logo
ಕನ್ನಡ ಸುದ್ದಿ  /  Entertainment  /  Faizan Ansari Legal Notice To Uorfi Javed

Uorfi Javed: ‘ಮೈಮಾಟ ತೋರಿಸಿ ಹಣ ಗಳಿಸುವ ನಟಿ ಉರ್ಫಿ ಜಾವೇದ್‌ ಸತ್ತರೆ ಸಶ್ಮಾನದಲ್ಲಿಯೂ ಜಾಗ ಕೊಡಲ್ಲ’; ಫೈಜಾನ್‌ ಅನ್ಸಾರಿ

HT Kannada Desk HT Kannada

Mar 11, 2023 11:21 AM IST

‘ಮೈಮಾಟ ತೋರಿಸಿ ಹಣ ಗಳಿಸುವ ನಟಿ ಉರ್ಫಿ ಜಾವೇದ್‌ ಸತ್ತರೆ ಸಶ್ಮಾನದಲ್ಲಿಯೂ ಜಾಗ ಕೊಡಲ್ಲ’; ಫೈಜಾನ್‌ ಅನ್ಸಾರಿ

    • ಬಾಲಿವುಡ್‌ನಲ್ಲಿ ಉಡುಗೆಯ ಮೂಲಕವೇ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌ಗೆ ಇದೀಗ ಸಂಕಷ್ಟ ಎದುರಾಗಿದೆ. 
‘ಮೈಮಾಟ ತೋರಿಸಿ ಹಣ ಗಳಿಸುವ ನಟಿ ಉರ್ಫಿ ಜಾವೇದ್‌ ಸತ್ತರೆ ಸಶ್ಮಾನದಲ್ಲಿಯೂ ಜಾಗ ಕೊಡಲ್ಲ’; ಫೈಜಾನ್‌ ಅನ್ಸಾರಿ
‘ಮೈಮಾಟ ತೋರಿಸಿ ಹಣ ಗಳಿಸುವ ನಟಿ ಉರ್ಫಿ ಜಾವೇದ್‌ ಸತ್ತರೆ ಸಶ್ಮಾನದಲ್ಲಿಯೂ ಜಾಗ ಕೊಡಲ್ಲ’; ಫೈಜಾನ್‌ ಅನ್ಸಾರಿ

Faizan Ansari on Uorfi Javed: ತಮ್ಮ ಉಡುಗೆ ತೊಡಿಗೆ ಮೂಲಕವೇ ಸದಾ ಟ್ರೋಲ್‌ ಆಗುವ ಬಾಲಿವುಡ್‌ನ ನಟಿ, ಮಾಡೆಲ್‌ ಉರ್ಫಿ ಜಾವೇದ್‌ ವಿರುದ್ಧವೀಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ ಫೈಜಾನ್‌ ಅನ್ಸಾರಿ. ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಆಗಿರುವ ಫೈಜಾನ್‌, ನಟಿಯ ಬಟ್ಟೆ ವಿಚಾರವನ್ನೇ ಟೀಕಿಸಿ ಕೋರ್ಟ್‌ ಮೆಟ್ಟಿಲೇರಿದ್ದು, ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Brundavana Serial: ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ, ಗಂಡನನ್ನೇ ದೂರ ಮಾಡಿಕೊಳ್ತಾಳಾ?

Darshan: ಮಳೆಗಾಲ ಶುರುವಾಗುತ್ತಿದೆ, ದಸರಾ ಅಂಬಾರಿ ಆನೆ ಅರ್ಜುನನಿಗೆ ಸಮಾಧಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

Amruthadhaare: ನನ್ನ ಶ್ರಮಕ್ಕೆ ಸಾಮರ್ಥ್ಯಕ್ಕೆ ಬೆಲೆಯೇ ಇಲ್ವ? ಭೂಮಿಕಾಳ ಬೇಸರದ ಮಾತಿಗೆ ಕಂಗಲಾದ ಗೌತಮ್‌ ದಿವಾನ್‌

Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ

ಉರ್ಫಿ ಜಾವೇದ್‌ ಮೈ ಕಾಣಿಸುವಂಥ ಮತ್ತು ಅತಿ ಕೆಟ್ಟ ಎನಿಸುವ ಬಟ್ಟೆಗಳನ್ನು ಧರಿಸಿ, ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ, ನೋಟಿಸ್‌ ಜಾರಿ ಮಾಡಿದ್ದಾರೆ. ಉರ್ಫಿ ಮುಂಬೈನಲ್ಲಿಯೇ ವಾಸಿಸಲು ಬಯಸಿದರೆ, ಅವರ 'ಮಿತಿ ಮತ್ತು ಸ್ಥಿತಿ' ಬದಲಾಗಬೇಕು, ಇಲ್ಲದಿದ್ದರೆ ಅವರನ್ನು ಮುಂಬೈನಲ್ಲಿ ಉಳಿಯಲು ಬಿಡುವುದಿಲ್ಲ" ಎಂದು ಫೈಜಾನ್ ಅನ್ಸಾರಿ ಹೇಳಿದ್ದಾರೆ.

ಇಸ್ಲಾಂ ಧರ್ಮಕ್ಕೆ ಅವಮಾನ..

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಫೈಜಾನ್‌ ಅನ್ಸಾರಿ, "ಉರ್ಫಿ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಮೌಲಾನಾಗಳಿಗೆ ದೂರು ನೀಡಲಾಗಿದೆ. ಅಲ್ಲದೆ ನಟಿಯ ಸಾವಿನ ನಂತರ ಆಕೆಯನ್ನು ಸ್ಮಶಾನದಲ್ಲಿ ಹೂಳಲು ಜಾಗ ನೀಡುವುದಿಲ್ಲ. ಉರ್ಫಿ ಜಾವೇದ್ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾಳೆ. ತನ್ನ ಉಡುಪಿನಿಂದ ಇಡೀ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾಳೆ. ಹಾಗಾಗಿ ನೋಟಿಸ್‌ ನೀಡಿದ್ದೇನೆ. ಅಗತ್ಯವಿದ್ದರೆ ಬಾಂಬೆ ಹೈಕೋರ್ಟ್‌ಗೂ ಹೋಗುವುದಾಗಿ ಫೈಜಾನ್‌ ಹೇಳಿದ್ದಾರೆ.

'ಉರ್ಫಿ ಜಾವೇದ್‌ಗೆ ಧೈರ್ಯ ಕಡಿಮೆ. ಮುಂದೆ ಬಂದು ಹೇಳುವ ಧೈರ್ಯ ಆಕೆಗಿಲ್ಲ. ನನ್ನ ಮತ್ತು ಅವರ ಜಗಳ ಈಗಿನಿಂದಲ್ಲ. ನನ್ನನ್ನು ಎದುರಿಸಿ ಎಂದು ಈ ಮೊದಲೇ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಬಟ್ಟೆಯಿಂದಲೇ ಇಡೀ ದೇಶದ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಈಗಾಗಲೇ ಈ ವಿಚಾರವಾಗಿ ನಾನು ಅನೇಕ ಮಸೀದಿಗಳು ಮತ್ತು ಸ್ಮಶಾನಗಳಿಗೆ ಉರ್ಫಿ ಕುರಿತ ಪತ್ರಗಳನ್ನು ನೀಡಿದ್ದೇನೆ. ದೆಹಲಿ, ಮುಂಬೈನಲ್ಲೂ ಪತ್ರ ನೀಡಿದ್ದೇನೆ. ಇದೀಗ ಉರ್ಫಿ ಜಾವೇದ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ. ಕಟಕಟೆಯ ಮೇಲೆ ನಿಲ್ಲಿಸಲಿದ್ದೇನೆ ಎಂದಿದ್ದಾರೆ.

ಮುಂಬೈನಲ್ಲಿ ಇರಲು ಬಿಡುವುದಿಲ್ಲ.

ಉರ್ಫಿ ಜಾವೇದ್‌ರನ್ನು ‘ಕೆಟ್ಟ ಹುಡುಗಿ’ ಎಂದು ಕರೆದ ಫೈಜಾನ್ ಅನ್ಸಾರಿ, ಆಕೆ ತನ್ನ ಉಡುಗೆ ಮತ್ತು ನಡವಳಿಕೆಯನ್ನು ಬದಲಾಯಿಸದಿದ್ದರೆ ಮುಂಬೈನಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅವಳು ತುಂಬಾ ಕೆಟ್ಟ ಹುಡುಗಿ. ಇಡೀ ಮುಂಬೈನ ವಾತಾವರಣವನ್ನು ಹಾಳು ಮಾಡುತ್ತಿದ್ದಾಳೆ. ಉರ್ಫಿ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ಕೂಡ ಇಂತಹ ವಾತಾವರಣ ಬರಬಾರದು ಎಂದು ಬಯಸುತ್ತಾರೆ. ಈಗ ಉರ್ಫಿ ಜಾವೇದ್ ತಪ್ಪಿಸಿಕೊಳ್ಳುವುದು ಅಸಾಧ್ಯ. ಅವರು ತಮ್ಮ ಮಿತಿಗಳನ್ನು ಮತ್ತು ಸ್ಥಿತಿಯನ್ನು ಬದಲಾಯಿಸಬೇಕಾಗುತ್ತದೆ. ಬಟ್ಟೆ ಧರಿಸುವ ವಿಧಾನವನ್ನು ಬದಲಾಯಿಸಬೇಕಾಗಿದೆ. ಉರ್ಫಿ ಜಾವೇದ್ ಮುಂಬೈನಲ್ಲಿ ಉಳಿಯಲು ಬಯಸಿದರೆ ಎಲ್ಲವನ್ನೂ ಬದಲಾಯಿಸಬೇಕಾಗುತ್ತದೆ. ಇಲ್ಲವಾದರೆ ಮುಂಬೈನಲ್ಲಿ ಈ ರೀತಿ ಇರಲು ಬಿಡುವುದಿಲ್ಲ ಎಂದಿದ್ದಾರೆ.

ಉರ್ಫಿ ಜಾವೇದ್ ವಿರುದ್ಧ ವಾಗ್ದಾಳಿ ನಡೆಸಿದ ಫೈಜಾನ್ ಅನ್ಸಾರಿ, 'ಅವಳು ತುಂಬಾ ಕೆಟ್ಟ ಕೆಲಸ ಮಾಡುತ್ತಿದ್ದಾಳೆ. ದೇಹ ತೋರಿಸಿ ಹಣ ಗಳಿಸುತ್ತಿದ್ದಾಳೆ. ಪ್ರಚಾರಕ್ಕಾಗಿ ಇದೆಲ್ಲ ಮಾಡುತ್ತಿದ್ದಾಳೆ. ಈ ಕಾರಣದಿಂದಾಗಿ, ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬಂದಿರುವ ಬಾಲಿವುಡ್ ನಟಿಯರು ಮತ್ತು ಸೂಪರ್‌ಸ್ಟಾರ್‌ಗಳ ಮೇಲೆಯೂ ಇದು ಪರಿಣಾಮ ಬೀರಲಿದೆ. ಉರ್ಫಿ ಜಾವೇದ್ ತನ್ನ ದೇಹವನ್ನು ತೋರಿಸಿ ಹಣ ಸಂಪಾದಿಸುತ್ತಿರುವುದು ಅವರಿಗೂ ನಾಚಿಕೆಗೇಡಿನ ಸಂಗತಿ. ಉರ್ಫಿಗೆ ಟ್ಯಾಲೆಂಟ್ ಇದ್ದರೆ ನಟಿಸಿ, ಸಿನಿಮಾ ಮಾಡಿ ಹಣ ಸಂಪಾದಿಸಲಿ" ಎಂದಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು