ಕನ್ನಡ ಸುದ್ದಿ  /  ಮನರಂಜನೆ  /  ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌

ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌

Amruthadhaare: ಝೀ ಕನ್ನಡ ವಾಹಿನಿಯ ಅಮೃತಧಾರೆಯ ಶನಿವಾರದ ಎಪಿಸೋಡ್‌ನಲ್ಲಿ ಹಲವು ವಿದ್ಯಮಾನಗಳು ನಡೆದಿವೆ. ಇದೇ ಎಪಿಸೋಡ್‌ನಲ್ಲಿ ಶಕುಂತಲಾದೇವಿಯು ಕಾಲ್‌ ರೆಕಾರ್ಡ್ಸ್‌ ಪೆನ್‌ ಡ್ರೈವ್‌ ತರಿಸಿಕೊಂಡಿದ್ದಾರೆ. ಗೌತಮ್‌ ಮತ್ತು ಭೂಮಿಕಾ ಕೋಪತಾಪ ಮರೆತು ಮಧ್ಯರಾತ್ರಿ ಐಸ್‌ಕ್ರೀಮ್‌ ತಿಂದಿದ್ದಾರೆ.

ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌
ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌

ಅಮೃತಧಾರೆ ಧಾರಾವಾಹಿ ಶನಿವಾರದ ಕಥೆ: ರಾತ್ರಿ ಗೌತಮ್‌ ಮತ್ತು ಭೂಮಿಕಾ ನಿದ್ದೆ ಇಲ್ಲದೆ ಪರಿತಪಿಸುತ್ತಿದ್ದಾರೆ. "ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ ನಿದ್ದೆ ಬರೋದಿಲ್ಲ. ನಿಮಗ್ಯಾಕೆ ನಿದ್ದೆ ಬರೋದಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ನಿದ್ದೆ ಬರ್ತಾ ಇಲ್ಲ, ಈಗ ಏನು ಮಾಡೋಣ" ಎಂದು ಕೇಳುತ್ತಾಳೆ. "ಏನು ಮಾಡೋಣ" ಎಂದು ಕೇಳುತ್ತಾನೆ ಗೌತಮ್‌. "ಐಸ್‌ಕ್ರೀಮ್‌ ತಿನ್ನೋಣ" ಎನ್ನುತ್ತಾಳೆ. "ಓಕೆ ಎನ್ನುತ್ತಾನೆ" ಈ ಮೂಲಕ ಇವರಿಬ್ಬರು ರಾತ್ರಿ ಐಸ್‌ಕ್ರಿಮ್‌ ಪಾರ್ಟಿ ಮಾಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ರಾತ್ರಿ ಹೊತ್ತು ಜೀವನ್‌ ಮತ್ತು ಮಹಿಮಾ ಮಲಗಿದ್ದಾರೆ. ಆ ಸಮಯದಲ್ಲಿ ಜೀವನ್‌ ಮೊಬೈಲ್‌ಗೆ ಹಲವು ಮೆಸೆಜ್‌ಗಳು ಬರುತ್ತವೆ. ಏನಿದು ಎಂದು ಮಹಿಮಾ ನೋಡಲು ಹೋಗುವಾಗ ಆ ಮೊಬೈಲ್‌ ಕಸಿದುಕೊಂಡು ಆಫೀಸ್‌ ಕ್ಲಯೆಂಟ್‌ ಕಾಲ್‌ ಇತ್ತು ಎಂದು ಹೊರಕ್ಕೆ ಹೋಗುತ್ತಾನೆ. ಫುಡ್‌ ಡೆಲಿವರಿ ಆಪ್‌ನಿಂದ ಲಾಗೌಟ್‌ ಆಗದೆ ಇಷ್ಟೆಲ್ಲ ಮೆಸೆಜ್‌ಗಳು ಬಂದಿರುತ್ತವೆ. ಎಲ್ಲಾದರೂ ಈ ಸಂದೇಶಗಳನ್ನು ಮಹಿಮಾ ನೋಡಿದ್ದರೆ ಕಷ್ಟವಾಗುತ್ತಿತ್ತು.

ಮನೆಯಲ್ಲಿ ಫ್ರಿಜ್‌ನಿಂದ ಐಸ್‌ಕ್ರೀಮ್‌ ಇದೆಯಾ ಎಂದು ಭೂಮಿಕಾ ನೋಡುತ್ತಾರೆ. ಇಬ್ಬರ ಫೇವರಿಟ್‌ ಐಸ್‌ಕ್ರಿಮ್‌ಗಳು ಇರುತ್ತವೆ. ಅಲ್ಲಿ ವೆನಿಲಾ ಐಸ್‌ಕ್ರೀಮ್‌ ಮಾತ್ರ ಇರುತ್ತದೆ. ವೆನಿಲಾ ಇಷ್ಟಪಡದ ಗೌತಮ್‌ ಖುಷಿಯಿಂದಲೇ ತಿನ್ನುತ್ತಾನೆ. ಇನ್ನೊಂದೆಡೆ ಆನಂದ್‌ ಮತ್ತು ಅಪರ್ಣಾ ಕೂಡ ನಿದ್ದೆ ಮಾಡುವ ಮುನ್ನ ಮಾತನಾಡುತ್ತ ಇರುತ್ತಾರೆ. ಅವರು ಗೌತಮ್‌ ಮತ್ತು ಭೂಮಿಕಾರ ಕುರಿತು ಹೊಗಳುತ್ತಾರೆ. ಇಬ್ಬರ ಬದುಕಿನಲ್ಲಿ ಆಗಬೇಕಾದ್ದು ಆಗುತ್ತಿಲ್ಲ ಎಂದು ಮಾತನಾಡುತ್ತಾರೆ. ಇಬ್ಬರು ಕಾಂಪ್ರಾಪೈಸ್‌ ಮಾಡಿಕೊಂಡ್ರೋ ಇಲ್ವೋ ಎಂದು ತಿಳಿಯಲು ಅಪರ್ಣಾ ಕಾಲ್‌ ಮಾಡುತ್ತಾಳೆ. ಐಸ್‌ಕ್ರೀಮ್‌ ತಿನ್ನುತ್ತಿರುವ ಗೌತಮ್‌ "ಏನು ಮಾಡ್ತಾ ಇದ್ದೀರಿ ಡುಮ್ಮಾ ಸರ್"‌ ಎಂದಾಗ "ಐಸ್‌ ಕ್ರೀಮ್‌ ತಿನ್ತಾ ಇದ್ದೀವಿ" ಎಂದಾಗ ಈ ಕಡೆಯವರಿಗೆ ಎಚ್ಚರಿಕೆ. ನಾವಿಲ್ಲಿ ಟೆನ್ಷನ್‌ ಮಾಡ್ತಾ ಇದ್ದೇವೆ, ಇವರು ಐಸ್‌ಕ್ರೀಮ್‌ ತಿನ್ತಾ ಇದ್ದಾರೆ ಎಂದುಕೊಳ್ಳುತ್ತಾರೆ. ಆನಂದ್‌ ಭೂಮಿಕಾಳ ಬಳಿ ಮಾತನಾಡುತ್ತಾನೆ. ಇಬ್ಬರೂ ಕಾಂಪ್ರಾಮೈಸ್‌ ಆಗಿದ್ದೀರಿ, ಖುಷಿಖುಷಿಯಾಗಿರಿ ಎಂದು ಹೇಳಿ ಫೋನ್‌ ಮಾಡುತ್ತಾನೆ.

ಶಕುಂತಲಾದೇವಿ ಕೈಗೆ ಸಿಗ್ತು ಪೆನ್‌ಡ್ರೈವ್‌

ರಾತ್ರಿ ಕಳೆದು ಬೆಳಗಾಗುತ್ತದೆ. ಶಕುಂತಲಾದೇವಿ ಮತ್ತು ಮಾವ ಮಾತನಾಡುತ್ತ ಇರುತ್ತಾರೆ. ಶಕುಂತಲಾದೇವಿ ಸಂಬಂಧಪಟ್ಟವರಿಂದ ಕಾಲ್‌ ರೆಕಾರ್ಡ್ಸ್‌ ತರಿಸಿಕೊಳ್ಳುತ್ತಾಳೆ. ಆ ಪೆನ್‌ ಡ್ರೈವ್‌ ಹಿಡಿದುಕೊಂಡು ಆಟ ಆಡುವ ಯೋಜನೆಯಲ್ಲಿದ್ದಾಳೆ ಶಕುಂತಲಾದೇವಿ. ಒಟ್ಟಾರೆ ಕರ್ನಾಟಕದಲ್ಲಿ ಪ್ರಜ್ವಲ್‌ ರೇವಣ್ಣರ ಪೆನ್‌ ಡ್ರೈವ್‌ ಸುದ್ದಿ ಸದ್ದು ಮಾಡುತ್ತಿದ್ದರೆ ಅದಕ್ಕೆ ತಕ್ಕಂತೆ ಸೀರಿಯಲ್‌ನಲ್ಲಿ ಕಾಲ್‌ ರೆಕಾರ್ಡ್ಸ್‌ ಪೆನ್‌ ಡ್ರೈವ್‌ ಆಯ್ಕೆ ಮಾಡಿಕೊಂಡಿದ್ದಾರೆ ಸೀರಿಯಲ್‌ ಡೈರೆಕ್ಟರ್‌. ಈ ಹಿಂದೆಯೂ ರಾಜ್ಯದಲ್ಲಿ ಏನಾದರೂ ವಿದ್ಯಮಾನ ನಡೆದರೆ ಅದನ್ನೂ ಸೀರಿಯಲ್‌ ಒಳಗೂ ತೋರಿಸುವ ಪ್ರಯತ್ನ ಅಮೃತಧಾರೆಯಲ್ಲಿ ಆಗಿದೆ. ಇತ್ತೀಚೆಗೆ ಚಟಪಟ ಕಬಾಬ್‌ ಡೈಲಾಗ್‌ ಕೂಡ ಅಮೃತಧಾರೆಯೊಳಗೆ ಇತ್ತು.

ಬೆಳಗ್ಗೆ ಗೌತಮ್‌ ಸ್ವತಃ ತಾನೇ ಹೋಗಿ ಭೂಮಿಕಾಗೆ ಕಾಫಿ ತಂದುಕೊಡುತ್ತಾನೆ. ಕೆಲಸದವರು ತಂದುಕೊಟ್ಟರೆ ತಾನು ತೆಗೆದುಕೊಂಡಂತೆ ಆಗುತ್ತ ಎಂದೆಲ್ಲ ಹೇಳುತ್ತಾನೆ. ನನಗೆ ಆಫೀಸ್‌ಗೆ ಲೇಟಾಯ್ತು ಎಂದು ಹೊರಡಲು ಅನುವಾದ ಭೂಮಿಕಾಳನ್ನು "ನಾನೇ ಡ್ರಾಪ್‌ ಮಾಡ್ತಿನಿ" ಎಂದು ಗೌತಮ್‌ ಹೇಳುತ್ತಾನೆ. "ಬೇಡ, ನನ್ನ ಆಫೀಸ್‌ ಬೇರೆ ಕಡೆ, ನಿಮ್ಮ ಕಡೆ" ಎಂದು ಹೇಳುತ್ತಾಳೆ. "ಮನೆಯವರಿಗೆ ಟೈಮ್‌ ಕೊಡಬೇಕು, ಮನೆಯವರು ಅಲ್ವ" ಎಂದು ಹೇಳುತ್ತಾಳೆ. ಡುಮ್ಮ ಸರ್‌ ಮಾತಿನಿಂದ ಭೂಮಿಕಾಳಿಗೆ ಮನಸೊಳಗೆ ತುಂಬಾ ಖುಷಿಯಾಗುತ್ತದೆ. ಗೌತಮ್‌ ಸ್ವತಃ ಭೂಮಿಕಾಳನ್ನು ಟ್ಯೂಷನ್‌ ಕ್ಲಾಸ್‌ಗೆ ಕರೆದುಕೊಂಡು ಬರುತ್ತಾನೆ. ಸಂಜೆಯೂ ಬರ್ತಿನಿ ಎನ್ನುತ್ತಾನೆ. ಬೇಡ ಎಂದವಳನ್ನು ಹೇಗೋ ಒಪ್ಪಿಸುತ್ತಾರೆ.

ಮಲ್ಲಿ ಬೇಸರದಲ್ಲಿ ಕುಳಿತುಕೊಂಡಿದ್ದಾಳೆ. ಜೈದೇವ್‌ ರೆಡಿಯಾಗ್ತಾ ಇರ್ತಾನೆ. ನಾಳೆ ಬೇಗ ರೆಡಿಯಾಗು, ಕಾಲೇಜಿಗೆ ಕರೆದುಕೊಂಡು ಹೋಗ್ತಿನಿ ಎನ್ನುತ್ತಾನೆ. "ನಿನ್ನೆ ಬೇಡ ಅಂದ್ರಿ, ಇವತ್ತು ಓಕೆ ಅಂದ್ರಿ" ಎಂದುಕೊಳ್ಳುತ್ತಾನೆ. ಡೈಲಿ ನಾನೇ ನಿನ್ನ ಕಾಲೇಜಿಗೆ ಕರೆದುಕೊಂಡು ಹೋಗೋದು, ಕರೆದುಕೊಂಡು ಬರೋದು ಮಾಡ್ತಿನಿ" ಎನ್ನತ್ತಾನೆ. ಈ ಮೂಲಕ ಒಂದೆಡೆ ಡುಮ್ಮ ಸರ್‌ ಭೂಮಿಕಾಳನ್ನು ಆಫೀಸ್‌ಗೆ ಡ್ರಾಪ್‌ ಮಾಡುತ್ತ ಇದ್ದಾರೆ ಅದೇ ರೀತಿ ಜೈದೇವ್‌ ಕೂಡ ಕಾಲೇಜಿಗೆ ಡ್ರಾಪ್‌ ಮಾಡಲು ಮುಂದಾಗುತ್ತಾನೆ. "ಕುರಿ ಬಲಿ ಕೊಡುವ ಮೊದಲು ಕೊಬ್ಬಿಸಬೇಕು" ಎಂದುಕೊಳ್ಳುತ್ತಾನೆ ಜೈದೇವ್‌. ಜೈದೇವ್‌ ಬದಲಾಗಿದ್ದಾರೆ ಎಂದು ಖುಷಪಡುತ್ತಾಳೆ ಮಲ್ಲಿ.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತ ಇರುತ್ತಾರೆ. "ನಿನ್ನೆ ಟಿಫಿಕಲ್‌ ಗಂಡ ಹೆಂಡ್ತಿಯಂತೆ ಜಗಳ ಆಡಿದ್ವಿ" ಎನ್ನುತ್ತಾನೆ ಗೌತಮ್‌. "ನಿನ್ನೆಯೇ ಜಗಳ ಆಡಿದ್ರಿ, ನಿನ್ನೆಯೇ ಸರಿಯಾದ್ರಿ" ಎನ್ನುತ್ತಾನೆ ಆನಂದ್‌. ಈ ಮೂಲಕ ಕುಟುಂಬದಲ್ಲಿ ಏನೇ ಜಗಳವಾದರೂ ಮುಂದುವರೆಸಬಾರದು ಎಂಬ ಮಾತುಕತೆ ನಡೆಯುತ್ತದೆ.

IPL_Entry_Point