Baby Indira: ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ನೋವುಂಡ ಪುಟಾಣಿ ಏಜೆಂಟ್ 123 ಬಾಲನಟಿ ಬೇಬಿ ಇಂದಿರಾ ಈಗ ಹೇಗಿದ್ದಾರೆ
Jun 07, 2023 12:16 PM IST
ಪತಿ ಶ್ರೀಧರ್ ಅವರನ್ನು ಕಳೆದುಕೊಂಡ ಬೇಬಿ ಇಂದಿರಾ ಸದ್ಯಕ್ಕೆ ಚೆನ್ನೈನಲ್ಲಿ ವಾಸವಿದ್ದಾರೆ.
- ಸಿನಿಮಾಗಳಿಗೆ ಗುಡ್ ಬೈ ಹೇಳಿ ಇಂದಿರಾ ತಮಿಳಿನ ಶ್ರೀಧರ್ ಅವನ್ನು ಮದುವೆ ಆದರು. ಶ್ರೀಧರ್ ಕೂಡಾ ತಮಿಳಿನಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದ್ದರು. ದುರದೃಷ್ಟವಷಾತ್ ಶ್ರೀಧರ್, 11 ಡಿಸೆಂಬರ್ 2013 ರಂದು ಹೃದಯಾಘಾತದಿಂದ ನಿಧನರಾದರು.
ಹಳೆಯ ಸಿನಿಮಾಗಳನ್ನು ನೆನಪಿಸಿಕೊಂಡರೆ ಅದರಲ್ಲಿನ ಕಲಾವಿದರು, ಕಥೆ, ಹಾಡುಗಳು ಎಲ್ಲವೂ ಇಂದಿಗೂ ನಮ್ಮ ಕಟ್ಟಿಗೆ ಕಟ್ಟಿದಂತೆ ಇವೆ. ಆ ಸಮಯದಲ್ಲಿ ನಮ್ಮನ್ನು ಬಾಲ ಕಲಾವಿದರಾಗಿ ರಂಜಿಸಿದ್ದ ಎಷ್ಟೋ ಮಂದಿ ಈಗ ಸಂಪೂರ್ಣವಾಗಿ ತೆರೆ ಮರೆಯಿಂದ ಸರಿದಿದ್ಧಾರೆ. ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರೆ, ಇನ್ನೂ ಕೆಲವರು ಎಲ್ಲಿದ್ದಾರೆ ಹೇಗಿದ್ದಾರೆ ಯಾರಿಗೂ ಮಾಹಿತಿ ಇಲ್ಲ.
ಬೇಬಿ ಇಂದಿರಾ, ಅಂದಿನ ಬಾಲ ಕಲಾವಿದೆ ಎಲ್ಲರಿಗೂ ನೆನಪಿರುತ್ತಾರೆ. ಆ ನಗು ಮೊಗ, ನಟನೆ ಎಲ್ಲವೂ ಸಿನಿಪ್ರಿಯರಿಗೆ ಬಹಳ ಇಷ್ಟ. ಬಾಲ ಕಲಾವಿದೆಯಾಗಿ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ ನಾಯಕಿಯಾಗಿ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ಆದರೆ ನಂತರ ಅವರು ನಟನೆಯಿಂದ ಸಂಪೂರ್ಣ ದೂರಾದರು. ಚೆನ್ನೈ ಮೂಲದ ಬೇಬಿ ಇಂದಿರಾ ಕನ್ನಡ ಚಿತ್ರರಂಗಕ್ಕೆ ಬಂದಿದ್ದು 'ಜನ್ಮ ರಹಸ್ಯ' ಚಿತ್ರದ ಮೂಲಕ. ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಜೋಡಿಯಾಗಿ ನಟಿಸಿದ್ದರು.
ಪುಟಾಣಿ ಏಜೆಂಟ್ 123, ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬೇಬಿ ಇಂದಿರಾ ನಟಿಸಿದ್ದಾರೆ. ನಂತರ ಅರ್ಜುನ್ ಸರ್ಜಾ ಜೊತೆ ನಾಯಕಿಯಾಗಿ ಮಳೆ ಬಂತು ಮಳೆ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಅಂಜದ ಗಂಡು ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕೂಡಾ ನಟಿಸಿದರು.ಆದರೆ ಬಾಲನಟಿಯಾಗಿ ದೊರೆತ ಯಶಸ್ಸು ಇಂದಿರಾಗಿ ನಾಯಕಿಯಾಗಿ ದೊರೆಯಲಿಲ್ಲ. ಈ ಕಾರಣಕ್ಕೆ ಅವರು ಚಿತ್ರರಂಗದಿಂದ ನಿಧಾನವಾಗಿ ದೂರ ಸರಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇಂದಿರಾ ನಟಿಸಿದ್ದಾರೆ.
ಸಿನಿಮಾಗಳಿಗೆ ಗುಡ್ ಬೈ ಹೇಳಿ ಇಂದಿರಾ ತಮಿಳಿನ ಶ್ರೀಧರ್ ಅವನ್ನು ಮದುವೆ ಆದರು. ಶ್ರೀಧರ್ ಕೂಡಾ ತಮಿಳಿನಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದ್ದರು. ಕರ್ಣನ್, ಚಿತ್ರಮೇಳ, ಸ್ನೇಹಂ, ಕ್ರೋಧಂ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಈ ದಂಪತಿಗೆ ಪ್ರಶಾಂತ್ ಹಾಗೂ ರಕ್ಷಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ದುರದೃಷ್ಟವಷಾತ್ ಶ್ರೀಧರ್ 11 ಡಿಸೆಂಬರ್ 2013 ರಂದು ಹೃದಯಾಘಾತದಿಂದ ನಿಧನರಾದರು.
ಪತಿ ನಿಧನರಾದ ನಂತರ ಬೇಬಿ ಇಂದಿರಾ ಬಹಳ ಆರ್ಥಿಕ ಸಮಸ್ಯೆ ಎದುರಿಸಿದರು. ಮತ್ತೆ ಚಿತ್ರರಂಗಕ್ಕೆ ಬರಬೇಕೆಂದರೂ ಅದು ಸಾಧ್ಯವಾಗಲಿಲ್ಲ. ಬಹಳ ವರ್ಷಗಳಿಂದ ಅವರು ಮಾಧ್ಯಮಗಳ ಕಣ್ಣಿಗೂ ಬಿದ್ದಿಲ್ಲ. ಸೋಷಿಯಲ್ ಮೀಡಿಯಾ ಕೂಡಾ ಬಳಸುತ್ತಿಲ್ಲ. ಸದ್ಯಕ್ಕೆ ಇಂದಿರಾ ತಮಿಳುನಾಡಿನ ಚೆನ್ನೈನ ಕೊಟ್ಟಿವಾಕಮ್ ಕರ್ಪಗಂಬಲ್ ನಗರದಲ್ಲಿ ಮಕ್ಕಳೊಂದಿಗೆ ವಾಸವಿದ್ದಾರೆ ಎಂಬ ಮಾಹಿತಿ ಇದೆ.