‘ನಿನ್ನಂಥ ಗಂಡನನ್ನು ಪಡೆಯಲು ಪುಣ್ಯ ಮಾಡಿದ್ದೆ’; ಮಧ್ಯರಾತ್ರಿಯಲ್ಲೇ ಪತ್ನಿ ಮಹಾಲಕ್ಷ್ಮೀಗೆ ಸರ್ಪ್ರೈಸ್ ಕೊಟ್ಟ ರವೀಂದರ್ ಚಂದ್ರಶೇಖರನ್
ಬಹುದಿನಗಳಿಂದ ಸೋಷಿಯಲ್ ಮೀಡಿಯಾ ಅಂಗಳದಿಂದ ದೂರವೇ ಉಳಿದಿರುವ ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇದೀಗ ಮತ್ತೆ ಕಾಣಿಸಿದ್ದಾರೆ. ಪತ್ನಿಯ ಬರ್ತ್‌ಡೇಗೆ ಸರ್ಪ್ರೈಸ್ ನೀಡಿದ್ದಾರೆ. ಆ ಕ್ಷಣದ ಫೋಟೋಗಳನ್ನು ಮಹಾಲಕ್ಷ್ಮೀ ಹಂಚಿಕೊಂಡು ಸಂಭ್ರಮಿಸಿದ್ದಾರೆ.
Ravindar Chandrasekaran: ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಿಂತಲೂ ಟೀಕೆಯನ್ನೇ ಹೆಚ್ಚು ನುಂಗಿದವರು ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ಪತ್ನಿ ಮಹಾಲಕ್ಷ್ಮೀ ಶಂಕರ್. 2022ರಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದ ಈ ಜೋಡಿಯ ಫೋಟೋ ವೈರಲ್ ಆಗುತ್ತಿದ್ದಂತೆ, ಬಹುತೇಕರು ಈ ಜೋಡಿಯ ಬಗ್ಗೆ ಕಟುವಾಗಿಯೇ ಟೀಕಿಸಿದ್ದರು. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ, ಇದೀಗ ಬಿಂದಾಸ್ ಆಗಿಯೇ ಜೀವನ ಸಾಗಿಸುತ್ತಿದೆ.
ಆದರೆ, ಇತ್ತೀಚಿನ ಕೆಲ ತಿಂಗಳುಗಳಿಂದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರ ಟೈಮ್ ಸರಿಯಿಲ್ಲ. ಒಂದಾದ ಮೇಲೊಂದರಂತೆ ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ ಕೋಟಿ ಕೋಟಿ ಹಣ ನುಂಗಿದ್ದಾರೆ ಎಂಬ ಅಪವಾದ ಹೊತ್ತು ಜೈಲುವಾಸ ಅನುಭವಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಹಾಗೆ ಮನೆಗೆ ಮರಳಿದ ಬಳಿಕ ತಮ್ಮ ಜೈಲುವಾಸದ ಅನುಭವವನ್ನೂ ಹೇಳಿಕೊಂಡಿದ್ದರು.
ಜಾಲತಾಣದಿಂದ ದೂರ ದೂರ..
ಅಲ್ಲಿಂದ ಸೋಷಿಯಲ್ ಮೀಡಿಯಾದಿಂದಲೂ ರವೀಂದರ್ ಚಂದ್ರಶೇಖರನ್ ದೂರವೇ ಉಳಿದಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ, ಕಳೆದ ವರ್ಷದ ಸೆಪ್ಟೆಂಬರ್ 1ರಂದು ತಮ್ಮ ಮದುವೆ ವಾರ್ಷಿಕೋತ್ಸವದ ನಿಮಿತ್ತ ಪತ್ನಿ ಮಹಾಲಕ್ಷ್ಮೀ ಬಗ್ಗೆ ಸುದೀರ್ಘವಾದ ಪೋಸ್ಟ್ ಹಂಚಿಕೊಂಡು ಶುಭಾಶಯ ಕೋರಿದ್ದರು. ಅದೇ ಕೊನೇ, ಅಲ್ಲಿಂದ ಈ ವರೆಗೂ ಅವರಿಂದ ಯಾವುದೇ ಪೋಸ್ಟ್ ಹೊರಬಂದಿಲ್ಲ. ಇತ್ತ ಪತ್ನಿ ಮಹಾಲಕ್ಷ್ಮೀ ಒಂದಾದ ಮೇಲೊಂದರಂತೆ ಫೋಟೋಗಳ ಗೊಂಚಲುಗಳನ್ನೇ ಹಂಚಿಕೊಳ್ಳುತ್ತಿರುತ್ತಾರೆ.
ಪತ್ನಿಗೆ ಸರ್ಪ್ರೈಸ್ ಕೊಟ್ಟ ರವೀಂದರ್
ಇಂದು (ಮಾರ್ಚ್ 21) ಪತ್ನಿ ಮಹಾಲಕ್ಷ್ಮೀ ಶಂಕರ್ ಬರ್ತ್‌ಡೇ. ಈ ಬರ್ತ್‌ಡೇ ನಿಮಿತ್ತ ಪತ್ನಿ ರವೀಂದರ್ ಚಂದ್ರಶೇಖರನ್ ಕಡೆಯಿಂದ ಮಧ್ಯ ರಾತ್ರಿಯೇ ಸ್ವೀಟ್ ಸರ್ಪ್ರೈಸ್ ಸಿಕ್ಕಿದೆ. ಈ ವರೆಗೂ ರವೀಂದರ್ ಹೇಗಿದ್ದಾರೆ? ಅವರ ಆರೋಗ್ಯ ಹೇಗಿದೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಪತಿಯ ಜತೆಗಿನ ಕೆಲವು ಬರ್ತ್‌ಡೇ ಸೆಲೆಬ್ರೇಷನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮಹಾಲಕ್ಷ್ಮೀ. ಜತೆಗೆ ಲವ್ ಯೂ ಅಮ್ಮು ಎಂದೂ ಹೇಳಿದ್ದಾರೆ.
ಮಹಾಲಕ್ಷ್ಮೀ ಶಂಕರ್ ಪೋಸ್ಟ್‌ನಲ್ಲೇನಿದೆ..
ಈ ಸಲದ ಬರ್ತ್‌ಡೇ ಒಂದು ರೀತಿ ಮಿಶ್ರ ಭಾವನೆಗಳಿಂದ ತುಂಬಿದೆ. ಮೊದಲಿಗೆ, ನನ್ನ ಪತಿ ಮಧ್ಯರಾತ್ರಿಯಲ್ಲಿ ರುಚಿಕರವಾದ ಕೇಕ್ ಹಿಡಿದು ಬಂದು ನನ್ನನ್ನು ಎಚ್ಚರಗೊಳಿಸಿದರು. ನನಗೂ ಸರ್ಪ್ರೈಸ್ ನೀಡಿದರು. ನಿಜಕ್ಕೂ ಅವರನ್ನು ಪತಿಯನ್ನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ. ಈ ವಿಚಾರದಲ್ಲಿ ನಾನು ಅದೃಷ್ಟಶಾಲಿ. ಥ್ಯಾಂಕ್ಯು ಅಮ್ಮು, ಲವ್ ಯೂ ಸೋ ಮಚ್" ಎಂದು ಪತಿ ರವೀಂದರ್ ಬಗ್ಗೆ ಹೇಳಿದ್ದಾರೆ.
ಅದಾದ ಬಳಿಕ "ಎರಡನೆಯದಾಗಿ, ನನ್ನ ತಾಯಿ ಮತ್ತು ಸಹೋದರ ನನ್ನನ್ನು ಮಾನಸಿಕ ಅಸ್ವಸ್ಥರ ಸ್ಥಳಕ್ಕೆ ಕರೆದೊಯ್ದು, ಅಲ್ಲಿನವರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡಿಸಿದ್ದಾರೆ. ನಿಜಕ್ಕೂ ಇದು ತುಂಬಾ ಅಪರೂಪದ ಅನುಭವ. ಈ ಖುಷಿ ನೀಡಿದ ನನ್ನಮ್ಮ ಮತ್ತು ಸಹೋದರನಿಗೆ ಧನ್ಯವಾದಗಳು. ನನ್ನ ತಂದೆ ಬಾಂಗ್ಲಾದೇಶದಿಂದಲೇ ನನಗೆ ವಿಶ್ ಮಾಡಿದರು. ಅವರಿಗೂ ಧನ್ಯವಾದಗಳು"
"ನನ್ನ ಪುಟ್ಟ ಕಂದ ಕೇಕ್ ಜತೆಗೆ ನನಗೆ ಸರ್ಪ್ರೈಸ್ ನೀಡಿದ. ನೀನೇ ನನ್ನ ಪ್ರಪಂಚ ಸಾಚಾ. ನನ್ನ ಸುತ್ತಲೂ ಒಳ್ಳೆಯ ಮನಸ್ಸುಗಳೇ ಇದೆ. ಈ ಮನಸ್ಸುಗಳನ್ನು ಹೊಂದಲು ನಾನು ನಿಜಕ್ಕೂ ಅದೃಷ್ಟವಂತೆ. ಈ ದಿನದಂದು ನನಗೆ ಶುಭ ಹಾರೈಸಲು ಸಮಯ ತೆಗೆದುಕೊಂಡಿದ್ದಕ್ಕಾಗಿ ನನ್ನ ಎಲ್ಲಾ ಕುಟುಂಬ ಮತ್ತು ಸ್ನೇಹಿತರಿಗೆ ಮತ್ತು ನನ್ನನ್ನು ಪ್ರೀತಿಸುವ ಜನರಿಗೆ ಧನ್ಯವಾದ ಹೇಳದೆ ನಾನು ಮಾತು ಮುಗಿಸಲು ಸಾಧ್ಯವಿಲ್ಲ. ಎಲ್ಲರಿಗೂ ಧನ್ಯವಾದಗಳು" ಎಂದು ಫೋಟೋ ಸಮೇತ ಪೋಸ್ಟ್ ಹಂಚಿಕೊಂಡಿದ್ದಾರೆ ಮಹಾಲಕ್ಷ್ಮೀ.