logo
ಕನ್ನಡ ಸುದ್ದಿ  /  ಮನರಂಜನೆ  /  ಉತ್ತರ ಕರ್ನಾಟಕ ಸೊಗಡಿನ ‘ಸೋಮು ಸೌಂಡ್ ಇಂಜಿನಿಯರ್’ ಟ್ರೇಲರ್‌ ರಿಲೀಸ್;‌ ಶಿಷ್ಯನ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ಸೂರಿ, ಡಾಲಿ ಧನಂಜಯ್‌

ಉತ್ತರ ಕರ್ನಾಟಕ ಸೊಗಡಿನ ‘ಸೋಮು ಸೌಂಡ್ ಇಂಜಿನಿಯರ್’ ಟ್ರೇಲರ್‌ ರಿಲೀಸ್;‌ ಶಿಷ್ಯನ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ಸೂರಿ, ಡಾಲಿ ಧನಂಜಯ್‌

Mar 07, 2024 05:36 PM IST

ಉತ್ತರ ಕರ್ನಾಟಕ ಸೊಗಡಿನ ‘ಸೋಮು ಸೌಂಡ್ ಇಂಜಿನಿಯರ್’ ಟ್ರೇಲರ್‌ ರಿಲೀಸ್;‌ ಶಿಷ್ಯನ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ಸೂರಿ, ಡಾಲಿ ಧನಂಜಯ್‌

    • ವಿಭಿನ್ನ ಕಥಾಹಂದರದ ಸೋಮು ಸೌಂಡ್‌ ಎಂಜಿನಿಯರ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಶಿಷ್ಯನ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ದುನಿಯಾ ಸೂರಿ. ನಟ ಧನಂಜಯ್‌ ಸಹ ಸಾಥ್‌ ನೀಡಿದ್ದಾರೆ. 
ಉತ್ತರ ಕರ್ನಾಟಕ ಸೊಗಡಿನ ‘ಸೋಮು ಸೌಂಡ್ ಇಂಜಿನಿಯರ್’ ಟ್ರೇಲರ್‌ ರಿಲೀಸ್;‌ ಶಿಷ್ಯನ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ಸೂರಿ, ಡಾಲಿ ಧನಂಜಯ್‌
ಉತ್ತರ ಕರ್ನಾಟಕ ಸೊಗಡಿನ ‘ಸೋಮು ಸೌಂಡ್ ಇಂಜಿನಿಯರ್’ ಟ್ರೇಲರ್‌ ರಿಲೀಸ್;‌ ಶಿಷ್ಯನ ಚಿತ್ರಕ್ಕೆ ಸಾಥ್‌ ನೀಡಿದ ದುನಿಯಾ ಸೂರಿ, ಡಾಲಿ ಧನಂಜಯ್‌

Somu Sound Engineer Trailer: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ದುನಿಯಾ ಸೂರಿ ಅವರ ಬಳಿ ಕೆಲಸ ಕಲಿತ ಶಿಷ್ಯನ ಸಿನಿಮಾವೀಗ ಮಾರ್ಚ್‌ 15ರಂದು ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಹಾಡುಗಳ ಮೂಲಕ ಆಮಂತ್ರಣ ಕೊಟ್ಟಿದ್ದ ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ತಂಡವೀಗ ಟ್ರೇಲರ್ ಮೂಲಕ ಆಗಮಿಸಿದೆ. ಶಿಷ್ಯನ ಹೊಸ ಪ್ರಯತ್ನಕ್ಕೆ ನಿರ್ದೇಶಕ ಸೂರಿ ಸಾಥ್ ಕೊಟ್ಟಿದ್ದು, ಡಾಲಿ ಧನಂಜಯ್ ಕೂಡ ಕೈ ಜೋಡಿಸಿದ್ದಾರೆ. ಈಗಷ್ಟೇ ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಈ ಸಿನಿಮಾ ಕಾಡುತ್ತದೆ. ಅದು ಸತ್ಯ. ಸಿನಿಮಾದಲ್ಲಿ ತುಂಬಾ ವಿಷಯಗಳು ಇವೆ. ಆ ಪ್ರದೇಶದಿಂದ ಬರುವ ಸಿನಿಮಾಗಳು ನಮಗೆ ಬೇಕಿವೆ. ಸಿನಿಮಾದಿಂದ ಸಿನಿಮಾಗೆ ನಾವು ಬೇರೆ ರೀತಿಯ ಫಾರ್ಮೆಟ್ ಗೆ ಹೋಗುತ್ತಿದ್ದೇವೆ. ಶೂಟ್ ಮಾಡುವುದು ಒಂದೇ ರೀತಿ ಸಾಧ್ಯವಿಲ್ಲ. ಅದೊಂದು ಬೇರೆನೇ ಇರುತ್ತದೆ. ಟಗರು ಆಗುವುದಕ್ಕೂ ಮೊದ್ಲೇ ನನಗೆ ಅವನಲ್ಲಿ ಫ್ರೌಡಿಮೆ ನೋಡಿದೆ. ಇವನಿಗೆ ಅರ್ಥವಾಗುತ್ತಿದೆ ಎಂದಾಗ ಸಿನಿಮಾ ಮಾಡು ಎಂದೇ ಅದೇ ರೀತಿಯಲ್ಲಿ ಸಿನಿಮಾ ಮಾಡಿದ್ದಾನೆ ಎಂದರು ನಿರ್ದೇಶಕ ಸೂರಿ.

ಮುಂದುವರಿದು ಮಾತನಾಡಿ, "ಆ ಭಾಷೆಯಲ್ಲಿ ಸಿನಿಮಾ ಮಾಡುತ್ತೇನೆ ಅದನ್ನು ಆಯ್ಕೆ ಮಾಡಿದ್ದು ಕೂಡ ಅವನೇ. ಕಡ್ಡಿಪುಡಿ, ಟಗರು, ತಿಥಿ ಸಿನಿಮಾಗಳು. ಹಾಗೇ ಒಂದು ಜಾಗಕ್ಕೆ ಹೋಗಿ ದುಡಿಸಿಕೊಳ್ಳುತ್ತವೆ. ಆ ರೀತಿ ಹುಡುಗರು ನುರಿತರಾಗಿದ್ದಾರೆ. ಎಂಥ ಚಾಲೆಂಜ್ ಎಂದರೆ. ಜಾಕಿ ರೀ ರಿಲೀಸ್ ಆಗ್ತಿದೆ. ಅದರ ಜೊತೆಗೆ ಆರು ಸಿನಿಮಾ ಬರ್ತಿದೆ. ಎಲ್ಲವನ್ನೂ ನೋಡಿ ಯಾವುದೋ ಕ್ವಾಲಿಟಿ ಅನಿಸುತ್ತದೆಯೋ ಅದರ ಕಡೆ ಜೈ ಎನ್ನಿ ಎಂದರು ಸೂರಿ.

ಸೂರಿ ಸರ್‌ ಎಲ್ಲ ಸಿನಿಮಾಗಳನ್ನು ಹೊಗಳಲ್ಲ..

"ಸೋಮು ಸೌಂಡ್ ಇಂಜಿನಿಯರ್ ದೊಡ್ಡದಾಗಿ ಸೌಂಡ್ ಮಾಡಲಿ ಎಂದು ಹಾರೈಸುತ್ತೇನೆ. ಸಿನಿಮಾ ಚೆನ್ನಾಗಿದೆ ಅಂತಾ ನಂಬಲು ಸೂರಿ ಸರ್ ಎಲ್ಲಾ ಕಡೆ ಬರೋದಿಲ್ಲ. ಎಲ್ಲಾ ಸಿನಿಮಾ ಮಾತಾಡಲ್ಲ. ಜೊತೆಗಿದ್ದವರೇ ಮಾಡಿರಲಿ. ಯಾರೇ ಮಾಡಿರಲಿ. ಅವರು ಒಂದು ಸಿನಿಮಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರೆ ಸಿನಿಮಾ ಚೆನ್ನಾಗಿದೆ, ಸೂಪರ್ ಆಗಿದೆ ಎಂದರ್ಥ. ಚರಣ್ ಕೂಡ ಸಿನಿಮಾ ಹೊಗಳುತ್ತಿದ್ದಾರೆ ಎಂದರೆ ಚೆನ್ನಾಗಿದೆ ಎಂದು ಅರ್ಥ. ಜಯಣ್ಣ ಕೂಡ ತುಂಬಾ ಹೊಗಳುತ್ತಿದ್ದರು. ಅಳು ಬಂತು ಎಂದರು. ನಾನು ಅಭಿ ಜೊತೆ ಟಗರು, ಸಲಗ, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಕೆಲಸದ ಬಗ್ಗೆ ನನಗೆ ಗೊತ್ತು. ಮಾರ್ಚ್ 15ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದರು ಡಾಲಿ ಧನಂಜಯ.

ನಾಯಕ ಶ್ರೇಷ್ಠ ಮಾತನಾಡಿ, ಸೂರಿ ಸರ್, ಧನಂಜಯ್ ಅವರಿಗೆ ಧನ್ಯವಾದ. ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ಇಡೀ ತಂಡ ಒಳ್ಳೆ ಕೆಲಸ ಮಾಡಿದ್ದಾರೆ. ಸೋಮು ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ದುರಹಂಕಾರದಲ್ಲಿ ಮೆರೆಯುತ್ತಿರುವ ಹುಡುಗನ ಲೈಫ್ ನಲ್ಲಿ ಏನಾಗುತ್ತದೆ ಅನ್ನೋದೇ ಸಿನಿಮಾ ಎಂದರು.

ಚರಣ್‌ ರಾಜ್‌ ಸಂಗೀತ ನೀಡಿರುವ ಸಿನಿಮಾ

ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ಇಷ್ಟರ ಮಟ್ಟಿಗೆ ಟಾಕ್ ಆಗುವುದಕ್ಕೆ ಕಾರಣ ಅಭಿ. ಸೂರಿ ಗರಡಿಯಲ್ಲಿ ಪಳಗಿರುವ ಅಭಿ ತಮ್ಮ 9 ವರ್ಷದ ಶ್ರಮವನ್ನು ಹಾಕಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ಅಭಿ ಹೊರತಾಗಿ ಸಲಗ, ಟಗರು ತಂತ್ರಜ್ಞರು ದುಡಿದಿರುವ ಚಿತ್ರ ಇದಾಗಿದೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದರೆ, ಧನಂಜಯ ರಂಜನ್, ನಾಗಾರ್ಜುನ ಶರ್ಮಾ, ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಮಾಸ್ತಿ ಜೊತೆಗೂಡಿ ಅಭಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಲಗ ಹಾಗೂ ಭೀಮ ಖ್ಯಾತಿಯ ಶಿವಸೇನಾ ತಮ್ಮ ಕ್ಯಾಮರಾದಲ್ಲಿ ಚಿತ್ರವನ್ನ ಸೆರೆ ಹಿಡಿದಿದ್ದಾರೆ.

'ಸೋಮು ಸೌಂಡ್ ಇಂಜಿನಿಯರ್' ಸಿನಿಮಾದಲ್ಲಿ ಸಲಗ ಸಿನಿಮಾದಲ್ಲಿ ನಟಿಸಿದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಶ್ರೇಷ್ಠಗೆ ನಾಯಕಿಯಾಗಿ ಶೃತಿ ಪಾಟೀಲ್ ನಟಿಸಿದ್ದಾರೆ. ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಸಬರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಮಾಪಕರಾಗಿ ಕ್ರಿಸ್ಟೋಫರ್ ಕಿಣಿ ಚಿತ್ರಕ್ಕೆ ಶಕ್ತಿಯಾಗಿ ನಿಂತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ