logo
ಕನ್ನಡ ಸುದ್ದಿ  /  ಮನರಂಜನೆ  /  Ponniyin Selvan 2 On Ott: ಒಟಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌ 2 ಉಚಿತ ಸ್ಟ್ರೀಮಿಂಗ್‌ ಶುರು

Ponniyin Selvan 2 on OTT: ಒಟಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌ 2 ಉಚಿತ ಸ್ಟ್ರೀಮಿಂಗ್‌ ಶುರು

HT Kannada Desk HT Kannada

Jun 02, 2023 12:08 PM IST

ಈ ಒಟಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌ 2 ಉಚಿತ ಸ್ಟ್ರೀಮಿಂಗ್‌ ಶುರು

    • ತಮಿಳಿನಲ್ಲಿ ಮಾತ್ರವಲ್ಲದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮೋಡಿ ಮಾಡಿದ್ದ ಪೊನ್ನಿಯಿನ್‌ ಸೇಲ್ವನ್‌ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಬಂದಿದೆ. 
ಈ ಒಟಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌ 2 ಉಚಿತ ಸ್ಟ್ರೀಮಿಂಗ್‌ ಶುರು
ಈ ಒಟಿಟಿಯಲ್ಲಿ ಪೊನ್ನಿಯನ್‌ ಸೆಲ್ವನ್‌ 2 ಉಚಿತ ಸ್ಟ್ರೀಮಿಂಗ್‌ ಶುರು

Ponniyin Selvan 2 on OTT: ‘ಪೊನ್ನಿಯನ್‌ ಸೇಲ್ವನ್‌ 1’ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಮೇಕಿಂಗ್, ಸ್ಟಾರ್‌ ಕಾಸ್ಟ್‌ ಮೂಲಕವೇ ಗಮನ ಸೆಳೆದ ಈ ಚಿತ್ರ ನೋಡುಗರಿಂದಲೂ ಮೆಚ್ಚುಗೆ ಪಡೆದಿದ್ದಲ್ಲದೆ, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿಯೂ ಕಮಾಲ್‌ ಮಾಡಿತ್ತು. ಹೀಗೆ ಮೊದಲ ಭಾಗವನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಎರಡನೇ ಭಾಗದ ಮೇಲೂ ಕೌತುಕ ಮೂಡಿತ್ತು. ಅದರಂತೆ ಎರಡನೇ ಭಾಗ ಮಾ. 29ರಂದು ಬಿಡುಗಡೆ ಆಗಿತ್ತು.

ಟ್ರೆಂಡಿಂಗ್​ ಸುದ್ದಿ

‘ವಿವಾಹಿತ ಪುರುಷನ ಜತೆ ಗೌಪ್ಯ ಮದುವೆ ಆಗಿದ್ದಕ್ಕೆ ಮಕ್ಕಳೇ ಬೇಡ ಎಂದು ನಿರ್ಧರಿಸಿದೆ!’ ‘ಅಣ್ಣಯ್ಯ’ ಚಿತ್ರದ ಅರುಣಾ ಇರಾನಿ ಕಥೆ -ವ್ಯಥೆ

‘ಒಂದು ವೇಳೆ ಪ್ರಜ್ವಲ್‌ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ನೆ ಬಿಡ್ತಿದ್ರಾ?’ ಧರ್ಮ ಎಳೆದು ತಂದ ನಟಿ ಸ್ವರಾ ಭಾಸ್ಕರ್‌

Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ; ಶೂಟಿಂಗ್‌ ಯಾವಾಗ ಆರಂಭ? ಇಲ್ಲಿದೆ ಹೆಚ್ಚಿನ ವಿವರ

‘ಅವ್ನ ಜತೆಗೇನು ಮಾತು, ಅವ್ರನ್ನ ಅಣ್ಣ ಅಂತ ಕರೀ, ಈ ಅನುಮಾನವೇ ಆ ವ್ಯಕ್ತಿ ಜತೆಗಿನ ಬ್ರೇಕಪ್‌ಗೆ ಕಾರಣವಾಯ್ತು’; ತನಿಷಾ ಕುಪ್ಪಂಡ

ಇದನ್ನೂ ಓದಿ: ಬಾಡಿಗೆ ಜನರನ್ನು ಕರೆತಂದು ರ್‍ಯಾಲಿ ಮಾಡಿದರೆ ದೇಶದ ಗೌರವ ಹೆಚ್ಚಾಗಲ್ಲ, ಕುಸ್ತಿಪಟುಗಳ ಕಡೆಗೂ ಗಮನಹರಿಸಿ; ಕಿಶೋರ್‌ ಕಿಡಿ

ಕಳೆದ ವರ್ಷದ ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ‘ಪೊನ್ನಿಯನ್‌ ಸೇಲ್ವನ್‌ 1’ ಚಿತ್ರ ತೆರೆಕಂಡಿತ್ತು. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಜಂಟಿಯಾಗಿ ನಿರ್ಮಾಣ ಮಾಡಿದ್ದವು. 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸರಣಿ ಸಿನಿಮಾಗಳ ಪೈಕಿ ಮೊದಲ ಭಾಗ 327 ಕೋಟಿ ಗಳಿಕೆ ಕಂಡಿತ್ತು. ಎರಡನೇ ಭಾಗ ಕೆಲ ಕಲೆಕ್ಷನ್‌ ವರದಿಗಳನ್ನು ನೋಡುವುದಾದರೆ 170 ಕೋಟಿ ಸನಿಹಕೆ ಬಂದು ನಿಂತಿತ್ತು.

ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಮೊದಲ ಭಾಗಕ್ಕಿಂತ ಹೆಚ್ಚು ಸದ್ದು ಮಾಡಲಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿಯೂ ಈ ಸಿನಿಮಾದ ಗಳಿಕೆ ಏರಿಕೆ ಕಾಣಲಿಲ್ಲ. ಆದರೆ, ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಹೀಗಿರುವಾಗ ಕಳೆದ ವಾರ ಅಂದರೆ ಮೇ 26ಕ್ಕೆ ಅಮೇಜಾನ್‌ ಪ್ರೈಂನಲ್ಲಿ ಈ ಚಿತ್ರ ಸ್ಟ್ರೀಮಿಂಗ್‌ ಆರಂಭಿಸಿತ್ತು. 399ರೂ ರೆಂಟ್‌ ನೀಡಿ ಸಿನಿಮಾ ವೀಕ್ಷಿಸಬೇಕಿತ್ತು. ಇದೀಗ ಒಂದೇ ವಾರದಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ: ಬಿಕಿನಿಯಲ್ಲಿ ಮೌನಿ‌ ರಾಯ್ ದೇಹಸಿರಿ ಪ್ರದರ್ಶನ; ಕೆಂಪುಡುಗೆಯಲ್ಲಿ ಮಾದಕ ಚೆಲುವೆಯ ಬಳುಕು ಬಿನ್ನಾಣ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಪೊನ್ನಿಯಿನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ. ಜಯಂ ರವಿ, ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್​, ಪ್ರಕಾಶ್ ರಾಜ್​ ಸೇರಿದಂತೆ ಹಲವರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ಪೊನ್ನಿಯಿನ್‌ ಸೆಲ್ವನ್‌ ಆಧರಿಸಿದ ಈ ಕಥೆಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶನದ ಜತೆಗೆ ಸುಭಾಸ್ಕರನ್ ಜತೆ ಸೇರಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಮಣಿರತ್ನಂ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು