logo
ಕನ್ನಡ ಸುದ್ದಿ  /  ಕರ್ನಾಟಕ  /  Cyclist Asha Malaviya Felicitated: ಸೈಕ್ಲಿಸ್ಟ್ ಆಶಾಳಿಗೆ ಧೈರ್ಯ, ಆತ್ಮವಿಶ್ವಾಸವೇ ಸಂಗಡಿಗರು- ತೇಜಸ್ವಿನಿ ಅನಂತಕುಮಾರ್‌

Cyclist Asha Malaviya felicitated: ಸೈಕ್ಲಿಸ್ಟ್ ಆಶಾಳಿಗೆ ಧೈರ್ಯ, ಆತ್ಮವಿಶ್ವಾಸವೇ ಸಂಗಡಿಗರು- ತೇಜಸ್ವಿನಿ ಅನಂತಕುಮಾರ್‌

HT Kannada Desk HT Kannada

Jan 17, 2023 07:00 PM IST

ಬೆಂಗಳೂರಿನ ಅದಮ್ಯ ಚೇತನದಲ್ಲಿ ಭೋಪಾಲದ ಸೈಕ್ಲಿಸ್ಟ್‌ ಆಶಾ ಮಾಳವೀಯ ಅವರಿಗೆ ಸನ್ಮಾನ

  • Cyclist Asha Malaviya felicitated: ಮಹಿಳಾ ರಕ್ಷಣೆ ಮತ್ತು ಸಬಲೀಕರಣದ ವಿಷಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂಟಿಯಾಗಿ ಸೈಕ್ಲಿಂಗ್‌ ನಡೆಸುತ್ತಿರುವ ಭೋಪಾಲದ ಯುವತಿ ಆಶಾ ಮಾಳವೀಯ ಅವರನ್ನು ಬೆಂಗಳೂರಿನ ಅದಮ್ಯ ಚೇತನದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಬೆಂಗಳೂರಿನ ಅದಮ್ಯ ಚೇತನದಲ್ಲಿ ಭೋಪಾಲದ ಸೈಕ್ಲಿಸ್ಟ್‌ ಆಶಾ ಮಾಳವೀಯ ಅವರಿಗೆ ಸನ್ಮಾನ
ಬೆಂಗಳೂರಿನ ಅದಮ್ಯ ಚೇತನದಲ್ಲಿ ಭೋಪಾಲದ ಸೈಕ್ಲಿಸ್ಟ್‌ ಆಶಾ ಮಾಳವೀಯ ಅವರಿಗೆ ಸನ್ಮಾನ

ಬೆಂಗಳೂರು: ಮಹಿಳಾ ರಕ್ಷಣೆ ಮತ್ತು ಸಬಲೀಕರಣದ ವಿಷಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂಟಿಯಾಗಿ ಸೈಕ್ಲಿಂಗ್‌ ನಡೆಸುತ್ತಿರುವ ಭೋಪಾಲದ ಯುವತಿ ಆಶಾ ಮಾಳವೀಯ ಅವರನ್ನು ಅದಮ್ಯ ಚೇತನದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಟ್ರೆಂಡಿಂಗ್​ ಸುದ್ದಿ

Heart Attack: ಕರ್ನಾಟಕದಲ್ಲಿ ಹಠಾತ್ ಹೃದಯಾಘಾತಕ್ಕೆ ಯುವಕರ ಬಲಿ, ಆರೋಗ್ಯ ಸಚಿವರಿಗೆ ರಾಜಾರಾಂ ತಲ್ಲೂರ್‌ ಪತ್ರ

Tumkur News: ಪ್ರಜ್ವಲ್‌ ಪ್ರಕರಣ, ತುಮಕೂರಿನಲ್ಲಿ ಜೆಡಿಎಸ್‌ ಪ್ರತಿಭಟನೆ, ಡಿಕೆಶಿ ವಿರುದ್ದ ಘೋಷಣೆ

Bamboo: ಬಿದಿರು ದಿನಕ್ಕೆ ಎಷ್ಟು ಉದ್ದ ಬೆಳೆಯಬಲ್ಲದು, ತಾಪಮಾನ ಏರಿಕೆ ತಡೆಗೆ ಬಿದಿರಿನ ಪಾತ್ರ ಗೊತ್ತೆ, ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಬೆಂಗಳೂರಲ್ಲಿ ಬಿಯರ್ ಕೊರತೆ; ಈವರೆಗೆ 30,000 ಲೀಟರ್ ಮಾರಾಟ, ಬೈ ಒನ್ ಗೆಟ್‌ ಒನ್ ಆಫರ್‌ ಸಿಗೋದು ಡೌಟ್

ಆಶಾ ಮಾಳವೀಯ ಅವರು, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ದಾಟಿ ಕರ್ನಾಟಕದ ರಾಜಧಾನಿ ಬೆಂಗಳೂರು ತಲುಪಿದ್ದಾರೆ. ಸಣ್ಣ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿದ ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಸೈಕ್ಲಿಸ್ಟ್‌ ಆಶಾ ಅವರಲ್ಲಿರುವ ಧೈರ್ಯ, ಆತ್ಮವಿಶ್ವಾಸ ನೋಡಿ ನಮಗೆ ಅಚ್ಚರಿ ಅನಿಸಿದೆ. ಸಾಧನೆ ಮಾಡುವ ಮನಸ್ಸು, ಆತ್ಮವಿಶ್ವಾಸವಿದ್ದಲ್ಲಿ ಏಕಾಂಗಿಯಾಗಿ ಮುಂದಡಿ ಇಡಬಹುದು ಎನ್ನುವ ಧೈರ್ಯವೇ ಅವರನ್ನು 7,390 ಕಿ.ಮೀ. ಕರೆದುಕೊಂಡು ಬಂದಿದೆ. ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ವಿಶ್ವಕ್ಕೇ ಸಂದೇಶ ನೀಡುವ ಪಯಣ ಆಶಾ ಅವರದ್ದು ಎಂದು ಹೇಳಿದರು.

ಸನ್ಮಾನಿತರಾದ ಆಶಾ ಮಾಳವಿಯಾ, ಬೆಂಗಳೂರಿಗೆ ಆಗಮಿಸಿದಾಗ ಯಾರು ಪರಿಚಯವಿಲ್ಲದ ಸಮಯದಲ್ಲಿ ಅದಮ್ಯ ಚೇತನದವರು ಸಹಕಾರ ನೀಡಿದ್ದಾರೆ. ಅಲ್ಲದೇ ಕರೆದು ಗೌರವಿಸಿರುವುದು ಖುಷಿ ತಂದಿದೆ. ತೇಜಸ್ವಿನಿ ಅನಂತಕುಮಾರವರ ದೇಶ ಮತ್ತು ಸಮಾಜ ಸೇವೆ ನಮ್ಮೆಲ್ಲರಿಗೂ ಪ್ರೇರಣಾದಾಯೀ, ಅದಮ್ಯ ಚೇತನ ಹಾಗೂ ತೇಜಸ್ವಿನಿ ಅವರ ಕೆಲಸಕ್ಕೆ ನನ್ನಿಂದ ಮತ್ತು ಮಧ್ಯಪ್ರದೇಶ ಜನತೆಯಿಂದ ಧನ್ಯವಾದಗಳು ಎಂದು ತಿಳಿಸಿದರು.

ಆಶಾ ಮಾಳವಿಯಾ ಅವರು ಪ್ರಖ್ಯಾತ ಪರ್ವತಾರೋಹಿ ಹಾಗೂ ಸೈಕಲ್ ಸವಾರಿಯಲ್ಲಿ ಪರಿಣತಿಯನ್ನು ಸಾಧಿಸಿದವರು. ಕುಮಾರಿ ಆಶಾ ಮಾಳವಿಯಾ ಅವರು ಭಾರತದ 28 ರಾಜ್ಯಗಳಲ್ಲಿ ಸುಮಾರು 25000 ಕಿ. ಮೀ. ಸೈಕಲ್ ಓಡಿಸುವ ಗುರಿ ಹೊಂದಿದ್ದು, ಈಗಾಗಲೇ 7 ರಾಜ್ಯಗಳಲ್ಲಿ 7390 ಕಿ.ಮೀ. ಸೈಕಲ್ ಸವಾರಿ ಮಾಡಿದ್ದಾರೆ.

ಗಮನಿಸಬಹುದಾದ ಇತರೆ ವಿಚಾರ

Vindhya E-Infomedia: ಅಂಗವಿಕಲರ ಬಾಳಿನ ಬೆಳಕು ವಿಂಧ್ಯಾ; ಸಂಸ್ಥೆಗೆ ಗ್ರೇಟ್‌ ಪ್ಲೇಸ್‌ ಟು ವರ್ಕ್‌ನ ಗರಿ

ಅಂಗವಿಕಲರ ಶೈಕ್ಷಣಿಕ ಅರ್ಹತೆ, ಪ್ರತಿಭೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಉದ್ಯೋಗ ಒದಗಿಸುವವರಾರು? ಎಲ್ಲ ಅರ್ಹತೆ ಇದ್ದರೂ ಅಂಗವೈಕಲ್ಯದ ಕಾರಣ ಕೆಲಸ ಕೊಡದೆ ತಿರಸ್ಕರಿಸಲಾಗುತ್ತದೆ. ಆದರೆ, ಇತರ ಸಾಮಾನ್ಯರಂತೆಯೇ ಮತ್ತು ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಅಂಗವಿಕಲರು ಕೆಲಸ ಮಾಡಬಹುದು ಎಂಬುದನ್ನು ತಮ್ಮ ವಿಂಧ್ಯಾ ಇ ಇನ್ಫೋಮೀಡಿಯಾ ಸಂಸ್ಥೆ ಮೂಲಕ ತೋರಿಸಿಕೊಟ್ಟಿರುವ ಪವಿತ್ರಾ ವೈ.ಎಸ್‌. ಅವರ ಉದ್ಯಮಸಾಹಸ ಪ್ರೇರಣೆ ನೀಡುವಂಥದ್ದು. ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಇತ್ತೀಚೆಗೆ ವಿಂಧ್ಯಾ ಇ-ಇನ್ಫೋಮೀಡಿಯಾ ʻಗ್ರೇಟ್‌ ಪ್ಲೇಸ್‌ ಟು ವರ್ಕ್‌ʼ ಎಂಬ ಹಿರಿಮೆಗೆ ಭಾಜನವಾಗಿದೆ. ಇದರ ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Netaji's birth anniversary: ಕೋಲ್ಕತದಲ್ಲಿ ನೇತಾಜಿ ಜಯಂತಿ; ದೀದಿಯ ಭದ್ರಕೋಟೆಯಲ್ಲಿ ಆರೆಸ್ಸೆಸ್‌ ಮುಖ್ಯಸ್ಥರ ಮುಖ್ಯ ಬಾಷಣ

Netaji's birth anniversary: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಗಳ ಪ್ರಕಾರ, ಕೋಲ್ಕತ್ತದ ಶಹೀದ್‌ ಮಿನಾರ್‌ ಗ್ರೌಂಡ್‌ನಲ್ಲಿ ಜನವರಿ 23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಯಂತಿ ಆಚರಣೆ ಆಯೋಜನೆ ಆಗಿದೆ. ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಮು‍ಖ್ಯ ಭಾಷಣ ಮಾಡಲಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳು - ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು 'ಹಿಂದೂ' ಮತ್ತು ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಆಗಿರುತ್ತದೆ. ಯಾರೊಬ್ಬರೂ ತಮ್ಮ ಆಚರಣೆಯನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು