Ilayaraaja Biopic: ಚೆನ್ನೈನ ಬೀದಿಯಲ್ಲಿ ಹಾರ್ಮೋನಿಯಂ ಹಿಡಿದು ನಿಂತ ಧನುಷ್; ಮ್ಯೂಸಿಕ್‌ ಮ್ಯಾಸ್ಟ್ರೋ ಇಳಯರಾಜಾ ಬಯೋಪಿಕ್‌ ಘೋಷಣೆ-kollywood news dhanush will play the role of music maestro ilayaraaja in the ilayaraaja biopic mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ilayaraaja Biopic: ಚೆನ್ನೈನ ಬೀದಿಯಲ್ಲಿ ಹಾರ್ಮೋನಿಯಂ ಹಿಡಿದು ನಿಂತ ಧನುಷ್; ಮ್ಯೂಸಿಕ್‌ ಮ್ಯಾಸ್ಟ್ರೋ ಇಳಯರಾಜಾ ಬಯೋಪಿಕ್‌ ಘೋಷಣೆ

Ilayaraaja Biopic: ಚೆನ್ನೈನ ಬೀದಿಯಲ್ಲಿ ಹಾರ್ಮೋನಿಯಂ ಹಿಡಿದು ನಿಂತ ಧನುಷ್; ಮ್ಯೂಸಿಕ್‌ ಮ್ಯಾಸ್ಟ್ರೋ ಇಳಯರಾಜಾ ಬಯೋಪಿಕ್‌ ಘೋಷಣೆ

ಒಂದೇ ಭಾಷೆಗೆ ಸೀಮಿತವಾಗದೆ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇತರೆ ಭಾರತೀಯ ಭಾಷೆಗಳಿಗೂ ಸಂಗೀತ ಸಂಯೋಜಿಸಿದ್ದಾರೆ ಇಳಯರಾಜಾ. ಕಳೆದ 3 ದಶಕಗಳ ಅವಧಿಯಲ್ಲಿ ಎಷ್ಟೋ ಶಿಷ್ಯಂದಿರನ್ನೂ ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಇದೇ ದಂತಕತೆಯ ಜೀವನ ಸಿನಿಮಾ ರೂಪದಲ್ಲಿ ಸಿದ್ಧವಾಗಲಿದೆ. ಇಳಯರಾಜಾ ಆಗಿ ಧನುಷ್ ಕಾಣಿಸಿಕೊಳ್ಳಲಿದ್ದಾರೆ.

Ilayaraaja Biopic: ಚೆನ್ನೈನ ಬೀದಿಯಲ್ಲಿ ಹಾರ್ಮೋನಿಯಂ ಹಿಡಿದು ನಿಂತ ಧನುಷ್; ಮ್ಯೂಸಿಕ್‌ ಮ್ಯಾಸ್ಟ್ರೋ ಇಳಯರಾಜಾ ಬಯೋಪಿಕ್‌ ಘೋಷಣೆ
Ilayaraaja Biopic: ಚೆನ್ನೈನ ಬೀದಿಯಲ್ಲಿ ಹಾರ್ಮೋನಿಯಂ ಹಿಡಿದು ನಿಂತ ಧನುಷ್; ಮ್ಯೂಸಿಕ್‌ ಮ್ಯಾಸ್ಟ್ರೋ ಇಳಯರಾಜಾ ಬಯೋಪಿಕ್‌ ಘೋಷಣೆ

Ilayaraja Biopic: ಸಿನಿಮಾ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ದಿಗಂತವನ್ನು ಮುಟ್ಟಿದವರು ಇಳಯರಾಜಾ. ಹೆಸರಿಗೆ ತಕ್ಕಂತೆ, ಸಂಗೀತ ಲೋಕದಲ್ಲಿ ರಾಜ! ಕಳೆದ ಮೂರು ದಶಕಗಳಿಂದ ಭಾರತೀಯ ಸಿನಿಮಾಕ್ಕೆ ತಮ್ಮದೇ ಆದ ಅಪರೂಪದ ಹಾಡುಗಳನ್ನು ನೀಡಿದ್ದಾರೆ ಇಳಯರಾಜ. ಈ ವರೆಗೂ 5 ಸಾವಿರಕ್ಕೂ ಅಧಿಕ ಹಾಡುಗಳನ್ನು ರಚಿಸಿದರೆ, ಸಾವಿರಕ್ಕೂ ಅಧಿಕ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ವಯಸ್ಸು 80ರ ಮೇಲಾದರೂ, ಇಂದಿಗೂ ಅವರ ಹಾಡುಗಳಿಗೆ ಕೋಟ್ಯಂತರ ಕೇಳುಗರಿದ್ದಾರೆ. ಅಭಿಮಾನಿ ಬಳಗವಿದೆ.

ಸಂಗೀತ ಕ್ಷೇತ್ರದಲ್ಲಿ ಸಾಧನೆಗೆ, ಒಟ್ಟು ನಾಲ್ಕು ಬಾರಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿಯೂ ಇಳಯರಾಜಾ ಮುಡಿಗೇರಿದೆ. ಆ ಕಾರಣಕ್ಕೇ ಮ್ಯೂಸಿಕ್‌ ಮ್ಯಾಸ್ಟ್ರೋ ಎಂಬ ಬಿರುದೂ ಇಳಯರಾಜಾ ಅವರಿಗಿದೆ. ಒಂದೇ ಭಾಷೆಗೆ ಸೀಮಿತವಾಗದೆ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇತರೆ ಭಾರತೀಯ ಭಾಷೆಗಳ ಹಾಡುಗಳಿಗೂ ಸಂಗೀತ ಸಂಯೋಜಿಸಿದ್ದಾರೆ ಇಳಯರಾಜಾ. ಕಳೆದ 30 ವರ್ಷಗಳ ಅವಧಿಯಲ್ಲಿ ಎಷ್ಟೋ ಶಿಷ್ಯಂದಿರನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಇದೇ ದಂತಕತೆಯ ಜೀವನ ಸಿನಿಮಾ ರೂಪದಲ್ಲಿ ಸಿದ್ಧವಾಗಲಿದೆ.

ಇಳಯರಾಜಾ ಆಗಿ ಧನುಷ್‌

ಹಾಗಾದರೆ ಇಳಯರಾಜಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವವರು ಯಾರು? ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಕಾಲಿವುಡ್ ನಟ ಧನುಷ್, ಮ್ಯೂಸಿಕ್ ಮಾಸ್ಟ್ರೋ ಬಯೋಪಿಕ್‌ನಲ್ಲಿ ಇಳಯರಾಜ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಪ್ರಾಜೆಕ್ಟ್‌ ಬಗ್ಗೆ ಕಳೆದ ಕೆಲ ವರ್ಷಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆದಿದ್ದವು. ಆದರೆ, ಅಧಿಕೃತವಾಗಿರಲಿಲ್ಲ. ಇದೀಗ ಇದೇ ಸಿನಿಮಾ ಸದ್ದಿಲ್ಲದೆ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಶೀರ್ಷಿಕೆ ಅನಾವರಣ ಮಾಡಿದೆ. ಚಿತ್ರಕ್ಕೆ ಇಳಯರಾಜಾ; ದಿ ಕಿಂಗ್‌ ಆಫ್‌ ಮ್ಯೂಸಿಕ್‌ ಎಂಬ ಅಡಿಬರಹವೂ ಇದೆ.

ಅರುಣ್‌ ಮಾಥೇಶ್ವರನ್‌ ನಿರ್ದೇಶನ

ಇಳಯರಾಜಾ ಬಯೋಪಿಕ್‌ ಅನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಲಿದ್ದಾರೆ. ಇತ್ತೀಚೆಗಷ್ಟೇ ಧನುಷ್ ಅಭಿನಯದ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರವನ್ನು ಇದೇ ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದರು. ಈಗ ಇಳಯರಾಜಾ ಅವರ ಬಯೋಪಿಕ್‌ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಬುಧವಾರ (ಮಾರ್ಚ್‌ 20) ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ಈ ಚಿತ್ರದ ಫಸ್ಟ್‌ ಲುಕ್‌ ಮತ್ತು ಶೀರ್ಷಿಕೆ ಅನಾವರಣ ಕಾರ್ಯಕ್ರಮ ನೆರವೇರಿತು. ಚೆನ್ನೈನ ಬೀದಿಗಳಲ್ಲಿ ಇಳಯರಾಜ ಹಾರ್ಮೋನಿಯಂ ಹಿಡಿದು ಅವಕಾಶಗಳಿಗಾಗಿ ಕಾಯುತ್ತಿರುವ ಭಂಗಿಯಲ್ಲಿ ಮೊದಲ ಲುಕ್‌ ಅನಾವರಣಗೊಂಡಿದೆ.

ಎರಡರಲ್ಲಿ ಒಂದು ಕನಸು ನನಸು

ಈ ಸಿನಿಮಾ ಬಗ್ಗೆ ಖುಷಿಯಿಂದಲೇ ಮಾತನಾಡಿದ ಧನುಷ್, ಬಹುದಿನದ ಆಸೆಯೊಂದು ಈಡೇರಿದೆ. ನನಗೆ ಎರಡು ಆಸೆಗಳಿವೆ. ಒಂದು ಇಳಯರಾಜ ಮತ್ತು ಇನ್ನೊಂದು ರಜನಿಕಾಂತ್ ಅವರ ಬಯೋಪಿಕ್‌ಗಳಲ್ಲಿ ನಟಿಸುವುದು. ಸದ್ಯ ಇಳಯರಾಜ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿದ್ದೇನೆ ಎಂದರು. ಮುಂದಿನದು ರಜನಿ ಬಯೋಪಿಕ್‌. ಅದಕ್ಕೆ ಯಾವಾಗ ಸಮಯ ಕೂಡಿ ಬರುತ್ತೋ ಕಾದು ನೋಡುವ ಎಂದಿದ್ದಾರೆ ಧನುಷ್.‌ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಬಹುತಾರಾಗಣದ ಸಿನಿಮಾ

ಇಳಯರಾಜಾ ಬಹುತೇಕ ಎಲ್ಲ ಸ್ಟಾರ್‌ ನಟರ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಹಾಗಾಗಿ ಆ ಪೈಕಿ ಕಮಲ್ ಹಾಸನ್, ರಜನಿಕಾಂತ್, ಸಿಂಬು ಸೇರಿ ಕೆಲ ನಟರು ವಿಶೇಷ ಪಾತ್ರದಲ್ಲಿ ಇಳಯರಾಜಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿಯೇ ಅಧಿಕೃತ ಮಾಹಿತಿ ಹೊಗಬೀಳಲಿದೆ. ಅಂದಹಾಗೆ, ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೆ ಕಮಲ್‌ ಹಾಸನ್‌ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

mysore-dasara_Entry_Point