logo
ಕನ್ನಡ ಸುದ್ದಿ  /  Entertainment  /  Raghava Lawrence Shared Body Transformation Photo

Raghava Lawrence‌ Body Transformation:'ಚಂದ್ರಮುಖಿ-2' ಚಿತ್ರಕ್ಕಾಗಿ ತಯಾರಿ...ಜಿಮ್‌ ಬಾಡಿ ಫೋಟೋ ಹಂಚಿಕೊಂಡ ನಟ

HT Kannada Desk HT Kannada

Sep 14, 2022 03:52 PM IST

ಜಿಮ್‌ ಬಾಡಿ ಫೋಟೋ ಹಂಚಿಕೊಂಡ ರಾಘವ ಲಾರೆನ್ಸ್

    • ಚಂದ್ರಮುಖಿ-2 ಚಿತ್ರಕ್ಕಾಗಿ ರಾಘವ, ಬಾಡಿ ಬಿಲ್ಡ್‌ ಮಾಡಿಕೊಂಡು ಫುಲ್‌ ತಯಾರಾಗಿದ್ದಾರೆ. ಇದೇ ವಿಚಾರವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಡಿ ಟ್ರಾನ್ಸ್‌ಫರ್ಮೇಶನ್‌ ಫೋಟೋಗಳನ್ನು ಷೇರ್‌ ಮಾಡಿಕೊಂಡಿದ್ದಾರೆ.
ಜಿಮ್‌ ಬಾಡಿ ಫೋಟೋ ಹಂಚಿಕೊಂಡ ರಾಘವ ಲಾರೆನ್ಸ್
ಜಿಮ್‌ ಬಾಡಿ ಫೋಟೋ ಹಂಚಿಕೊಂಡ ರಾಘವ ಲಾರೆನ್ಸ್ (PC: Raghava Lawrence‌ social media)

ಕಾಂಚನಾ ಸರಣಿ ಸಿನಿಮಾಗಳ ನಂತರ ಕೊರಿಯೋಗ್ರಾಫರ್‌ ಕಮ್‌ ನಟ-ನಿರ್ದೇಶಕ ರಾಘವ ಲಾರೆನ್ಸ್‌ ಈಗ ತಮಿಳು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ರಾಘವ ಲಾರೆನ್ಸ್‌ ಈಗ ತಮಿಳಿನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಅದರಲ್ಲಿ ಚಂದ್ರಮುಖಿ-2 ಕೂಡಾ ಒಂದು. ಈಗಾಗಲೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಚಿತ್ರಕ್ಕಾಗಿ ರಾಘವ ಬಹಳ ಬದಲಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Puspa 2: ನೀ ಭುಜವ ಎತ್ತಿ ನಡೆಯುತ್ತಿದ್ದರೆ ಭುವಿಯೇ ಬೆದರುತ್ತಿತ್ತಂತೆ; ಪುಷ್ಪ ಪುಷ್ಪ ಕೋರಸ್‌ನಲ್ಲೇ ಹಲವು ಝಲಕ್‌ ತೋರಿಸಿದ ಚಿತ್ರತಂಡ

ಭೂಮಿಕಾ ಟ್ಯೂಟರ್‌ ಜಾಬ್‌ಗೆ ಹೋಗಲು ಗೌತಮ್‌ ಗ್ರೀನ್‌ ಸಿಗ್ನಲ್‌; ಶಕುಂತಲಾ ಕುತಂತ್ರದಿಂದ ಕೆಲಸಕ್ಕೆ ಕುತ್ತು- ಅಮೃತಧಾರೆ ಸೀರಿಯಲ್‌ ಕಥೆ

Brundavana Serial: ಭಾರ್ಗವಿಯ ಮೋಸದ ಬಲೆಗೆ ಬಿದ್ದ ಆಕಾಶ್‌; ಸಹನಾಗೆ ಪ್ರೀತಿ ಸಕ್ಸಸ್‌ ಆದ ಖುಷಿ, ಸುನಾಮಿಗೆ ಫುಲ್‌ ಕನ್‌ಫ್ಯೂಷನ್‌

Bhagyalakshmi Serial: ನಿನ್ನ ಕೈಲಾದ್ರೆ ಪೊಲೀಸ್‌ ಕಂಪ್ಲೇಂಟ್‌ ಕೊಟ್ಟು ನೋಡು, ಪೂಜಾಗೆ ತಾಂಡವ್‌ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ

ಚಂದ್ರಮುಖಿ-2 ಚಿತ್ರಕ್ಕಾಗಿ ರಾಘವ, ಬಾಡಿ ಬಿಲ್ಡ್‌ ಮಾಡಿಕೊಂಡು ಫುಲ್‌ ತಯಾರಾಗಿದ್ದಾರೆ. ಇದೇ ವಿಚಾರವನ್ನು ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಡಿ ಟ್ರಾನ್ಸ್‌ಫರ್ಮೇಶನ್‌ ಫೋಟೋಗಳನ್ನು ಷೇರ್‌ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ವರ್ಕೌಟ್‌ಗೆ ಸಹಾಯ ಮಾಡಿದ ತಮ್ಮ ಟ್ರೈನರ್‌ಗೆ ಕೂಡಾ ಅವರು ಧನ್ಯವಾದ ಅರ್ಪಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನನ್ನ ಟ್ರಾನ್ಸ್‌ಫರ್ಮೇಶನ್‌ ಸಂಬಂಧಿಸಿದಂತೆ ನೀವು ನನಗೆ ಶುಭ ಕೋರಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ನನ್ನ ಟ್ರೈನರ್‌ಗೆ ಎಲ್ಲಾ ಕ್ರೆಡಿಟ್ಸ್‌ ಸಲ್ಲಬೇಕು, ಥ್ಯಾಂಕ್ಯೂ ಮಾಸ್ಟರ್‌, ಲವ್‌ ಯೂ, ಯಾರಾದರೂ ಫಿಟ್ನೆಸ್‌ ಜರ್ನಿ ಆರಂಭಿಸಬೇಕೆಂದರೆ ಶಿವ ಅವರನ್ನು ಸಂಪರ್ಕಿಸಿ ಎಂದು ರಾಘವ ಲಾರೆನ್ಸ್‌ ಬರೆದುಕೊಂಡಿದ್ದಾರೆ. ರಾಘವ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಚಂದ್ರಮುಖಿ-2 ಹೊರತುಪಡಿಸಿ ರಾಘವ ಲಾರೆನ್ಸ್ ರುದ್ರನ್‌, ಅಧಿಗಾರ ಹಾಗೂ ಇತರ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಪಿ. ವಾಸು ನಿರ್ದೇಶಿಸುತ್ತಿರುವ 'ಚಂದ್ರಮುಖಿ-2'

ಆಪ್ತಮಿತ್ರ ಹಾಗೂ ಆಪ್ತರಕ್ಷಕ ಚಿತ್ರಗಳನ್ನು ಪಿ. ವಾಸು ಕಥೆ ಬರೆದು ನಿರ್ದೇಶಿಸಿದ್ದರು. ಹಾಗೇ 2005 ರಲ್ಲಿ ತೆರೆ ಕಂಡಿದ್ದ ತಮಿಳಿನ 'ಚಂದ್ರಮುಖಿ' ಚಿತ್ರವನ್ನು ಕೂಡಾ ಪಿ. ವಾಸು ಕಥೆ ಬರೆದು ನಿರ್ದೇಶಿಸಿದ್ದರು. ಇದೀಗ 'ಚಂದ್ರಮುಖಿ 2' ಚಿತ್ರಕ್ಕೆ ಕೂಡಾ ವಾಸು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಚಂದ್ರಮುಖಿ' ಚಿತ್ರದ ಸೀಕ್ವೆಲ್ ಬರುವುದಾಗಿ ಸುಮಾರು 2 ವರ್ಷಗಳ ಹಿಂದೆಯೇ ಹೇಳಲಾಗಿತ್ತು. ಆದರೆ ಇದೀಗ ಅಧಿಕೃತ ಘೋಷಣೆಯಾಗಿದ್ದು ಸೀಕ್ವೆಲ್​​​​​​ನಲ್ಲಿ ಕೆಲವೊಂದು ಬದಲಾವಣೆಗಳಾಗಿವೆ. 'ಚಂದ್ರಮುಖಿ' ಚಿತ್ರವನ್ನು ಶಿವಾಜಿ ಪ್ರೊಡಕ್ಷನ್ಸ್ ನಿರ್ಮಿಸಿತ್ತು, ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಜ್ಯೋತಿಕಾ, ಪ್ರಭು, ವಡಿವೇಲು, ನಯನತಾರಾ, ಅವಿನಾಶ್ ಹಾಗೂ ಇನ್ನಿತರರು ನಟಿಸಿದ್ದರು. ಆದರೆ ಸೀಕ್ವೆಲ್​​​​​ನಲ್ಲಿ ರಾಘವ ಲಾರೆನ್ಸ್ ನಾಯಕನಾಗಿ ನಟಿಸುತ್ತಿದ್ದಾರೆ. ಅಲ್ಲದೆ ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.

ಈ ಚಿತ್ರದಲ್ಲಿ ರಾಘವ ಲಾರೆನ್ಸ್ ಜೊತೆಗೆ ವಡಿವೇಲು ಜೊತೆಯಾಗಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆಯ ಸುಭಾಸ್ಕರನ್ ಈ ಯೋಜನೆಗೆ ಬಂಡವಾಳ ಹೂಡುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಆರ್.ಡಿ. ರಾಜಶೇಖರ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. 'ಚಂದ್ರಮುಖಿ 2' ಚಿತ್ರದಲ್ಲಿ ನಾಯಕಿಯಾಗಿ ರಾಶಿ ಖನ್ನಾ, ಆಂಡ್ರಿಯಾ ಅಥವಾ ತ್ರಿಶಾ ನಾಯಕಿಯಾಗಬಹುದು ಎನ್ನಲಾಗಿತ್ತು. ಆದರೆ ಚಿತ್ರತಂಡ ಲಕ್ಷ್ಮಿ ಮೆನನ್​​ ಅವರನ್ನು ನಾಯಕಿಯಾಗಿ ಫೈನಲ್ ಮಾಡಿದೆ. ಜುಲೈ 15 ರಿಂದ ಮೈಸೂರಿನಲ್ಲಿ ಮೊದಲ ಶೆಡ್ಯೂಲ್‌ ಚಿತ್ರೀಕರಣ ಆರಂಭವಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು