logo
ಕನ್ನಡ ಸುದ್ದಿ  /  ಮನರಂಜನೆ  /  ‘ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ!’ ನಟ ಜಗ್ಗೇಶ್ ಬಾಯಲ್ಲಿ ಯಾಕೀ ಮಾತು?

‘ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ!’ ನಟ ಜಗ್ಗೇಶ್ ಬಾಯಲ್ಲಿ ಯಾಕೀ ಮಾತು?

Mar 21, 2024 06:31 PM IST

‘ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ!’ ನಟ ಜಗ್ಗೇಶ್ ಮಾತಿನ ಮರ್ಮವೇನು?

    • ನಟ ಜಗ್ಗೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಳ್ಳುತ್ತಿರುತ್ತಾರೆ. ಜೀವನಾನುಭವದ ವಿಚಾರಗಳು, ಸಿನಿಮಾ ಹಿನ್ನೆಲೆಯ ರೋಚಕ ಸಂಗತಿಗಳನ್ನು ತೆರೆದಿಡುತ್ತಿರುತ್ತಾರೆ. ಈಗ 40 ವರ್ಷದ ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದ್ದಾರೆ. 
‘ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ!’ ನಟ ಜಗ್ಗೇಶ್ ಮಾತಿನ ಮರ್ಮವೇನು?
‘ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ!’ ನಟ ಜಗ್ಗೇಶ್ ಮಾತಿನ ಮರ್ಮವೇನು?

Navarasa Nayaka Jaggesh: ನವರಸನಾಯಕ ಜಗ್ಗೇಶ್ ಇತ್ತೀಚೆಗಷ್ಟೇ ರಂಗನಾಯಕ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರೆದುರು ಬಂದು ನಿಂತಿದ್ದರು. ಮಠ, ಎದ್ದೇಳು ಮಂಜುನಾಥ ಸಿನಿಮಾ ಬಳಿಕ ನಿರ್ದೇಶಕ ಗುರುಪ್ರಸಾದ್‌ ಜತೆಗೆ ಮೂರನೇ ಸಿನಿಮಾ ರಂಗನಾಯಕ ಬಿಡುಗಡೆಯಾಗಿತ್ತು. ಆದರೆ, ಸಿನಿಮಾ ಮಾತ್ರ ಒಂದೇ ವಾರದಲ್ಲಿ ಚಿತ್ರಮಂದಿರದಿಂದ ಕಾಲ್ಕಿತ್ತಿತ್ತು. ಈ ಹೀನಾಯ ಸೋಲಿಗೆ ಟೀಕೆಗಳೂ ಜಗ್ಗೇಶ್‌ ಅವರ ಬಳಿ ಬಂದಿದ್ದವು. ಆ ಬೆನ್ನಲ್ಲೇ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮುಂದೆ ನಿಂತು ಎಲ್ಲರಿಗೂ ಕ್ಷಮೆಯಾಚಿಸಿದ್ದರು. ಇದೀಗ ಅದೇ ನೋವಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಬರಹವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಹಳ್ಳಿ ಹುಡುಗನೊಬ್ಬ ಹೇಗೆ ದಿಲ್ಲಿ ಮುಟ್ಟಿದ ಎಂಬ ಕಥೆಯನ್ನು ಜಗ್ಗೇಶ್‌ ಬರಹದಲ್ಲಿ ನೆನಪು ಮಾಡಿಕೊಂಡಿದ್ದಾರೆ. 80ರ ದಶಕದಲ್ಲಿ ಘಟನುಘಟಿಗಳ ಕಾಲದಲ್ಲಿ ಸಿನಿಮಾದಲ್ಲಿ ಗುರುತಿಸಿಕೊಂಡ ರೀತಿ, ಹಿಡಿದ ಹಠ ಸಾಧಿಸಿದ ಖುಷಿಯ ಬಗ್ಗೆಯೂ ಜಗ್ಗೇಶ್‌ ಹೇಳಿಕೊಂಡಿದ್ದಾರೆ. 40 ವರ್ಷದ ಈ ಸಿನಿಮಾ ಜರ್ನಿ ಬಗ್ಗೆಯೂ ಮಾತನಾಡಿದ್ದಾರೆ. ಇತರರಿಗೂ ಇದನ್ನೇ ಜೀವನದಲ್ಲಿ ಅನುಸರಿಸಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ.

ಜಗ್ಗೇಶ್‌ ಪೋಸ್ಟ್‌ ಹೀಗಿದೆ..

ಹಳ್ಳಿ ಹುಡುಗನ ಕನಸು. ಈ ಚಿತ್ರಗಳ ಮೆಲುಕು ಹಾಕಿ, ಮತ್ತೊಮ್ಮೆ ನೋಡಿ ನನಗನ್ನಿಸಿದ್ದು, ಇವನು ಇಲ್ಲಿಂದ ಬೆಳೆದವ ಎಂದರೆ ಸಿನಿಮ ಕಥೆ ಓಕೆ, ಆದರೆ ನಿಜಜೀವನದಲ್ಲಿ ಯಾರು ನಂಬರು. ಬೇರೆಯವರು ಯಾಕೆ? ಎಂಬ ಅನುಮಾನ ನನಗೆ ಬಂತು!

ನಾನು ಹುಟ್ಟಿದ್ದು ಸಣ್ಣ ಕುಟುಂಬ. ಆದರೆ ದೊಡ್ಡ ಕನಸುಗಳ ನಡುವೆ. ನಟನಾಗಬೇಕು ಅದು ಅತಿರಥರ 1980ರ ಕಾಲದಲ್ಲಿ! ನೀವೇ ಹೇಳಿ ಯಾವ ಅಪ್ಪ ಒಪ್ಪುತ್ತಾನೆ. ಇದು ಮಗನ ಕನಸು? ಹಾಗಾಗಿ ಬೂಟಿನ ಏಟು ಬಾಲ್ಯದ ನಿತ್ಯ ಪೂಜೆಯಾಗಿತ್ತು.

ಅಮ್ಮನ ಕಣ್ಣೀರು ನಿತ್ಯದ ಅಭಿಷೇಕವಾಗಿತ್ತು. ಸಿಟ್ಟು ರೋಷ ದ್ವೇಷ ನನ್ನದಾಗಿತ್ತು. ಇದು ನನ್ನ ಬದುಕಾಗಿತ್ತು! ಈಗ ನೆನೆದರೆ ನನ್ನ ಬಗ್ಗೆ ಅನುಮಾನ. ನಾನು ಇಷ್ಟು ದೂರ ನಡೆದು ಬಂದನೆ ಎಂದು? ನನ್ನ ಬದುಕು ಸಾಧಿಸುವವರಿಗೆ ದಾರಿ ಕಾಣದವರಿಗೆ, ಅಸಾಯಕರಾದವರಿಗೆ, ಕೊನೆಯ ಘಟ್ಟ ಎಂದುಕೊಂಡವರಿಗೆ, ಸಣ್ಣ ಧೈರ್ಯದ ಚಿಲುಮೆ ಚಿಮ್ಮಲಿ ಅವರ ಮನ ನನ್ನ ನೋಡಿ .. ಎಲ್ಲವೂ ಸಾಧ್ಯ ಯಾವುದು ಅಸಾಧ್ಯವಲ್ಲಾ.

ಶ್ರೇಷ್ಟ ಚಿಂತನೆಯ ಮನಸಿದ್ದರೆ ಮಾರ್ಗ. ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ. ಅಂದು ಹಠ ಮಾಡಿದ ಮಗ ಈಗ ಸಾಧಿಸಿದ್ದಾನೆ. ನೋಡಲು ಅಪ್ಪ ಅಮ್ಮ ಇಲ್ಲವೆ ಎಂದು. ಇಂದಿನ ಸಮಯಕ್ಕೆ ಸಾಧನೆ ಶ್ರಮ ತಪಸ್ಸು. ಯಶಸ್ಸು ಕಾಮಿಡಿ ಪೀಸು ಅಂದರೆ ಫಾರ್‌ ಗ್ರಾಂಟೆಡ್‌! ಅಣಕ ಅಪಮಾನವೇ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ.

ಮನಸ್ಸು ಎಂಬ ಮೊಸರನ್ನ ರಾಯರು ಎಂಬ ಕಡುಗೋಲಿನಿಂದ ಕಡೆದು ತಿಳಿಯಾದ ಮಜ್ಜಿಗೆ ಮಾಡಿಕೊಂಡು ಪ್ರಶಾಂತವೆಂಬ ಸರೋವರ ಮಾಡಿಕೊಂಡಿರುವೆ ಚಂಚಲ ಮನಸ್ಸನ್ನ! ಇಂಥ ಶ್ರಮದ ಬದುಕು ಕಟ್ಟಿಕೊಂಡವ ನಾನು. ನನ್ನಂತೆ ಎಲ್ಲರೂ ಬೆಳೆಯಿರಿ ಎಂದು ಅಪ್ಪಿದರೆ ಮುತ್ತಿಡುವಂತೆ ನಟಿಸಿ ವಿಷ ಇಟ್ಟು ಕೊಂದು ಸಂಭ್ರಮಿಸುವರು. ಇದರ ಮತ್ತೊಂದು ಹೆಸರೆ ನಂಬಿಕೆ ದ್ರೋಹದ ಕಾಲಮಾನ!

ಇಂದು ಶ್ರಮಕ್ಕೆ ಬೆಲೆ ಇಲ್ಲ. ಬೆಳಿಗ್ಗೆ ಹುಟ್ಟಿ, ಮಧ್ಯಾಹ್ನ ಬೆಳೆದು ರಾತ್ರಿ ಸಾಯುವ ಕಾಲಘಟ್ಟ! ಬೆವರು ಸುರಿಸದೆ ಬೆಳೆಯದೆ ಅನುಭವ ಹಂಚುವ ಜಗತ್ತು! ಎನಿವೇ ನನ್ನ 40 ವರ್ಷದ ಬೆಳವಣಿಗೆ ಬಳಕೆಗೆ ಉಪಯುಕ್ತ ಅನ್ನಿಸಿದರೆ ಅನುಸರಿಸಿ ಬೆಳೆಯಿರಿ ಉಳಿಯಿರಿ. ಜನ್ಮಕೊಟ್ಟವರ ಸಮಾಜದ ಮುತ್ತು ರತ್ನ ಹವಳ ಪಚ್ಚೆ ವಜ್ರವಾಗಿ. ಹಳ್ಳಿಯಿಂದ ಡೆಲ್ಲಿಯ ಬೆವರಿನ ಪ್ರಯಾಣದ ನಿಮ್ಮ ಮನೆಯ ಬಂಧುವಿಗೆ. ಹರಸುತ್ತಿರಿ. ಶುಭದಿನ ಎಂದಿದ್ದಾರೆ ಜಗ್ಗೇಶ್.‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ