ಪ್ರವಾಸ ಬೋರಿಂಗ್ ಆಗಿ ಬೇಗನೆ ನಿದ್ರೆಗೆ ಜಾರುತ್ತೀರಾ? ಈ ರೀತಿ ಆಟವಾಡುತ್ತಾ ಟ್ರಿಪ್ ಎಂಜಾಯ್ ಮಾಡಿ
ಪ್ರವಾಸ ಅಂದ್ರೆ ಯಾರಿಗೆ ತಾನೇ ಖುಷಿ ಇಲ್ಲ ಹೇಳಿ. ಆದರೆ, ಕೆಲವೊಮ್ಮೆ ಈ ರಸ್ತೆ ಪ್ರವಾಸ ಅಂದ್ರೆ ಉದಾಸೀನ ಹೆಚ್ಚುತ್ತವೆ. ದೀರ್ಘ ಪ್ರಯಾಣದಿಂದ ಆಯಾಸವಾಗಿ ಬಹುತೇಕರು ನಿದ್ದೆಗೆ ಜಾರುತ್ತಾರೆ. ತಲುಪಬೇಕಿರುವ ಸ್ಥಳಗಳಲ್ಲಿ ಮಾತ್ರ ಎಂಜಾಯ್ ಮಾಡುತ್ತಾರೆ. ಆದರೆ, ಪ್ರವಾಸದ ವೇಳೆ ಕೆಲವೊಂದು ಮೋಜಿನ ಆಟವನ್ನು ಆಡುವುದರಿಂದ ನಿಮಗೆ ಸಮಯ ಕಳೆಯುವುದೇ ತಿಳಿಯುವುದಿಲ್ಲ.
ಮಕ್ಕಳಿಗೆ ರಜಾ ಸಿಕ್ಕ ಕೂಡಲೇ ಬಹುತೇಕ ಪೋಷಕರು ಪ್ರವಾಸಕ್ಕೆ ಯೋಜಿಸುತ್ತಾರೆ. ಕಾರು ಅಥವಾ ಬಸ್ ಮೂಲಕ ರಸ್ತೆ ಪ್ರವಾಸ ಕೈಗೊಳ್ಳುವುದೇ ಒಂದು ಮಜಾ. ರೋಡ್ ಟ್ರಿಪ್‌ಗೆ ಹೋಗುವುದು ಒಂದು ಮರೆಯಲಾಗದ ಅನುಭವ. ಹೀಗೆ ಪ್ರವಾಸ ಕೈಗಳ್ಳುವಾಗ ಮೌನವಾಗಿದ್ದು, ನಿದ್ದೆ ಮಾಡುತ್ತಾ ಸಾಗಿದರೆ ಆ ಟ್ರಿಪ್ ಬೋರಿಂಗ್ ಅನಿಸುತ್ತದೆ. ಅದರ ಬದಲಿಗೆ, ಪ್ರಯಾಣ ಮಾಡುವಾಗ ಮೋಜು ಮಾಡುತ್ತಾ, ಆಟವಾಡುತ್ತಾ ಸಾಗಿದ್ರೆ ಆ ಪ್ರಯಾಣ ಸಾಗುವುದೇ ತಿಳಿಯುವುದಿಲ್ಲ. ರಸ್ತೆ ಪ್ರವಾಸದಲ್ಲಿ ಮಾಡುವ ಮೋಜಿನಾಟವು ಪ್ರತಿಯೊಬ್ಬರಿಗೂ ಸ್ಮರಣೀಯ ಅನುಭವಗಳನ್ನು ನೀಡುತ್ತದೆ. ನೀವು ಸ್ನೇಹಿತರು, ಸಂಬಂಧಿಕರು ಅಥವಾ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದೀರಾ, ಹಾಗಿದ್ದರೆ ವಿನೋದಕ್ಕಾಗಿ ಯಾವೆಲ್ಲಾ ಆಟಗಳನ್ನು ಆಡಬಹುದು ಎಂಬ ಕುರಿತು ನಾವು ತಿಳಿಸುತ್ತೇವೆ.
1. ಚಲನಚಿತ್ರಗಳ ಮೇಲೆ ಆಟ
ಚಲನಚಿತ್ರ ವೀಕ್ಷಿಸುವುದನ್ನು ಎಲ್ಲರೂ ಆನಂದಿಸುತ್ತಾರೆ. ಹೀಗಾಗಿ ಯಾವುದಾದರೂ ನಟ ಅಥವಾ ನಟಿಯ ಆರಂಭಿಕ ಹೆಸರು ಹೇಳಿ ಅವರ ಪೂರ್ಣ ಹೆಸರನ್ನು ಪತ್ತೆ ಹಚ್ಚುವಂತೆ ಹೇಳುವುದು. ಅಥವಾ ಚಲನಚಿತ್ರದ ಹೆಸರು ಹೇಳಿ, ಅದರಲ್ಲಿ ಅಭಿನಯಿಸಿರು ನಟ ಅಥವಾ ನಟಿ ಯಾರೆಂದು ಕೇಳುವುದು. ಹಾಡಿನ ಚರಣ ಹೇಳಿ ಪಲ್ಲವಿ ಗುರುತಿಸಲು ಹೇಳುವುದು ಹೀಗೆ ಆಡುತ್ತಾ ಸಾಗಬಹುದು.
2. 20 ಪ್ರಶ್ನೆಗಳು, ಒಂದು ಉತ್ತರ:
ಒಬ್ಬ ವ್ಯಕ್ತಿಯು, ಸ್ಥಳ ಅಥವಾ ವಸ್ತುವಿನ ಬಗ್ಗೆ ಯೋಚಿಸಬೇಕು. ನೀವು ಏನು ಯೋಚಿಸುತ್ತಿದ್ದೀರಿ ಎಂಬುದನ್ನು ಕಂಡುಹಿಡಿಯಲು 20 ಪ್ರಶ್ನೆಗಳನ್ನು ಕೇಳಬಹುದು. ಒಟ್ಟು ಕೇಳುವ 20 ಪ್ರಶ್ನೆಗಳಲ್ಲಿ ಸರಿಯಾದ ಉತ್ತರವನ್ನು ಅವರು ಊಹಿಸಬೇಕು.
3. ವಾಹನಗಳ ನಂಬರ್ ಪ್ಲೇಟ್ ಮೇಲೂ ಪ್ರಶ್ನೆ
ಕರ್ನಾಟಕದ ವಾಹನಗಳಲ್ಲಿ ನಂಬರ್ ಪ್ಲೇಟ್ ಗಳಲ್ಲಿ ಬರುವ ಅಂಕಿಗಳ ಮುಂಚೆ ಕೆಎ ನಿಂದ ಶುರುವಾಗುತ್ತದೆ. ಇದೇ ರೀತಿ ಬೇರೆ-ಬೇರೆ ರಾಜ್ಯಗಳ ನಂಬರ್ ಪ್ಲೇಟ್‌ಗಳು ಯಾವ ರೀತಿ ಇರುತ್ತದೆ ಎಂಬ ಪ್ರಶ್ನೆಗಳನ್ನು ಕೇಳಬಹುದು. ಅಥವಾ ಕರ್ನಾಟಕದ ವಿವಿಧ ಜಿಲ್ಲೆ ಅಥವಾ ಪ್ರಮುಖ ನಗರಗಳ ನಂಬರ್ ಪ್ಲೇಟ್ ಯಾವ ಸಂಖ್ಯೆಯಿಂದ ಆರಂಭವಾಗುತ್ತೆ ಎಂಬುದನ್ನು ಕೇಳಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ | ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ
4. ವರ್ಣಮಾಲೆ ಆಟ
ಒಂದು ವರ್ಗವನ್ನು ಆಯ್ಕೆಮಾಡಿ (ಉದಾ: ಪ್ರಾಣಿಗಳು, ಆಹಾರಗಳು, ನಗರಗಳು ಇತ್ಯಾದಿ). ಆ ವರ್ಗದಿಂದ ಯಾವುದನ್ನಾದರೂ ಒಂದು ಹೆಸರನ್ನು ತೆಗೆದುಕೊಳ್ಳಿ. ವರ್ಣಮಾಲೆಯಲ್ಲಿ ಮುಂದಿನ ಅಕ್ಷರದಿಂದ ಪ್ರಾರಂಭವಾಗುವ ಯಾವುದೇ ಪ್ರಾಣಿಯ ಹೆಸರಿನ ಅಕ್ಷರವನ್ನು ಹೇಳಿ. ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಅವರು ನೀಡಬೇಕು.
5. ಅಂತಕ್ಷರಿ
ಸುದೀರ್ಘ ಪ್ರವಾಸದಲ್ಲಿ ಆಡುವ ಉತ್ತಮ ಆಟವೆಂದರೆ ಅಂತಕ್ಷರಿ(ಅಂತ್ಯಾಕ್ಷರಿ) ಆಡುವುದು. ಮೊದಲಿಗೆ ಯಾವುದಾದರೂ ಒಂದು ಹಾಡನ್ನು ಹಾಡಿ ನಿಲ್ಲಿಸಿ. ಹಾಡು ನಿಲ್ಲಿಸಿದಾಗ ಬರುವ ಕೊನೆಯ ಅಕ್ಷರದಿಂದ ನಿಮ್ಮ ಮುಂದಿರುವವರು ಹಾಡು ಹಾಡಬೇಕು. ಇದೀ ರೀತಿ ಹಾಡನ್ನು ಮುಂದುವರೆಸಿಕೊಂಡು ಹೋಗಬಹುದು. ಇದರಿಂದ ಸಖತ್ ಮನರಂಜನೆ ಸಿಗುವುದಂತೂ ಪಕ್ಕಾ.
6. ಹಾಡನ್ನು ಕಂಡುಹಿಡಿಯುವುದು (damsharas)
ಹಾಡಿನ ರಾಗವನ್ನು ಶಿಳ್ಳೆ ಅಥವಾ ಬೇರೆ ಯಾವುದಾದರೂ ಸನ್ನೆಯನ್ನು ಹಾಕಿ, ಯಾವ ಹಾಡೆಂದು ಊಹಿಸಲು ನಿಮ್ಮ ಮುಂದಿರುವವರಿಗೆ ಸವಾಲು ಹಾಕಬಹುದು. ಹೆಚ್ಚಿನ ಸಂಖ್ಯೆಯ ಹಾಡುಗಳನ್ನು ಯಾರು ಸರಿಯಾಗಿ ಊಹಿಸಿದರು ಎಂಬ ಬಗ್ಗೆ ತಿಳಿಯಲು ಸ್ಕೋರ್ ಇರಿಸಬಹುದು.
8. ಸತ್ಯ ಅಥವಾ ಧೈರ್ಯ (Truth of dare)
ಸತ್ಯ ಅಥವಾ ಧೈರ್ಯದ ಆಟವನ್ನು ಆಡುವ ಮೂಲಕ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳಿ. ಪರಸ್ಪರ ಪ್ರಶ್ನೆಗಳನ್ನು ಕೇಳುವ ಮೂಲಕ ವಿನೋದವನ್ನು ಆನಂದಿಸಿ.
9. ನುಡಿಗಟ್ಟು, ಸಂಭಾಷಣೆ ಅಥವಾ ಡೈಲಾಗ್ ಊಹಿಸಿ
ನೀವು ಚಲನಚಿತ್ರಗಳು ಅಥವಾ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರೆ ಈ ಆಟ ಆಡಲ ಬಹಳ ಮಜಾವಾಗಿರುತ್ತದೆ. ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮದಿಂದ ಪ್ರಸಿದ್ಧ ಡೈಲಾಗ್ ಅಥವಾ ನುಡಿಮುತ್ತುಗಳನ್ನು ಹೇಳಬೇಕು. ಇದು ಯಾವ ಕಾರ್ಯಕ್ರಮದ ನುಡಿಮುತ್ತು ಎಂದು ಊಹಿಸುವವರು ವಿನ್ನರ್ ಆಗುತ್ತಾರೆ.
10. ಕಲ್ಲು, ಕತ್ತರಿ, ಪೇಪರ್ ಆಟ
ರೋಡ್ ಟ್ರಿಪ್‌ನಲ್ಲಿ ಆಡುವ ಅತ್ಯುತ್ತಮ ಆಟಗಳ ಪಟ್ಟಿಯಲ್ಲಿ ಇದೂ ಒಂದು. ವಿಶೇಷವಾಗಿ ಮಕ್ಕಳಲ್ಲಿ ಇದನ್ನು ಆಟವಾಡಿಸಬಹುದು. ಈ ಆಟವಾಡಲು ಮೂರು ಜನರ ಅಗತ್ಯವಿರುತ್ತದೆ. ಕಾಗದ, ಕತ್ತರಿ ಅಥವಾ ಕಲ್ಲಿನ ಆಕಾರವನ್ನು ರೂಪಿಸಲು ತಮ್ಮ ಕೈಗಳನ್ನು ಬಳಸಬೇಕಾಗುತ್ತದೆ. ಕಲ್ಲು-ಕತ್ತರಿ-ಪೇಪರ್ ಎಂದಾಗ ಮೂವರು ಒಟ್ಟಾಗಿ ತಮ್ಮ ಕೈಗಳನ್ನು ಮುಂದೆ ಚಾಚಿ ಈ ಮೂರರಲ್ಲಿ ಯಾವುದಾದರೂ ಒಂದರ ಸನ್ನೆ ತೋರಿಸಬೇಕು. ಪೇಪರ್ ಕತ್ತರಿಯ ಎದುರು ಸೋತರೆ, ಕತ್ತರಿ ಕಲ್ಲಿನ ಎದುರು ಸೋಲುತ್ತದೆ. ಆದರೆ, ಕಾಗದವು ಕಲ್ಲಿನ ಎದುರು ಗೆಲ್ಲುತ್ತದೆ.
11. ಚಲನಚಿತ್ರಗಳನ್ನು ಹೆಸರಿಸಿ
ಚಲನಚಿತ್ರ ಪ್ರೇಮಿಗಳಿಗೆ ಇದು ಉತ್ತಮ ಆಟ. ಸಿನಿಮಾದ ಮೊದಲಿನ ಅಕ್ಷರವನ್ನು ಹೇಳಬೇಕು. ಅದು ಯಾವ ಸಿನಿಮಾ ಎಂದು ನಿಮ್ಮ ಮುಂದಿರುವವರು ಊಹಿಸಬೇಕು. ಅಥವಾ ಚಿತ್ರದ ಶೀರ್ಷಿಕೆಯನ್ನು ಸನ್ನೆ ಮಾಡಬೇಕು. ಅದನ್ನು ನಿಮ್ಮ ಮುಂದಿರುವವರು ಯಾವ ಸಿನಿಮಾ ಎಂದು ಗುರುತಿಸಬೇಕು.
ರಸ್ತೆ ಪ್ರವಾಸ ಮಾಡುವಾಗ ಸುಮ್ಮನೆ ನಿದ್ದೆ ಮಾಡುತ್ತಾ ಸಾಗಿದರೆ, ಪ್ರಯಾಣ ಮತ್ತಷ್ಟು ದೂರವಿದೆ ಎಂಬಂತೆ ಭಾಸವಾಗುತ್ತದೆ. ಈ ರೀತಿ ಆಟವಾಡುವುದರಿಂದ ಸಮಯ ಕಳೆಯುವುದು ಗೊತ್ತಾಗುವುದಿಲ್ಲ. ಅಲ್ಲದೆ, ವಾಹನ ಚಾಲಕರಿಗೆ ಕೂಡ ಆಯಾಸವಾದಂತೆ ಭಾಸವಾಗುವುದಿಲ್ಲ. ಅವರೂ ಎಂಜಾಯ್ ಮಾಡಬಹುದು.
ಜೀವನಶೈಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ನಿಮ್ಮ ಸಂಗಾತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಹೀಗೆಲ್ಲಾ ಆಚರಿಸಬಹುದು; ಇಲ್ಲಿವೆ 14 ಸಿಂಪಲ್ ಐಡಿಯಾ
ವಿಭಾಗ