logo
ಕನ್ನಡ ಸುದ್ದಿ  /  ಕರ್ನಾಟಕ  /  Bbmp Khata Mela: ʻಸಕಾಲʼದಲ್ಲಿ ಖಾತಾ ಸಂಬಂಧಿತ ಅರ್ಜಿಗಳ ವಿಲೇವಾರಿ; ಕ್ರಯ ಪತ್ರ ನೊಂದಣಿಗೆ ಇ-ಆಸ್ತಿ; ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ

BBMP Khata Mela: ʻಸಕಾಲʼದಲ್ಲಿ ಖಾತಾ ಸಂಬಂಧಿತ ಅರ್ಜಿಗಳ ವಿಲೇವಾರಿ; ಕ್ರಯ ಪತ್ರ ನೊಂದಣಿಗೆ ಇ-ಆಸ್ತಿ; ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ

Umesh Kumar S HT Kannada

Mar 02, 2023 04:27 PM IST

ಬಿಬಿಎಂಪಿ

  • BBMP Khata Mela: ಮುಂದಿನ ಹಣಕಾಸು ವರ್ಷದಿಂದ “ಸಕಾಲ”ದಲ್ಲಿ ಖಾತಾ ಸಂಬಂಧಿತ ಅರ್ಜಿ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬಿಬಿಎಂಪಿ
ಬಿಬಿಎಂಪಿ (BBMP)

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದಲ್ಲಿ ಖಾತೆ ಸಂಬಂಧಿತ ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ, ಪಾಲಿಕೆಗೆ ಆಗುತ್ತಿರುವ ನಷ್ಟ ತಪ್ಪಿಸಲು ವಲಯವಾರು ʻಖಾತಾ ಮೇಳʼವನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಕೆಲವು ಖಾತಾ ಮೇಳ ನಡೆದಿದೆ. ಇನ್ನು ಮುಂದಿನ ಹಣಕಾಸು ವರ್ಷದಿಂದ “ಸಕಾಲ”ದಲ್ಲಿ ಖಾತಾ ಸಂಬಂಧಿತ ಅರ್ಜಿ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

Hassan Scandal: 4 ದಿನ ಎಸ್‌ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ

Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

ಸೂಕ್ತ ಸಮಯದಲ್ಲಿ ಖಾತಾ ದೊರಕಿದರೆ ಖಾತಾದಾರರು ಆಸ್ತಿ ತೆರಿಗೆಯನ್ನು ಸಮರ್ಪಕವಾಗಿ ಕಟ್ಟುವ ಸಾಧ್ಯತೆಯನ್ನು ಪಾಲಿಕೆ ಗುರುತಿಸಿದೆ. ಹೀಗಾಗಿ ಖಾತಾ ಅರ್ಜಿ ವಿಲೇವಾರಿಯಲ್ಲಿ ವಿಳಂಬ ತಪ್ಪಿಸುವುದಕ್ಕಾಗಿ ಇದನ್ನು ʻಸಕಾಲʼದ ವ್ಯಾಪ್ತಿಗೆ ತರಲಾಗುವುದು. ಮುಂದಿನ ಹಣಕಾಸು ವರ್ಷ ಇದು ಜಾರಿಗೆ ಬರಲಿದೆ. ಸಕಾಲದಲ್ಲಿ ಇದರ ಅನುಷ್ಠಾನಕ್ಕೆ ಅಗತ್ಯ ಪರಿಹಾರ - ಪುರಸ್ಕಾರ ಮತ್ತು ಶಿಕ್ಷೆ ಕೂಡ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಬಜೆಟ್‌ ಭಾಷಣದಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಘೋಷಿಸಿದರು.

ಬಿ ಖಾತೆ ನಿವೇಶನಕ್ಕೆ ಎ ಖಾತೆ; ಪಾಲಿಕೆಗೆ 800 ಕೋಟಿ ರೂ. ಆದಾಯ ನಿರೀಕ್ಷೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವ್ಯಾಪ್ತಿಯಲ್ಲಿರುವ ʻಬಿ ಖಾತೆʼಯ ನಿವೇಶನಗಳಿಗೆ ʻಎ ಖಾತೆʼ ನೀಡಿ ಕ್ರಮಬದ್ಧಗೊಳಿಸುವ ಯೋಜನೆಯನ್ನು 2022-23ರ ಹಣಕಾಸು ವರ್ಷಾಂತ್ಯದಲ್ಲಿ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಜಾರಿಗೊಳಿಸಿದ್ದರಿಂದಾಗಿ ಪಾಲಿಕೆಗೆ ಈ ವರ್ಷವೇ 300 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. ಇದು, 2023-24ರಲ್ಲಿ 800 ಕೋಟಿ ರುಪಾಯಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಆಸ್ತಿ ತೆರಿಗೆ ಸಂಗ್ರಹ ಪಾಲಿಕೆಗೆ ದೊಡ್ಡ ಸವಾಲು

ಪಾಲಿಕೆಯಲ್ಲಿ ಆಸ್ತಿ ತೆರಿಗೆ ಸಂಗ್ರಹವು ಕಂದಾಯ ಇಲಾಖೆಯ ಪ್ರಮುಖ ಕೆಲಸ. ಸೆಸ್‌ ಜತೆಗೆ ಸಂಗ್ರಹವಾಗುತ್ತಿರುವ ಪಾಲಿಕೆಯ ಆಸ್ತಿ ತೆರಿಗೆಯಲ್ಲಿ ಗಣನೀಯ ಹೆಚ್ಚಳವಾಗಿದೆ. 2021-22ರಲ್ಲಿ 3,033 ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ, 2022-23ರಲ್ಲಿ ಈ ವರೆಗೆ 3,758 ಕೋಟಿ ರೂಪಾಯಿ ಸಂಗ್ರಹವಾಗಿದೆ.

ವರ್ಷದಿಂದ ವರ್ಷಕ್ಕೆ ಶೇಕಡ 24ರ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ದಾಖಲಾಗುತ್ತಿದೆ. ಇದಕ್ಕೆ ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ತೆಗೆದುಕೊಂಡಿರುವ ಹಲವು ಸುಧಾರಣಾ ಕ್ರಮಗಳು ಕಾರಣ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಸ್ಕಾಂ ಸೇರಿ ವಿವಿಧ ಸಾರ್ವಜನಿಕ ಸಂಸ್ಥೆಗಳು ಮತ್ತು ತೆರಿಗೆದಾರರು ತಮ್ಮ ಕಟ್ಟಡವನ್ನು ವಾಣಿಜ್ಯ ಬಳಕೆಗೆ ಬಳಸುತ್ತಿದ್ದರೂ, ಗೃಹ ಬಳಕೆಯ ಆಧಾರದಲ್ಲಿ ತೆರಿಗೆ ಪಾವತಿಸುತ್ತಿದ್ದರು. ಇಂತಹ 12,699 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದಾಗಿ ಈಗಾಗಲೇ 134 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಈ ಪರಿಶೀಲನೆ ಮುಂದುವರಿದಿದೆ. ಈ ವರ್ಷ ಒಟ್ಟು 250 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಹೆಚ್ಚುವರಿಯಾಗಿ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಜಯರಾಮ್‌ ರಾಯ್‌ಪುರ ಬಜೆಟ್‌ ಭಾಷಣದಲ್ಲಿ ಹೇಳಿದರು.

ತೆರಿಗೆ ಸಂಗ್ರಹ ವಿಧಾನ ಪರಿಷ್ಕರಣೆ ಘೋಷಣೆ

ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಗೊಳಿಸಲು ಸಮಗ್ರವಾಗಿ ತೆರಿಗೆ ಸಂಗ್ರಹ ವಿಧಾನವನ್ನು ಪರಿಷ್ಕರಣೆ ಮಾಡಬೇಕು. ವಾಣಿಜ್ಯಉಪಯೋಗಿ ಎಲ್ಲ ಪ್ರಮುಖ ಕಟ್ಟಡಗಳ ಆಸ್ತಿ ಸ್ವಯಂ ಘೋಷಣೆ ಪತ್ರಗಳನ್ನು 2023-24ನೇ ವರ್ಷದಲ್ಲಿ ವಿಶೇಷ ತಪಾಸಣೆಗೆ ಒಳಪಡಿಸಲಾಗುವುದು. ಬೇರೆಲ್ಲ ಸರ್ಕಾರಿ ಇಲಾಖೆಗಳ ದಾಖಲೆಗಳೊಡನೆ ಆಸ್ತಿ ತೆರಿಗೆ ಸ್ವಯಂ ಘೋಷಣೆ ಪತ್ರಗಳನ್ನು ತಂತ್ರಾಂಶದ ಮೂಲಕ ಪರಿಶೀಲಿಸಲಾಗುವುದು. ಈ ಮೂಲಕ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಸಾಧಿಸುವ ಉದ್ದೇಶವಿದೆ ಎಂದು ಬಜೆಟ್‌ ಭಾಷಣದಲ್ಲಿ ಜಯರಾಮ್‌ ರಾಯಪುರ ಹೇಳಿದರು.

ಮುಂದಿನ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಬಾಬ್ತಿನಲ್ಲಿ ಸೆಸ್ ಸೇರಿ ಒಟ್ಟು 4,790 ಕೋಟಿ ರೂ ಸಂಗ್ರಹಿಸುವ ಗುರಿ ಇದೆ. ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಆಗಬೇಕಿರುವ ಸೆಸ್ ಹೊರತು ಪಡಿಸಿ 4,412 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ. ಈ ಗುರಿಯು 2022-23ನೇ ವರ್ಷದ ಸುಧಾರಿತ ಆಯವ್ಯಯದ ಕೋರಿಕೆಯಲ್ಲಿ ಶೇಕಡ 27 ರಷ್ಟು ಹೆಚ್ಚಳ ಹೊಂದುವ ಅಪೇಕ್ಷೆಯನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಕ್ರಯ ಪತ್ರ ನೊಂದಣಿಗೆ ಇ-ಆಸ್ತಿ ತಂತ್ರಾಂಶ

ಕ್ರಯ ಪತ್ರ ನೊಂದಣಿಗೆ ಪೂರಕ ಇ-ಆಸ್ತಿ ತಂತ್ರಾಂಶವನ್ನುಇದುವರೆಗೆ ಪಾಲಿಕೆಯ ಪೂರ್ವ ವಲಯದಲ್ಲಿ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿತ್ತು. ತಂತ್ರಾಂಶ ಕುಂದು-ಕೊರತೆಗಳನ್ನು ನಿವಾರಿಸಿ ಇ-ಆಸ್ತಿ-2 ತಂತ್ರಾಂಶವನ್ನು 2023-24ನೇ ಹಣಕಾಸು ವರ್ಷದಲ್ಲಿ ಪಾಲಿಕೆಯ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಜಾರಿಗೊಳಿಸಲಾಗುವುದು. ಈ ಸುಧಾರಿತ ತಂತ್ರಾಂಶದ ‍ಸ್ಥಿರತೆ ಮತ್ತು ಯಶಸ್ಸಿನ ಆಧಾರದ ಮೇಲೆ ಮುಂದೆ ಪಾಲಿಕೆಯ ಸಂಪೂರ್ಣ ವ್ಯಾಪ್ತಿಗೆ ಇದನ್ನು ವಿಸ್ತರಿಸುವ ಆಲೋಚನೆಯಿದೆ ಎಂದು ಅವರು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು