ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Swara Bhaskar: ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌; ಆಲಿಯಾ ಭಟ್‌ ರಣಬೀರ್‌ ಕಪೂರ್‌ಗೆ ಹೋಲಿಸಿದ ನೆಟಿಜನ್ಸ್‌

Swara Bhaskar: ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌; ಆಲಿಯಾ ಭಟ್‌ ರಣಬೀರ್‌ ಕಪೂರ್‌ಗೆ ಹೋಲಿಸಿದ ನೆಟಿಜನ್ಸ್‌

  • ಇದೇ ವರ್ಷ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ್ದಾರೆ. 

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್‌ ಸಾಮಾಜಿಕ ಕಾರ್ಯಕರ್ತ ಫಹಾದ್‌ ಅಹ್ಮದ್‌ ಅವರನ್ನು ಮದುವೆ ಆಗಿದ್ದರು. ಸ್ವರಾ ಹಿಂದೂ ಆಗಿದ್ದು ಫಹಾದ್‌ ಮುಸ್ಲಿಂ ಸಮುದಾಯಕ್ಕೆ ಸೇರಿದವರು. 
icon

(1 / 10)

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್‌ ಸಾಮಾಜಿಕ ಕಾರ್ಯಕರ್ತ ಫಹಾದ್‌ ಅಹ್ಮದ್‌ ಅವರನ್ನು ಮದುವೆ ಆಗಿದ್ದರು. ಸ್ವರಾ ಹಿಂದೂ ಆಗಿದ್ದು ಫಹಾದ್‌ ಮುಸ್ಲಿಂ ಸಮುದಾಯಕ್ಕೆ ಸೇರಿದವರು. (PC: Swara Bhasker Instagram)

ಮುಸ್ಲಿಂ ಯವಕನನ್ನು ಮದುವೆ ಆಗಿದ್ದಕ್ಕೆ ಸ್ವರಾ ಟ್ರೋಲ್‌ ಆಗಿದ್ದರು. ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಕೂಡಾ ದೆಹಲಿ ಲವ್‌ ಜಿಹಾದ್‌ ಘಟನೆಯನ್ನು ಸ್ವರಾಗೆ ಹೋಲಿಸಿದ್ದರು. 
icon

(2 / 10)

ಶ್ರದ್ಧಾ ವಾಲ್ಕರ್ ಬಗ್ಗೆ ಸ್ವರಾಗೆ ಗೊತ್ತಿಲ್ಲ ಎನಿಸುತ್ತದೆ. ಮದುವೆಗೂ ಮುನ್ನ ಆಕೆ ಕೇಳಿ ತಿಳಿದುಕೊಳ್ಳಬೇಕಿತ್ತು. ಅದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ಆದರೆ, ಶ್ರದ್ಧಾಗೆ ಆದ ಸ್ಥಿತಿ ಸ್ವರಾ ಭಾಸ್ಕರ್‌ಗೆ ಕೂಡಾ ಬರಬಹುದು ಎಂದು ಹೇಳಿದ್ದರು. ಇದು ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು. 
icon

(3 / 10)

ಇದಾದ ನಂತರ ಸ್ವರಾ ಭಾಸ್ಕರ್‌, ಫಸ್ಟ್‌ ನೈಟ್‌ಗಾಗಿ ಅಲಂಕರಿಸಲಾಗಿದ್ದ ಕೋಣೆಯ ಫೋಟೋವನ್ನು ಶೇರ್‌ ಮಾಡಿಕೊಂಡು ಮತ್ತೊಮ್ಮೆ ಸುದ್ದಿಯಲ್ಲಿದ್ದರು. 
icon

(4 / 10)

ಇದೀಗ ಈ ಜೋಡಿ ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿ ಮತ್ತೆ ಟ್ರೋಲ್‌ ಆಗುತ್ತಿದ್ದಾರೆ. ಜನರು ಇಬ್ಬರನ್ನೂ ಆಲಿಯಾ ಭಟ್‌ ರಣಬೀರ್‌ ಕಪೂರ್‌ಗೆ ಹೋಲಿಸುತ್ತಿದ್ದಾರೆ. 
icon

(5 / 10)

ಆಲಿಯಾ ಹಾಗೂ ರಣಬೀರ್‌ ಮದುವೆ ಆಗಿ 2 ತಿಂಗಳಲ್ಲೇ ಪ್ರೆಗ್ನೆನ್ಸಿ ಘೋಷಿಸಿದ್ದರು. ಇದೀಗ ನೀವೂ ಮೂರು ತಿಂಗಳು ಕಳೆಯುವಷ್ಟರಲ್ಲಿ ಅಪ್ಪ ಅಪ್ಪ ಆಗುತ್ತಿರುವ ವಿಚಾರವನ್ನು ಹೇಳುತ್ತಿದ್ದೀರ. ಅದರೆ ಸ್ವರಾ ಭಾಸ್ಕರ್‌ ನೋಡುತ್ತಿದ್ದರೆ ಆಕೆ ಮೂರು ತಿಂಗಳ ಗರ್ಭಿಣಿ ಅಲ್ಲ ಎಂದು ಗೊತ್ತಾಗುತ್ತಿದೆ. 
icon

(6 / 10)

ಸ್ವರಾ ಭಾಸ್ಕರ್‌ಗೆ 5-6 ತಿಂಗಳಾಗಿವೆ. ಆದ್ದರಿಂದಲೇ ಇಬ್ಬರೂ ತರಾತುರಿಯಲ್ಲಿ ಮದುವೆ ಆಗಿದ್ದಾ ಎಂದು ನೆಟಿಜನ್ಸ್‌ ಈ ಜೋಡಿಯನ್ನು ಪ್ರಶ್ನಿಸುತ್ತಿದ್ದಾರೆ. 
icon

(7 / 10)

ಸ್ವರಾ ಭಾಸ್ಕರ್‌, ಪತಿ ಫಹಾದ್‌ ಅಹ್ಮದ್‌ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಜೀವನದ ಮತ್ತೊಂದು ಹಂತಕ್ಕೆ ಕಾಲಿಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ನೆಟಿಜನ್ಸ್‌ ಹೇಳಿರುವಂತೆ ಫೋಟೋದಲ್ಲಿ ಸ್ವರಾ ಭಾಸ್ಕರ್‌ ಬೇಬಿ ಬಂಪ್‌ ಕಾಣುತ್ತಿದೆ. 
icon

(8 / 10)

ದೆಹಲಿ ಮೂಲದ ಸ್ವರಾ ಭಾಸ್ಕರ್‌, 2009 ರಲ್ಲಿ ತೆರೆ ಕಂಡ ಮಾಧೊಲಾಲ್‌ ಕೀಪ್‌ ವಾಕಿಂಗ್‌ ಹಿಂದಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ತನು ವೆಡ್ಸ್‌ ಮನು, ಚಿಲ್ಲಾರ್‌ ಪಾರ್ಟಿ, ವಿರೆ ದಿ ವೆಡ್ಡಿಂಗ್‌ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಮಿಸಸ್‌ ಫಲಾನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
icon

(9 / 10)

ಸ್ವರಾ ಪತಿ ಫಹಾದ್‌ ಅಹ್ಮದ್‌ ಉತ್ತರ ಪ್ರದೇಶಕ್ಕೆ ಸೇರಿದವರು. ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
icon

(10 / 10)

ಸ್ವರಾ ಪತಿ ಫಹಾದ್‌ ಅಹ್ಮದ್‌ ಉತ್ತರ ಪ್ರದೇಶಕ್ಕೆ ಸೇರಿದವರು. ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು