logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Umesha Bhatta P H HT Kannada

May 08, 2024 11:47 PM IST

ಬೆಂಗಳೂರಲ್ಲಿ ಬೀದಿ ನಾಯಿಗೆ ಯಾವಾಗ ಬೇಕಾದರೂ ಆಹಾರ ನೀಡುವುದಕ್ಕೆ ಬ್ರೇಕ್‌ ಬೀಳಲಿದೆ.

    • ಬೀದಿ ನಾಯಿಗಳಿಗೆ ಯಾವಾಗ ಬೇಕಾದರೂ ಆಹಾರ ಹಾಕಿ ತೊಂದರೆಯಾಗುವುದನ್ನು ತಪ್ಪಿಸಲು ಬೆಂಗಳೂರಿನಲ್ಲಿ ಬಿಬಿಎಂಪಿ( BBMP) ಹೊಸ ನಿಯಮ ತರಲು ಮುಂದಾಗಿದೆ.
    • ವರದಿ: ಎಚ್‌.ಮಾರುತಿ, ಬೆಂಗಳೂರು
ಬೆಂಗಳೂರಲ್ಲಿ ಬೀದಿ ನಾಯಿಗೆ ಯಾವಾಗ ಬೇಕಾದರೂ ಆಹಾರ ನೀಡುವುದಕ್ಕೆ ಬ್ರೇಕ್‌ ಬೀಳಲಿದೆ.
ಬೆಂಗಳೂರಲ್ಲಿ ಬೀದಿ ನಾಯಿಗೆ ಯಾವಾಗ ಬೇಕಾದರೂ ಆಹಾರ ನೀಡುವುದಕ್ಕೆ ಬ್ರೇಕ್‌ ಬೀಳಲಿದೆ.

ಬೆಂಗಳೂರು: ಬೆಂಗಳೂರಿನ ಶ್ವಾನಪ್ರಿಯರಿಗೆ ಇಷ್ಟವಾಗದ ಸುದ್ದಿ ಇದು. ಇದುವರೆಗೂ ಶ್ವಾನಪ್ರಿಯರು ತಮಗಿಷ್ಟ ಬಂದಾಗ ಅಥವಾ ನಾಯಿಗಳು ಕಂಡಾಗಲೆಲ್ಲಾ ಊಟ ಹಾಕುತ್ತಿದ್ದರು. ಇನ್ನು ಮುಂದೆ ಹಾಗೆ ಮಾಡುವಂತಿಲ್ಲ. ಬೀದಿ ನಾಯಿಗಳಿಗೆ ಊಟ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಮಯ ನಿಗದಿ ಪಡಿಸಲು ಮುಂದಾಗಿದೆ. ಸಾರ್ವಜನಿಕರು ತಮಗಿಷ್ಟ ಬಂದಾಗ ಅಥವಾ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಈ ಊಟ ತಿನ್ನಲು ಗುಂಪು ಸೇರುವ ನಾಯಿಗಳು ದಾರಿಯಲ್ಲಿ ನಡೆದುಕೊಂಡು ಹೋಗುವವರು ಮತ್ತು ವಿಶೇಷವಾಗಿ ದ್ವಿಚಕ್ರ ವಾಹನ ಸವಾರರನ್ನು ಕೆಣಕುತ್ತಿದ್ದವು ಇಲ್ಲವೇ ಅವರನ್ನು ಕಚ್ಚಲು ಮುಂದಾಗುತ್ತಿದ್ದವು. ಇದರಿಂದ ಸಾರ್ವಜನಿಕರು ಬಿದ್ದು ಕಾಲು ಕೈ ಮುರಿದುಕೊಂಡಿರುವ ಉದಾಹರಣೆಗಳೂ ಉಂಟು.

ಟ್ರೆಂಡಿಂಗ್​ ಸುದ್ದಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

ಅಪಾರ್ಟ್ ಮೆಂಟ್ ಗಳ ನಿವಾಸಿಗಳೂ ಬೇಕಾಬಿಟ್ಟಿ ಊಟ ಹಾಕುವಂತಿಲ್ಲ. ಸದ್ಯದ ಮಾಹಿತಿ ಪ್ರಕಾರ ಬೆಳಗಿನ ಜಾವ 3 ರಿಂದ 4 ಗಂಟೆಯ ಆಸು ಪಾಸಿನಲ್ಲಿ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕಬಹುದು ಎಂದು ನಿಯಮ ರೂಪಿಸಲು ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಅಪಾರ್ಟ್ ಮೆಂಟ್ ಗಳ ಮುಂದೆ ಎಲ್ಲಿ, ಯಾವ ವೇಳೆಗೆ ನಾಯಿಗಳಿಗೆ ಊಟ ಹಾಕಬಹುದು ಎಂದು ಫಲಕ ಅಳವಡಿಸಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ. ನಾಯಿಗಳು ಹಸಿದುಕೊಂಡು ಇರುವುದನ್ನು ನೋಡಲಾಗದೆ ಸಾರ್ವಜನಿಕರು ಊಟ ಹಾಕುತ್ತಿದ್ದರು. ವಾಕಿಂಗ್ ಹೋಗಿ ಬರುವಾಗ ಕಚೇರಿಗೆ ಹೋಗಿ ಬರುವಾಗ ಅಂಗಡಿಯಿಂದ ಬಿಸ್ಕತ್ ಬ್ರೆಡ್ ತಂದು ಹಾಕುತ್ತಿದ್ದರು. ಹೇಗೋ ಬೀದಿನಾಯಿಗಳ ಹೊಟ್ಟೆ ತುಂಬುತ್ತಿತ್ತು.ಪಾಲಿಕೆ ಇನ್ನೂ ಈ ನಿಯಮ ಕುರಿತು ಸಾಧಕ ಭಾದಕ ಕುರಿತು ಅವಲೋಕಿಸುತ್ತಿದೆ. ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

ಈಗಾಗಲೇ ಶ್ವಾನ ಪ್ರಿಯರು ಇಂತಹ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಸಮಯ ಸಿಕ್ಕಾಗ ನಾಯಿಗಳಿಗೆ ಊಟ ಹಾಕುತ್ತೇವೆ. ಪಾಲಿಕೆ ನಿಗದಿ ಪಡಿಸಿದ ಸಮಯಕ್ಕೆ ಊಟ ಹಾಕಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.

ಇಂತಹ ನಿರ್ಧಾರದಿಂದ ನಾಯಿಗಳಿಗೆ ಹೊಟ್ಟೆ ಊಟ ಸಿಗುವುದಿಲ್ಲ, ಬದಲಾಗಿ ಹಸಿವಿನಿಂದ ನರಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಸ್ತೆ ಗುಂಡಿ ಮುಚ್ಚಲಿ, ಕುಡಿಯುವ ನೀರು ಒದಗಿಸಲು ಮುಂದಾಗಲಿ. ಅದನ್ನು ಬಿಟ್ಟು ನಾಯಿಗಳ ಚಿಂತೆ ಪಾಲಿಕೆಗೆ ಬೇಡ ಎಂದು ಕಿವಿಮಾತು ಹೇಳುತ್ತಾರೆ.

ನಾಯಿ ಸಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಬೇಕು ಎಂದು ಈ ಹಿಂದೆಯೂ ಪಾಲಿಕೆ ಆದೇಶ ಹೊರಡಿಸಲು ಮುಂದಾಗಿತ್ತು. ವಿರೋಧ ವ್ಯಕ್ತವಾದ ನಂತರ ಕೈ ಬಿಟ್ಟಿತ್ತು. ಈಗಲೂ ಬೀದಿ ನಾಯಿಗಳ ರಕ್ಷಣೆಗೆ ಬಿಬಿಎಂಪಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಡುತ್ತದೆ. ಆದರೆ ಎಲ್ಲಿಗೆ ಹೋಗುತ್ತದೆ ಹೇಗೆ ವೆಚ್ಚವಾಗುತ್ತದೆ ಎನ್ನುವುದು ರಹಸ್ಯವೇನಲ್ಲ. ಇದರ ನಡುವೆ ಬಿಬಿಎಂಪಿಯ ಈ ಯೋಚನೆ ಬಗ್ಗೆಯೂ ಆಕ್ಷೇಪವಂತೂ ವ್ಯಕ್ತವಾಗುತ್ತಿದೆ.

( ವರದಿ: ಎಚ್. ಮಾರುತಿ. ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ