logo
ಕನ್ನಡ ಸುದ್ದಿ  /  ಮನರಂಜನೆ  /  ‘ದರ್ಶನ್‌ಗೆ ಹೇಳಿದ್ದೆ ಡ್ರಿಂಕ್ಸ್ ಕಡಿಮೆ ಮಾಡು, ನೀನು ಆಡುವ ಪ್ರತಿ ಮಾತೂ ರೆಕಾರ್ಡ್ ಆಗುತ್ತೆ ಅಂತ, ಆದ್ರೆ..’; ಅಗ್ನಿ ಶ್ರೀಧರ್‌ ನೇರ ಮಾತು

‘ದರ್ಶನ್‌ಗೆ ಹೇಳಿದ್ದೆ ಡ್ರಿಂಕ್ಸ್ ಕಡಿಮೆ ಮಾಡು, ನೀನು ಆಡುವ ಪ್ರತಿ ಮಾತೂ ರೆಕಾರ್ಡ್ ಆಗುತ್ತೆ ಅಂತ, ಆದ್ರೆ..’; ಅಗ್ನಿ ಶ್ರೀಧರ್‌ ನೇರ ಮಾತು

Feb 23, 2024 08:30 PM IST

google News

‘ದರ್ಶನ್‌ಗೆ ಹೇಳಿದ್ದೆ ಡ್ರಿಂಕ್ಸ್ ಕಡಿಮೆ ಮಾಡು, ನೀನು ಆಡುವ ಪ್ರತಿ ಮಾತೂ ರೆಕಾರ್ಡ್ ಆಗುತ್ತೆ ಅಂತ, ಆದ್ರೆ..’; ಅಗ್ನಿ ಶ್ರೀಧರ್‌ ನೇರ ಮಾತು

    • ನಟ ದರ್ಶನ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರ ನಡುವಿನ ಶೀರ್ಷಿಕೆ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಇದೇ ಕಾಳಗದ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಒಂದರ್ಥದಲ್ಲಿ ಇಬ್ಬರಿಗೂ ಪರೋಕ್ಷವಾಗಿಯೇ ಬುದ್ಧಿಹೇಳಿದ್ದಾರೆ. 
‘ದರ್ಶನ್‌ಗೆ ಹೇಳಿದ್ದೆ ಡ್ರಿಂಕ್ಸ್ ಕಡಿಮೆ ಮಾಡು, ನೀನು ಆಡುವ ಪ್ರತಿ ಮಾತೂ ರೆಕಾರ್ಡ್ ಆಗುತ್ತೆ ಅಂತ, ಆದ್ರೆ..’; ಅಗ್ನಿ ಶ್ರೀಧರ್‌ ನೇರ ಮಾತು
‘ದರ್ಶನ್‌ಗೆ ಹೇಳಿದ್ದೆ ಡ್ರಿಂಕ್ಸ್ ಕಡಿಮೆ ಮಾಡು, ನೀನು ಆಡುವ ಪ್ರತಿ ಮಾತೂ ರೆಕಾರ್ಡ್ ಆಗುತ್ತೆ ಅಂತ, ಆದ್ರೆ..’; ಅಗ್ನಿ ಶ್ರೀಧರ್‌ ನೇರ ಮಾತು

Darshan: ಕಳೆದ ನಾಲ್ಕೈದು ದಿನಗಳಾಯ್ತು ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರ ಕುರಿತ ಸುದ್ದಿಗಳೇ ಹೆಚ್ಚಾಗಿವೆ. ಕಾಟೇರ ಸಿನಿಮಾ ಶೀರ್ಷಿಕೆ ಕುರಿತು ಈ ಹಿಂದೆ ಅವರು ನೀಡಿದ್ದ ಹೇಳಿಕೆಗೆ ದರ್ಶನ್‌ ಟಕ್ಕರ್‌ ಕೊಟ್ಟಿದ್ದರು. ಸಾವಿರಾರು ಜನರು ನೆರೆದಿದ್ದ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿಗೆ ತಗಡು ಎಂದಿದ್ದಲ್ಲದೆ, ಗುಮ್ಮಿಸ್ಕೋತಿಯ ಎಂದೂ ಆವಾಜ್‌ ಹಾಕಿದ್ದರು. ಇದಾದ ಬಳಿಕ, ನಾನೇನು ಕೈ ಕಟ್ಟಿ ಕೂತಿಲ್ಲ. ತಾಕತ್ತಿದ್ದರೆ ಬರಲಿ ಎಂದಿದ್ದರು ಉಮಾಪತಿ.

ಇದೀಗ ಈ ಕಾಳಗದ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ತಮ್ಮದೇ ಆದ ಒಂದಷ್ಟು ಅಭಿಪ್ರಾಯ ಅನಿಸಿಕೆಯನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ಇಲ್ಲಿ ಇಬ್ಬರೂ ತಗಡುಗಳೇ ಎಂದಿದ್ದಾರೆ. ಅದಾದ ಬಳಿಕ ದರ್ಶನ್‌ ಓರ್ವ ಕರ್ನಾಟಕ ಸಂಸ್ಕೃತಿಯ ಮುಖ ಎಂದೂ ಹೇಳಿದ್ದಾರೆ. ಇಲ್ಲಿದೆ ನೋಡಿ ಅವರ ನೇರ ಬುದ್ಧಿಮಾತಿನ ವಿವರ.

ದರ್ಶನ್‌ ನಮ್ಮ ಸಂಸ್ಕೃತಿಯ ಮುಖ

ದರ್ಶನ್‌ ತಾನು ಮಾತನಾಡುವ ಭರದಲ್ಲಿ ಬರೀ ತಗಡೇ ಎನ್ನುವುದಿಲ್ಲ. ಕಾಟೇರ ಟೈಟಲ್‌ ಇಟ್ಟಿದ್ದೇ ನಾನು. ಇವನಿಗೇನು ಗೊತ್ತಿತ್ತು. ಗುಮ್ಮಿಸ್ಕೋತಿಯಾ ಎಂದಿದ್ದಾರೆ. ಇದೀಗ ವ್ಯಾಪಕವಾಗಿ ಚರ್ಚೆಯಾಗ್ತಿದೆ. ಕರ್ನಾಟಕದ ಮೇಜರ್‌ ಇಶ್ಯೂ ಅನ್ನೋ ರೀತಿಯಲ್ಲಿ ಸುದ್ದಿಯಾಗ್ತಿದೆ. ದರ್ಶನ್‌ ಒಬ್ಬ ಕಲಾವಿದ ಮಾತ್ರವಲ್ಲ. ಒಂದು ಕಲ್ಚರಲ್‌ ಫೇಸ್‌ ಅದು. ನಮ್ಮ ಸಂಸ್ಕೃತಿಯ ಮುಖ. ಸ್ಪಷ್ಟವಾಗಿ ಕನ್ನಡ ಮಾತನಾಡುವ, ಕನ್ನಡಿಗರನ್ನು ಸೆಳೆದುಕೊಳ್ಳುವ ಮುಖ.

ನೀನು ನನ್ನ ಅಣ್ಣನ ಮಗ ಇದ್ದಂತೆ..

“ದರ್ಶನ್ ನನಗೆ ತುಂಬ ಪರಿಚಯ ಅಲ್ಲ. ‌ಆದರೂ ಪರಿಚಯ. ನನಗೆ ಆತನನ್ನು ಕಂಡರೆ ತುಂಬ ಇಷ್ಟ. ಯಾಕಿಷ್ಟ ಅಂತ ಹೇಳಿದ್ರೆ, ಆತನ ತಂದೆ ತೂಗುದೀಪ ಶ್ರೀನಿವಾಸ್ ನಮಗಿಂತ ಹಿರಿಯರು. ಅವರು ಮತ್ತು ಶಕ್ತಿ ಪ್ರಸಾದ್ ನನ್ನನ್ನು ಬಹಳ ಇಷ್ಟ ಪಡುತ್ತಿದ್ದರು. ನೀನು ಸಿನಿಮಾಕ್ಕೆ ಬಾ, ಪಾತ್ರ ಮಾಡಬಹುದು ಎಂದು ಹೇಳುತ್ತಿದ್ದರು. ಈ ಮಾತನ್ನು ದರ್ಶನ್‌ ಮುಂದೆಯೂ ಹೇಳಿದ್ದೇನೆ. ನೀನು ನನ್ನ ಅಣ್ಣನ ಮಗ ಇದ್ದಂತೆ. ದೊಡ್ಡ ಅಣ್ಣನ ಮಗ. ತಪ್ಪು ಮಾತು ಆಡಬೇಡ”

ಡ್ರಿಂಕ್ಸ್‌ ಕಡಿಮೆ ಮಾಡು ಎಂದಿದ್ದೆ..

“ಜನಪ್ರಿಯತೆ ಬೇರೆ, ಕೀರ್ತಿ ಬೇರೆ. ಕೀರ್ತಿಗೆ ಹೋಗು ಮಗನೇ ನಾನು ತುಂಬ ಹೇಳಿದ್ದೇನೆ. ದರ್ಶನ್‌ ನನ್ನೆದುರು ಬೈಯಲ್ಲ. ಅತ್ಯಂತ ವಿನಯವಂತ, ಹೃದಯವಂತ. ನಾನು ಹೇಳಿದ ಮೇಲೆ ಎಂಟತ್ತು ದಿನ ಡ್ರಿಂಕ್ಸ್‌ಗೂ ಹೋಗಲಿಲ್ಲ. ನಾನು ಹೇಳಿದೆ. ಕಡಿಮೆ ಮಾಡೋದು ಕಷ್ಟ. ನಾವೆಲ್ಲರೂ ಕುಡುದಿರೋರೆ. ಆದರೆ ಕುಡುಕರಾಗಿಲ್ಲ. ನಿನ್ನ ಮಾತು ರೆಕಾರ್ಡ್‌ ಆಗುತ್ತೆ. ಬದುಕಿರುವಾಗ ಅಲ್ಲ. ನೂರಾರು ವರ್ಷ ಇರುತ್ತೆ. ಕನ್ನಡಿಗರಿಗೆ ಮಾದರಿಯಾಗಿ ಇರು”

“ಇವತ್ತಿನ ಸನ್ನಿವೇಶಗಳಲ್ಲಿ ಗುಂಪುಗಳು ಸೇರಿದಾಗ, ಕ್ಯಾಮರಾ ಬಂದಾಗ ಈಗೋ ಬರುತ್ತೆ. ಆ ಈಗೋ ಬಂದಾಗ ಏನೇನು ವಿಷಯಗಳು ಬಂದು ಬಿಡುತ್ತೆ. ಆ ಮಾತಿನ ಭರದಲ್ಲಿ ದರ್ಶನ್ ಹೇಳುವುದು ತಗಡೇ ಅಂತ. ಉಮಾಪತಿ ಕೂಡ ನನಗೆ ಗೊತ್ತು. ರಾಬರ್ಟ್‌ ಬಿಡುಗಡೆಗೂ ಮೊದಲೇ ಬೇಟಿಯಾಗಿತ್ತು. ದರ್ಶನ್‌ ಬಗ್ಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರೆ, ಸ್ವಂತ ಅಣ್ಣ ಎಂದು ದರ್ಶನ್‌ ಅವರನ್ನು ಕರೆದಿದ್ದರು”

ದರ್ಶನ್‌ ನೀನು ಕೂಡ ತಗಡೇ!

"ದರ್ಶನ್ ತಗಡೇ ಅಂತ ಹೇಳಿದ್ದೀಯಲ್ಲ ನೀನು ಏನು ಅಂದ್ಕೊಂಡಿದ್ದೀಯಪ್ಪ. ನೀನು ಕೂಡ ತಗಡೇ.. ಅದನ್ನು ನೀನು ಯೋಚನೆ ಮಾಡಿಲ್ಲ ಅಷ್ಟೇ. ನಾವು ಯೋಚನೆ ಮಾಡೋದು ಹೇಗೆ ಗೊತ್ತಾ? ನಮ್ಮ ಈಗೋ ಹೇಗಿರುತ್ತೆ ಅಂದರೆ, ನಾನು ವಜ್ರ, ನಾನು ಚಿನ್ನ.. ನಾನು ಬೆಳ್ಳಿ ಅನ್ನುತ್ತೆ. ಆದರೆ ನಾವು ತಗಡು ಅಂತ ಬಹಳ ಜನಕ್ಕೆ ಗೊತ್ತಿಲ್ಲ. ತಗಡು ಅನ್ನೋದು ಇದೆಯಲ್ಲ ಜನ ಸಾಮಾನ್ಯರ ವಸ್ತು ಅದು. ಬಿದಿರು ಅಂತ ಹೇಳ್ತಿವಲ್ಲ ಹಾಗೆ ಅದು. ಇದೇ ಮಾತನ್ನು ಮಗನೇ ಉಮಾಪತಿ ನಿನಗೂ ಹೇಳ್ತಿನಿ. ಸಿನಿಮಾ ಮಾಡೋದು ಅಷ್ಟು ಸುಲಭ ಅಲ್ಲ. ನೀನು ಹೇಳಿದಂತೆ ಬಿಜಿನೆಸ್‌ ಮಾಡುವುದೇ ಒಳಿತು" ಎಂದಿದ್ದಾರೆ ಅಗ್ನಿ ಶ್ರೀಧರ್.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ