logo
ಕನ್ನಡ ಸುದ್ದಿ  /  Entertainment  /  Rocking Star Yash New Look Goes Viral On Social Media

Yash New Look: ‘ಮಹತ್ತರವಾದದ್ದೇನೋ ನಡೆಯುತ್ತಿದೆ...’; ಯಶ್‌ ಕೊಟ್ಟ ಈ ಸಣ್ಣ ಸುಳಿವು ಅದೇ ಇರಬಹುದಾ?

Jan 26, 2023 04:41 PM IST

‘ಮಹತ್ತರವಾದದ್ದೇನೋ ನಡೆಯುತ್ತಿದೆ...’; ಯಶ್‌ ಕೊಟ್ಟ ಈ ಸಣ್ಣ ಸುಳಿವು ಅದೇ ಇರಬಹುದಾ?

    • ನಟ ಯಶ್‌ ಅವರ ಹೊಸ ಫೋಟೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಸಂಚಲನ ಸೃಷ್ಟಿಸುತ್ತಿದೆ. 
‘ಮಹತ್ತರವಾದದ್ದೇನೋ ನಡೆಯುತ್ತಿದೆ...’; ಯಶ್‌ ಕೊಟ್ಟ ಈ ಸಣ್ಣ ಸುಳಿವು ಅದೇ ಇರಬಹುದಾ?
‘ಮಹತ್ತರವಾದದ್ದೇನೋ ನಡೆಯುತ್ತಿದೆ...’; ಯಶ್‌ ಕೊಟ್ಟ ಈ ಸಣ್ಣ ಸುಳಿವು ಅದೇ ಇರಬಹುದಾ?

Yash new Look: ರಾಕಿಂಗ್‌ ಸ್ಟಾರ್ ಯಶ್‌ ಮುಂದಿನ ಸಿನಿಮಾ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಅಭಿಮಾನಿ ವಲಯದಲ್ಲಿ ಮನೆ ಮಾಡಿರುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ‘ಕೆಜಿಎಫ್‌ 2’ ಸಿನಿಮಾ ತೆರೆಕಂಡ ಮೇಲಿಂದ ನಟ ಯಶ್‌ ಅವರ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಹಾಗಂತ ಅವರೇನು ಸುಮ್ಮನೆ ಕುಳಿತಿಲ್ಲ. ಮಹತ್ತರವಾದದ್ದೇನೋ ಮಾಡಲು ಹೊರಟಿದ್ದಾರವರು.

ಟ್ರೆಂಡಿಂಗ್​ ಸುದ್ದಿ

‘ವಿವಾಹಿತ ಪುರುಷನ ಜತೆ ಗೌಪ್ಯ ಮದುವೆ ಆಗಿದ್ದಕ್ಕೆ ಮಕ್ಕಳೇ ಬೇಡ ಎಂದು ನಿರ್ಧರಿಸಿದೆ!’ ‘ಅಣ್ಣಯ್ಯ’ ಚಿತ್ರದ ಅರುಣಾ ಇರಾನಿ ಕಥೆ -ವ್ಯಥೆ

‘ಒಂದು ವೇಳೆ ಪ್ರಜ್ವಲ್‌ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ನೆ ಬಿಡ್ತಿದ್ರಾ?’ ಧರ್ಮ ಎಳೆದು ತಂದ ನಟಿ ಸ್ವರಾ ಭಾಸ್ಕರ್‌

Mahesh Babu: ರಾಜಮೌಳಿ ಮುಂದಿನ ಸಿನಿಮಾಕ್ಕೆ ಮಹೇಶ್‌ ಬಾಬು ಹೀರೋ; ಶೂಟಿಂಗ್‌ ಯಾವಾಗ ಆರಂಭ? ಇಲ್ಲಿದೆ ಹೆಚ್ಚಿನ ವಿವರ

‘ಅವ್ನ ಜತೆಗೇನು ಮಾತು, ಅವ್ರನ್ನ ಅಣ್ಣ ಅಂತ ಕರೀ, ಈ ಅನುಮಾನವೇ ಆ ವ್ಯಕ್ತಿ ಜತೆಗಿನ ಬ್ರೇಕಪ್‌ಗೆ ಕಾರಣವಾಯ್ತು’; ತನಿಷಾ ಕುಪ್ಪಂಡ

ಇತ್ತ ಅವರ ಹೆಸರಲ್ಲಿ ಹರಿದಾಡಿದ ವದಂತಿಗಳಿಗೇನು ಕಡಿಮೆಯಿಲ್ಲ! ಆ ನಿರ್ದೇಶಕರ ಜತೆ ಯಶ್‌ ಸಿನಿಮಾ, ಈ ನಿರ್ಮಾಪಕರ ಜತೆ ಸಿನಿಮಾ, 400 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಯಶ್‌.. ಹೀಗೆ ತಳಬುಡ ಇಲ್ಲದ ಸುದ್ದಿಗಳಂತೂ ಕೇಳಿಬರುತ್ತಲೇ ಇದ್ದವು. ಈಗ ಇದೆಲ್ಲದರ ಗ್ಯಾಪ್‌ನಲ್ಲಿ ಯಶ್‌ ಅವರ ಹೊಸ ಲುಕ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.

ಯಶ್‌ ಹೊಸ ಲುಕ್‌ ಹಿಂದಿನ ಮರ್ಮವೇನು?

ನಟ ಯಶ್‌ ಸದ್ಯ ಕೇವಲ ಸ್ಯಾಂಡಲ್‌ವುಡ್‌ಗೆ ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಬೆಳೆದು ನಿಂತಿದ್ದಾರೆ. ಅವರ ಸಿನಿಮಾಕ್ಕೆ ಎಲ್ಲರೂ ಕಾದು ಕುಳಿತಿದ್ದಾರೆ. ಆದರೆ, ಅವರ ಮುಂದಿನ ಸಿನಿಮಾ ಯಾವುದೆಂಬ ವಿಚಾರ ಮಾತ್ರ ಇನ್ನೂ ಲಭ್ಯವಾಗಿಲ್ಲ. ಹೀಗಿರುವಾಗಲೇ ಯಶ್‌ ಅವರ ಮಾಸ್‌ ಲುಕ್‌ವೊಂದು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್‌ ನೋಡಿ ಇದು ಯಶ್‌ ಹೊಸ ಸಿನಿಮಾದ ಶೂಟಿಂಗ್‌ ಇರಬಹುದಾ ಎಂದೇ ಹೇಳಲಾಗುತ್ತಿದೆ.

ಸಲಾರ್‌ ಚಿತ್ರದಲ್ಲಿದ್ದಾರಾ ಯಶ್?

ಈ ಹಿಂದೆಯೇ ಸುದ್ದಿಯಾದಂತೆ, ಸಲಾರ್‌ ಚಿತ್ರದಲ್ಲಿ ನಟ ಯಶ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಪ್ರಭಾಸ್‌ ಜತೆಗೆ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಯಶ್‌ ಹೊಸ ಲುಕ್‌ ಹೊರಬೀಳುತ್ತಿದ್ದಂತೆ, ಹಳೇ ಸುದ್ದಿಗೆ ಮತ್ತೆ ಮರುಜೀವ ಬಂದಂತಾಗಿದೆ. ನೆಟ್ಟಿಗರು ಯಶ್‌ ಲುಕ್‌ ನೋಡಿ, ಸಲಾರ್‌ ಸಿನಿಮಾದಲ್ಲಿ ನಟಿಸುತ್ತಿರಬಹುದೆಂದು ಊಹಿಸುತ್ತಿದ್ದಾರೆ. ಅಂದಹಾಗೆ, ಸಲಾರ್‌ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಂಸ್‌ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಸಲಾರ್‌ ಫೋಟೋ ಲೀಕ್..‌

ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿರುವ ಸಲಾರ್‌ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಟ್ರೆಂಡಿಂಗ್‌ನಲ್ಲಿರುತ್ತದೆ. ಅದೂ ಲೀಕ್‌ ಫೋಟೋಗಳ ವಿಚಾರದಲ್ಲಿಯೇ ಹೆಚ್ಚು. ಇದೀಗ ಮತ್ತದೇ ಶೂಟಿಂಗ್‌ ಸೆಟ್‌ನಲ್ಲಿನ ಫೋಟೋವೊಂದು ಲೀಕ್‌ ಆಗಿದ್ದು, ಆ ಫೋಟೋವನ್ನು ಕೆಜಿಎಫ್‌ ಚಿತ್ರದ ದೃಶ್ಯವೊಂದಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಪ್ರಭಾಸ್‌ ಅವರ ಲುಕ್‌ ಸಹ ಗಮನ ಸೆಳೆಯುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು