರುಬನ ರಾಣಿ’ ನಗ್ಮಾಗೆ ಏನಾಯ್ತು, ಗುರುತೇ ಸಿಗ್ತಿಲ್ಲವಲ್ಲ!

Actress Nagma Latest Viral Video: ಸಿನಿಮಾ ನಟಿಯರಿಗೆ ವಯಸ್ಸೇ ಆಗಲ್ವಲ್ಲ ಗುರೂ.. ಈಗಲೂ ಅದೇ ಮೈಮಾಟ, ಅದೇ ಅಂದ ಚೆಂದ. ಇವರ ಬ್ಯೂಟಿ ಸೀಕ್ರೇಟ್‌ ಏನಿರಬಹುದು? ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ನಟಿಯರನ್ನು ಕಂಡೊಡನೆ ಕೇಳಿ ಬರುವ ಮೊದಲ ಮಾತಿದೆ. ಏಕೆಂದರೆ, ಸಾರ್ವಜನಿಕ ವಲಯದಲ್ಲಿ ಹೆಚ್ಚು ಕಾಣಿಸುವ ಸೆಲೆಬ್ರಿಟಿಗಳು ತಮ್ಮ ಬ್ಯೂಟಿ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತೂಕದಲ್ಲಿ ಚೂರು ಏರುಪೇರಾದರೂ ಡಯಟ್, ಯೋಗದ ಮೊರೆ ಹೋಗಿ ಹಳೇ ಲಯಕ್ಕೆ ಬರುತ್ತಾರೆ. ಆದರೆ, ಇದೀಗ ಒಂದು ಕಾಲದ ಬಳುಕೋ ಬಳ್ಳಿಯಂತಿದ್ದ ನಟಿ ನಗ್ಮಾ ಅವರ ಹೊಸ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ನಗ್ಮಾನಾ ಎಂಬ ಪ್ರಶ್ನೆ ಮೂಡಿದೆ.

ಟ್ರೆಂಡಿಂಗ್​ ಸುದ್ದಿ

ಭಾರತೀಯ ಚಿತ್ರರಂಗದಲ್ಲಿ 90ರ ಕಾಲದಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿ ನಗ್ಮಾ. ಬಾಲಿವುಡ್‌, ಕಾಲಿವುಡ್, ಸ್ಯಾಂಡಲ್‌ವುಡ್‌, ಟಾಲಿವುಡ್‌ ಎಲ್ಲ ಕಡೆಗಳಲ್ಲೂ ನಟನೆಯ ಮೂಲಕವೇ ಹೆಸರು ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ಒಂದಷ್ಟು ಅಂತರ ಕಾಯ್ದುಕೊಂಡಿದ್ದಾರೆ. 2008ರಲ್ಲಿಯೇ ಸಿನಿಮಾ ಸಾಕಿನ್ನು ಎಂದು ಅದರಿಂದ ಹೊರಬಂದ ನಗ್ಮಾ, ರಾಜಕೀಯದಲ್ಲೂ ಸಕ್ರಿಯರಾದರು. ಅದಾದ ಮೇಲೆ ಮತ್ತೆ ಸಿನಿಮಾಕ್ಕೆ ಬರುವ ಆಸೆ ಇದ್ದರೂ ಅದಕ್ಕೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ತೂಕ ಹೆಚ್ಚಾದಂತೆ ಚಿತ್ರರಂಗದಿಂದಲೂ ತುಂಬ ದೂರ ಉಳಿದರು. ಇದೀಗ ಇದೇ ನಟಿಯ ಲೇಟೆಸ್ಟ್‌ ವಿಡಿಯೋ ವೈರಲ್‌ ಆಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ರವಿಮಾಮ, ಕುರುಬನ ರಾಣಿ. ಹೃದಯವಂತ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ, ದಶಕಗಳು ಕಳೆದರೂ ಕನ್ನಡದ ಸಿನಿಮಾ ಪ್ರಿಯರಿಗೆ ಪರಿಚಿತ ಮುಖ. ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್‌ ಜತೆಗೆ 1990ರಲ್ಲಿ ಭಾಗಿ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದರು. ಟಾಲಿವುಡ್‌ನಲ್ಲೂ ಚಿರಂಜೀವಿ, ನಾಗಾರ್ಜುನ್‌, ಬಾಲಣ್ಣ ಸೇರಿ ಬಹುತೇಕ ಸ್ಟಾರ್‌ ನಟನರ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಭೋಜಪುರಿ, ಮರಾಠಿ, ಮಲಯಾಳಂ ಸಿನಿಮಾಗಳನ್ನೂ ನಟಿಸಿದ್ದಾರೆ.

ವಯಸ್ಸು ಬರೀ 48, ಇನ್ನೂ ಮದುವೆಯಿಲ್ಲ..

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ನಗ್ಮಾ ಅವರ ವಿಡಿಯೋ ನೋಡಿದರೆ ಅವರ ವಯಸ್ಸು 60ರ ಸನಿಹ ಬಂದಿರಬಹುದೇ? ಹೀಗೊಂದು ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ; ಅವರ ದಡೂತಿ ದೇಹ! ಅತಿಯಾದ ತೂಕ ಅವರನ್ನು ಇನ್ನಷ್ಟು ಖಿನ್ನತೆಗೆ ದೂಡಿದೆ. ದೇಹದ ತೂಕ ಹೆಚ್ಚಾದಂತೆ ಮೈತುಂಬ ಕಾಯಿಲೆಗಳೂ ಅಂಟಿಕೊಂಡಿವೆ. ಅಸಲಿಗೆ 48ರ ಪ್ರಾಯದ ನಗ್ಮಾ, ಇನ್ನೂ ಮದುವೆಯಾಗಿಲ್ಲ. ಇತ್ತೀಚೆಗಷ್ಟೇ ನನಗೂ ಸಂಗಾತಿ ಬೇಕು, ನಾನೂ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದಿದ್ದರು.

ಏನಿದೆ ವೈರಲ್‌ ವಿಡಿಯೋದಲ್ಲಿ..

ಕಾರ್‌ನಲ್ಲಿ ಕುಳಿತ ನಗ್ನಾರನ್ನು ಮುಂಬೈನ ಪಾಪರಾಜಿಗಳು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹಸಿರು ಬಣ್ಣದ ಮೇಲುಡುಪು, ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಅತಿಯಾದ ತೂಕದಿಂದ ದೇಹ ಊದಿಕೊಂಡಿದೆ. ಮುಖವೂ ದಪ್ಪಗಾಗಿದೆ. ಕಣ್ಣಿನ ಸುತ್ತಲೂ ಡಾರ್ಕ್‌ ಸರ್ಕಲ್‌ಗಳು ಮೂಡಿವೆ. ಒಟ್ಟಾರೆ, ಈ ವಿಡಿಯೋ ನೋಡಿದವರು ನಗ್ಮಾಗೆ ಏನಾಗಿದೆ? ಅಷ್ಟಕ್ಕೂ ಇವರು ಆರೋಗ್ಯವಾಗಿದ್ದಾರಾ? ಗುರುತೇ ಸಿಗುತ್ತಿಲ್ಲ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಪ್ರಶ್ನೆ ಮಾಡುತ್ತಿದ್ದಾರೆ.

ರಾಜಕೀಯದಲ್ಲಿ ಸಕ್ರಿಯರು

ಚಿತ್ರೋದ್ಯಮದಲ್ಲಿದ್ದಾಗಲೇ ಸಕ್ರಿಯ ರಾಜಕಾರಣಕ್ಕೂ ಧುಮುಕಿದ್ದ ನಗ್ಮಾ, 2014ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮೀರತ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಅಖಾಡಕ್ಕೆ ಧುಮುಕಿದ್ದರು. ಆದರೆ, ಹೀನಾಯ ಸೋಲನುಭವಿಸಿದ್ದರು. ಇಂದಿಗೂ ಅದೇ ಕಾಂಗ್ರೆಸ್‌ ಪಕ್ಷದಲ್ಲಿಯೇ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಮಹಿಳಾ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ನಗ್ಮಾ.

(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com)

IPL_Entry_Point