logo
ಕನ್ನಡ ಸುದ್ದಿ  /  ಕರ್ನಾಟಕ  /  President Medal: ರಾಷ್ಟ್ರಪತಿ ಪದಕ ಪಡೆದ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳು

President medal: ರಾಷ್ಟ್ರಪತಿ ಪದಕ ಪಡೆದ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳು

Praveen Chandra B HT Kannada

Aug 14, 2022 12:57 PM IST

ರಾಷ್ಟ್ರಪತಿ ಪದಕ ಪಡೆದ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳು

    • ಸ್ವಾತಂತ್ರ್ಯ ದಿನದ ಸಮಯದಲ್ಲಿ ಪ್ರತಿಭಾನ್ವಿತ, ಸಾಧಕ ಅಧಿಕಾರಿಗಳಿಗೆ ಸಂಭ್ರಮ. ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ವಿವಿಧ ಪದಕಗಳನ್ನು ನೀಡುವ ಕ್ರಮವನ್ನು ಸ್ವಾತಂತ್ರೋತ್ಸವ ಸಮಯದಲ್ಲಿ ಮಾಡಲಾಗುತ್ತದೆ. ಇದೀಗ ರಾಷ್ಟ್ರಪತಿ ಪದಕ ಘೋಷಣೆಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಕರ್ನಾಟಕದ 18 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.
ರಾಷ್ಟ್ರಪತಿ ಪದಕ ಪಡೆದ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳು
ರಾಷ್ಟ್ರಪತಿ ಪದಕ ಪಡೆದ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳು (freepressjournal)

ನವದೆಹಲಿ: ಸ್ವಾತಂತ್ರ್ಯ ದಿನದ ಸಮಯದಲ್ಲಿ ಪ್ರತಿಭಾನ್ವಿತ, ಸಾಧಕ ಅಧಿಕಾರಿಗಳಿಗೆ ಸಂಭ್ರಮ. ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ವಿವಿಧ ಪದಕಗಳನ್ನು ನೀಡುವ ಕ್ರಮವನ್ನು ಸ್ವಾತಂತ್ರೋತ್ಸವ ಸಮಯದಲ್ಲಿ ಮಾಡಲಾಗುತ್ತದೆ. ಇದೀಗ ರಾಷ್ಟ್ರಪತಿ ಪದಕ ಘೋಷಣೆಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಕರ್ನಾಟಕದ 18 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

Hassan Scandal: 4 ದಿನ ಎಸ್‌ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ

Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

ಯಾರಿಗೆಲ್ಲ ರಾಷ್ಟ್ರಪತಿ ಪದಕ?

ಕರ್ನಾಟಕದ ನಂಜಪ್ಪ ಶ್ರೀನಿವಾಸ್ (ಎಸ್​ಪಿ, ಪಿಟಿಎಸ್​​ ಕಡೂರು), ಪ್ರತಾಪ್ ಸಿಂಗ್ ತುಕಾರಾಮ್ (ಡಿವೈಎಸ್​​ಪಿ, ಐಎಸ್​​​ಡಿ), ನಂಬೂರ ಶ್ರೀನಿವಾಸ್ ರೆಡ್ಡಿ (ಡಿವೈಎಸ್​ಪಿ, ಸಿಐಡಿ ಅರಣ್ಯ ಘಟಕ), ನರಸಿಂಹಮೂರ್ತಿ ಪಿಳ್ಳಮುನಿಯಪ್ಪ (ಡಿವೈಎಸ್​​ಪಿ, ಸಿಐಡಿ) ಅವರು ರಾಷ್ಟ್ರಪತಿ ಪದಕ ಪಡೆದಿದ್ದಾರೆ.

ಆರ್.ಪ್ರಕಾಶ್ (ಡಿವೈಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ), ಟಿ.ಎಂ.ಶಿವಕುಮಾರ್ (ಎಸಿಪಿ, ಸುಬ್ರಹ್ಮಣ್ಯಪುರ, ಉಪವಿಭಾಗ), ಜಾಕೀರ್ ಹುಸೇನ್ (ಎಸಿಪಿ, ಕಲಬುರಗಿ ಉಪವಿಭಾಗ), ರಾಘವೇಂದ್ರ ರಾವ್ (ಎಸಿಪಿ, ಬೆರಳಚ್ಚು ವಿಭಾಗ, ಬೆಂಗಳೂರು), ರಾಜು ಚಿಕ್ಕಹನುಮೇಗೌಡ (ಪಿಐ, ವಿದ್ಯಾರಣ್ಯಪುರ ಠಾಣೆ, ಮೈಸೂರು) ಅವರಿಗೂ ರಾಷ್ಟ್ರಪತಿ ಪದಕದ ಗೌರವ ಸಿಕ್ಕಿದೆ.

ಡಿ.ಬಿ.ಪಾಟೀಲ್ (ಸರ್ಕಲ್ ಇನ್ಸ್‌ಪೆಕ್ಟರ್, ವಿಜಯಪುರ ರೈಲ್ವೆ), ಮೊಹಮ್ಮದ್ ಅಲಿ (ಇನ್​ಸ್ಪೆಕ್ಟರ್, ಭ್ರಷ್ಟಾಚಾರ ನಿಗ್ರಹ ದಳ), ರವಿ ಬೆಳವಾಡಿ (ಇನ್​ಸ್ಪೆಕ್ಟರ್, ಶೃಂಗೇರಿ ಪೊಲೀಸ್ ಠಾಣೆ), ಮುಪೀದ್ ಖಾನ್ (ಸ್ಪೆಷಲ್ ಆರ್​​ಪಿಐ, ಕೆಎಸ್ಆರ್​​ಪಿ), ಮುರಳಿ ರಾಮಕೃಷ್ಣಪ್ಪ, (ಸ್ಪೆಷಲ್ ಎಆರ್​ಎಸ್​ಐ, ಕೆಎಸ್ಆರ್​ಪಿ), ಮಹದೇವಯ್ಯ (ಎಆರ್​​ಎಸ್ಐ, ಕೆಎಸ್ಆರ್​​ಪಿ) ಅವರಿಗೆ ರಾಷ್ಟ್ರಪತಿ ಪದಕ ದೊರಕಿದೆ.

ಡಿ.ಬಿ.ಶಿಂಧೆ (ಎಎಸ್ಐ, ಬೆಳಗಾವಿ ಸ್ಪೆಷಲ್ ಬ್ರಾಂಚ್), ರಂಜಿತ್ ಶೆಟ್ಟಿ (ಎಎಸ್ಐ, ಕೆಂಪೇಗೌಡನಗರ ಪೊಲೀಸ್ ಠಾಣೆ), ಬಿ.ಬಸವರಾಜು (ಸ್ಪೆಷಲ್ ಎಆರ್​​ಎಸ್​ಐ, ರಾಜ್ಯ ಗುಪ್ತದಳ) ಅವರಿಗೆ ರಾಷ್ಟಪತಿ ಪದಕವನ್ನು ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವರ ಪದಕ

ಕರ್ನಾಟಕದ ಆರು ಮಂದಿ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ದೇಶದ ಒಟ್ಟು 151 ಪೊಲೀಸ್‌, ಸಿಬಿಐ ಅಧಿಕಾರಿಗಳಿಗೆ ತನಿಖಾ ವಿಭಾಗದಲ್ಲಿ ಮಾಡಿರುವ ಸಾಧನೆಗಾಗಿ ಇತ್ತೀಚೆಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ಪದಕ ಘೋಷಿಸಲಾಗಿತ್ತು.

ವಿವಿಧ ಅಪರಾಧಗಳನ್ನು ಅತ್ಯುತ್ತಮವಾಗಿ ತನಿಖೆ ಮಾಡಿರುವ ಸಾಧನೆಗಾಗಿ ಕರ್ನಾಟಕದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮೀ ಗಣೇಶ್ ಕೆ, ಡಿವೈಎಸ್‍ಪಿಗಳಾದ ವೆಂಕಟಪ್ಪ ನಾಯಕ, ಮೈಸೂರು ರಾಜೇಂದ್ರ ಗೌತಮ್, ಶಂಕರ್ ಕಾಳಪ್ಪ ಮಾರಿಹಾಳ್, ಶಂಕರಗೌಡ ವೀರಣ್ಣಗೌಡ ಪಾಟೀಲ್, ಸರ್ಕಲ್ ಇನ್ಸ್‍ಪೆಕ್ಟರ್ ಗುರುಬಸವರಾಜ ಎಚ್. ಹಿರೇಗೌಡರ್ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ ಪಡೆದಿದ್ದರು.

ಸಿಬಿಐನ 15 ಪ್ರಮುಖ ಸಾಧಕ ಅಧಿಕಾರಿಗಳಿಗೂ ಕೇಂದ್ರ ಗೃಹ ಸಚಿವರ ಶ್ರೇಷ್ಠ ಪದಕ ಘೋಷಿಸಲಾಗಿತ್ತು. ಈ ಪದಕವನ್ನು ಮಹಾರಾಷ್ಟ್ರದ 11, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ ತಲಾ 10, ಕೇರಳ, ರಾಜಸ್ಥಾನ, ಪಶ್ಚಿಮಬಂಗಾಳದ ತಲಾ 8 ಮಂದಿಗೆ ಘೋಷಿಸಲಾಗಿತ್ತು. 28 ಮಂದಿ ಮಹಿಳಾ ಅಧಿಕಾರಿಗಳೂ ಕೇಂದ್ರ ಗೃಹ ಸಚಿವರ ಶ್ರೇಷ್ಠ ಪದಕ ಪಡೆದಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು