Shivaratri Songs: ಮಹಾ ಶಿವರಾತ್ರಿ ಸಂಭ್ರಮ ಹೆಚ್ಚಿಸುವ ಶಿವನಾಮವಿರುವ ಈ 3 ಚಲನಚಿತ್ರ ಗೀತೆಗಳನ್ನು ಕೇಳಿ
Shivaratri Lord Shiva Songs: ಶಿವರಾತ್ರಿ ಹಬ್ಬದ ಸಮಯದಲ್ಲಿ ಕನ್ನಡ ಸಿನಿಮಾಗಳಲ್ಲಿರುವ ಭಕ್ತಿಪ್ರಧಾನ ಶಿವನ ಸ್ತುತಿಗಳನ್ನು, ಹಾಡುಗಳನ್ನು ಕೇಳಲು ಬಯಸುವವರಿಗೆ ಮೂರು ಗೀತೆಗಳನ್ನು ನೀಡಲಾಗಿದೆ. ಏಳು ಶಿವ ಏಳು ಶಿವ, ಈ ಭೂಮಿ ಬಣ್ಣದ ಬುಗರಿ, ನೀಡು ಶಿವ ನೀಡು ಶಿವ ಹಾಡಿನ ಲಿರಿಕ್ಸ್ ಕೂಡ ಇಲ್ಲಿದೆ.
ಶಿವರಾತ್ರಿಗೆ ಶಿವನ ಭಕ್ತಿಗೀತೆಗಳು, ಚಲನಚಿತ್ರ ಗೀತೆಗಳನ್ನು ಕೇಳಲು ಬಹುತೇಕರು ಬಯಸುತ್ತಾರೆ. ಕನ್ನಡದಲ್ಲಿ ಶಿವನ ಕುರಿತಾಗಿ ಹಲವು ಚಿತ್ರಗೀತೆಗಳು ಇವೆ. ಕೆಲವೊಂದು ಗೀತೆಗಳು ಸಂಪೂರ್ಣ ಭಕ್ತಿ ಗೀತೆಗಳಾದರೆ, ಇನ್ನು ಕೆಲವು ಸಿನಿಮಾ ನಾಯಕನ ಹೆಸರು ಮತ್ತು ಶಿವನ ನಡುವೆ ಹೋಲಿಕೆ ಮಾಡುವಂತಹ ಹಾಡುಗಳು ಇರುತ್ತವೆ. ಶಿವರಾಜ್ ಕುಮಾರ್ ನಟನೆಯ ಹಲವು ಸಿನಿಮಾಗಳಲ್ಲಿ ಇಂತಹ ಹಾಡುಗಳನ್ನು ಕೇಳಬಹುದು. ಯುವ ರಾಜ್‌ಕುಮಾರ್ ನಟನೆಯ ಮುಂಬರುವ "ಯುವ" ಸಿನಿಮಾದಲ್ಲೂ ಒಬ್ಬನೇ ಶಿವ, ಒಬ್ಬನೇ ಯುವ ಹಾಡಿದೆ. ಕನ್ನಡ ಚಿತ್ರಗೀತೆಗಳಲ್ಲಿ ನೂರಾರು ಹಾಡುಗಳಲ್ಲಿ ಶಿವನಿದ್ದಾನೆ. ಶಿವರಾತ್ರಿ ಹಿನ್ನೆಲೆಯಲ್ಲಿ ಇಲ್ಲಿ ಮೂರು ಶಿವನ ಹಾಡುಗಳು ಮತ್ತು ಹಾಡಿನ ಕನ್ನಡ ಲಿರಿಕ್ಸ್ ನೀಡಲಾಗಿದೆ.
ನೀಡು ಶಿವ ನೀಡದಿರು ಶಿವ
ಗಾನ ಯೋಗಿ ಪಂಚಾಕ್ಷರ ಗವಾಯಿ ಸಿನಿಮಾದಲ್ಲಿ "ನೀಡು ಶಿವ" ಎಂಬ ಹಾಡು ಬಹುತೇಕರಿಗೆ ಅಚ್ಚುಮೆಚ್ಚು. ಆ ಹಾಡಿನ ಲಿರಿಕ್ಸ್ ಇಲ್ಲಿದೆ. "ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ, ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ, ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ನೀನಿತ್ತ ಕಾಯ ನಿನ ಶೈಲಿ ಮಾಯ ಆಗೋದು ಹೋಗೋದು ನಾ ಕಾಣೆನೆ, ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ ನಾನಂತೂ ನಿನ್ನನ್ನಲಾರೆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ಉಣಿಸೋದು ನಾ ಕಾಣೆನೇ.
ಏಳು ಶಿವ ಏಳು ಶಿವ (ಹಾಲುಂಡ ತವರು)
ಹಂಸಲೇಖ ಸಂಗೀತವಿರುವ ಹಾಲುಂಡ ತವರು ಸಿನಿಮಾದ "ಏಳು ಶಿವ ಏಳು ಶಿವ" ಹಾಡನ್ನು ನೆನಪಿಸಬಹುದು. ಈ ಹಾಡಿನ ಲಿರಿಕ್ಸ್ ಇಲ್ಲಿದೆ.
"ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ, ಹಾಡು ಶಿವ ಹಾಡು ಶಿವ, ಸುಪ್ರಭಾತ ಹೇ ಪ್ರಭಾತ, ನಿನಗೆ ಸುಪ್ರಭಾತ ಶರಣೂ ಶರಣೂ ಶರಣೂ ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ , ಭೂಮಿ ನಮ್ಮ ಆಲಯ. ಭೂಮಿ ನಮ್ಮ ಆಲಯ ಕಾಯಕವೇ ದೇವರು, ದೇವರಿಗೆ ಸೂರ್ಯನದೆ ಆರತಿ, ಗುಡಿಯ ಶಿವ ನಲಿಯೊ ಶಿವ ಕಾಮ ಕ್ರೋಧ ಎಸೆದು ಮೇಲೆ, ಏಳು ಶಿವ ಏಳು ಶಿವ, ಬಾಳ ಬಂಡಿ ಹೂಡು ಶಿವ, ಬಾಳ ಬಂಡಿ ಎಳೆಯಲು. ಬಾಳ ಬಂಡಿ ಎಳೆಯಲು ಪ್ರೇಮವೆಂಬ ಭೂಮಿಗೆ ಪಾಪಗಳ ವ್ಯಾಘ್ರಗಳ ಹೂಡದೆ ಮನದ ಹೊಲ ಉಳುವ ಛಲ ಕಣ್ಣ ತುಂಬ ತುಂಬಿ ಕೊಂಡು ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ ಹಾಡು ಶಿವ ಹಾಡು ಶಿವ, ಸುಪ್ರಭಾತ ಹೇ ಪ್ರಭಾತ, ನಿನಗೆ ಸುಪ್ರಭಾತ ಶರಣೂ ಶರಣೂ ಶರಣೂ ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ" ಎಂಬ ಮಧುರವಾದ ಗೀತೆಯನ್ನು ಶಿವರಾತ್ರಿ ಸಂದರ್ಭದಲ್ಲಿ ಕೇಳಬಹುದು.
ಈ ಭೂಮಿ ಬಣ್ಣದ ಬುಗರಿ (ಮಹಾಕ್ಷತ್ರೀಯ)
ಡಾ. ವಿಷ್ಣುವರ್ಧನ್ ಅಭಿನಯದ ಮಹಾಕ್ಷತ್ರೀಯ ಸಿನಿಮಾದ "ಈ ಭೂಮಿ ಬಣ್ಣದ ಬುಗರಿ, ಆ ಶಿವನೇ..." ಹಾಡು ಶಿವರಾತ್ರಿಯ ಸಂಭ್ರಮವನ್ನು ಹೆಚ್ಚಿಸಬಹುದು. ಹಂಸಲೇಖ ಸಾಹಿತ್ಯದ ಈ ಹಾಡನ್ನು ಎಸ್‌ಪಿಬಿ ತಮ್ಮ ಮಧುರ ಕಂಠದಲ್ಲಿ ಹಾಡಿದ್ದಾರೆ. ಈ ಹಾಡಿನ ಲಿರಿಕ್ಸ್ ಇಲ್ಲಿದೆ.
ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೆ ಓಟ ,ಕಾಲ ಕ್ಷಣಿಕ ಕಣೋ , ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ, ಹಡೆದವರೇ ದೈವ ಕಣೋ ಸುಖವಾದ ಬಾಷೆಯ ಕಲಿಸೊ, ಸರಿಯಾದ ದಾರಿಗೆ ನೆಡೆಸೊ, ಸಂಸ್ಕೃತಿಯೇ ಗುರುವು ಕಣೋ ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ, ಕಾಲ ಕ್ಷಣಿಕ ಕಣೋ ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ, ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ , ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ, ಭರವಸೆಯೇ ಮಗುವು ಕಣೇ ಕಳಬೇಡ ಕೊಲ್ಲಲು ಬೇಡ, ನೀ ಹಾಡು ಶಾಂತಿಯ ಹಾಡ, ಜೀವನವೇ ಪ್ರೀತಿ ಕಣೋ ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೆ ಓಟ, ಕಾಲ ಕ್ಷಣಿಕ ಕಣೋ ಓ ... ಓ ... ಓಹೊ....... ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ, ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ" ಎಂಬ ಅರ್ಥಪೂರ್ಣವಾದ ಹಾಡನ್ನು ಈ ಶಿವರಾತ್ರಿಗೆ ನೆನಪಿಸಿಕೊಳ್ಳಬಹುದು.