Kannada Serial TRP: ಮುಂದುವರಿದ ಲಕ್ಷ್ಮೀ ನಿವಾಸ ಸೀರಿಯಲ್ ನಂ 1 ಓಟ; ಅಮೃತಧಾರೆ ಜಿಗಿತ, ಈ ವಾರದ ಟಾಪ್ 5 ಧಾರಾವಾಹಿಗಳು ಯಾವವು?
ಕನ್ನಡ ಕಿರುತೆರೆಯಲ್ಲಿ ಈ ವಾರ ಟಾಪ್ ಟಿಆರ್‌ಪಿ ಗಿಟ್ಟಿಸಿಕೊಂಡ ಸೀರಿಯಲ್‌ಗಳು ಯಾವವು ಎಂಬುದಕ್ಕೆ ಇಲ್ಲಿದೆ ಉತ್ತರ. ಲಕ್ಷ್ಮೀ ನಿವಾಸ ನಂ.1 ಪಟ್ಟ ಅಲಂಕರಿಸಿದರೆ, ಎರಡರಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಇದ್ದರೆ, ಅಮೃತಧಾರೆ ಮೇಲಕ್ಕೆ ಜಿಗಿತ ಕಂಡಿದೆ.
Kannada Serial TRP: ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನೋಡುಗನ ಗಮನ ಸೆಳೆದಿದೆ. ಅದರ ಪರಿಣಾಮ, ಟಿಆರ್‌ಪಿಯಲ್ಲೂ ಈ ಧಾರಾವಾಹಿಯನ್ನು ಎತ್ತಿ ಹಿಡಿದಿದ್ದಾನೆ ವೀಕ್ಷಕ. ಲಕ್ಷ್ಮೀ ನಿವಾಸ, ನೋಡುಗನಿಂದ ಬಹುಪರಾಕ್ ಪಡೆಯುತ್ತಿದೆ. ಅದರಂತೆ, ಟಿಆರ್‌ಪಿಯಲ್ಲೂ ಈ ವಾರ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕಳೆದ ವಾರವೂ ಮೊದಲ ಸ್ಥಾನದಲ್ಲಿದ್ದ ಈ ಸೀರಿಯಲ್ ಅದೇ ನಂ. 1 ಸ್ಥಾನವನ್ನು ಉಳಿಸಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಟಿಆರ್‌ಪಿಯಲ್ಲಿ ಟಾಪ್ ಸ್ಥಾನದಲ್ಲಿಯೇ ಗಟ್ಟಿಯಾಗಿ ನೆಲೆನಿಂತಿದ್ದು ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಇದೀಗ ಇದೇ ಸೀರಿಯಲ್, ಈ ವಾರವೂ ಮೇಲೆದ್ದು ಬಂದಿಲ್ಲ. ಅಂದರೆ, ಕಳೆದ ವಾರದಂತೆ ಈ ವಾರವೂ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಟಾಪ್‌ನಲ್ಲಿ ಲಕ್ಷ್ಮೀ ನಿವಾಸ ಮುಂದುವರಿದರೆ, ಅದರ ಕೆಳಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಇದೆ.
ಮೇಲಕ್ಕೆ ಜಿಗಿದ ಅಮೃತಧಾರೆ
ಹೊಸ ಪ್ರೋಮೋ ಮೂಲಕವೇ ನೋಡುಗರ ಸೆಳೆದಿದ್ದ ಅಮೃತಧಾರೆ ಧಾರಾವಾಹಿ, ಮಲ್ಲಿ ಮತ್ತು ಜೈದೇವ್ ಮದುವೆ ಪ್ರಹಸನದ ಬಳಿಕವೂ ಮುಂದೇನಾಗಲಿದೆ ಎಂಬ ಕೌತಯುಕ ಮೂಡಿಸಿತ್ತು. ಅದರಂತೆ, ಇಡೀ ವಾರದ ಸಂಚಿಕೆಗಳು ನೋಡುಗನ ಪ್ರಿಯವಾಗಿವೆ. ಹಾಗಾಗಿ ಐದನೇ ಸ್ಥಾನದಲ್ಲಿದ್ದ ಅಮೃತಧಾರೆ ಸೀರಿಯಲ್ ಈ ವಾರ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ನಾಲ್ಕರಲ್ಲಿಯೇ ಉಳಿದ ಸೀತಾ ರಾಮ
ಇತ್ತ ಅಪಘಾತದ ಬಳಿಕ ಕಳೆದ ಎರಡು ವಾರಗಳಿಂದ ಹಾಸಿಗೆ ಹಿಡಿದ ರಾಮ, ಇನ್ನೇನು ಚೇತರಿಕೆ ಕಾಣುತ್ತಿದ್ದಾನೆ. ಮತ್ತೊಂದು ಬದಿಯಲ್ಲಿ ಆಫೀಸ್‌ಗೆ ಚಾಂದಿನಿಯ ಆಗಮನವಾಗಿದೆ. ಹೀಗೆ ಒಂದಷ್ಟು ಕುತೂಹಲ ಮೂಡಿಸಿರುವ ಸೀತಾ ರಾಮ ಸೀರಿಯಲ್ ಈ ವಾರವೂ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವಾರವೂ ಅದೇ 4ರಲ್ಲಿ ಉಳಿದಿತ್ತು ಈ ಸೀರಿಯಲ್.
ಪೊಲೀಸ್ ಆಗುವ ಭರದಲ್ಲಿ ಸತ್ಯ
ಸತ್ಯ ಸೀರಿಯಲ್ ಸಹ ನೋಡುಗರನ್ನು ಸೆಳೆಯುತ್ತಿದೆ. ಮೆಕ್ಯಾನಿಕ್ ಆಗಿದ್ದ ಗಂಡುಬೀರಿ ಹುಡುಗಿ, ಸಭ್ಯ ಗೃಹಿಣಿಯಾಗಿಯೂ ಮನೆ ಮಂದಿಯ ಪ್ರೀತಿ ಗಿಟ್ಟಿಸಿಕೊಂಡಿದ್ದಾಳೆ. ಇದೀಗ ಇದೇ ಸತ್ಯ ಪೊಲೀಸ್ ಇಲಾಖೆಗೂ ಸೇರಿದ್ದಾಳೆ. ಪೊಲೀಸ್ ಟ್ರೇನಿಂಗ್ ಸೆಂಟರ್ ಪ್ರವೇಶ ಪಡೆದಿದ್ದಾಳೆ. ಅಲ್ಲಿ ಎದುರಾಗುತ್ತಿರುವ ಚಾಲೆಂಜ್‌ಗಳನ್ನು ಫೇಸ್ ಮಾಡುತ್ತಿದ್ದಾಳೆ ಈ ಸೀರಿಯಲ್ ಸಹ ಆರನೇ ಸ್ಥಾನದಿಂದ ಐದಕ್ಕೆ ಜಿಗಿತ ಕಂಡಿದೆ.
ಆರಕ್ಕಿಳಿದ ಶ್ರೀರಸ್ತು ಶುಭಮಸ್ತು
ಫ್ಯಾಮಿಲಿ ಡ್ರಾಮಾ ಕಥಾಹಂದರದ ಶ್ರೀರಸ್ತು ಶುಭಮಸ್ತು ಸೀರಿಯಲ್ ಕಳೆದ ವಾರ ಮೂರನೇ ಸ್ಥಾನದಲ್ಲಿತ್ತು. ಈ ಸಲ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ.