ಅಪ್ಪಿ-ಪಾರ್ಥ ಲವ್‌ಸ್ಟೋರಿಗೆ ಭೂಮಿಕಾ ಗ್ರೀನ್ ಸಿಗ್ನಲ್; ಭೂಮಿಕಾ ಮೇಲಿನ ನಂಬಿಕೆ ಕಳೆದುಕೊಂಡ್ರ ಗೌತಮ್; ಅಮೃತಧಾರೆ ಸೀರಿಯಲ್ ಸ್ಟೋರಿ
May 07, 2024 09:14 AM IST
Amruthadhaare: ಅಪ್ಪಿ-ಪಾರ್ಥ ಲವ್‌ಸ್ಟೋರಿಗೆ ಭೂಮಿಕಾ ಗ್ರೀನ್ ಸಿಗ್ನಲ್
- Amruthadhaare Serial Yesterday episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಚಿನ್ನ ಗಿರವಿಟ್ಟ ಸಂಗತಿ ಶಕುಂತಲಾದೇವಿ ಮೂಲಕ ಗೌತಮ್ ತಿಳಿದುಕೊಳ್ಳುತ್ತಾನೆ. ಇದಾದ ಬಳಿಕ ಗೌತಮ್ "ನಂಬಿಕೆಯ ಮಹತ್ವದ" ಕುರಿತು ಭೂಮಿಕಾಳಲ್ಲಿ ಮಾತನಾಡುತ್ತಾಳೆ.
ಪಾರ್ಥನ ಮನೆಗೆ ಅಪೇಕ್ಷಾ ಬಂದು ಹೋಗಿದ್ದಾಳೆ. "ಏನಾಗಿದೆ ನಿಮಗೆ, ಏಕೆ ನಿಮಗೆ ನನ್ನ ಅಯ್ಯೋ ಎನಿಸುತ್ತಿದ್ದೀರಾ" ಎಂದು ಕಾಲ್ ಮಾಡಿ ಅಪೇಕ್ಷಾ ಕೇಳುತ್ತಾಳೆ. "ನನಗೆ ಏನೂ ಆಗಿಲ್ಲ" ಎನ್ನುತ್ತಾನೆ. "ಎಂದಿನ ಸ್ಥಳದಲ್ಲಿ ಕಾಯ್ತಾ ಇರ್ತಿನಿ. ಬರಲೇಬೇಕು" ಎನ್ನುತ್ತಾನೆ. "ಪ್ರಾಜೆಕ್ಟ್ ಕೆಲಸ ಇದೆ. ನನಗೆ ಬರಲು ಆಗೋದಿಲ್ಲ" ಎನ್ನುತ್ತಾನೆ. "ನಿಮ್ಮ ಕೆಲಸ ಮುಗಿಸಿಯೇ ಬನ್ನಿ, ಅಷ್ಟು ಸಮಯ ಕಾಯ್ತ ಇರ್ತಿನಿ" ಎನ್ನುತ್ತಾಳೆ.
ಶಕುಂತಲಾದೇವಿ ಮತ್ತು ಅಣ್ಣ ಮಾತನಾಡುತ್ತಾ ಇರುತ್ತಾರೆ. "ನಿನಗೆ ಒಳ್ಳೆಯ ಸಾಕ್ಷಿ ಸಿಕ್ಕಿದೆ. ಅದನ್ನು ಇಡ್ಕೊಂಡು ಏನೂ ಮಾಡ್ತಿಯಾ" ಎಂದು ಅಣ್ಣ ಕೇಳಿದಾಗ "ಎಲ್ಲವೂ ನಿಂತಿರುವುದು ನಂಬಿಕೆ ಮೇಲೆ. ಆ ನಂಬಿಕೆಯೇ ಸುಳ್ಳಾದರೆ ಯಾರಿಗೇ ಆದ್ರೂ ನಿಂತಿರುವ ಸೌಧ ಕುಸಿಯುತ್ತದೆ. ಆ ನಂಬಿಕೆಗೆ ಹುಳಿ ಹಿಂಡುವೆ" ಎನ್ನುತ್ತಾರೆ ಶಕುಂತಲಾ. ಇದೇ ಸಮಯದಲ್ಲಿ ಗೌತಮ್ ಮತ್ತು ಭೂಮಿಕಾ ಬರುತ್ತಾರೆ. "ಗೌತಮ್ ನಿನ್ನ ಹತ್ರ ಮಾತನಾಡಬೇಕಿತ್ತು" ಎಂದು ಕರೆಯುತ್ತಾಳೆ. "ಭೂಮಿಕಾ ಏನಾದ್ರೂ ದುಡ್ಡಿನ ಸಮಸ್ಯೆ ಇದೆ ಎಂದು ಕೇಳಿದ್ಲ. ಪ್ರತಿತಿಂಗಳು ಅವಳ ಖರ್ಚಿಗೆ ಅಂತ ಹಣ ಹಾಕ್ತಾ ಇದೆಯಾ?" ಎಂದು ಕೇಳುತ್ತಾಳೆ. "ನನ್ನ ಪ್ರಕಾರ ಭೂಮಿಕಾಳಿಗೆ ದುಡ್ಡಿನ ಸಮಸ್ಯೆ ಇದೆ ಎನಿಸುತ್ತದೆ. ಆದರೆ, ಅವಳು ಯಾರಲ್ಲೂ ಹೇಳಿಕೊಳ್ಳುತ್ತಿಲ್ಲ" ಎನ್ನುತ್ತಾಳೆ. "ಅವಳು ತನ್ನ ಒಡವೆಯನ್ನೆಲ್ಲ ತೆಗೆದುಕೊಂಡು ಅಡವಿಟ್ಟಿದ್ದಾಳೆ" ಎನ್ನುತ್ತಾಳೆ. "ಇದೆಲ್ಲ ನಿಜನಾ" ಎಂದು ಗೌತಮ್ ಅಚ್ಚರಿ ವ್ಯಕ್ತಪಡಿಸುತ್ತಾನೆ. "ಸಾಕ್ಷಿ ಇಟ್ಟುಕೊಂಡೇ ಹೇಳ್ತಾ ಇದ್ದೀನಿ" ಎಂದು ರಸೀದಿ ನೀಡುತ್ತಾಳೆ. ಗೌತಮ್ ಅಚ್ಚರಿಯಿಂದ ಆ ರಸಿದಿ ಓದುತ್ತಾನೆ. "ಅವಳಿಗೆ ಅಂತ ಅಕೌಂಟ್ ಕ್ರಿಯೆಟ್ ಮಾಡಿದ್ದೀ ಅಲ್ವ. ಅದರಲ್ಲಿ ಎಷ್ಟು ಹಣ ಇದೆ ಎಂದು ಮ್ಯಾನೇಜರ್‌ಗೆ ಕೇಳು" ಎಂದು ಶಕುಂತಲಾದೇವಿ ಹೇಳಿದಾಗ ಅದೇ ರೀತಿ ಮ್ಯಾನೇಜರ್‌ಗೆ ಗೌತಮ್ ಕಾಲ್ ಮಾಡುತ್ತಾನೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಅಪ್ಪಿ-ಪಾರ್ಥ ಲವ್‌ಸ್ಟೋರಿಗೆ ಭೂಮಿಕಾ ಗ್ರೀನ್ ಸಿಗ್ನಲ್
ಇನ್ನೊಂದೆಡೆ ಪಾರ್ಥ ಚಿಂತೆಯಲ್ಲಿರುವಾಗ ಅಲ್ಲಿಗೆ ಭೂಮಿಕಾ ಬರುತ್ತಾಳೆ. "ಎಲ್ಲೂ ಹೋಗಬೇಕು ಅನಿಸಲಿಲ್ಲ. ಅದಕ್ಕೆ ಎಲ್ಲೂ ಹೋಗಿಲ್ಲ" ಎನ್ನುತ್ತಾನೆ. "ನೀವು ಯಾವುದೇ ಒದ್ದಾಟದಲ್ಲಿದ್ದೀರಿ" ಎಂದು ಹೇಳುತ್ತಾನೆ. "ಇಷ್ಟು ದಿನ ಅಪೇಕ್ಷಾಳನ್ನು ಅವಾಯ್ಡ್ ಮಾಡಿದೆ. ಅವರು ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ" ಎಂದು ಹೇಳುತ್ತಾನೆ. "ನನ್ನ ಮಾತನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡ್ರ" ಎನ್ನುತ್ತಾಳೆ. "ನಾನು ಹೇಳಿರುವ ಮಾತನ್ನು ಮಾತ್ರ ತೆಗೆದುಕೊಳ್ಳಬೇಡಿ. ಅದರ ಹಿಂದಿರುವ ಉದ್ದೇಶ ತಿಳಿದುಕೊಳ್ಳಿ. ಎಲ್ಲದಕ್ಕೂ ಒಂದು ಲಿಮಿಟ್ ಇರಬೇಕು" ಎಂದು ಸಲಹೆ ನೀಡುತ್ತಾಳೆ. "ಆಸೆ ಇದೆ ಎಂದು ಮಿಸ್ ಯೂಸ್ ಮಾಡಿಕೊಳ್ಳಬಾರದುʼ ಎನ್ನುತ್ತಾಳೆ. "ನಿಮ್ಮ ಇಬ್ಬರ ಪ್ರೀತಿಗೆ ನನ್ನ ಒಪ್ಪಿಗೆ ಇದೆ. ಆದರೆ, ಲಿಮಿಟ್ ಇರಬೇಕು" ಎಂದು ಹೇಳುತ್ತಾಳೆ. ಅತ್ತಿಗೆ ಸಪೋರ್ಟ್ ನೀಡಿದ್ದಕ್ಕೆ ಖುಷಿಪಡುತ್ತಾನೆ. ಖುಷಿಯಿಂದ ಡ್ರೆಸ್ ಚೇಂಜ್ ಮಾಡಿಕೊಂಡು ಓಡುತ್ತಾನೆ.
ಗೌತಮ್ ಫೋನ್‌ನಲ್ಲಿ ಮಾತನಾಡುತ್ತಾನೆ. "ಭೂಮಿಕಾ ಆ ಅಕೌಂಟ್‌ನಿಂದ ಒಂದ್ರೂಪಾಯಿ ತೆಗೆದುಕೊಂಡಿಲ್ವಂತೆ" ಎಂದು ಹೇಳುತ್ತಾನೆ. ಅಣ್ಣ ಮತ್ತು ಅಮ್ಮ ಇವನ ಕಿವಿ ಊದಲು ಪ್ರಯತ್ನಿಸುತ್ತಾರೆ. ದುಡ್ಡಿನ ಸಮಸ್ಯೆ ಇದೆ ಎಂದಾಗ ನಮ್ಮಲ್ಲಿ ಹೇಳಬಹುದಿತ್ತು ಅಲ್ವ ಎನ್ನುತ್ತಾಳೆ. "ನಮ್ಮಲ್ಲಿ ಹೇಳಬಹುದಿತ್ತು. ಇವತ್ತು ಈ ರೀತಿ ಮಾಡಿದವಳು, ಇನ್ನು ಬೇರೆ ಏನಾದರೂ ಮಾಡೋದಿಲ್ಲ ಅನ್ನೋ ಗ್ಯಾರಂಟಿ ಏನು?" ಎಂದು ಕೇಳುತ್ತಾಳೆ. ಗೌತಮ್ ಮನಸ್ಸು ಗೊಂದಲದ ಗೂಡಾಗುತ್ತದೆ. "ಅವಳಿಗೆ ಅನಿಸಿದ್ದು ಮಾಡ್ತಾ ಹೋದ್ರೆ ನಮ್ಮ ಮರ್ಯಾದೆ ಹೋಗುತ್ತದೆ. ನೀನು ಬ್ಲ್ಯಾಂಕ್ ಚೆಕ್ ಕೊಟ್ಟಿದ್ದೀಯಾ. ಅದನ್ನು ಅವಳು ಏನಾದರೂ ಮಾಡಿದ್ರೆ" ಎಂದು ಕೇಳುತ್ತಾಳೆ. "ಒಡವೆ ನಿನ್ನಲ್ಲಿ ಹೇಳದೆ ಅಡವಿಟ್ಟಿದ್ದಾಳೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು" ಎಂದು ಹೇಳುತ್ತಾಳೆ ಶಕುಂತಲಾದೇವಿ. ಗೌತಮ್ ಹೋದ ಬಳಿಕ "ಮುಂದೆ ಇದೆ ಅಣ್ಣ ಮಾರಿಹಬ್ಬ" ಎಮದು ಶಕುಂತಲಾದೇವಿ ಹೇಳುತ್ತಾಳೆ.
ಆ ಸಮಯದಲ್ಲಿ ಮನೆಗೆ ಆನಂದ್ ಬರುತ್ತಾನೆ. "ನೀವು ಒಡವೆ ವಿಷಯನ ಗೌತಮ್‌ಗೆ ಹೇಳಿ" ಎಂದು ಆನಂದ್ ಸಲಹೆ ನೀಡುತ್ತಾನೆ. "ನೀವು ಈ ವಿಷಯನ ನೀವು ಹೇಳುವ ಮೊದಲು ಬೇರೆ ಯಾರಾದರೂ ಹೇಳಿದ್ರೆ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಬರಬಹುದು" ಎನ್ನುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಗೌತಮ್ ಬರುತ್ತಾನೆ. "ನಾವು ಮಾತನಾಡಿದ್ದು ಕೇಳಿಸ್ಕೊಂಡ್ನ" ಎಂದು ಆನಂದ್ ಯೋಚಿಸುತ್ತಾನೆ.
ಪಾರ್ಥ ಅಪ್ಪಿಯನ್ನು ಮೀಟ್ ಆಗುತ್ತಾನೆ. "ನಾನು ಬಿಝಿ ಇದ್ದೀನಿ. ಆಮೇಲೆ ಸಿಗ್ತಿನಿ" ಎಂದು ಅಪೇಕ್ಷಾ ಹೇಳುತ್ತಾಳೆ. "ನಾನು ಕರಿಯರ್ ಮೇಲೆ ಫೋಕಸ್ ಮಾಡಬೇಕು" ಎಂದು ಹೇಳುತ್ತಾಳೆ. ಈ ಮೂಲಕ ಅಪೇಕ್ಷಾ ಪಾರ್ಥನಿಗೆ ಟಾಂಗ್ ನೀಡುತ್ತಾಳೆ. ಬಳಿಕ ಇಬ್ರೂ ಐಸ್‌ಕ್ರೀಮ್ ತಿನ್ನುತ್ತಾರೆ.
ಇನ್ನೊಂದೆಡೆ ಮಹಿಮಾ ಕೋಪದಿಂದ ಫೋನ್‌ನಲ್ಲಿ ಮಾತನಾಡುತ್ತಾಳೆ. ಆಗ ಅಲ್ಲಿಗೆ ಜೀವನ್ ಬರುತ್ತಾಳೆ. "ನನ್ನ ಫ್ರೆಂಡ್ ಫೋನ್ ಮಾಡಿದ್ಲು. ನನ್ನ ಗಂಡ ಫುಡ್ ಡೆಲಿವರಿ ಮಾಡ್ತಾನಂತೆ" ಎಂದು ಹೇಳುತ್ತಾಳೆ. "ಒಂದೇ ಜನರ ರೀತಿ ಏಳು ಜನರು ಇರ್ತಾರಂತೆ" ಎಂದು ಜೀವನ್ ಹೇಳಿದ್ರೂ ಮಹಿಮಾಳಿಗೆ ಸಮಾಧಾನವಾಗೋದಿಲ್ಲ. "ನಮ್ಮ ಲೈಫ್‌ನಲ್ಲಿ ಅಂತಹದ್ದು ನಡೆಯದು" ಎನ್ನುತ್ತಾಳೆ. "ಫ್ರೆಂಡ್ ಹೇಳಿದ್ದು ಕೇಳಿ ಇಷ್ಟು ಅಪ್‌ಸೆಟ್ ಆದ್ಲು. ಯಾವುದೇ ಕಾರಣಕ್ಕೂ ಈ ವಿಷಯ ಅವಳಿಗೆ ಗೊತ್ತಾಗಬಾರದು" ಎಂದುಕೊಳ್ಳುತ್ತಾನೆ ಜೀವನ್.
ಭೂಮಿಕಾ ಮತ್ತು ಗೌತಮ್ ಮಾತನಾಡುತ್ತ ಇರುತ್ತಾರೆ. ಒಂದಿಷ್ಟು ಒಗಟಾಗಿ ಮಾತನಾಡುತ್ತಾನೆ ಗೌತಮ್. "ನಮ್ಮವರು ಅಂದುಕೊಂಡವರು ನಮ್ಮನ್ನು ನಂಬಿರ್ತಾರೆ" ಎಂಬ ಮಾತು ಬರುತ್ತದೆ. "ಸಂಬಂಧಗಳು ಇರುವುದೇ ನಂಬಿಕೆಯ ಬೇಸ್ ಮೇಲೆ" ಎಂದು ಹೇಳುತ್ತಾನೆ. "ನಂಬಿಕೆ ಅನ್ನೋದು ನಮ್ಮ ಸಂಬಂಧಗಳಿಗೆ ವಿಟಮಿನ್ ಇದ್ದ ರೀತಿ. ಅದರ ಕೊರತೆಯಾದ್ರೆ ಸೊರಗಿ ಹೋಗುತ್ತೆ ಸಂಬಂಧ" ಎನ್ನುತ್ತಾನೆ. "ನಂಬಿಕೆಯನ್ನು ಉಳಿಸಿಕೊಳ್ಳೋದೋ ನಿಜ. ಆದರೆ, ಕೆಲವೊಂದು ಸಂದರ್ಭಗಳು ಸತ್ಯ ಮುಚ್ಚಿಡುವಂತಹ ಪರಿಸ್ಥಿತಿ ತರಬಹುದು" ಎಂದು ಹೇಳುತ್ತಾಳೆ ಭೂಮಿಕಾ. ಸೀರಿಯಲ್ ಮುಂದುವರೆಯುತ್ತದೆ.