ಕನ್ನಡ ಸುದ್ದಿ  /  Entertainment  /  Pathaan Box Office Shah Rukh Khan Breathes Life Into Bollywood With 55 Crore Opening And Beats Kgf 2 Day One Collection

Pathaan beats KGF 2: ‘ಕೆಜಿಎಫ್‌ 2’ ದಾಖಲೆ ಪುಡಿ ಪುಡಿ.. ‌ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಗೆದ್ದು ಬೀಗಿದ ‘ಪಠಾಣ್‌’ ಗಳಿಸಿದ್ದೆಷ್ಟು?

ಶಾರುಖ್‌ ಖಾನ್‌ ಕೊನೆಗೂ ಗೆದ್ದು ಬೀಗಿದ್ದಾರೆ. ಪಠಾಣ್‌ ಸಿನಿಮಾ ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡಿ ಈ ಹಿಂದೆ ಕೆಜಿಎಫ್‌2 ಹೆಸರಿನಲ್ಲಿದ್ದ ದಾಖಲೆಯನ್ನು ಪುಡಿಗಟ್ಟಿದೆ.

‘ಕೆಜಿಎಫ್‌  2’ ದಾಖಲೆ ಪುಡಿ ಪುಡಿ.. ‌ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಗೆದ್ದು ಬೀಗಿದ ‘ಪಠಾಣ್‌’ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ..
‘ಕೆಜಿಎಫ್‌ 2’ ದಾಖಲೆ ಪುಡಿ ಪುಡಿ.. ‌ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಗೆದ್ದು ಬೀಗಿದ ‘ಪಠಾಣ್‌’ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ..

Pathaan beats KGF 2: ಬಹುನಿರೀಕ್ಷಿತ ‘ಪಠಾಣ್‌’ ಸಿನಿಮಾ ಜನವರಿ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. 2018ರಲ್ಲಿ ಶಾರುಖ್‌ ನಟನೆಯ ಜೀರೋ ಸಿನಿಮಾ ತೆರೆಕಂಡಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಆ ಚಿತ್ರ ಹೀನಾಯ ಸೋಲು ಕಂಡಿತ್ತು. ಇದೀಗ ಸುದೀರ್ಘ ನಾಲ್ಕು ವರ್ಷದ ಬಳಿಕ ಶಾರುಖ್‌ ಮತ್ತೆ ‘ಪಠಾಣ್‌’ ಮೂಲಕ ತೆರೆಮೇಲೆ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳಿಂದ ಸದ್ದು ಮಾಡಿದ್ದ ಈ ಸಿನಿಮಾ, ವಿವಾದಗಳಿಂದಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿತ್ತು. ಈಗ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆದು, ಹಳೇ ರೆಕಾರ್ಡ್‌ಗಳನ್ನೆಲ್ಲ ಪುಡಿಗಟ್ಟಿದೆ.

‘ವಾರ್’ ಸಿನಿಮಾ ಖ್ಯಾತಿಯ ಸಿದ್ಧಾರ್ಥ್‌ ಆನಂದ್‌ ಈ ಸಿನಿಮಾ ನಿರ್ದೇಶನ ಮಾಡಿದ್ದು ಒಂದೆಡೆಯಾದರೆ, ಯಶ್‌ ರಾಜ್‌ ಫಿಲಂಸ್‌ ಈ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿದಿದೆ. ಶಾರುಖ್‌ ಜತೆಗೆ ದೀಪಿಕಾ ಪಡುಕೋಣೆ, ಜಾನ್‌ ಅಬ್ರಹಾಂ ಸಹ ಸಾಥ್‌ ನೀಡಿದ್ದಾರೆ. ಈಗ ಈ ಬಹುಕೋಟಿ ವೆಚ್ಚದ ‘ಪಠಾಣ್‌’ ಸಿನಿಮಾ ಮೊದಲ ದಿನದ ಕಲೆಕ್ಷನ್‌ ಎಷ್ಟು? ಸೃಷ್ಟಿಸಿದ ದಾಖಲೆ ಏನು? ಇಲ್ಲಿದೆ ನೋಡಿ..

ಶಾರುಖ್ ಈಸ್‌ ಬ್ಯಾಕ್...

ಈ ಮೊದಲೇ ಹೇಳಿಕೊಂಡಂತೆ ‘ಪಠಾಣ್‌’ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್‌ ಸಿಕ್ಕಿತ್ತು. ಬಾಕ್ಸ್‌ಆಫೀಸ್‌ನಲ್ಲಿ ಅಷ್ಟೇ ದೊಡ್ಡ ಮಟ್ಟದ ಕಲೆಕ್ಷನ್‌ ಫಸಲು ತೆಗೆಯಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಇದೀಗ ಅದು ನಿಜವಾಗಿದೆ. ಅಚ್ಚರಿಯ ರೀತಿಯಲ್ಲಿ ‘ಪಠಾಣ್‌’ ಸಿನಿಮಾ ಬಂಗಾರದ ಬೆಳೆಯನ್ನೇ ತೆಗೆದಿದೆ. ಬಿಡುಗಡೆಯಾದ ಮೊದಲ ದಿನ (ಜನವರಿ 25) ಅನಾಯಾಸವಾಗಿ 55 ಕೋಟಿ ರೂ. ಕಲೆಕ್ಷನ್‌ ಮಾಡಿ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ.‌ ಈ ವಿಚಾರವನ್ನು ವಿಮರ್ಶಕ ತರಣ್‌ ಆದರ್ಶ್‌  ಮಾಹಿತಿ ಹಂಚಿಕೊಂಡಿದ್ದಾರೆ. 

ಕೆಜಿಎಫ್‌ 2 ದಾಖಲೆ ಪುಡಿ ಪುಡಿ...

ಕಳೆದ ವರ್ಷ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡದ ‘ಕೆಜಿಎಫ್‌ 2’ ಸಿನಿಮಾ ದಾಖಲೆಯನ್ನು ‘ಪಠಾಣ್‌’ ಮುರಿದಿದೆ. ‘ಕೆಜಿಎಫ್‌ 2’ ಚಿತ್ರ ಹಿಂದಿ ಅವತರಣಿಕೆ ಮೊದಲ ದಿನ 53.95 ಕೋಟಿ ಗಳಿಕೆ ಕಂಡಿತ್ತು. ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಇದೀಗ 55 ಕೋಟಿ ಕಲೆಕ್ಷನ್‌ ಮಾಡಿ ಮೊದಲ ಸ್ಥಾನ ಅಲಕಂರಿಸಿದೆ ‘ಪಠಾಣ್‌’. ಇನ್ನುಳಿದಂತೆ 51.60 ಕೋಟಿ ಗಳಿಸಿರುವ ವಾರ್‌ ಸಿನಿಮಾ ಮೂರನೇ ಸ್ಥಾನದಲ್ಲಿದ್ದರೆ, ಥಗ್ಸ್‌ ಆಫ್‌ ಹಿಂದೂಸ್ಥಾನ್‌ ಸಿನಿಮಾ 50.75 ಕೋಟಿ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

ಅಭಿಮಾನಿಗಳ ಸಂಭ್ರಮಾಚರಣೆ...‌

ಶಾರುಖ್‌ ಖಾನ್‌ ಅಭಿಮಾನಿಗಳು ಅವರ ಸಿನಿಮಾ ಸಲುವಾಗಿಯೇ ಕಳೆದ ನಾಲ್ಕು ವರ್ಷ ಕಾದು ಕುಳಿತಿದ್ದರು. ಇದೀಗ ಅದು ‘ಪಠಾಣ್‌’ ಸಿನಿಮಾ ಮೂಲಕ ನೆರವೇರಿದೆ. ಇಡೀ ದೇಶಾದ್ಯಂತ ಅವರ ಅಭಿಮಾನಿಗಳು ಇದೀಗ ‘ಪಠಾಣ್‌’ ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಶಾರುಖ್‌ ಅವರ ಫೋಟೋಗಳಿಗೆ ಹಾಲಿನ ಅಭಿಷೇಕ ಮಾಡುವುದು ಒಂದೆಡೆಯಾದರೆ, ಕೆಲವರು ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

IPL_Entry_Point