logo
ಕನ್ನಡ ಸುದ್ದಿ  /  ಮನರಂಜನೆ  /  Hansika Motwani Marriage: ಹನ್ಸಿಕಾ ಮೋಟ್ವಾನಿ ಮದುವೆ ಫಿಕ್ಸ್‌...ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಸ್ಥಳ ಕೂಡಾ ಫೈನಲ್‌

Hansika Motwani Marriage: ಹನ್ಸಿಕಾ ಮೋಟ್ವಾನಿ ಮದುವೆ ಫಿಕ್ಸ್‌...ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಸ್ಥಳ ಕೂಡಾ ಫೈನಲ್‌

HT Kannada Desk HT Kannada

Oct 17, 2022 11:57 AM IST

ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿರುವ ಹನ್ಸಿಕಾ ಮೋಟ್ವಾನಿ

    • ಈ ಮದುವೆ ಸಮಾರಂಭದಲ್ಲಿ ಟಾಲಿವುಡ್‌, ಕಾಲಿವುಡ್‌ ಚಿತ್ರೋದ್ಯಮದ ಗಣ್ಯರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದು ಮದುವೆ ಬಹಳ ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿದುಬಂದಿದೆ. ಹನ್ಸಿಕಾ ಕೈ ಹಿಡಿಯುತ್ತಿರುವ ಹುಡುಗ ಖ್ಯಾತ ರಾಜಕಾರಣಿ ಹಾಗೂ ಉದ್ಯಮಿಯೊಬ್ಬರ ಪುತ್ರ ಎನ್ನಲಾಗುತ್ತದೆ.
ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿರುವ ಹನ್ಸಿಕಾ ಮೋಟ್ವಾನಿ
ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿರುವ ಹನ್ಸಿಕಾ ಮೋಟ್ವಾನಿ (PC: Hansika Motwani Facebook)

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಹನ್ಸಿಕಾ ಮೊಟ್ವಾನಿ ನಾಯಕಿಯಾಗಿ ಕೂಡಾ ಹೆಸರು ಮಾಡಿದವವರು. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಈ ಚೆಲುವೆ ಈಗ ಸದ್ದಿಲ್ಲದೆ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಮದುವೆ ದಿನಾಂಕ ಹಾಗೂ ಸ್ಥಳ ಕೂಡಾ ನಿಗದಿಯಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಟ್ರೆಂಡಿಂಗ್​ ಸುದ್ದಿ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

ಪುನೀತ್ ರಾಜ್​ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ, ಸಿನಿಪ್ರಿಯರಿಗೆ ಪರಿಚಿತ ಹುಡುಗಿ. ನಟಿಸಿದ್ದು ಒಂದೇ ಕನ್ನಡ ಸಿನಿಮಾದಲ್ಲಾದರೂ ಹನ್ಸಿಕಾಗೆ ಇಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಹನ್ಸಿಕಾ ಮೋಟ್ವಾನಿ ಮದುವೆ ನಿಶ್ಚಯವಾಗಿದ್ದು ಶೀಘ್ರದಲ್ಲೇ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳೆದ ಆಗಸ್ಟ್‌ನಲ್ಲಿ ತಮಿಳು ಪತ್ರಿಕೆಗಳು ವರದಿ ಮಾಡಿತ್ತು. ಹನ್ಸಿಕಾ, ಕೈ ಹಿಡಿಯುತ್ತಿರುವ ಹುಡುಗ ಖ್ಯಾತ ರಾಜಕೀಯ ಮುಖಂಡರೊಬ್ಬರ ಮಗನಾಗಿದ್ದು ಆತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಹುಡುಗ ಯಾರು ಎಂಬುದು ಮಾತ್ರ ಇಂದಿಗೂ ಸೀಕ್ರೇಟ್ ಆಗಿದೆ. ಈ ನಡುವೆ ಹನ್ಸಿಕಾ ಮದುವೆಗೆ ದಿನಾಂಕ ಹಾಗೂ ಸ್ಥಳ ಕೂಡಾ ನಿಗದಿಯಾಗಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಡಿಸೆಂಬರ್‌ನಲ್ಲಿ ಹನ್ಸಿಕಾ ಮದುವೆಯಾಗುತ್ತಿದ್ದು ಜೈಪುರದ ಮುಂಡೋತ ಪ್ಯಾಲೇಸ್‌ ಕೂಡಾ ಮದುವೆಗೆ ಬುಕ್‌ ಆಗಿದೆಯಂತೆ. ಈ ಮದುವೆ ಸಮಾರಂಭದಲ್ಲಿ ಟಾಲಿವುಡ್‌, ಕಾಲಿವುಡ್‌ ಚಿತ್ರೋದ್ಯಮದ ಗಣ್ಯರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದು ಮದುವೆ ಬಹಳ ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿದುಬಂದಿದೆ. ಹನ್ಸಿಕಾ ಕೈ ಹಿಡಿಯುತ್ತಿರುವ ಹುಡುಗ ಖ್ಯಾತ ರಾಜಕಾರಣಿ ಹಾಗೂ ಉದ್ಯಮಿಯೊಬ್ಬರ ಪುತ್ರ ಎನ್ನಲಾಗುತ್ತದೆ. ಒಟ್ಟಿನಲ್ಲಿ ಹನ್ಸಿಕಾ ಮದುವೆ ಬಗ್ಗೆ ಅಂತೆ ಕಂತೆಗಳು ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದುವರೆಗೂ ಯಾವುದೂ ಅಧಿಕೃತವಾಗಿ ಅನೌನ್ಸ್‌ ಆಗಿಲ್ಲ.

ಮುಂಬೈನಲ್ಲಿ ಹುಟ್ಟಿ ಬೆಳೆದ ಹನ್ಸಿಕಾ ಮೋಟ್ವಾನಿ

ಸಿಂಧಿ ಕುಟುಂಬಕ್ಕೆ ಸೇರಿದ ಹನ್ಸಿಕಾ ಮೋಟ್ವಾನಿ ಹುಟ್ಟಿ, ಬೆಳೆದದ್ದು ಮುಂಬೈನಲ್ಲಿ. ತಂದೆ ಪ್ರದೀಪ್ ಮೋಟ್ವಾನಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರೆ ತಾಯಿ ಮೋನಾ ಮೋಟ್ವಾನಿ ಚರ್ಮರೋಗ ತಜ್ಞೆ. ಮುಂಬೈನಲ್ಲೇ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ಹನ್ಸಿಕಾ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಶಕಲಕ ಬೂಮ್ ಬೂಮ್' ಧಾರಾವಾಹಿ ಮೂಲಕ ನಟನೆ ಆರಂಭಿಸಿದರು. ನಂತರ 'ದೇಸ್ ಮೆ ನಿಕ್ಲಾ ಹೋಗಾ ಚಾಂದ್' ಧಾರಾವಾಹಿಯಲ್ಲಿ ನಟಿಸಿದರು. ಹೃತಿಕ್ ರೋಷನ್ ಹಾಗೂ ಪ್ರೀತಿ ಝಿಂಟಾ ಅಭಿನಯದ 'ಕೋಯಿ ಮಿಲ್​​​ಗಯಾ' ಸಿನಿಮಾದಲ್ಲಿ ಕೂಡಾ ಹನ್ಸಿಕಾ ಬಾಲನಟಿಯಾಗಿ ನಟಿಸಿದರು.

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಚೆಲುವೆ

ಹವಾ, ಅಬ್ರಕ ಡಬ್ರಾ, ಜಾಗೋ, ಹಮ್ ಕೌನ್ ಹೈ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ ಹನ್ಸಿಕಾ, 2007 ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ತೆಲುಗಿನ 'ದೇಶಮುದುರು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಮೊದಲ ಚಿತ್ರದಲ್ಲೇ ಫಿಲ್ಮ್ ಫೇರ್ ಬೆಸ್ಟ್ ಫೀಮೇಲ್ ಡೆಬ್ಯೂ ಪ್ರಶಸ್ತಿ ಕೂಡಾ ಪಡೆದರು. ಅಲ್ಲಿಂದ ತಮಿಳು, ತೆಲುಗು, ಹಿಂದಿ, ಕನ್ನಡ , ಮಲಯಾಳಂ ಭಾಷೆಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಹನ್ಸಿಕಾ ನಟಿಸಿದರು. ಕನ್ನಡದಲ್ಲಿ ಹನ್ಸಿಕಾ ನಟಿಸಿದ್ದು ಒಂದೇ ಸಿನಿಮಾ. ಹನ್ಸಿಕಾ ಮೋಟ್ವಾನಿ ನಟಿ ಮಾತ್ರವಲ್ಲ, ಸಮಾಜ ಸೇವಕಿ ಕೂಡಾ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಮಾಡುತ್ತಿರುವ ಹನ್ಸಿಕಾ ಮೋಟ್ವಾನಿ, ಬ್ರೆಸ್ಟ್​ ಕ್ಯಾನ್ಸರ್​​ನಿಂದ ಬಳಲುತ್ತಿರುವ ಕೆಲವು ಮಹಿಳೆಯರ ವೈದ್ಯಕೀಯ ವೆಚ್ಚ ಕೂಡಾ ಭರಿಸುತ್ತಿದ್ದಾರೆ. ಇದರೊಂದಿಗೆ ಬ್ರೆಸ್ಟ್ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾಗಿ ಕೂಡಾ ಹನ್ಸಿಕಾ ಕೆಲಸ ಮಾಡುತ್ತಿದ್ದಾರೆ.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು