logo
ಕನ್ನಡ ಸುದ್ದಿ  /  ಮನರಂಜನೆ  /  Brandi Mallory: ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಮೂಲಕ 68 ಕೆಜಿ ತೂಕ ಇಳಿಸಿಕೊಂಡ ನಟಿಯ ದುರಂತ ಅಂತ್ಯ; ಸಾವಿನ ಕಾರಣ ಬಹಿರಂಗ

Brandi Mallory: ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಮೂಲಕ 68 ಕೆಜಿ ತೂಕ ಇಳಿಸಿಕೊಂಡ ನಟಿಯ ದುರಂತ ಅಂತ್ಯ; ಸಾವಿನ ಕಾರಣ ಬಹಿರಂಗ

Praveen Chandra B HT Kannada

Dec 06, 2023 08:05 PM IST

ನಟಿ ಬ್ರಾಂಡಿ ಮಲ್ಲೋರಿ

  • Brandi Mallory's death reason: ತೀವ್ರ ತೂಕ ಇಳಿಸಿಕೊಳ್ಳುವ ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಸೀಸನ್‌ 4 ಟಿವಿ ಕಾರ್ಯಕ್ರಮದ ಮೂಲಕ ಸುದ್ದಿಯಲ್ಲಿದ್ದ ನಟಿ ಬ್ರಾಂಡಿ ಮಲ್ಲೋರಿ ಅವರ ಅಕಾಲಿಕ ಸಾವಿನ ಕಾರಣ ಬಹಿರಂಗಗೊಂಡಿದೆ. ಶವಪರೀಕ್ಷೆ ವರದಿ ಪ್ರಕಾರ ಇವರ ಸಾವಿಗೆ ಸ್ಥೂಲಕಾಯದ ತೊಂದರೆಗಳು ಪ್ರಮುಖ ಕಾರಣ ಎಂದು ಪತ್ತೆಯಾಗಿದೆ.

 ನಟಿ ಬ್ರಾಂಡಿ ಮಲ್ಲೋರಿ
ನಟಿ ಬ್ರಾಂಡಿ ಮಲ್ಲೋರಿ (Instagram)

ತೂಕ ಇಳಿಕೆ ಮಾಡುವುದು ಹೇಗೆ ಎನ್ನುವುದು ಜಗತ್ತಿನಾದ್ಯಂತ ಇರುವ ಬಹುತೇಕರ ಬಯಕೆ. ಸ್ಥೂಲಕಾಯದಿಂದ ಬಳಲುವವರು ತಮ್ಮ ದೇಹದ ತೂಕ ಕಡಿಮೆ ಮಾಡಿಕೊಂಡು ಯಂಗ್‌ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಇದೇ ರೀತಿಯ ತೂಕ ಇಳಿಕೆಗೆ ಸಂಬಂಧಪಟ್ಟಂತೆ ಅಮೆರಿಕದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಅದರ ಹೆಸರು ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಸೀಸನ್‌ 4. ಈ ಸರಣಿಯ ಮೂಲಕ ಜನಪ್ರಿಯತೆ ಪಡೆದ ನಟಿ ಬ್ರಾಂಡಿ ಮಲ್ಲೋರಿ ಕಳೆದ ತಿಂಗಳು ಮೃತಪಟ್ಟಿದ್ದರು. ಇದೀಗ ಅವರ ಸಾವಿಗೆ ಅಧಿಕೃತ ಕಾರಣಗಳು ಬಹಿರಂಗಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್‌

ನಟಿ ಬ್ರಾಂಡಿ ಮಲ್ಲೋರಿ ಅಕಾಲಿಕ ಸಾವಿಗೆ ಕಾರಣ "ಸ್ಥೂಲಕಾಯದ ತೊಡಕುಗಳು" ಎಂದು ಹೇಳಲಾಗಿದೆ. ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಸರಣಿ ಸಂದರ್ಭದಲ್ಲಿ ಇವರು ತನ್ನ ತೂಕವನ್ನು 329 ಪೌಂಡ್‌ಗಳಿಂದ 178 ಪೌಂಡ್‌ಗಳಿಗೆ ಇಳಿಸಿಕೊಂಡಿದ್ದರು. 329 ಪೌಂಡ್‌ ಎಂದರೆ ಇವರು ಸುಮಾರು 149 ಕೆಜಿ ತೂಕ ಹೊಂದಿದ್ದರು. ತನ್ನ ತೂಕವನ್ನು 178 ಪೌಂಡ್‌ಗಳಿಗೆ ಅಂದರೆ 81 ಕೆಜಿಗೆ ಇಳಿಸಿಕೊಂಡಿದ್ದರು. ಒಟ್ಟಾರೆ ಸುಮಾರು 68 ಕೆಜಿಯಷ್ಟು ತೂಕ ಇಳಿಕೆ ಮಾಡಿಕೊಂಡಿದ್ದರು.

ಈ ನಟಿಯು ಈ ಸೀರಿಸ್‌ನಲ್ಲಿ ನವೆಂಬರ್‌ 8ರಂದು ಕೊನೆಯದಾಗಿ ಕಾಣಿಸಿಕೊಂಡಿದ್ದರು. ನವೆಂಬರ್‌ 9ರಂದು ರಸ್ತೆಯ ಪಕ್ಕ ತನ್ನ ವಾಹನದೊಳಗೆ ಇದ್ದರು. ಅಕ್ಕಪಕ್ಕದ ಅಂಗಡಿಯ ಉದ್ಯೋಗಿಗಳು ಬಂದು ನೋಡಿದಾಗ ವಾಹನದೊಳಗಿದ್ದ ಇವರ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಸೀಸನ್‌ 4ರ ನಟಿ ವಾಹನದೊಳಗೆ ಮೃತಪಟ್ಟಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.

ತೂಕ ಇಳಿಕೆ ಪ್ರಯಾಣದ ದುರಂತ ಅಂತ್ಯ

ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ ಸೀಸನ್‌ 4 ಮೂಲಕ ಜಗತ್ತಿನಾದ್ಯಂತ ವೀಕ್ಷಕರನ್ನು ಹೊಂದಿದ್ದ ಬ್ರಾಂಡ್‌ ಮಲ್ಲೋರಿ ಪ್ರಯಾಣವು ದುರಂತದಲ್ಲಿ ಅಂತ್ಯವಾಗಿದೆ. ಇವರ ಸಾವಿಗೆ ತೂಕ ಇಳಿಸಿಕೊಂಡಿರುವುದೇ ಕಾರಣ ಎಂದು ಚರ್ಚೆಯಾಗಿತ್ತು. ಇದೀಗ ಶವಪರೀಕ್ಷೆ ವರದಿಯು ಇದನ್ನು ಖಚಿತವಾಗಿ ತಿಳಿಸಿಲ್ಲ. ರಿಯಾಲಿಟಿ ಸ್ಟಾರ್‌ ನಟಿಯು ತನ್ನ ಹೃದಯದ ವಿಸ್ತರಣೆ ತೊಂದರೆ ಹೊಂದಿದ್ದರು. ಇದರಿಂದ ಇವರಿಗೆ ಮಧುಮೇಹ ಹೆಚ್ಚುವ ಅವಕಾಶವಿತ್ತು ಎಂದು ಶವಪರೀಕ್ಷೆ ವರದಿ ತಿಳಿಸಿದೆ. ಶವಪರೀಕ್ಷೆಯ ಪ್ರಕಾರ ಇವರದ್ದು ಸಹಜ ಸಾವು, ನೈಸರ್ಗಿಕ ಸಾವಾಗಿದೆ. ಯಾವುದೇ ಬಾಹ್ಯಾ ಹೊಡೆತಗಳು ಕಂಡುಬಂದಿಲ್ಲ. ಇವರ ದೇಹದಲ್ಲಿ ಯಾವುದೇ ಹೊಸ, ಗಂಭೀರ ಗಾಯಗಳು ಇರಲಿಲ್ಲ ಎಂದು ಅಟಾಪ್ಸಿ ವರದಿ ತಿಳಿಸಿದೆ.

ಇವರ ದೇಹದಲ್ಲಿ ಆಲ್ಕೋಹಾಲ್‌ ಮತ್ತು ಡ್ರಗ್ಸ್‌ ಸೇವನೆಯ ಅಂಶಗಳು ಕೊಂಚ ಮಟ್ಟದಲ್ಲಿ ಇತ್ತು. ಆದರೆ, ಇದು ಇವರ ಸಾವಿಗೆ ಕಾರಣವಾಗಿಲ್ಲ. ಸ್ಥೂಲಕಾಯದ ಕಾರಣಗಳಿಂದ ಇವರು ಅಕಾಲಿಕವಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಅತ್ಯಧಿಕ ತೂಕ ಹೊಂದಿದ್ದ ತನ್ನ 29 ವರ್ಷದ ಸಹೋದರಿಯ ಅಕಾಲಿಕ ಸಾವಿನಿಂದಾಗಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ನನಗೆ ಪ್ರೇರಣೆಯಾಯಿತು ಎಂದು ಬ್ರಾಂಡಿ ಈ ಹಿಂದೆ ಹೇಳಿಕೊಂಡಿದ್ದರು. "ಬ್ರಾಂಡಿ ಮಲ್ಲೋರಿ ಅವರು ತನ್ನ ಸುತ್ತಮುತ್ತಲಿನ ಎಲ್ಲರಲ್ಲೂ ಖುಷಿಪಡಿಸುವಂತಹ ವ್ಯಕ್ತಿತ್ವ ಹೊಂದಿದ್ದರು. ತೂಕದ ದೇಹ ಹೊಂದಿದ್ದರೂ ಆಕ್ಟಿವ್‌ ಆಗಿದ್ದರು. ತೂಕ ಇಳಿಸಿಕೊಳ್ಳಲು ಪ್ರಯತ್ನ ಪಟ್ಟರು. ಎಲ್ಲರಂತೆ ಸುಂದರವಾಗಿ ನೃತ್ಯ ಮಾಡುತ್ತಿದ್ದರು. ಆಕೆಯ ಛಲ, ಬದುಕು ಎಲ್ಲರಿಗೂ ಸ್ಪೂರ್ತಿಯಾಗುವಂತೆ ಇತ್ತು" ಎಂದು ಎಕ್ಸ್‌ಟ್ರೀಮ್‌ ವೇಟ್‌ ಲಾಸ್‌ನ ಮಾಜಿ ವೇಟ್‌ ಲಾಸ್‌ ಟ್ರೇನರ್‌ವೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ